
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಜೈಲು ಪಾಲಾಗಿದ್ದು, ಮನೆಯೂಟಕ್ಕಾಗಿ ಭಾರೀ ಸರ್ಕಸ್ ಮಾಡುತ್ತಿದ್ದಾರೆ. ಆದರೆ ಆ ದಿನಗಳ ನಟ ಚೇತನ್ ದರ್ಶನ್‌ಗೆ ಕೌಂಟರ್ ಕೊಡುವ ಕೆಲಸ ಮಾಡಿದ್ದಾರೆ. ಸದ್ಯ ಕನ್ನಡ ಚಿತ್ರರಂಗ ಬಹಳ ಸಂಕಷ್ಟದಲ್ಲಿದೆ. ಸಮಾಜದ ಕಷ್ಟ ಏನೇ ಇದ್ರು ಅವಾಗ ಯಾರು ತಲೆ ಕೆಡಿಸಿಕೊಳ್ಳಲ್ಲ. ಯಾವಾಗ ಹಣ ಕಾಸಿನ ವಿಚಾರ ಬರುತ್ತೆ ಆಗ ಅನ್ಯಾಯ ಅಂತಾರೆ. ಚಿತ್ರರಂಗದಲ್ಲಿ ಯಾವ ಸ್ಟಾರ್‌ನಿಂದ ಕಲೆಕ್ಷನ್ ಜಾಸ್ತಿ ಬರುತ್ತೆ ಅವರಿಗೆ ಬಿಲ್ಡಪ್ ಜಾಸ್ತಿ ಎಂದಿದ್ದಾರೆ.
ದರ್ಶನ್ ಪ್ರಕರಣ ಕನ್ನಡ ಚಿತ್ರರಂಗಕ್ಕೆ ಕಪ್ಪು ಚುಕ್ಕೆ ಅಂದ್ರೆ ತಪ್ಪಾಗಲ್ಲ. ನಮ್ಮ ಸಮಾಜದಲ್ಲಿ ಸಿನಿಮಾ ಸ್ಟಾರ್‌ಗಳಿಗೆ ಯೋಗ್ಯತೆ ಮೀರಿ ಬಿಲ್ಡಪ್ ಸಿಕ್ಕಿದೆ. ಜೈಲು ಊಟದಿಂದ ನಮ್ಮ ದೇಹದ ತೂಕ ಇಳಿಯುತ್ತೆ ಅನ್ನೋದು ಸುಳ್ಳು. ಒಂದು ವೇಳೆ ಜೈಲೂಟದಿಂದ ನಮ್ಮ ದೇಹದ ತೂಕ ಕಮ್ಮಿಯಾದ್ರೆ ಇನ್ನೂ ಒಳ್ಳೆಯದೇ ಅಲ್ಲವೇ ಎಂದು ಪ್ರಶ್ನಿಸಿದ್ದಾರೆ. ನಾನು ಕೂಡ ಹೋರಾಟ ಮಾಡಿ ಎರಡು ಸಲ ಜೈಲಿಗೆ ಹೋಗಿದ್ದೇನೆ. ನನಗಂತೂ ಜೈಲೂಟ ತುಂಬಾ ಇಷ್ಟ ಆಯ್ತು. ಮುದ್ದೆ ಸ್ವಲ್ಪ ಗಟ್ಟಿ ಇರುತ್ತೆ, ನಾನು ನನ್ನ ಬರ್ತ್ ಡೇ ದಿನವೇ ಜೈಲಿನಲ್ಲಿದ್ದೆ. ಆ ದಿನ ಪುಳಿಯೋಗರೆ ಮಾಡಿದ್ರು, ಅದ್ಬುತವಾಗಿತ್ತು ಎಂದಿದ್ದಾರೆ.

ಪ್ರತಿ ಶುಕ್ರವಾರ ನಮಗೆ ಲಡ್ಡು ಕೊಡ್ತಿದ್ರು, ಆದ್ರೆ ಈಗ ನಾನ್ ವೆಜ್ ಕೊಡ್ತಾರೆ ಅಂತಿದ್ದಾರೆ. ನಮಗಂತೂ ಜೈಲಿನಲ್ಲಿ ಯಾವತ್ತು ನಾನ್ ವೆಜ್ ಕೊಟ್ಟಿರ್ಲಿಲ್ಲ. ಜೈಲಿನಲ್ಲಿ ದರ್ಶನ್‌ಗೆ ಯಾವ ರೀತಿಯ ಫೆಸಿಲಿಟಿ ಸಿಕ್ಕಿದ್ಯೋ ಗೊತ್ತಿಲ್ಲ. ರಾಜಕಾರಣಿಗಳು ಇನ್‌ಫ್ಲುಯೆನ್ಸ್ ಮಾಡ್ತಿದ್ದಾರೆ ಅನ್ನೋದನ್ನು ಮಾಧ್ಯಮಗಳಲ್ಲಿ ಬರ್ತಿದೆ. ಜೈಲಿನಲ್ಲಿ ಗಟ್ಟಿಯಾದ ನೆಲ, ಮೈಕೈ ನೋವು ಬರುತ್ತೆ. ಲೈಟ್ ಆನ್ ಆಗಿರುತ್ತೆ ಅನ್ನೋದು ಬಿಟ್ಟರೆ ಬೇರೇನು ತೊಂದರೆ ಇಲ್ಲ. ಅದ್ರೆ ದರ್ಶನ್‌ಗೆ ಮಂಚ, ಟಿವಿ ಕೊಟ್ಟಿದ್ದಾರೆ ಅಂತಾರೆ. ಜೈಲಿನಲ್ಲಿ ನಾವು ದಿನ ಕಳೆಯೋದು ಬಹಳ ಕಷ್ಟ ಅಗುತ್ತೆ. ಜೈಲಿನಲ್ಲಿ ಸಮಯ ಕೂಡ ಗೊತ್ತಾಗಲ್ಲ. ಊಟದ ಸಮಯದಲ್ಲಿ ನಮಗೆ ಟೈಮ್ ಗೊತ್ತಾಗುತ್ತೆ ಅಷ್ಟೇ ಎಂದಿದ್ದಾರೆ.

ನಾನು ಹೋರಾಟ ಮಾಡಿ ಜೈಲಿಗೆ ಹೋಗಿದ್ದೆ. ಆದರೆ ದರ್ಶನ್ ಕ್ರೈಮ್ ಮಾಡಿ ಜೈಲಿಗೆ ಹೋಗಿದ್ದಾರೆ. ಸರ್ಕಾರದಲ್ಲಿ ಇರುವ ಪ್ರಭಾವಿಗಳು ಈ ಪ್ರಕರಣದಲ್ಲಿ ತೆರೆಮರೆಯಲ್ಲಿ ಪ್ರಭಾವ ಬಳಸ್ತಾರೆ. ಪ್ರಭಾವಿಗಳಿಗೆ ಒಬ್ಬರಿಗೊಬ್ಬರಿಗೆ ಪರಿಚಯ ಇರುತ್ತೆ. ಕವರ್ ಅಪ್ ಮಾಡೋಕೆ ಪ್ರಯತ್ನ ಪಡ್ತಾರೆ. ಈ ಪ್ರಕರಣದಲ್ಲಿ ಕೋರ್ಟ್ ತಿಳುವಳಿಕೆಯಿಂದ ತೀರ್ಪು ಕೊಡುತ್ತೆ ಅನ್ಸುತ್ತೆ ಎನ್ನುವ ಮೂಲಕ ದರ್ಶನ್‌ಗೆ ಸಪೋರ್ಟ್ ಮಾಡ್ತಿರುವ ಜನರಿಗೂ ತಿರುಗೇಟು ನೀಡಿದ್ದಾರೆ. ಇನ್ನು ಮನೆಯೂಟಕ್ಕಾಗಿ ಸರ್ಕಸ್ ಮಾಡ್ತಿರುವ ದರ್ಶನ್‌ಗೆ ಚಾಟಿ ಬೀಸಿದ್ದಾರೆ. ಆದರೆ ಚೇತನ್ ಹೇಳಿರುವ ಮಾತು ಅರ್ಧ ಜನರಿಗೆ ಇಷ್ಟವಾದರೆ, ಅಭಿಮಾನಿಗಳ ಕೆಂಗಣ್ಣಿಗೂ ಗುರಿಯಾಗುವ ಸಾಧ್ಯತೆ ಇದೆ