ಉಗ್ರಗಾಮಿಗಳ ಕಾರ್ಖಾನೆ ಪಾಕಿಸ್ತಾನಕ್ಕೆ (Pakistan) ಭಾರತ (India) ಕಳೆದ ರಾತ್ರಿ ನರಕ ದರ್ಶನ ಮಾಡಿಸಿದೆ. ಮೊದಲಿಗೆ ತಾಳ್ಮೆಯಿಂದ ಇದ್ದ ಭಾರತ ಆ ನಂತರ ಪಾಕಿಸ್ತಾನದ ದಾಳಿಗೆ ಭಯಂಕರ ಕೌಂಟರ್ ಅಟ್ಯಾಕ್ (Counter attack) ಮಾಡಿ ಪಾಕಿಸ್ತಾನದ ಜಂಗಾಬಲವನ್ನೇ ಅಲುಗಾಡಿಸಿದೆ.

ಭಾರತದ ನಾಗರಿಕರನ್ನು, ಪ್ರಮುಖ ನಗರಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಮುಂದಾದ ಪಾಕಿಸ್ತಾನಕ್ಕೆ ಪಾಠ ಕಲಿಸಲು ಖಾಡಕ್ಕಿಳಿದ ಭಾರತೀಯ ನೌಕಾಪಡೆಯ ಐಎನ್‌ಎಸ್ ವಿಕ್ರಾಂತ್ ಕರಾಚಿ ಬಂದರನ್ನು ಉಡೀಸ್ ಮಾಡಿದೆ. ಮತ್ತೊಂದೆಡೆ ಲಾಹೋರ್ ಏರ್ಪ್ ಪೋರ್ಟ್ ಮೇಲೆ ಕೂಡ ಭಾರತ ಡ್ರೋನ್ ಅಟ್ಯಾಕ್ ಮಾಡಿದೆ.
ಆ ಮೂಲಕ 1971ರ ಬಳಿಕ ಇದೇ ಮೊದಲ ಬಾರಿಗೆ ಕರಾಚಿ ಮೇಲೆ ಭಾರತ ದಾಳಿ ನಡೆಸಿದೆ. ಪಾಕಿಸ್ತಾನ ಕರಾಚಿ ಬಂದರಿನಲ್ಲಿ 15ಕ್ಕೂ ಹೆಚ್ಚು ಕಡೆ ಸ್ಪೋಟ ಸಂಭವಿಸಿದ್ದು, ಬಂದರು ಸಂಪೂರ್ಣ ಸರ್ವನಾಶವಾಗಿದೆ. ಹೀಗಾಗಿ ಐಎನ್‌ಎಸ್ ವಿಕ್ರಾಂತ್ ಮಾರಕ ದಾಳಿಗೆ ಕರಾಚಿ ಬಂದರು ಸಂಪೂರ್ಣವಾಗಿ ನಾಶವಾಗಿದೆ.

ಇದಕ್ಕೂ ಮುನ್ನ ಪಾಕಿಸ್ತಾನ ಸೇನೆ ಜಮ್ಮು ಪಠಾಣ್ ಕೋಟ್ ಮತ್ತು ಉಧಂಪುರದ ಭಾರತದ ಮಿಲಿಟರಿ ಕೇಂದ್ರಗಳ ಮೇಲೆ ಡೋನ್ ಹಾಗೂ ಕ್ಷಿಪಣಿಗಳ ದಾಳಿಗೆ ವಿಫಲ ಯತ್ನ ಮಾಡಿತ್ತು.ಇದಕ್ಕೆ ಪ್ರತ್ಯುತ್ತರವಾಗಿ ಭಾರತೀಯ ನೌಕಾಪಡೆ ಲಾಹೋರ್, ಕರಾಚಿ, ರಾವಲ್ಪಿಂಡಿ, ರಾಜಧಾನಿ ಇಸ್ಲಾಮಾಬಾದ್ ಸೇರಿದಂತೆ ಇನ್ನುಳಿದ ನಗರಗಳ ಮೇಲೆ ದಾಳಿ ಮಾಡಿದೆ.










