ಉತ್ತರಪ್ರದೇಶದ ಪ್ರಯಾಗ್‌ರಾಜ್‌ನ (Prayagaraj) ತ್ರಿವೇಣಿ ಸಂಘಮದಲ್ಲಿ ಮಹಾ ಕುಂಭ ಮೇಳದ (Maha kumbh) ಮೌನಿ ಅಮಾವಾಸ್ಯೆಯ ದಿನ ನಡೆದ ಕಾಲ್ತುಳಿತ ದುರಂತ ಬಗ್ಗೆ ಹಿರಿಯ ನಟಿ ಹಾಗೂ ಸಮಾಜವಾದಿ ಪಕ್ಷದ ರಾಜ್ಯಸಭಾ ಸಂಸದೆ ಜಯ ಬಚ್ಚನ್ (Jay’a bachaan) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಈ ಬಗ್ಗೆ ಸಂಸತ್ತಿನ ಅಧಿವೇಶನದಲ್ಲಿ ಮಹಾಕುಂಭಮೇಳವನ್ನು ಗುರಿಯಾಗಿಸಿಕೊಂಡು ಮಾತನಾಡಿದ ಜಯಾ ಬಚ್ಚನ್, ಮಹಾಕುಂಭದ ನೀರು ಅತ್ಯಂತ ಕಲುಷಿತವಾಗಿದೆ. ಪವಿತ್ರ ಗಂಗೆ ಕಲುಷಿತಳಾಗಿದ್ದಾಳೆ ಎಂಬುದು ಬೇಸರದ ಸಂಗತಿ, ಕಾಲ್ತುಳಿತದಲ್ಲಿ ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು ಶವಗಳನ್ನು ಗಂಗಾ ನದಿಗೆ ಎಸೆಯಲಾಗಿದೆ ಅಂತ ಗಂಭೀರ ಆರೋಪ ಮಾಡಿದ್ದಾರೆ.
ಇನ್ನು ಕೋಟ್ಯಂತರ ಜನರು ಆ ಸ್ಥಳಕ್ಕೆ ಭೇಟಿ ನೀಡಿದ್ದಾರೆ ಅಂತ ಉತ್ತರ ಪ್ರದೇಶ ಸರ್ಕಾರ ಸುಳ್ಳು ಹೇಳುತ್ತಿದೆ. ಒಂದು ಸ್ಥಳದಲ್ಲಿ ಇಷ್ಟೊಂದು ದೊಡ್ಡ ಸಂಖ್ಯೆಯ ಜನರು ಹೇಗೆ ಸೇರಲು ಸಾಧ್ಯ,ಇದನ್ನು ನಂಬಲು ಸಾಧ್ಯವೇ ಅಂತ ಬಾಂಬ್ ಸಿಡಿಸಿದ್ದಾರೆ. ಜಯ ಬಚ್ಚನ್ ಹೇಳಿಕೆಗೆ ಬಿಜೆಪಿ ನಾಯಕರು ಆಕ್ರೋಶ ಹೊರ ಹಾಕಿದ್ದಾರೆ.