ಹಿಜಾಬ್ ಪ್ರಕರಣದ ವಿಚಾರಣೆ ನಡೆಸುತ್ತಿರುವ ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರ ವಿರುದ್ಧ ಕಮೆಂಟ್ ಮಾಡಿದ್ದಕ್ಕಾಗಿ ಬಂಧಿತರಾಗಿರುವ ಸಾಮಾಜಿಕ ಹೋರಾಟಗಾರ ಹಾಗೂ ನಟ ಚೇತನ್ ಅಹಿಂಸಾ ಅವರು ತಮ್ಮ, 39 ನೇ ವರ್ಷದ ಹುಟ್ಟುಹಬ್ಬವನ್ನು ಜೈಲಿನಲ್ಲೇ ಕಳಿಯಬೇಕಿದೆ. ಬುಧವಾರ ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಆದೇಶವನ್ನು ಫೆ.25 ಶುಕ್ರವಾರಕ್ಕೆ ಕಾಯ್ದಿರಿಸಿದೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಚೇತನ್ ಅವರಿಗೆ ಫೆ.24ಕ್ಕೆ ಅಂದರೆ ಇಂದು 39 ವರ್ಷ ತುಂಬಿದೆ.
ಮಂಗಳವಾರ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣವನ್ನು ದಾಖಲಿಸಿಕೊಂಡು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 505 (2) ಮತ್ತು 504 ಅಡಿಯಲ್ಲಿ ಬಂಧಿಸಿದ್ದಾರೆ. ಆರು ದಿನಗಳ ಹಿಂದೆ ನಟ ಚೇತನ್ ಅವರ ಟ್ವೀಟ್ನಲ್ಲಿ, 2020ರ ಅತ್ಯಾಚಾರದ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಧೀಶರು ನೀಡಿದ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ.
ರಾಯಚೂರಿನಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ ನಡೆದ ನ್ಯಾಯಾಲಯ ಸಮಾರಂಭದಲ್ಲಿ ಮಹಾತ್ಮ ಗಾಂಧೀಜಿಯವರ ಭಾವಚಿತ್ರದ ಪಕ್ಕದಲ್ಲಿ ಬಿ.ಆರ್.ಅಂಬೇಡ್ಕರ್ ಭಾವಚಿತ್ರ ಹಾಕಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅಂದಿನ ಸೆಷನ್ಸ್ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಅವರನ್ನು ಅಮಾನತುಗೊಳಿಸುವಂತೆ ಒತ್ತಾಯಿಸಿ ದಲಿತ ಸಂಘಟನೆಗಳು ಇತ್ತೀಚೆಗೆ ಹಮ್ಮಿಕೊಂಡಿದ್ದ ಬೃಹತ್ ಮೆರವಣಿಗೆಯಲ್ಲಿ ಪಾಲ್ಗೊಂಡು ಮಾತನಾಡಿದರು. ನಂತರ ಗೌಡ ಅವರನ್ನು ಕರ್ನಾಟಕ ರಾಜ್ಯ ಸಾರಿಗೆ ಮೇಲ್ಮನವಿ ನ್ಯಾಯಾಧಿಕರಣಕ್ಕೆ ವರ್ಗಾಯಿಸಲಾಯಿತು.
ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಹುಟ್ಟಿ ಬೆಳೆದ ಚೇತನ್ ರೈತರು, ಕಾರ್ಮಿಕರು, ದಲಿತರು ಮತ್ತು ಆದಿವಾಸಿಗಳ ನ್ಯಾಯಕ್ಕಾಗಿ ಸಮಗ್ರ ಅಭಿವೃದ್ಧಿಗಾಗಿ ಚಳುವಳಿಗಳಲ್ಲಿ ಮುಂಚೂಣಿಯಲ್ಲಿದ್ದ ಪರಿಚಿತ ಮುಖ. 2013ರಲ್ಲಿ ಎಂಡೋಸಲ್ಫಾನ್ ಸಂತ್ರಸ್ತರ ಪುನರ್ವಸತಿಗಾಗಿ ಹೋರಾಟ, 2016ರಲ್ಲಿ ಕೊಡಗಿನ ಬುಡಕಟ್ಟು ಸಮುದಾಯದ ಪರ ಹೋರಾಟ ಮತ್ತು ಇತ್ತೀಚೆಗೆ ಪ್ರತ್ಯೇಕ ಲಿಂಗಾಯತ ಧರ್ಮದ ಸ್ಥಾನಮಾನಕ್ಕಾಗಿ ಚಳುವಳಿಗಳೊಂದಿಗೆ ಸಂಬಂಧ ಹೊಂದಿದ್ದರು. ಈತರ ಅನೇಕ ಹೋರಾಟಗಳಲ್ಲಿ ನಟ ಚೇತನ್ ಅಹಿಂಸಾ ಗುರುತಿಸಿಕೊಂಡಿದ್ದರು.
ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಅಂಡ್ ಇಕ್ವಾಲಿಟಿ (FIRE) ನಲ್ಲಿ ತೊಡಗಿಸಿಕೊಂಡಿದ್ದ ನಟ ಚೇತನ್, ಅನೇಕಕನ್ನಡ ಚಲನಚಿತ್ರೋದ್ಯಮದ ಮಹಿಳೆಯರು, ಬರಹಗಾರರು ಮತ್ತು ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸಲು ಮಾರ್ಗವನ್ನು ರಚಿಸಿದ್ದಾರೆ.

2020ರಲ್ಲಿ ನಟ ಚೇತನ್ ಅನಾಥಾಶ್ರಮವೊಂದರಲ್ಲಿ ತನ್ನ ದೀರ್ಘಕಾಲದ ಸ್ನೇಹಿತೆಯಾದ ಮೇಘಾ ಎಸ್ ಅವರನ್ನು ವರಿಸಿದರು. ಭಾರತೀಯ ಸಂವಿಧಾನದ ಪ್ರತಿಗಳನ್ನು ಅತಿಥಿಗಳಿಗೆ ಉಡುಗೊರೆಯಾಗಿ ವಿತರಿಸುವ ಮೂಲಕ “ಸಾಮಾಜಿಕ ಪ್ರಜ್ಞೆ”ಯುಳ್ಳ ನಡೆಯನ್ನು ಸಮಾಜಕ್ಕೆ ತೋರ್ಪಡಿಸಿದರು.
ವಿಸ್ಮಯ ಚಿತ್ರದ ಚಿತ್ರೀಕರಣದ ವೇಳೆ ನಟ ಅರ್ಜುನ್ ಸರ್ಜಾ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ ಶ್ರುತಿ ಹರಿಹರನ್ ಅವರನ್ನು ಬೆಂಬಲಿಸುವ ಮೂಲಕ ನಟ ಚೇತನ್ ಅವರ ಅಭಿಮಾನಿಗಳು ಮತ್ತು ಇತರರ ಕೋಪಗೊಂಡಿದ್ದರು. ಆದರೆ ಮಹಿಳೆಗೆ ಯಾರಿಂದಲೇ ಅನ್ಯಾಯ ಆಗಿಲಿ ಆ ಮಹಿಳೆಪರ ನಿಂತು ಹೋರಾಟ ಮಾಡುತ್ತೇನೆ ಎಂಬ ದಿಟ್ಟ ನಿರ್ಧಾರ ಚೇತನ್ ವಾರದ್ದಾಗಿತ್ತು.
ಸಾರ್ವಜನಿಕ ಕಾಳಜಿಯ ಅನೇಕ ವಿಷಯಗಳ ಬಗ್ಗೆ ಧ್ವನಿಯೆತ್ತಿರುವ ನಟ ಚೇತನ್ ಅವರು, ಜನ ವಿರೋಧಿ, ಯಾರಿಗೇ ಅನ್ಯಾಯವಾದರು ಆ ಕುರಿತು ತಮ್ಮ ಅಭಿಪ್ರಾಯವನ್ನು ಹಿಂಜರಿಯದೇ ನೇರವಾಗಿ ವ್ಯಕ್ತಪಡಿಸುತ್ತಿದ್ದರು. ಭ್ರಷ್ಟಾಚಾರ, ಕೋಮು ರಾಜಕೀಯ ಮತ್ತು ಫ್ಯಾಸಿಸಂ ವಿರುದ್ಧದ ಚಳುವಳಿಗಳಲ್ಲಿ ಸಕ್ರಿಯರಾಗಿದ್ದಾರೆ.
ಚೇತನ್ ಅವರ ಚೊಚ್ಚಲ ಚಿತ್ರ, ಆ ದಿನಗಳು (2007), 1980ರ ದಶಕದಲ್ಲಿ ಬೆಂಗಳೂರಿನ ಭೂಗತ ಜಗತ್ತಿನ ಸುತ್ತ ಸುತ್ತುವ ಸಂವೇದನಾಶೀಲ ಚಿತ್ರ ಇಂಡಸ್ಟ್ರಿ ಹಿಟ್ ಆಗಿತ್ತು. ಚಿತ್ರ ನಿರ್ದೇಶಕ ಕೆ.ಎಂ.ಚೈತನ್ಯ ಮಾತನಾಡಿ, ಸಿನಿಮಾ ರಂಗಕ್ಕೆ ಬರುವ ಮುನ್ನ ಚೇತನ್ ಇಬ್ಬ ಸದಮಾಜಿಕ ಕಾರ್ಯಕರ್ತ. ಬೆಂಗಳೂರಿನ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದಲ್ಲಿ ನಮಗೆ ಚೇತನ್ ಪರಿಚಯವಾಯ್ತು ನಂತರ ಅವರನ್ನೇ ಸಿನಿಮಾದಲ್ಲಿ ನಟಿಸಲು ನಿರ್ಧರಿಸಿದೆವು. ನಂತರೇ ಅವರು ಸ್ಯಾಂಡಲ್ವುಡ್ಗೆ ಪ್ರವೇಶಿಸಿದರು ಎಂದ ಹೇಳಿದರು. ಮುಂದುವರೆದು, ಚೇತನ್ ಒಬ್ಬ ಒಳ್ಳೆ ಸಕ್ರಿಯ ಹೋರಾಟಗಾರ ಮತ್ತು ಸಂಶೋಧಕರಾಗುತ್ತಾರೆ ಎಂದು ನಾನು ಭಾವಿಸುತ್ತೇನೆ, ಏಕೆಂದರೆ ಅವರು ಎರಡನ್ನೂ ಸಾಕಷ್ಟು ಉತ್ಸಾಹದಿಂದ ಮಾಡುತ್ತಾರೆ”ಎಂದು ಚೈತನ್ಯ ದಿ ಇಂಡಿಯನ್ ಎಕ್ಸ್ಪ್ರೆಸ್ಗೆ ತಿಳಿಸಿದರು.
ಚೇತನ್ ಬಂಧನದ ಕುರಿತು ಮಾತನಾಡಿದ ಡೈರೆಕ್ಟರ್ ಚೈತನ್ಯ, “ಚೇತನ್ಗೆ ಕಾನೂನುಬದ್ಧವಾಗಿ ತನ್ನನ್ನು ತಾನು ಸಮರ್ಥಿಸಿಕೊಳ್ಳಲು ನ್ಯಾಯಯುತವಾದ ಅವಕಾಶವನ್ನು ನೀಡಬೇಕು… ದುರದೃಷ್ಟವಶಾತ್, ನಾವು ಸಾಕಷ್ಟು ಸೇಡಿನ ಬಂಧನಗಳನ್ನು ನೋಡುತಿದ್ದೇವೆ. ಆದರೆ ಚೇತನ್ಗೆ ಸಮರ್ಥಿಸಿಕೊಳ್ಳಲು ನ್ಯಾಯಯುತವಾದ ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಈ ಹಿಂದೆ ನಟ ರಮ್ಯ ದಿವ್ಯಾ ಸ್ಪಂದನ ಕೂಡ ಚೇತನ್ ಅವರ ಟ್ವೀಟ್ ಸ್ಕ್ರೀನ್ ಸಾಟ್ ಹಾಕಿ ಈ ಟ್ವೀಟ್ ನಲ್ಲಿ ಏನು ತಪ್ಪಿದೆ ಎಂದು ಚೇತನ್ ಪರ ನಿಂತಿದ್ದರು.






