ಕಾಂಗ್ರೆಸ್ ನಾಯಕಿ ಕುಸುಮ ಹನುಮಂತರಾಯಪ್ಪಗೆ (Kusuma hanumatha rayappa) ಟಾಂಗ್ ನೀಡಿದ ಆರ್.ಆರ್ ನಗರ ಕ್ಷೇತ್ರದ ಶಾಸಕ, ಬಿಜೆಪಿ ನಾಯಕ ಮುನಿರತ್ನ (Munirathna) ಸಾರ್ವಜನಿಕ ವೇದಿಕೆಯಲ್ಲಿ ಟಾಂಗ್ ಕೊಟ್ಟಿದ್ದಾರೆ. ಒಂದು ಹೆಣ್ಣಿಗೆ ಯಾವ ಹುಚ್ಚು ಹಿಡಿದ್ರೂ ತಪ್ಪಿಸಬಹುದು.ಆದ್ರೆ, ಎಂ.ಎಲ್.ಎ ಆಗುವ ಹುಚ್ಚು ಹಿಡಿದ್ರೆ ಅದು ತಪ್ಪಿಸೋಕೆ ಆಗಲ್ಲ ಎಂದಿದ್ದಾರೆ.

ಈ ಹೆಣ್ಣಿಗೆ ಒಂದೇ ಜಪ..ತಾನು ಎಂಎಲ್‌ಎ ಆಗಬೇಕು, ಶಾಸಕಿ ಎ ಆಗಬೇಕು ಅಂತ ಒಂದೇ ಹಠ ಹಿಡಿದಿದ್ದಾರೆ. ಅದಕ್ಕಾಗಿ ಯಾವ ಹಂತಕ್ಕೆ ಹೋಗಲೂ ಸಿದ್ಧವಿದ್ದಾರೆ. ಶಾಸಕಿ ಆಗಬೇಕು ಅಂದ್ರೆ ಮುನಿರತ್ನಗೆ ಹುಚ್ಚು ಹಿಡಿಯಬೇಕು.ಅದಕ್ಕೆ ಮುನಿರತ್ನನಿಗೆ ಹುಚ್ಚು ಹಿಡಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಈ ಮಧ್ಯೆ ಪೊಲೀಸರು ನನ್ನ ರಕ್ಷಣೆಗೆ ನಿಂತಿದ್ದಾರೆ. ಭೂಮಿಗೆ ಬಂದ ಮೇಲೆ ಎಲ್ಲರೂ ಒಂದು ದಿನ ಹೋಗಲೇಬೇಕು. ಅವರಿಂದಲೇ ನಾನು ಹೋಗಬೇಕು ಅಂತಿದ್ರೆ, ಯಾರೂ ತಪ್ಪಿಸೋದಕ್ಕೆ ಆಗಲ್ಲ. ಯಾವಾಗ ಏನು ಬೇಕಿದ್ರೂ ಆಗಬಹುದು, ನಮ್ಮಿಂದ ಏನು ಮಾಡಲು ಸಾಧ್ಯವಿಲ್ಲ ಎಂದು ಪರೋಕ್ಷವಾಗಿ ತಮಗೆ ಜೀವ ಬೆದರಿಕೆಯಿದೆ ಎಂಬಂತೆ ಮಾತನಾಡಿದ್ದಾರೆ.






