• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, February 14, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಸಿಎಂ ಬೊಮ್ಮಾಯಿ ಚೊಚ್ಚಲ ವಿಧಾನಮಂಡಲ ಅಧಿವೇಶನ ಇಂದಿನಿಂದ ಆರಂಭ: ಬೆಲೆ‌ ಏರಿಕೆ ಸೇರಿದಂತೆ ಹಲವು ಅಸ್ತ್ರಗಳೊಂದಿಗೆ ಕಾಂಗ್ರೆಸ್.!!

ಕರ್ಣ by ಕರ್ಣ
September 13, 2021
in ಕರ್ನಾಟಕ, ರಾಜಕೀಯ
0
ಸಿಎಂ ಬೊಮ್ಮಾಯಿ ಚೊಚ್ಚಲ ವಿಧಾನಮಂಡಲ ಅಧಿವೇಶನ ಇಂದಿನಿಂದ ಆರಂಭ: ಬೆಲೆ‌ ಏರಿಕೆ ಸೇರಿದಂತೆ ಹಲವು ಅಸ್ತ್ರಗಳೊಂದಿಗೆ ಕಾಂಗ್ರೆಸ್.!!
Share on WhatsAppShare on FacebookShare on Telegram

ಇಂದಿನಿಂದ ವಿಧಾನಮಂಡಲ ಅಧಿವೇಶನ ಆರಂಭವಾಗುತ್ತಿದ್ದು, ಬಸವರಾಜ ಬೊಮ್ಮಾಯಿ  ಸಿಎಂ ಆದ ಬಳಿಕ ಮೊದಲ ಅಧಿವೇಶನ ಇದಾಗಿದೆ. ಬೆಲೆ ಏರಿಕೆ,  ಕಾನೂನು ಸುವ್ಯವಸ್ಥೆ, ರಾಷ್ಟ್ರೀಯ ಶಿಕ್ಷಣ ನೀತಿ ಹಾಗೂ ಭ್ರಷ್ಟಾಚಾರ ಪ್ರಕರಣಗಳ ಬಗ್ಗೆ ಪ್ರಸ್ತಾಪಿಸಿ, ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಕಾಂಗ್ರೆಸ್ ತಂತ್ರ ರೂಪಿಸಿದೆ. ಇದರ ಜೊತೆಗೆ ಜೆಡಿಎಸ್ ಕೂಡ ಇದೇ ವಿಚಾರವಾಗಿ ಸರ್ಕಾರದ ವಿರುದ್ದ ಹರಿಹಾಯಲು ತಯಾರಿ ನಡೆಸಿದೆ.  ಸಿಎಂ ಆದ ಬಳಿಕ ಮೊದಲ ಅಧಿವೇಶನದಲ್ಲಿ ಭಾಗಿಯಾಗುತ್ತಿರುವ ಬಸವರಾಜ ಬೊಮ್ಮಾಯಿ ಕೂಡ ವಿಪಕ್ಷಗಳ ಟೀಕೆ ಟಿಪ್ಪಣಿಗಳಿಗೆ  ಸಮರ್ಥವಾಗಿ ಎದುರಿಸಲು ತಯಾರಿ ನಡೆಸಿದ್ದಾರೆ.

ADVERTISEMENT

ಎತ್ತಿನ ಬಂಡಿಯಲ್ಲಿ ಸದನಕ್ಕೆ ಆಗಮಿಸಲಿರುವ ಸಿದ್ದರಾಮಯ್ಯ, ಡಿಕೆಶಿ.!!

ಇಂದಿನಿಂದ ಹತ್ತು ದಿನಗಳ ಕಾಲ ನಡೆಯಲಿರುವ ಅಧಿವೇಶನದಲ್ಲಿ ಇಂದಿರಾ ಕ್ಯಾಂಟೀನ್​ ಹೆಸರು ಬದಲಾವಣೆ, ಪೆಟ್ರೋಲ್, ಡಿಸೆಲ್, ಎಲ್‌ಪಿಜಿ ಹಾಗೂ ಅಡುಗೆ ಎಣ್ಣೆ ಬೆಲೆ ಏರಿಕೆ ಬಿಸಿ‌ ಸದನದಲ್ಲೂ ಪ್ರಸ್ತಾಪವಾಗಲಿದೆ. ಇದನ್ನೇ ಪ್ರಮುಖ ಅಸ್ತ್ರವನ್ನಾಗಿ ಬಳಸಲು ಕಾಂಗ್ರೆಸ್ ತಂತ್ರಗಾರಿಕೆ ರೂಪಿಸಿದೆ. ಬೆಲೆ ಏರಿಕೆ ಖಂಡಿಸಿ ಎತ್ತಿನ ಬಂಡಿಯಲ್ಲೇ ವಿಧಾನಸೌಧಕ್ಕೆ ಬರಲು ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಿರ್ಧರಿಸಿದ್ದಾರೆ. ಇದರ ಮೂಲಕ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು, ಮುಜುಗರಕ್ಕೆ ಸಿಲುಕಿಸಲು ಕಾಂಗ್ರೆಸ್ ತೀರ್ಮಾನಿಸಿದೆ.

ಕೋವಿಡ್​ ಲೆಕ್ಕಕ್ಕೆ ಪಟ್ಟು ಹಿಡಿಯಲು ವಿಪಕ್ಷಗಳ ನಿರ್ಧಾರ.!!

ಕೋವಿಡ್‌‌ನ ವಿಷಮ‌ ಪರಿಸ್ಥಿತಿ ಈಗಲೂ ಮುಂದುವರೆಯುತ್ತಿದೆ‌. ಹೀಗಾಗಿ ಅಭಿವೃದ್ಧಿ ಕೆಲಸಗಳಿಗೆ ಹಣವೇ ಇಲ್ಲ. ಖಾಲಿ‌ ಖಜಾನೆ ರಾಜ್ಯ ಸರ್ಕಾರವನ್ನು ಮತ್ತಷ್ಟು ಸಂಕಟಕ್ಕೆ ಸಿಲುಕುವಂತೆ ಮಾಡಿದೆ. ಸಂಕಷ್ಟ ಕಾಲದಲ್ಲೂ ಕೋವಿಡ್ ಪರಿಕರಗಳ ಖರೀದಿಯಲ್ಲಿ ಅಕ್ರಮ‌ ನಡೆದಿದೆ ಎಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿ ಆರೋಪಿಸಿತ್ತು. ಈ ಬಗ್ಗೆ ಸರ್ಕಾರ ಲೆಕ್ಕ ನೀಡುವಂತೆ ಸದನದಲ್ಲಿ ಕಾಂಗ್ರೆಸ್ ಪಟ್ಟು ಹಿಡಿಯಲಿದೆ. ಕೋವಿಡ್ ಸಾವು ನೋವು ವಿಚಾರದಲ್ಲಿ ಸರ್ಕಾರ ಸುಳ್ಳು ಹೇಳುತ್ತ ಬಂದಿದೆ ಅಂತ ಸಿದ್ದರಾಮಯ್ಯ ಅವರು ಅನೇಕ ಬಾರಿ ಆರೋಪಿಸಿದ್ದಾರೆ. ಸದನದಲ್ಲಿ ಸರ್ಕಾರವನ್ನು ಕಿವಿ ಹಿಂಡಲು ಇದನ್ನೂ ಅಸ್ತ್ರವಾಗಿ ಬಳಸಿಕಕೊಳ್ಳಲಿದೆ ವಿಪಕ್ಷಗಳು.

ಅಧಿವೇಶನದಲ್ಲಿ ಪ್ರತಿಧ್ವನಿಸಲಿದೆ NEP, ಮೈಸೂರು ಅತ್ಯಾಚಾರ ಪ್ರಕರಣ.!!

ರಾಷ್ಟ್ರೀಯ ಶಿಕ್ಷಣ ನೀತಿ (NEP) ಜಾರಿ ಬಗ್ಗೆಯೂ ವಿರೋಧ ವ್ಯಕ್ತಪಡಿಸಿ, ಹಿಂಪಡೆಯುವವರೆಗೂ ಸದನದಲ್ಲಿ ಪಟ್ಟು ಹಿಡಿಯಲು ಯೋಜನೆ ರೂಪಿಸಿದೆ. ಮೈಸೂರಿನ ಸಾಮೂಹಿಕ ಅತ್ಯಾಚಾರ ಪ್ರಕರಣ ಸದನದಲ್ಲೂ ಸದ್ದುಗದ್ದಲಕ್ಕೆ‌ ಕಾರಣವಾಗಬಹುದು. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹಾಳಾಗಿದೆ ಅಂತ ಸರ್ಕಾರದ ವಿರುದ್ಧ ವಾಕ್‌ಪ್ರಹಾರ ನಡೆಯುವ ಸಾಧ್ಯತೆ‌ ಇದೆ. ವಿವಿಧ ಇಲಾಖೆಗಳಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣಗಳು ಕೂಡ ಸದನದಲ್ಲಿ ಪ್ರಸ್ತಾಪವಾಗಲಿವೆ. ಅದರಲ್ಲೂ ಕೆಲ ಸಚಿವರ‌ ವಿರುದ್ಧ ಗಂಭೀರ ಸ್ವರೂಪದ ಆರೋಪಗಳಿದ್ದು, ಅವರನ್ನ ಸಂಪುಟದಿಂದ ಕೈಬಿಡಲು ಒತ್ತಡವೂ ವಿಪಕ್ಷಗಳಿಂದ ಬರುವ ನಿರೀಕ್ಷೆ‌ ಇದೆ.

ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ವಿಪಕ್ಷಗಳು ಭರ್ಜರಿ ತಾಲೀಮು ನಡೆಸಿದೆ‌. ವಿಪಕ್ಷಗಳ ಆರೋಪಗಳನ್ನು ಸುರಿಮಳೆ ಎದುರಿಸಲು ಬೊಮ್ಮಾಯಿ ಸರ್ಕಾರ ಕೂಡ ಸಿದ್ಧವಾಗುತ್ತಿದೆ. ಕಾನೂನು ಮತ್ತು ಸಂಸದೀಯ ಖಾತೆ ವಹಿಸಿಕೊಂಡಿರುವ ಜೆ.ಸಿ.ಮಾಧುಸ್ವಾಮಿ ಬೊಮ್ಮಾಯಿ‌ಗೆ ಆಪತ್ಭಾಂಧವ ಆಗಲಿದ್ದಾರೆ. ಸರ್ಕಾರದ ವಿರುದ್ಧದ ಎಲ್ಲಾ ಟೀಕಾಸ್ತ್ರಗಳಿಗೆ ಸಮರ್ಥ ಉತ್ತರ ನೀಡಲು ಸಾಥ್ ನೀಡಲಿದ್ದಾರೆ.‌ ಸದನದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚೆ ನಡೆಯಬೇಕೆನ್ನುವ ಆಶಯ ಯಾವಾಗಲೂ ಇರುತ್ತದೆ. ಆದರೆ ಬಹುತೇಕ‌ ಬಾರಿ ಸರ್ಕಾರ‌ ಮತ್ತು ವಿಪಕ್ಷಗಳ ನಡುವಣ ತಿಕ್ಕಾಟಕ್ಕೆ ವೇದಿಕೆಯಾಗುತ್ತದೆ ಅಧಿವೇಶನಗಳು. ಈ ಬಾರಿಯೂ ಅದೇ ಪುನರಾವರ್ತನೆಯಾಗುವ ಎಲ್ಲ‌ ಲಕ್ಷಣಗಳು ಗೋಚರಿಸುತ್ತಿವೆ. ಬೆಲೆ ಏರಿಕೆ‌ ಎಂಬ ಪ್ರಬಲ‌ ಅಸ್ತ್ರ ವಿಪಕ್ಷಗಳ ಕೈಗೆ ಸಿಕ್ಕಂತಾಗಿದೆ. ಇದನ್ನ ಸರ್ಕಾರ ಯಾವ ರೀತಿ ಸಮರ್ಥಿಸಿಕೊಳ್ಳುತ್ತದೆ, ಕಾದು ನೋಡಬೇಕಿದೆ.

Previous Post

ಜೆಡಿಎಸ್ VS ಸುಮಲತಾ; ಅಧಿವೇಶನದಲ್ಲೂ ಪ್ರತಿಧ್ವನಿಸಲಿದೆ ಮಂಡ್ಯ ಅಕ್ರಮ ಗಣಿಗಾರಿಕೆ

Next Post

ಮೋದಿ ಸರ್ಕಾರ ಮತ್ತು ಮೀಡಿಯಾ ಜಾಹಿರಾತು: ಬಿಜೆಪಿ ಬೆಂಬಲಿಗ ಮಾಧ್ಯಮಗಳಿಗೆ ಪೂರಾ ಲಾಭ.!

Related Posts

ಅಣೆಕಟ್ಟು ಸುರಕ್ಷತೆ ಒಂದೇ ಇಲಾಖೆಯ ಜವಾಬ್ದಾರಿಯಲ್ಲ : ಸಿಎಂ ಸಿದ್ದರಾಮಯ್ಯ
Top Story

ಅಣೆಕಟ್ಟು ಸುರಕ್ಷತೆ ಒಂದೇ ಇಲಾಖೆಯ ಜವಾಬ್ದಾರಿಯಲ್ಲ : ಸಿಎಂ ಸಿದ್ದರಾಮಯ್ಯ

by ಪ್ರತಿಧ್ವನಿ
February 13, 2026
0

ಬೆಂಗಳೂರು :  ಭಾರತದಲ್ಲಿಯೇ ಅತಿ ಹೆಚ್ಚು ಅಣೆಕಟ್ಟುಗಳನ್ನು ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದ್ದು, ಅಣೆಕಟ್ಟು ಸುರಕ್ಷತೆ ಕುರಿತು ನಡೆಯುವ ಚರ್ಚೆಗಳಲ್ಲಿ ಅನುಭವ ಮತ್ತು ಜವಾಬ್ದಾರಿ ಎರಡನ್ನೂ ಹೊಂದಿದ್ದೇವೆ...

Read moreDetails
CM Cup Badminton Tournament: ಸ್ಪಷ್ಟ ಗುರಿ, ಶ್ರಮದ ಹಾದಿ: ಉದ್ಯಮಿ ಪ್ರಸನ್ನ ಎಡಿಕೇರಿ ಯಶೋಗಾಥೆ

CM Cup Badminton Tournament: ಸ್ಪಷ್ಟ ಗುರಿ, ಶ್ರಮದ ಹಾದಿ: ಉದ್ಯಮಿ ಪ್ರಸನ್ನ ಎಡಿಕೇರಿ ಯಶೋಗಾಥೆ

February 13, 2026
ಹೃದಯಾಘಾತ : ಹಿಟ್‌ ಚಿತ್ರಗಳ ನಿರ್ದೇಶಕ  ಜೋ ಸೈಮನ್‌ ಕೊನೆಯುಸಿರು..

ಹೃದಯಾಘಾತ : ಹಿಟ್‌ ಚಿತ್ರಗಳ ನಿರ್ದೇಶಕ ಜೋ ಸೈಮನ್‌ ಕೊನೆಯುಸಿರು..

February 13, 2026
ರಾಜ್ಯದ 1.31 ಕೋಟಿ ಮಹಿಳೆಯರ ಖಾತೆಗೆ ಇಂದೇ 5 ಸಾವಿರ ರೂ.ಜಮಾ-ತಮಿಳುನಾಡು ಸಿಎಂ

ರಾಜ್ಯದ 1.31 ಕೋಟಿ ಮಹಿಳೆಯರ ಖಾತೆಗೆ ಇಂದೇ 5 ಸಾವಿರ ರೂ.ಜಮಾ-ತಮಿಳುನಾಡು ಸಿಎಂ

February 13, 2026
ಆರೋಗ್ಯ ಇಲಾಖೆ ಅಧಿಕಾರಿ ವರ್ಗಾವಣೆಗೆ ಸಿಎಂ ಹೆಸರಲ್ಲಿ ನಕಲಿ  ಲೆಟರ್‌ : ಕಿಡಿಗೇಡಿಗಳ ವಿರುದ್ಧ ಕೇಸ್‌ ದಾಖಲು..

ಆರೋಗ್ಯ ಇಲಾಖೆ ಅಧಿಕಾರಿ ವರ್ಗಾವಣೆಗೆ ಸಿಎಂ ಹೆಸರಲ್ಲಿ ನಕಲಿ ಲೆಟರ್‌ : ಕಿಡಿಗೇಡಿಗಳ ವಿರುದ್ಧ ಕೇಸ್‌ ದಾಖಲು..

February 13, 2026
Next Post
ಮೋದಿ ಸರ್ಕಾರ ಮತ್ತು ಮೀಡಿಯಾ ಜಾಹಿರಾತು: ಬಿಜೆಪಿ ಬೆಂಬಲಿಗ ಮಾಧ್ಯಮಗಳಿಗೆ ಪೂರಾ ಲಾಭ.!

ಮೋದಿ ಸರ್ಕಾರ ಮತ್ತು ಮೀಡಿಯಾ ಜಾಹಿರಾತು: ಬಿಜೆಪಿ ಬೆಂಬಲಿಗ ಮಾಧ್ಯಮಗಳಿಗೆ ಪೂರಾ ಲಾಭ.!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada