ಬೆಂಗಳೂರು: ಕರ್ನಾಟಕ ಹಾಲು ಮಹಾಮಂಡಳಿ (KMF) ರಾಜ್ಯದ ಜನರಿಗೆ, ಭರ್ಜರಿ ಸಿಹಿಸುದ್ದಿ ನೀಡಿದ್ದು, ನಂದಿನಿ(Nandini) ಬ್ರ್ಯಾಂಡ್‌ನ ಹಾಲು(Milk) ಮತ್ತು ಮೊಸರು ಇನ್ಮುಂದೆ ಕೇವಲ 10 ರೂಪಾಯಿಗೆ ಲಭ್ಯವಾಗಲಿದೆ.ಈವರೆಗೆ ಮಾರುಕಟ್ಟೆಯಲ್ಲಿ ಕನಿಷ್ಠ 200 ಮಿಲಿಲೀಟರ್ ಹಾಲಿನ ಪ್ಯಾಕೆಟ್‌ಗಳು ಮಾತ್ರ ಲಭ್ಯವಿದ್ದವು. ಆದರೆ ಗ್ರಾಹಕರ ಅನುಕೂಲಕ್ಕಾಗಿ ಇದೀಗ ಸಣ್ಣ ಪ್ರಮಾಣದ ಪ್ಯಾಕೆಟ್‌ಗಳನ್ನು ಕೆಎಂಎಫ್ ಪರಿಚಯಿಸಿದೆ.

ಇನ್ನುಮುಂದೆ ನಂದಿನಿ ಹಾಲು 160 ಮಿಲಿಲೀಟರ್ ಪ್ಯಾಕೆಟ್‌ಗೆ 10 ರೂಪಾಯಿ, ನಂದಿನಿ ಮೊಸರು 140 ಮಿಲಿಲೀಟರ್ ಪ್ಯಾಕೆಟ್‌ಗೆ ರೂಪಾಯಿ, ಹಾಗೂ ಮಾವಿನ ಲಸ್ಸಿ ಹಾಗೂ ಸ್ಟ್ರಾಬೆರಿ ಲಸ್ಸಿ ಪ್ಯಾಕೆಟ್‌ಗಳು ಕೇವಲ ₹15ಕ್ಕೆ ಲಭ್ಯವಾಗಲಿವೆ.
ಇದನ್ನೂ ಓದಿ:

ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ಅಧಿಕೃತ ಚಾಲನೆ ನೀಡಿರುವ ಹಿನ್ನೆಲೆಯಲ್ಲಿ, ಮುಂದಿನ ಕೆಲ ದಿನಗಳಲ್ಲಿ ರಾಜ್ಯದಾದ್ಯಂತ ಇರುವ ನಂದಿನಿ ಪಾರ್ಲರ್‌ಗಳು ಹಾಗೂ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ 10 ರೂಪಾಯಿ ಬೆಲೆಯ ಹಾಲು ಮತ್ತು ಮೊಸರಿನ ಪ್ಯಾಕೆಟ್‌ಗಳು ಗ್ರಾಹಕರಿಗೆ ಲಭ್ಯವಾಗಲಿವೆ. ಕಡಿಮೆ ದರದಲ್ಲಿ ಗುಣಮಟ್ಟದ ಉತ್ಪನ್ನಗಳನ್ನು ಒದಗಿಸುವ ಮೂಲಕ ಕೆಎಂಎಫ್ ತನ್ನ ಮಾರುಕಟ್ಟೆ ವಿಸ್ತರಣೆಗೆ ಈ ಹೊಸ ಯೋಜನೆ ರೂಪಿಸಿದೆ.






