
14ನೇ ವಯಸ್ಸಿನಿಂದ 19ನೇ ವಯಸ್ಸಿನವರೆಗೆ 39 ಸಾವಿರಕ್ಕೂ(More than 39 Thousand) ಹೆಚ್ಚು ಬಾಲ ಗರ್ಭಿಣಿಯರಿದ್ದಾರೆ. ಬಾಲ್ಯ ವಿವಾಹ ಮತ್ತು ಪ್ರೇಮವಿವಾಹ(Child marriage and love marriag) ಪ್ರಕರಣಗಳು ಹೆಚ್ಚುತ್ತಿರುವುದು ಬಾಲ ಗರ್ಭಿಣಿಯರ(Child pregnancy) ಸಂಖ್ಯೆ ಹೆಚ್ಚಲು ಪ್ರಮುಖ ಕಾರಣ.
ಬಾಲ್ಯ ವಿವಾಹ ತಡೆಗೆ ಏನೆಲ್ಲಾ ಜಾಗೃತಿ ಮೂಡಿ ಸಲಾಗುತ್ತಿದ್ದರೂ ರಾಜ್ಯದಲ್ಲಿ ಬಾಲ ಗರ್ಭಿಣಿ ಯರ ಸಂಖ್ಯೆ ಹೆಚ್ಚುತ್ತಲೇ ಇದೆ. 14ನೇ ವಯಸ್ಸಿನಿಂದ 19ನೇ ವಯಸ್ಸಿನವರೆಗೆ 39 ಸಾವಿರಕ್ಕೂ ಹೆಚ್ಚು ಬಾಲ ಗರ್ಭಿಣಿಯರಿದ್ದಾರೆ. ಬಾಲ್ಯ ವಿವಾಹ ಮತ್ತು ಪ್ರೇಮವಿವಾಹ ಪ್ರಕರಣಗಳು ಹೆಚ್ಚುತ್ತಿರುವುದು ಬಾಲ ಗರ್ಭಿಣಿಯರ ಸಂಖ್ಯೆ ಹೆಚ್ಚಲು ಪ್ರಮುಖ ಕಾರಣ. ರಾಜ್ಯದಲ್ಲೇ ಬೆಂಗಳೂರಿನಲ್ಲಿ ಅತಿ ಹೆಚ್ಚು ಬಾಲಗರ್ಭಿಣಿಯರು ಇದ್ದಾರೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮೂಲಗಳು ತಿಳಿಸಿವೆ. ಆಯೋಗದ ಅಂಕಿ ಅಂಶಗಳ ಪ್ರಕಾರ 2021 -22ನೇ ಸಾಲಿನಲ್ಲಿ 14-15 ವರ್ಷದವರೆಗೆ 147, 15-16 ವರ್ಷದವರೆಗೆ 509, 16-17 ವರ್ಷದವರೆಗೆ 1,413, 17-18 2 9723, 18-19 33,487 ಸೇರಿ 45,279 ಬಾಲಗರ್ಭಿಣಿ ಯರಿದ್ದರು. 2022- 23ನೇ ಸಾಲಿನಲ್ಲಿ 14-15 ವರ್ಷದವರೆಗೆ 217, 15-16 ವರ್ಷದವರೆಗೆ 686, 16-17 ವರ್ಷ ದವರೆಗೆ 1,881, 17-18 10, 414, 18-19 ವರ್ಷದವರೆಗೆ 36,093 49,291 ಬಾಲಗರ್ಭಿಣಿಯರಿದ್ದರೆ, 2023- 24ನೇ ಸಾಲಿನಲ್ಲಿ 14-15 ವರ್ಷದವರೆಗೆ 156, 15-16 ವರ್ಷದವರೆಗೆ 419, 16-17 1,397, 17-18 ವರ್ಷದವರೆಗೆ 6659, 18-10 ವರ್ಷದವರೆಗೆ 30,761 ಸೇರಿ 39,392 ಬಾಲಗರ್ಭಿಣಿಯರಿದ್ದಾರೆ.

ಬೆಂಗಳೂರು ಪ್ರಥಮ(Bangalore is first.):
ಬಾಲ ಗರ್ಭಿಣಿಯರಿ ರುವ ಜಿಲ್ಲೆಗಳಲ್ಲಿ ಬೆಂಗಳೂರು ನಗರ (Bengaluru 1st)ಮೊದಲ ಸ್ಥಾನದಲ್ಲಿದ್ದರೆ, ಬೆಳಗಾವಿ (Belagavi 2nd) 2ನೇ ಸ್ಥಾನದಲ್ಲಿದೆ. ಬೆಂಗಳೂರಿನಲ್ಲಿ 2021-22 6455, 2022-23 6702, 2023-24 4,506 ಗರ್ಭಿಣಿಯರನ್ನು ಹೊಂದಿದ್ದರೆ, ಬೆಳಗಾವಿ 2021 – 22ರಲ್ಲಿ 4,066, 2022-2350 4258, 2023-2400 3974 ಬಾಲ ಗರ್ಭಿಣಿಯರನ್ನು ಹೊಂದಿದೆ. ಮಂಡ್ಯ ಜಿಲ್ಲೆಯಲ್ಲಿ 2021-22 0 1521,2022-2350 1390, 2023- 24ರಲ್ಲಿ 1,010 ಬಾಲ ಗರ್ಭಿಣಿಯರನ್ನು ಹೊಂದಿದೆ.
ಪ್ರೇಮ ಪ್ರಕರಣಗಳೂ ಕಾರಣ(Love affairs are also the reason):
ಬಾಲ ಗರ್ಭಿಣಿಯರ ಸಂಖ್ಯೆ ಹೆಚ್ಚುತ್ತಿರುವುದಕ್ಕೆ ಬಾಲ್ಯ ವಿವಾಹ ಒಂದು ಕಾರಣವಾದರೆ, ಹದಿಹರೆಯ ದರಲ್ಲೇ ಪ್ರೇಮಪಾಶಕ್ಕೆ ಸಿಲುಕುತ್ತಿರುವ ಹೆಣ್ಣು ಮಕ್ಕಳು ವಿವಾಹ ಬಂಧನಕ್ಕೊಳಗಾಗುತ್ತಿರು ವುದು ಪ್ರಾಪ್ತ ವಯಸ್ಸಿಗೆ ಮುನ್ನವೇ ಗರ್ಭ ಧರಿಸುವುದಕ್ಕೆ ಮತ್ತೊಂದು ಕಾರಣ ಎನ್ನುವುದು ಸಮೀಕ್ಷೆಗಳಿಂದ ತಿಳಿದು ಬಂದಿರುವ ಸಂಗತಿಯಾಗಿದೆ.