ಕಲಬುರಗಿ ( ಕಲ್ಬುರ್ಗಿ) ಮಹಾನಗರ ಪಾಲಿಕೆ ಚುಬಾವಣೆಯಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಗೆಲ್ಲುವುದು ನಿಶ್ಚಿತ ಎಂದು ಕಂಡು ಬರುತ್ತಿದೆ. ಅಶಿಕಾರ ಶಕ್ತಿ ಬಳಸಿಕೊಡು ಹೆಣಗಾಡುತ್ತಿರುವ ಬಿಜೆಪಿಗೆ ಇಲ್ಲಿ ಕಷ್ಟವಿದೆ. ಮುಂಬೈ ಕರ್ನಾಟಕದಲ್ಲಿ ಲಿಂಗಾಯತರ ವೋಟ್ಬ್ಯಾಂಕ್ ನೆರವಿನಿಂದ ‘ಲಾಭ’ ಮಾಡಿಕೊಂಡ ಬಿಜೆಪಿಗೆ ಹೈ-ಕ ಭಾಗದಲ್ಲಿ ಸಾಧ್ಯವಾಗುತ್ತಿಲ್ಲ ಏಕೆ?
ಶರಣರು ಮತ್ತು ಸೂಫಿಗಳ ನೆಲದಲ್ಲಿ ಅದು ಹಲವು ಶಾಸಕ ಸ್ಥಾನ ಗೆದ್ದಿರಬಹುದು. ಆದರೆ ಹೈದರಾಬಾದ್ ಕರ್ನಾಟಕದ ಪ್ರಮುಖ ನಗರಗಳಲ್ಲಿ ಸ್ಥಳೀಯ ಸಂಸ್ಥೆಗಳ ಅಧಿಕಾರ ಹಿಡಿಯಲಿಲ್ಲ. ನಿಜಾಮ ಆಡಳಿತದ ಪ್ರಭಾವದಿಂದ ಹೈ-ಕ ಭಾಗದ ಸಿಟಿಗಳಲ್ಲಿ ಮುಸ್ಲಿಮರ ಜನಸಂಖ್ಯೆ ಹೆಚ್ಚಿದೆ. ಕೆಲಸ ಅರಸಿಕೊಂಡ ಬಂದ ದಲಿತ ಕುಟುಂಬಗಳು ನಗರ, ಪಟ್ಟಣಗಳಲ್ಲಿ ನೆಲೆ ಕಂಡುಕೊಂಡಿವೆ. ಇವೆರಡೂ ಸಮುದಾಯಗಳು ಸ್ಥಳೀಯವಾಗಿ ಕಾಂಗ್ರೆಸ್ ಪರ ಬೆಂಬಲ ನೀಡುತ್ತ ಬಂದಿವೆ.
ದೊಡ್ಡ ಚುನಾವಣೆಯಲ್ಲಿ ಕಾಂಗ್ರೆಸ್ನ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಿದ್ದು ನಿಜ. ಆದರೆ ಸ್ಥಳಿಯ ಮಟ್ಟದಲ್ಲಿ ಅದರಲ್ಲೂ ನಗರ ಮಟ್ಟದಲ್ಲಿ ಬಿಜೆಪಿ ಆಡಳಿತ ಮಾಡಲು ಅವಕಾಶ ಸಿಕ್ಕೇ ಇಲ್ಲ. ಇದು ಬರೀ ಕಲ್ಬುರ್ಗಿ ಅಷ್ಟೇ ಅಲ್ಲ, ರಾಯಚೂರು, ಬಳ್ಳಾರಿ, ಬೀದರ್, ಯಾದಗಿರಿ ಪಟ್ಟಣಗಳಿಗೂ ಅನ್ವಯಿಸುತ್ತದೆ.

ಈ ಸಲವೂ ಕಲಬುರ್ದಿ ಪಾಲಿಕೆ ಚುಬಾವಣೆಯಲ್ಲಿ ಬಿಜೆಪಿ ಹಿಂದೆಯೇ ಇದೆ. ಕಲಬುರ್ಗಿಯ ದಕ್ಷಿಣ ಕ್ಷೇತ್ರದಲ್ದಿ ಬಿಜೆಪಿಯ ದತ್ತಾತ್ರೇಯ ರೇವೂರ್ ಬಿಜೆಪಿ ಶಾಸಕರು. ಕಲಬುರ್ಗಿ ಉತ್ತರದಲ್ಲಿ ಕಾಂಗ್ರೆಸ್ನ ದಿವಂಗತ ಖಮರುಲ್ಲಾ ಇಸ್ಲಾಂ ಪತ್ಬಿ ಖಾನೀಜ್ ಶಾಸಕಿ. ಕಲಬುರ್ಗಿ ಉತ್ತರ ಭಾಗದ ಎಲ್ಲ ವಾರ್ಡುಗಳಿಗೂ ಬೇಗಂ ಸಲಹೆಯಂತೆ ಟಿಕೆಟ್ ನೀಡಲಾಗಿದೆ. ಎಲ್ಲರನ್ನು ಗೆಲ್ಲಿಸಿಕೊಂಡು ಬರುವೆ ಎಂದು ಅವರು ಶಪಥ ತೊಟ್ಟಿದ್ದಾರೆ, ಆದರೆ ದಕ್ಷಿಣ ಭಾಗದ ಶಾಸಕ ಬಿಜೆಪಿಯ ದತ್ತಾತ್ರೇಯ ರೇವೂರ್ ಅವರಲ್ಲಿ ಆ ಉತ್ಸಾಹ ಕಾಣುತ್ತಿಲ್ಲ. ಅವರ ತಂದೆ ಕೂಡ ವೈಯಕ್ತಿಕ ವರ್ಚಸ್ಸಿನಿಂದ ಗೆದ್ದಿದ್ದರು. ಅಲ್ಲಿ ಬಿಜೆಪಿ ಪಾತ್ರ ನಗಣ್ಯ.ಮಗ ಈಗ ಅಪ್ಪನ ಹೆಸರಿನಿಂದ ಗೆದ್ದಿದ್ದಾರೆ ಅಷ್ಟೇ.
ಒಟ್ಟು 55 ಸೀಟುಗಳಲ್ಲಿ ಕಾಂಗ್ರೆಸ್ ಎಲ್ಲದರಲ್ಲೂ ಸ್ಪರ್ಧೆ ಮಾಡಿದೆ. ಬಿಜೆಪಿಯ 2 ನಾಮಿನೇಷನ್ ತಿರಸ್ಕೃತವಾಗಿವೆ. ಆಮ್ ಆದ್ಮಿ, ಒವೈಸಿಯ ಎಎಂಎಂಐಮ್ ಕಣದಲ್ಲಿವೆ. ಎರಡು ವಾರ್ಡುಗಳಲ್ಲಿ ಸ್ಪರ್ಧಿಸಿರುವ ಸಿಪಿಎಂ ಒಂದರಲ್ಲಿ ಗೆಲ್ಲಬಹುದು.
ಬಿಜೆಪಿಯ ಅಧಿಕಾರ ಮತ್ತು ಹಣಕಾಸು ಶಕ್ತಿ ಎಷ್ಟೇ ಇದ್ದರೂ ಇಲ್ಲಿ ಕಾಂಗ್ರೆಸ್ ಮುನ್ನಡೆ ಸದ್ಯಕ್ಕೆ ಖಚಿತವಾದಂತಿದೆ. ಆದರೆ ಇದೇ ಫೈನಲ್ ಅಲ್ಲವಲ್ಲ, ಇನ್ನೂ 6 ದಿನದ ಪ್ರಚಾರ ಬಾಕಿ ಇದೆ.