ಯಾರ ಬಗ್ಗೆಯಾದರೂ ಕಡ್ಡಿ ತುಂಡು ಮಾಡಿದಂತೆ ಮಾತನಾಡುವಲ್ಲಿ ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ನಿಸ್ಸೀಮರು. ಈ ಬಾರಿ ನಟಿ ಕಂಗನಾ ರಣಾವತ್ ಬಾಲಿವುಡ್ ನಟ ರಣಬೀರ್ ಕಪೂರ್ಗೆ ಟಾಂಗ್ ನೀಡಿದ್ದಾರೆ. ಅಲ್ಲದೇ ಸ್ಯಾಂಡಲ್ವುಡ್ ರಾಕಿ ಭಾಯ್ ಯಶ್ರನ್ನು ಭಗವಾನ್ ರಾಮ ಎಂದು ಹಾಡಿಹೊಗಳಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ಈ ಸಂಬಂಧ ಸ್ಟೋರಿ ಶೇರ್ ಮಾಡಿರುವ ನಟಿ ಕಂಗನಾ ರಣಾವಯ್, ನಿತೇಶ್ ತಿವಾರಿ ನಿರ್ದೇಶನದ ರಾಮಾಯಣ ಸಿನಿಮಾದಲ್ಲಿ ರಾಮನ ಪಾತ್ರದಲ್ಲಿ ರಣಬೀರ್ ಕಪೂರ್, ಸೀತೆಯ ಪಾತ್ರದಲ್ಲಿ ಆಲಿಯಾ ಭಟ್ ಹಾಗೂ ರಾವಣನ ಪಾತ್ರದಲ್ಲಿ ನಟ ಯಶ್ ಕಾಣಿಸಿಕೊಳ್ಳಲಿದ್ದಾರೆ ಎಂಬ ವಿಚಾರವಾಗಿ ಮಾತನಾಡಿದ್ದಾರೆ.

ಸಿನಿಮಾ ಪಾತ್ರಗಳ ಆಯ್ಕೆ ಬಗ್ಗೆ ವ್ಯಂಗ್ಯವಾಡಿರುವ ಕಂಗನಾ ರಣಾವತ್, ಬಾಲಿವುಡ್ನಲ್ಲಿ ಮತ್ತೊಂದು ರಾಮಾಯಣ ಬರ್ತಿದೆ ಎಂಬ ವಿಚಾರ ನನ್ನ ಕಿವಿಗೂ ಬಿತ್ತು. ಇದರಲ್ಲಿ ಸ್ವಲ್ಪ ಸನ್ ಟ್ಯಾನ್ ಮತ್ತು ಆತ್ಮಸಾಕ್ಷಿಯ ಅಗತ್ಯವಿರುವ ತೆಳ್ಳಗಿನ ಬಿಳಿ ಇಲಿ ಈ ಚಿತ್ರದಲ್ಲಿ ನಟಿಸಲಿದ್ದಾರೆಂದು ಹೇಳಲಾಗುತ್ತಿದೆ. ಸ್ತ್ರೀವಿಷಯ ಮತ್ತು ಮಾದಕ ವ್ಯಸನಕ್ಕೆ ಹೆಸರುವಾಸಿಯಾದ ಅವರು ಸಿನಿಮಾವೊಂದರಲ್ಲಿ (ಯಾರೂ ನೋಡದ ಸಿನಿಮಾ) ತನ್ನನ್ನು ತಾನು ಭಗವಾನ್ ಶಿವ ಎಂದು ಸಾಬೀತುಪಡಿಸಲು ಪ್ರಯತ್ನಿಸಿದ ನಂತರ ಇದೀಗ ಭಗವಾನ್ ರಾಮನಾಗಲು ಹೊರಟಿದ್ದಾರೆ. ಸ್ವಯಂ ನಿರ್ಮಿತ ಪ್ರತಿಭಾವಂತ ನಟ ಎಂದು ಕರೆಯಲ್ಪಡುವ ಒಬ್ಬ ದಕ್ಷಿಣದ ಸೂಪರ್‌ಸ್ಟಾರ್, ಒಬ್ಬ ನಿಷ್ಠಾವಂತ ಕುಟುಂಬದ ವ್ಯಕ್ತಿ, ಸಂಪ್ರದಾಯವಾದಿ, ವಾಲ್ಮೀಕಿ ಜಿ ವಿವರಣೆಯ ಪ್ರಕಾರ, ಮೈಬಣ್ಣ, ನಡವಳಿಕೆ ಮತ್ತು ಮುಖದ ವೈಶಿಷ್ಟ್ಯಗಳಲ್ಲಿ ಶ್ರೀರಾಮನಂತೆ ಕಾಣುವ ಆ ನಟನಿಗೆ ರಾವಣನ ಪಾತ್ರವನ್ನು ನೀಡಲು ಮುಂದಾಗುತ್ತಿದ್ದಾರೆ. ಇದು ಯಾವ ರೀತಿಯ ಕಲಿಯುಗ?. ಯಾವುದೇ ಕಾರಣಕ್ಕೂ ತೆಳುವಾಗಿ ಕಾಣುವ ಡ್ರಗ್ಗಿ ಹುಡುಗನು ರಾಮನ ಪಾತ್ರವನ್ನು ವಹಿಸಬಾರದು” ಎಂದು ನಟಿ ಕಂಗನಾ ರಣಾವತ್ ತಮ್ಮ ಸುದೀರ್ಘ ಬರಹದಲ್ಲಿ ಬರೆದುಕೊಂಡಿದ್ದಾರೆ.
ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಬ್ರಹ್ಮಾಸ್ತ್ರ ಸಿನಿಮಾದಲ್ಲಿ ಕೊನೆಯದಾಗಿ ಒಟ್ಟಾಗಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ರಣಬೀರ್ ಕಪೂರ್ ಶಿವನಿಂದ ಪ್ರೇರಣೆ ಪಡೆದ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಶಾರೂಕ್ ಖಾನ್ ಈ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.