ಜನಾರ್ದನ ರೆಡ್ಡಿ ಮತ್ತೊಮ್ಮೆ ಸಕ್ರಿಯ ರಾಜಕೀಯಕ್ಕೆ ಬರಲು ವೇದಿಕೆ ಸಜ್ಜಾಗುತ್ತಿದೆಯಾ, 2023ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆಯೇ ಎಂಬ ಹಲವಾರು ಪ್ರಶ್ನೆಗೆ ಸ್ವತಃ ಜನಾರ್ದನ ರೆಡ್ಡಿ ಅವರೇ ಉತ್ತರ ನೀಡಿದ್ದು ನನಗೆ ಮುಂಬರುವ ಚುನಾವಣೆಯಲ್ಲಿಸ್ಪರ್ಧಿಸುವಂತೆ ಡಿಮ್ಯಾಂಡ್ ಮಾಡುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ಹೌದು, ಕಳೆದ ಹಲವು ದಿನಗಳಿಂದ ಜನಾರ್ದನ ರೆಡ್ಡಿ ಮತ್ತೆ ರಾಜಕೀಯಕ್ಕೆ ರಿ ಎಂಟ್ರಿ ಪಡೆದು ಸಕ್ರಿ ರಾಜಕೀಯದಲ್ಲಿ ತೊಡಗಲಿದ್ದಾರೆ ಎಂಬ ಊಹಾಪೋಹಗಳು ಹರಿದಾಡಿದ್ದವು ಆದರೆ ಇದೆಲ್ಲವೂ ನಿಜ ಎನ್ನುವಂತೆ ಸ್ವಲ್ಪ ಜನಾರ್ದನ ರೆಡ್ಡಿ ಅವರೇ ಸ್ಪಷ್ಟಪಡಿಸಿದ್ದಾರೆ.
ಬಳ್ಳಾರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಶ್ರೀರಾಮುಲು, ಸಕ್ರಿಯ ರಾಜಕಾರಣಕ್ಕೆ ಬರುವಂತೆ ನನ್ನ ಮಿತ್ರ ಶ್ರೀರಾಮುಲು ಅವರು ಸಾಕಷ್ಟು ಕೇಳಿಕೊಳ್ಳುತ್ತಿದ್ದಾರೆ. ಬಳ್ಳಾರಿಯ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಅವರು ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ವೇಗವಾಗಿ ಆಗುತ್ತಿಲ್ಲ ಎಂಬ ಬೇಸರ ಅವರಿಗಿದೆ, ಅದನ್ನು ನನ್ನಲ್ಲಿ ಹೇಳಿಕೊಂಡಿದ್ದಾರೆ. ಆಗ ನಾನು ಚಿಂತೆ ಮಾಡಿಕೊಳ್ಳಬೇಡ, ಸಹಕಾರ ನೀಡುತ್ತೇನೆ ಎಂದು ಭರವಸೆ ನೀಡಿದ್ದೇನೆ ಎಂದಿದ್ದಾರೆ.
ಖಾಸಗಿ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಶ್ರೀರಾಮುಲು, ಜನಾರ್ದನ ರೆಡ್ಡಿ ಹೊಗಳಿ, ಸಕ್ರೀಯ ರಾಜಕೀಯಕ್ಕೆ ಬರಲು ಆಹ್ವಾನ ನೀಡಿದ್ದಾರೆ. ಜನಾರ್ದನ ರೆಡ್ಡಿ ಕಾಲದಲ್ಲಿ ಅಭಿವೃದ್ಧಿ ಕೆಲಸಗಳು ಆಗುತ್ತಿತ್ತು. ಅವರು ಮಾಡಿರುವಷ್ಟು ಅಭಿವೃದ್ಧಿ ಕೆಲಸ ನನ್ನಿಂದ ಆಗಿಲ್ಲ. ಕ್ಯಾಬಿನೆಟ್‌ನಲ್ಲಿ ಜನಾರ್ದನ ರೆಡ್ಡಿ ಕೇಳಿದ ಕೆಲಸ ಆಗುತ್ತಿತ್ತು. ಜನಾರ್ದನ ರೆಡ್ಡಿಗೆ ಇರುವಷ್ಟು ಶಕ್ತಿ ನನಗೆ ಈಗ ಇಲ್ಲ. ಎಂದು ಬಹಿರಂಗವಾಗಿ ಹೇಳೊಂಡಿದ್ದಾರೆ.
ಇತ್ತ ಜನಾರ್ದನ ರೆಡ್ಡಿ ನನ್ನ ಸಹೋದರರು ಶಾಸಕರಾಗಿದ್ದಾರೆ, ನಾನೂ ಶಾಸಕನಿದ್ದಂತೆ. ನನ್ನ ಮಿತ್ರ ಶ್ರೀರಾಮುಲು ಬಳ್ಳಾರಿ ಉಸ್ತುವಾರಿಯಾಗಿದ್ದಾರೆ. ಅವರು ಮಂತ್ರಿ ಆದರೆ ನಾನು ಕೂಡ ಮಂತ್ರಿಯಾದಂತೆ. ನಾನು ಕೇವಲ ರಾಜಕೀಯಕ್ಕಾಗಿ ಬಳ್ಳಾರಿಗೆ ಬಂದಿಲ್ಲ. ಬಳ್ಳಾರಿಯನ್ನು ಅಭಿವೃದ್ಧಿ ಮಾಡುವುದಕ್ಕಾಗಿ ಬಂದಿದ್ದೇನೆ.ಬಳ್ಳಾರಿಯನ್ನು ವಿಶ್ವಮಟ್ಟದಲ್ಲಿ ಅಭಿವೃದ್ಧಿಗೊಳಿಸಬೇಕು, ಕ್ರಿಕೆಟ್ ವಿಶ್ವಕಪ್ ನಡೆಯುವ ಮಟ್ಟಕ್ಕೆ ಬಳ್ಳಾರಿಯನ್ನು ಬೆಳೆಸಬೇಕೆಂಬುದು ನನ್ನ ಬಯಕೆಯಾಗಿದೆ ಎಂದರು.
ಮುಂದುವರೆದು, ನನಗೆ ಮುಂಬರುವ ಚುನಾವಣೆಯಲ್ಲಿ ಬಳ್ಳಾರಿ, ಗಂಗಾವತಿ, ವಿಜಯಪುರ, ಕೊಪ್ಪಳ, ಕೋಲಾರ ಮತ್ತು ಬೆಂಗಳೂರಿನ ಕೆ ಆರ್ ಪುರಂ ಮತ್ತು ಬಿಟಿಎಂ ಲೇ ಔಟ್ ನಿಂದ ಸ್ಪರ್ಧಿಸುವಂತೆ ಡಿಮ್ಯಾಂಡ್ ಮಾಡುತ್ತಿದ್ದಾರೆ ಎಂದು ಕೂಡ ಜನಾರ್ದನ ರೆಡ್ಡಿ ಹೇಳಿದ್ದಾರೆ.