• Home
  • About Us
  • ಕರ್ನಾಟಕ
Saturday, January 17, 2026
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಈ ಸಾವು ನ್ಯಾಯವೇ??

ಪ್ರತಿಧ್ವನಿ by ಪ್ರತಿಧ್ವನಿ
June 15, 2025
in Top Story, ಜೀವನದ ಶೈಲಿ, ದೇಶ, ಶೋಧ
0
ಈ ಸಾವು ನ್ಯಾಯವೇ??
Share on WhatsAppShare on FacebookShare on Telegram

ADVERTISEMENT

ಅಹಮದಾಬಾದ್ ನಲ್ಲಿ ನಡೆದ ವಿಮಾನ ದುರಂತದಲ್ಲಿ ವಿಮಾನದ ಸಹಾಯಕ ಪೈಲಟ್ ಮಂಗಳೂರಿನ ಕ್ಲೈವ್ ಕುಂದರ್ ರವರು ಮೃತಪಟ್ಟಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಭಗವಂತನಲ್ಲಿ ಪ್ರಾರ್ಥಿಸೋಣ.

ವಿಮಾನ ಪತನವಾಗುವ ಕೊನೆ ಸಮಯದಲ್ಲಿ ಪೈಲಟ್‌ಗಳ ಪರಿಸ್ಥಿತಿ ಹೇಗಿರಬೇಡ? ಇವತ್ತು ಏರ್ ಇಂಡಿಯಾ ಪತನವಾಗುವ ಕೊನೇ ನಿಮಿಷದಲ್ಲಿ ಪೈಲಟ್ ಹೇಳಿದ ಮಾತು “ಇದು ನನ್ನ ಕೊನೆಯ ಕಾಲ್. ನನ್ನಿಂದ ಏನನ್ನು ಮಾಡಲು ಸಾಧ್ಯವಿಲ್ಲ. ನಾನು ಕ್ರ್ಯಾಷ್ ಲ್ಯಾಂಡಿಂಗ್ ಮಾಡುತ್ತಿದ್ದೇನೆ”

ತಾನು ಸಾಯುತ್ತಿದ್ದೇನೆ ಅನ್ನೋದು ಆ ಪೈಲಟ್‌ಗೆ ಮಾತ್ರ ಗೊತ್ತಿರುತ್ತೆ. ಪಾಪ ಆತನ ಕುಟುಂಬ, ತಂದೆ, ತಾಯಿ, ಹೆಂಡತಿ, ಮಕ್ಕಳು ಎಲ್ಲಾರು ಒಮ್ಮೆ ಆತನ ಕಣ್ಣಮುಂದೆ ಬಂದು ಹೋಗಿರಬಹುದು. ಅಯ್ಯೋ…. ಈ ರೀತಿಯ ಸಾವು ಯಾರಿಗೂ ಬೇಡ ದೇವರೇ…..
ಜಾಗಿಂಗ್ ಮಾಡುತ್ತಿದ್ದವನಿಗೆ ಹೃದಯಾಪಘಾತ. ಬೈಕಿನಲ್ಲಿ ಹೋಗುತ್ತಿದ್ದ. ಲಾರಿ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವು.ನಡೆದುಕೊಂಡು ಹೋಗುತ್ತಿದ್ದ – ಮರ ತಲೆಯ ಮೇಲೆ ಬಿದ್ದು ಸಾವು. ಕೂತಿದ್ದ – ಸಿಡಿಲು ಬಡಿದು ಸಾವು. ಮನೆಯೊಳಗೆ ಇದ್ದ – ಪ್ರವಾಹ ಬಂದು ಸಾವು.ಸರಿಯಾದ ಮಾರ್ಗದಲ್ಲೆ ಕಾರು ಓಡಿಸಿಕೊಂಡು ಹೋಗುತ್ತಿದ್ದ. ಆದರೆ ತಪ್ಪು ರಸ್ತೆಯಲ್ಲಿ ತಪ್ಪಾಗಿ ಅತೀವೇಗದಿಂದ ಎದುರಿಗೆ ಬಂದ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದು ಸ್ಥಳದಲ್ಲೆ ಸಾವು. ರಾತ್ರಿ ಮಲಗಿದ್ದ.ಬೆಳಗ್ಗೆ ಏಳಲೇಯಿಲ್ಲಾ. ಚೆನ್ನಾಗಿಯೇ ಇದ್ದ ಆದ್ರೆ ಇದ್ದಕ್ಕಿದ್ದ ಹಾಗೆ ಸತ್ತೋದ.ಹೀಗೆ ಹೇಳುತ್ತಾ ಹೋದರೆ ಒಂದೊಂದು ಸಾವಿಗೂ ಸಾವಿರ, ಲಕ್ಷಾಂತರ ಕಾರಣಗಳು.

Ahmedabad Plane Crash: ವಿಮಾನ ಪತನ ಮತ್ತಷ್ಟು ನಿಗೂಢ! ನಡುಕ ಹುಟ್ಟಿಸುತ್ತೆ ಪೈಲಟ್ ಕೊಟ್ಟ 5 ಸೆಕೆಂಡ್ ಸಂದೇಶ!

ಇಷ್ಟೆಲ್ಲಾ ರೀತಿಯ ಯಾವ ಸಾವುಗಳಲ್ಲೂ ಆ ವ್ಯಕ್ತಿಯ ತಪ್ಪು ಏನು ಇರುವುದಿಲ್ಲ. ಹಣೆಬರಹ ಎನ್ನಬೇಕೋ ಅಥವಾ ಅದಕ್ಕೆ ಸಾವುಗಳ ಕಾರಣಕರ್ತರಿಗೆ ಹಿಡಿ ಶಾಪ ಹಾಕಿ ದುಃಖ ಕಡಿಮೆ ಮಾಡಿಕೊಳ್ಳುಬೇಕೋ ಗೊತ್ತಿಲ್ಲ.

ಇವತ್ತಿನ ವಿಮಾನ ಪತನದ ಘಟನೆಯೂ ಕೂಡ ಹೀಗೆ ನೋಡಿ.ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಕೆಲಸದ ಕಾರಣಕ್ಕೆ, ಸಂಬಂಧಿಕರ ಮನೆಗೆ ಹೋಗಲು,ಅಪ್ಪ ಅಮ್ಮ ಮಕ್ಕಳನ್ನು ನೋಡಲು, ಬಾಣಂತಿಯನ್ನು ನೋಡಲು, ಆಗಿನ್ನು ಜನಿಸಿದ ಮಗುವನ್ನು ನೋಡಲು.ಹುಷಾರಿಲ್ಲದವರನ್ನು ನೋಡಲು, ಎಷ್ಟೋ ವರ್ಷಗಳಾದ ಮೇಲೆ ಸ್ನೇಹಿತರನ್ನು ನೋಡಲು, ಹೀಗೆ ಅವರವರ ವೈಯಕ್ತಿಕ ಕಾರಣಕ್ಕಾಗಿ ಹೊರಟಿದ್ದರು.ಆದರೆ ನಾನಿವತ್ತು ಸಾಯ್ತಿನಿ ಅಂತ ಮಾತ್ರ ಯಾರೊಬ್ಬರಿಗೂ ಗೊತ್ತಿರಲ್ಲ ..
ಸಾವು ನ್ಯಾಯವೇ ಪೈಲೆಟ್ಗೆ ಮಾತ್ರ ಗೊತ್ತಿತ್ತು ಸಾಯ್ತಿನಿ ಅಂತ ಪ್ಯಾಸೆಂಜರ್ ಗೆ ಗೊತ್ತಿರ್ಲಿಲ್ಲ ಬೀಳುವಾಗ ಹೊಗೆ ಬಂದಾಗ ಪ್ಯಾಸೆಂಜರ್ ಗೆ ಗೊತ್ತಾಗ್ತಾ ಇರುತ್ತೆ
ಓ ಮೈ ಗಾಡ್ ಅಂದಿರ್ತಾರೆ ಡ್ಯಾಡಿ ಅಂದಿರ್ತಾರೆ ಮಮ್ಮಿ ಅಂದಿರ್ತಾರೆ ಅಣ್ಣ ಅಂದಿರ್ತಾರೆ ಅಕ್ಕ ಅಂದಿರ್ತಾರೆ ಸಣ್ಣ ಪುಟ್ಟ ಮಕ್ಕಳು ಆ ಸಾವನ್ನ ಹೇಗೆ ತಡೆದುಕೊಂಡರು ಯಾವ ರೀತಿ ಸತ್ತರೂ ಉಸಿರಾಡುತ್ತಿದ್ದಂಗೆ ತಂದೆ ಎದುರುಗಡೆ ತಾಯಿ ಎದುರುಗಡೆ ಸಣ್ಣ ಪುಟ್ಟ ಮಕ್ಕಳು ಎಲ್ಲರೂ ಪ್ರಾಣ ಬಿಟ್ಟಿದ್ದಾರೆ ಅಯ್ಯೋ ವಿಧಿಯೇ!
ಇದಕ್ಕೆ ವಿಮಾನ ಸಂಸ್ಥೆಯ ಮಾಲಿಕ ಕಾರಣನ? ಚಾಲಕನಾ? ಆ ದಿನವೇ ಪ್ರಯಾಣಿಸಿದ್ದಾ?ಕೆಟ್ಟ ಸಮಯನಾ? ಹಣೆಬರಹನಾ?

ಏನೆಂದುಕೊಂಡು ದುಃಖಿಸುವುದು ಬದುಕಿರುವ ಅವರ ಸೇಹಿತ ಅಥವಾ ಸಂಬಂಧಿಕರು?

ಮನುಷ್ಯ ಬದುಕಿದ್ದಾಗ ತನ್ನನ್ನು ತಾನು, ತನ್ನ ಸಂಪಾದನೆಯನ್ನು ಸುರಕ್ಷಿತಗೊಳಿಸಲು ಅದೆಷ್ಟು ಕಷ್ಟಪಡುತ್ತಾನೆ? ಆದರೆ ಅನಿರೀಕ್ಷಿತ ಸಾವುಗಳು ಎಲ್ಲವನ್ನೂ ಒಂದೇ ಕ್ಷಣದಲ್ಲಿ ಹುಸಿಗೊಳಿಸಿಬಿಡುತ್ತದೆ.

ಬದುಕು ನಾವೆಂದುಕೊಂಡತಲ್ಲ

ಬದುಕಿನಲ್ಲಿ ತನಗಾಗಿ,ತನ್ನವರಿಗಾಗಿ,ತಾನು ಪ್ರೀತಿಸಿದವರಿಗಾಗಿ,ತನ್ನ ಅವಶ್ಯಕತೆಗಳಿಗಾಗಿ, ತನ್ನೆದುರಿಗೆ ನಿಂತವರಿಗಾಗಿ ಹೀಗೆ ಬದುಕೇ ಒಂದು ಹೋರಾಟವೆಂದು ನಿಮಿಷ ನಿಮಿಷಕ್ಕೂ ಎದುರಾದ ಪರಿಸ್ಥಿತಿಗಳಿಗೆ ಹೆದರದೆ, ಎದುರಿಸುತ್ತಾ ಬದುಕಿನುದ್ದಕ್ಕೂ ಹೋರಾಡುತ್ತಲೇ ಜೀವಿಸುತ್ತಿರುತ್ತಾನೆ.

Podcast: ಕರಾವಳಿಯಲ್ಲಿ ಇನ್ಮುಂದೆ ತಾಂಟ್ರೆ ಬಾ ತಾಂಟ್..#pratidhvani #mangalore #politics #sand

ಇನ್ನು ವಿಮಾನದ ಪೈಲಟ್ ಗೆ ಇನ್ನೇನು ಕೆಲವೇ ಕ್ಷಣಗಳಲ್ಲಿ ತನ್ನ ಸಾವು ಆಗುತ್ತದೆ ಅಂತ ಗೊತ್ತಿದ್ದರೂ “ತನ್ನ ತಂದೆತಾಯಿ,ಹೆಂಡತಿ -ಮಕ್ಕಳು ಅಕ್ಕ- ತಮ್ಮ ಇವರುಗಳನ್ನು ನೆನೆಸಿಕೊಳ್ಳಲು ಆಗುವುದೇ ಇಲ್ಲ. ಯಾಕೆಂದ್ರೆ ಕೇವಲ ಸೆಕೆಂಡ್ ಗಳಲ್ಲೇ ಪತನವಾಗಿ ಮುಗಿದು ಹೋಗಿರುತ್ತೆ.

ಅದೃಷ್ಟ ಅಂದರೆ ಪ್ರಯಾಣಿಕರಿಗೆ ಕೇವಲ ಸೆಕೆಂಡ್ ಗಳಲ್ಲಿ ಪತನ ಆಗುತ್ತೆ ಅಂತ ಗೊತ್ತಿರಲ್ಲ.

ಎಲ್ಲರಿಗೂ ಆ ಭಗವಂತ ಸದ್ಗತಿ ಕೊಡಲಿ.ಓಂ ಶಾಂತಿ..

ಯಾರಿಗೂ ಈ ರೀತಿಯ ಸಾವು ಬೇಡ ದೇವರೇ

ನವೀನ ಹೆಚ್ ಎ ಹನುಮನಹಳ್ಳಿ
ಅಂಕಣಕಾರರು ಲೇಖಕರು
ಕೆಆರ್ ನಗರ

Tags: ahmedabad flight crashahmedabad london flightAir India flightair india flight crashair india flight crash ahmedabadaviation accident gujaratflightflight accidentflight crashflight crash ahmedabadflight crash indiaGujaratgujarat air disastergujarat aviation mishapgujarat flight accidentgujarat newsgujarat plane crashindia domestic flight crashindia flight crash videoplane crash in gujarat
Previous Post

ವಿಮಾನ ದುರಂತ; ಅಹಮದಾಬಾದ್ ಜನರಲ್ ಆಸ್ಪತ್ರೆಯಲ್ಲಿ ಗಾಯಾಳುಗಳ ಆರೋಗ್ಯ ವಿಚಾರಿಸಿದ ಕಾಂಗ್ರೆಸ್ ನಾಯಕರು

Next Post

ಏರ್ ಇಂಡಿಯಾ ವಿಮಾನ ದುರಂತದ ಬೆನ್ನಲ್ಲೇ ಮತ್ತೊಂದು ಹೆಲಿಕಾಪ್ಟರ್ ಪತನ – 7 ಮಂದಿ ದುರ್ಮರಣ 

Related Posts

BBK 12: ಇಂದು ಬಿಗ್‌ ಬಾಸ್‌ ಫಿನಾಲೆ ದಿಢೀರ್‌ ರದ್ದು: ಕಾರಣವೇನು?
Top Story

BBK 12: ಇಂದು ಬಿಗ್‌ ಬಾಸ್‌ ಫಿನಾಲೆ ದಿಢೀರ್‌ ರದ್ದು: ಕಾರಣವೇನು?

by ಪ್ರತಿಧ್ವನಿ
January 17, 2026
0

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 12 (BBK 12) ಫಿನಾಲೆ ಇಂದು (ಜನವರಿ 17) ಹಾಗೂ ನಾಳೆ (ಜನವರಿ 18) ನಡೆಯಬೇಕಿತ್ತು. ಆದರೆ, ಕಾರ್ಯಕ್ರಮದ ನಿರೂಪಕ...

Read moreDetails
ಕಲ್ಟ್ ಸಿನಿಮಾದ ಫ್ಲೆಕ್ಸ್ ವಿಚಾರಕ್ಕೆ ಪೌರಾಯುಕ್ತೆಗೆ ನಿಂದನೆ: ಕ್ಷಮೆ ಕೇಳಿದ ನಟ ಝೈದ್ ಖಾನ್

ಕಲ್ಟ್ ಸಿನಿಮಾದ ಫ್ಲೆಕ್ಸ್ ವಿಚಾರಕ್ಕೆ ಪೌರಾಯುಕ್ತೆಗೆ ನಿಂದನೆ: ಕ್ಷಮೆ ಕೇಳಿದ ನಟ ಝೈದ್ ಖಾನ್

January 17, 2026
Mangaluru: ʼವಾಟ್ಸಾಪ್ ಯೂನಿವರ್ಸಿಟಿʼ ಸುಳ್ಳು ಸುದ್ದಿಗೆ ಹಿರಿಯರೇ ಬಲಿ: ಮಂಗಳೂರಿನಲ್ಲಿ ಆಗಿದ್ದೇನು..?

Mangaluru: ʼವಾಟ್ಸಾಪ್ ಯೂನಿವರ್ಸಿಟಿʼ ಸುಳ್ಳು ಸುದ್ದಿಗೆ ಹಿರಿಯರೇ ಬಲಿ: ಮಂಗಳೂರಿನಲ್ಲಿ ಆಗಿದ್ದೇನು..?

January 17, 2026
ಸಿಎಂ ತವರು ಜಿಲ್ಲೆಯಲ್ಲೇ  ಫ್ಲೆಕ್ಸ್ ಗಲಾಟೆ: ಕುಮಾರಸ್ವಾಮಿ ಬ್ಯಾನರ್ ಕಿತ್ತೆಸೆದು ವ್ಯಕ್ತಿ ಆಕ್ರೋಶ

ಸಿಎಂ ತವರು ಜಿಲ್ಲೆಯಲ್ಲೇ ಫ್ಲೆಕ್ಸ್ ಗಲಾಟೆ: ಕುಮಾರಸ್ವಾಮಿ ಬ್ಯಾನರ್ ಕಿತ್ತೆಸೆದು ವ್ಯಕ್ತಿ ಆಕ್ರೋಶ

January 17, 2026
ಬಾಲಿವುಡ್ & ಕೋಮುವಾದ: ಎ.ಆರ್ ರೆಹಮಾನ್ ಸ್ಫೋಟಕ ಹೇಳಿಕೆ

ಬಾಲಿವುಡ್ & ಕೋಮುವಾದ: ಎ.ಆರ್ ರೆಹಮಾನ್ ಸ್ಫೋಟಕ ಹೇಳಿಕೆ

January 17, 2026
Next Post
ಏರ್ ಇಂಡಿಯಾ ವಿಮಾನ ದುರಂತದ ಬೆನ್ನಲ್ಲೇ ಮತ್ತೊಂದು ಹೆಲಿಕಾಪ್ಟರ್ ಪತನ – 7 ಮಂದಿ ದುರ್ಮರಣ 

ಏರ್ ಇಂಡಿಯಾ ವಿಮಾನ ದುರಂತದ ಬೆನ್ನಲ್ಲೇ ಮತ್ತೊಂದು ಹೆಲಿಕಾಪ್ಟರ್ ಪತನ - 7 ಮಂದಿ ದುರ್ಮರಣ 

Recent News

BBK 12: ಇಂದು ಬಿಗ್‌ ಬಾಸ್‌ ಫಿನಾಲೆ ದಿಢೀರ್‌ ರದ್ದು: ಕಾರಣವೇನು?
Top Story

BBK 12: ಇಂದು ಬಿಗ್‌ ಬಾಸ್‌ ಫಿನಾಲೆ ದಿಢೀರ್‌ ರದ್ದು: ಕಾರಣವೇನು?

by ಪ್ರತಿಧ್ವನಿ
January 17, 2026
ಕಲ್ಟ್ ಸಿನಿಮಾದ ಫ್ಲೆಕ್ಸ್ ವಿಚಾರಕ್ಕೆ ಪೌರಾಯುಕ್ತೆಗೆ ನಿಂದನೆ: ಕ್ಷಮೆ ಕೇಳಿದ ನಟ ಝೈದ್ ಖಾನ್
Top Story

ಕಲ್ಟ್ ಸಿನಿಮಾದ ಫ್ಲೆಕ್ಸ್ ವಿಚಾರಕ್ಕೆ ಪೌರಾಯುಕ್ತೆಗೆ ನಿಂದನೆ: ಕ್ಷಮೆ ಕೇಳಿದ ನಟ ಝೈದ್ ಖಾನ್

by ಪ್ರತಿಧ್ವನಿ
January 17, 2026
Mangaluru: ʼವಾಟ್ಸಾಪ್ ಯೂನಿವರ್ಸಿಟಿʼ ಸುಳ್ಳು ಸುದ್ದಿಗೆ ಹಿರಿಯರೇ ಬಲಿ: ಮಂಗಳೂರಿನಲ್ಲಿ ಆಗಿದ್ದೇನು..?
Top Story

Mangaluru: ʼವಾಟ್ಸಾಪ್ ಯೂನಿವರ್ಸಿಟಿʼ ಸುಳ್ಳು ಸುದ್ದಿಗೆ ಹಿರಿಯರೇ ಬಲಿ: ಮಂಗಳೂರಿನಲ್ಲಿ ಆಗಿದ್ದೇನು..?

by ಪ್ರತಿಧ್ವನಿ
January 17, 2026
ಸಿಎಂ ತವರು ಜಿಲ್ಲೆಯಲ್ಲೇ  ಫ್ಲೆಕ್ಸ್ ಗಲಾಟೆ: ಕುಮಾರಸ್ವಾಮಿ ಬ್ಯಾನರ್ ಕಿತ್ತೆಸೆದು ವ್ಯಕ್ತಿ ಆಕ್ರೋಶ
Top Story

ಸಿಎಂ ತವರು ಜಿಲ್ಲೆಯಲ್ಲೇ ಫ್ಲೆಕ್ಸ್ ಗಲಾಟೆ: ಕುಮಾರಸ್ವಾಮಿ ಬ್ಯಾನರ್ ಕಿತ್ತೆಸೆದು ವ್ಯಕ್ತಿ ಆಕ್ರೋಶ

by ಪ್ರತಿಧ್ವನಿ
January 17, 2026
ವೈವಿಧ್ಯಮಯ ವಿಷಯಗಳ ಭಂಡಾರ -ʼ ಗೊನೆ ʼ
Top Story

ವೈವಿಧ್ಯಮಯ ವಿಷಯಗಳ ಭಂಡಾರ -ʼ ಗೊನೆ ʼ

by ನಾ ದಿವಾಕರ
January 17, 2026
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

BBK 12: ಇಂದು ಬಿಗ್‌ ಬಾಸ್‌ ಫಿನಾಲೆ ದಿಢೀರ್‌ ರದ್ದು: ಕಾರಣವೇನು?

BBK 12: ಇಂದು ಬಿಗ್‌ ಬಾಸ್‌ ಫಿನಾಲೆ ದಿಢೀರ್‌ ರದ್ದು: ಕಾರಣವೇನು?

January 17, 2026
ಕಲ್ಟ್ ಸಿನಿಮಾದ ಫ್ಲೆಕ್ಸ್ ವಿಚಾರಕ್ಕೆ ಪೌರಾಯುಕ್ತೆಗೆ ನಿಂದನೆ: ಕ್ಷಮೆ ಕೇಳಿದ ನಟ ಝೈದ್ ಖಾನ್

ಕಲ್ಟ್ ಸಿನಿಮಾದ ಫ್ಲೆಕ್ಸ್ ವಿಚಾರಕ್ಕೆ ಪೌರಾಯುಕ್ತೆಗೆ ನಿಂದನೆ: ಕ್ಷಮೆ ಕೇಳಿದ ನಟ ಝೈದ್ ಖಾನ್

January 17, 2026
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!