• Home
  • About Us
  • ಕರ್ನಾಟಕ
Tuesday, October 14, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ

Is there nothing more fitting for the country than the Sengol scepter? : ಸೆಂಗೋಲ್ ರಾಜದಂಡಕ್ಕಿಂತ ದೇಶಕ್ಕೆ ಹೆಚ್ಚು ಸೂಕ್ತವಾದದ್ದು ಬೇರೇನೂ ಇಲ್ಲವೆ?

ಡಾ | ಜೆ.ಎಸ್ ಪಾಟೀಲ by ಡಾ | ಜೆ.ಎಸ್ ಪಾಟೀಲ
June 3, 2023
in ಅಂಕಣ
0
Is there nothing more fitting for the country than the Sengol scepter? : ಸೆಂಗೋಲ್ ರಾಜದಂಡಕ್ಕಿಂತ ದೇಶಕ್ಕೆ ಹೆಚ್ಚು ಸೂಕ್ತವಾದದ್ದು ಬೇರೇನೂ ಇಲ್ಲವೆ?
Share on WhatsAppShare on FacebookShare on Telegram

~ಡಾ. ಜೆ ಎಸ್ ಪಾಟೀಲ.

ADVERTISEMENT

ಕರ್ತಾರ್ ಸಿಂಗ್ ಮತ್ತು ಆಯೇಷಾ ಮಿನ್ಹಾಜ್ ಅವರ ಕಥೆಯು ಸೆಂಗೋಲ್ಗಿಂತ ಹೆಚ್ಚು ಸೂಕ್ತವಾಗಿದೆ ಎನ್ನುತ್ತಾರೆ ಫೆರೋಜ್ ಎಲ್ ವಿನ್ಸೆಂಟ್ ಎಂಬ ಅಂಕಣಕಾರರು ತಮ್ಮ ೨೯. ೦೫. ೨೦೨೩ ರ ಟೆಲಿಗ್ರಾಫ್ ಇಂಡಿಯಾ ನಿಯತಕಾಲ್ಲಿ ಬರೆದ ಲೇಖನದಲ್ಲಿ. ಕರ್ತಾರ್ ಮತ್ತು ಆಯೇಷಾ ಅವರ ಜೀವನ ಮತ್ತು ಪ್ರೀತಿ ಆಧುನಿಕ ಭಾರತಕ್ಕೆ ಅನೇಕ ಪಾಠಗಳನ್ನು ನೀಡುತ್ತದೆ, ಏಕೆಂದರೆ ಅದು ಒಮ್ಮೆ ತನ್ನ ಹಣೆಬರಹವನ್ನು ರೂಪಿಸಿದ ಪ್ರಶ್ನೆಗಳೊಂದಿಗೆ ಮತ್ತೆ ಸೆಟೆದುಕೊಂಡು ನಿಂತಿದೆ ಎನ್ನುತ್ತಾರೆ ಫೆರೋಜ್. ಮೊನ್ನೆ ಭಾನುವಾರ ೨೮.೦೫.೨೦೨೩ ರಂದು ನೂತನ ಸಂಸತ್ ಭವನದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸೆಂಗೋಲ್ ರಾಜದಂಡವನ್ನು ಹೊಸ ಸಂಸತ್ ಭವನದಲ್ಲಿ ಪ್ರತಿಷ್ಠಾಪಿಸಿದರು. ಹೊಸ ಸಂಸತ್ ಭವನಕ್ಕೂ ಕರ್ತಾರ್ ಸಿಂಗ್ ದುಗ್ಗಲ್ ಮತ್ತು ಆಯೇಶಾ ಮಿನ್ಹಾಜ್‌ಗೂ ಏನು ಸಂಬಂಧ ಎಂದು ಲೇಖಕರು ಪ್ರಶ್ನಿಸುತ್ತಲೆ ದೇಶದ ಭಾವೈಕ್ಯತೆಯ ಕತೆಯನ್ನು ಹೇಳುತ್ತಾರೆ.

ಹೊಸ ಸಂಸತ್ತಿನ ಕಟ್ಟಡದ ಉದ್ಘಾಟನೆಯ ಸಂಕೇತವಾಗಿ ಸ್ಕೆಚ್ ಇತಿಹಾಸ ಹೊಂದಿರುವ ತಮಿಳುನಾಡಿನ ರಾಜಸತ್ತೆಯ ಪಳೆಯುಳಿಕೆಯಾಗಿರುವ ಸೆಂಗೋಲ್ ರಾಜದಂಡವನ್ನು ಪ್ರತಿಷ್ಟಾಪಿಸಲು ನರೇಂದ್ರ ಮೋದಿ ಸರಕಾರ ನಿರ್ಧರಿಸಿದಾಗ ಅವರು ಯಾವುದನ್ನು ಆಯ್ಕೆ ಮಾಡಬಹುದಿತ್ತೊ ಅದರ ಕುರಿತು ಅವರ ನಿರಾಸಕ್ತಿಯ ಕಥೆ ಹೀಗೆ ತೆರೆದುಕೊಳ್ಳುತ್ತದೆ. ಜನತಂತ್ರದ ಸಹಾಯದಿಂದ ಅಧಿಕಾರ ಗಿಟ್ಟಿಸಿಕೊಳ್ಳುವ ಫ್ಯಾಸಿಷ್ಟರು ಸದಾ ಜನತಂತ್ರವನ್ನು ನಾಶಗೊಳಿಸಲು ಪ್ರಯತ್ನಿಸುತ್ತಿರುತ್ತಾರೆ. ರಾಜಸತ್ತೆಯ ಅಧಿಕಾರದ ಸಂಕೇತವಾಗಿ, ಹಾಗು ಜನತಂತ್ರಕ್ಕೆ ಸಂಪೂರ್ಣ ವಿರೋಧವಾಗಿರುವ ಸೆಂಗೋಲ್ ರಾಜದಂಡ ಗಣರಾಜ್ಯದಲ್ಲಿ ಪ್ರಶ್ನಾರ್ಹ ಪಾತ್ರವನ್ನು ಹೊಂದಿದೆ. ಆದರೆ ಕರ್ತಾರ್ ಮತ್ತು ಆಯೇಷಾ ಅವರ ಜೀವನ ಮತ್ತು ಪ್ರೀತಿ ಆಧುನಿಕ ಭಾರತಕ್ಕೆ ಅನೇಕ ಪಾಠಗಳನ್ನು ನೀಡುತ್ತದೆ ಎನ್ನುವುದು ಲೇಖಕರ ಅಭಿಪ್ರಾಯವಾಗಿದೆ.

ಆಗಸ್ಟ್ ೧೪, ೧೯೪೭ ರಂದು, ನವದೆಹಲಿಯ ಯಾರ್ಕ್ ರಸ್ತೆಯಲ್ಲಿರುವ ಜವಾಹರಲಾಲ್ ನೆಹರೂ ಅವರ ನಿವಾಸಕ್ಕೆ ಸೆಂಗೋಲ್ ರಾಜದಂಡವನ್ನು ಹಸ್ತಾಂತರಿಸುವ ಸರಿಯಾದ ಸಂದರ್ಭದಲ್ಲಿ, ಅದೇ ನವದೆಹಲಿಯ ಜಂತರ್ ಮಂತರ್‌ನಿಂದ ಕೇವಲ ೫ ಕಿಲೊ ಮೀಟರ್ ಗಿಂತ ಕಡಿಮೆ ದೂರದಲ್ಲಿ, ಕರ್ತಾರ್ ಮತ್ತು ಆಯೇಷಾ ತಮ್ಮ ಬದುಕಿನಲ್ಲಿ ಹೊಸ ಪ್ರಯಾಣವನ್ನು ಪ್ರಾರಂಭಿಸಿದರು. ಪತ್ರಕರ್ತ ಮತ್ತು ಲೇಖಕ ಕರ್ತಾರ್ ಸಿಂಗ್ ಅವರು ತಮ್ಮ ದೇಶದ ಸ್ವಾತಂತ್ರ್ಯವನ್ನು ತೀವ್ರವಾದ ವೈಯಕ್ತಿಕ ಖುಷಿಯೊಂದಿಗೆ ಅಂದು ಆಚರಿಸಿದರು” ಎಂದು ಡೊಮಿನಿಕ್ ಲ್ಯಾಪಿಯರ್ ಮತ್ತು ಲ್ಯಾರಿ ಕಾಲಿನ್ಸ್ “ಫ್ರೀಡಂ ಅಟ್ ಮಿಡ್‌ನೈಟ್‌”ನಲ್ಲಿ ಬರೆಯುತ್ತಾ, ಆನಂತರ ವೈದ್ಯಕೀಯ ವಿದ್ಯಾರ್ಥಿಯಾದ ಆಯೆಶಾ ಮತ್ತು ಆಕೆಯ ಪ್ರಿಯತಮ ಅವರ ನಡುವಿನ ಮೊದಲ ಚುಂಬನವನ್ನು ಲೇಖಕರು ಇಲ್ಲಿ ಜ್ಞಾಪಿಸಿಕೊಳ್ಳುತ್ತಾರೆ.

ಅನುಕೂಲಕರ ಕ್ಷಣದಲ್ಲಿ ಪ್ರಾರಂಭವಾಗುವ ದೀರ್ಘ ಮತ್ತು ಅದ್ಭುತವಾದ ಪ್ರೇಮಕಥೆಯ ಮೊದಲ ಸೂಚಕವೆ ಪ್ರೇಮಿಗಳ ಅಪ್ಪಿಕೊಳ್ಳುವಿಕೆ. ಅವರ ನಿರ್ಧಿಷ್ಟ ಭಾವೋದ್ರೇಕವು ಉತ್ತರ ಭಾರತದ ಗುಡಿಸುವಿಕೆಯನ್ನು ತಡೆಯಲು ಹೊರಟಿತ್ತು. ಈ ಪುಸ್ತಕವು ದೇಶ ವಿಭಜನೆಯ ಸಂದರ್ಭದ ಮತೀಯ ಗಲಭೆಗಳು ಹಾಗು ಕರ್ತಾರ್ ಮತ್ತು ಆಯೇಷಾ ಇಬ್ಬರು ಬೇರೆ ಬೇರೆ ಧರ್ಮಕ್ಕೆ ಸೇರಿದ್ದನ್ನು ಈ ಕತೆ ಉಲ್ಲೇಖಿಸುತ್ತದೆ. ಅರವತ್ತು ವರ್ಷಗಳ ನಂತರ ೨೦೦೭ ರಲ್ಲಿ, ಪುಸ್ತಕದ ಲೇಖಕ ಮತ್ತು ಬಿಬಿಸಿಯ ಅನುಭವಿ ವರದಿಗಾರ ಆಂಡ್ರ್ಯೂ ವೈಟ್‌ಹೆಡ್ ಆಯೆಶಾಳನ್ನು ಆ ಅದೃಷ್ಟದ ದಿನದ ಬಗ್ಗೆ ಕೇಳಿದಾಗ, ಆಯೆಶಾ ಲ್ಯಾಪಿಯರ್ ಮತ್ತು ಕಾಲಿನ್ಸ್‌ಗಿಂತ ಕಡಿಮೆ ನಾಟಕೀಯವೆನ್ನಿಸಿದಳು. ಸಂಭಾಷಣೆಯ ಅಡಕ ಮುದ್ರಣವು ಲಂಡನ್‌ನ ಸ್ಕೂಲ್ ಆಫ್ ಓರಿಯಂಟಲ್ ಮತ್ತು ಏಷ್ಯನ್ ಸ್ಟಡೀಸ್ (SOAS) ನ ದಾಖಲೆಗಳಲ್ಲಿ ಲಭ್ಯವಿದೆ ಎನ್ನುತ್ತಾರೆ ಅಂಕಣಕಾರರು.

ಆಯೇಶಾ ವೈಟ್‌ಹೆಡ್‌ಗೆ ಹೀಗೆ ಹೇಳುತ್ತಾಳೆ: “ನಾವು ಸ್ವಲ್ಪ ಸಮಯ ಪರಸ್ಪರ ಅರ್ಥಮಾಡಿಕೊಂಡುˌ ಪರಸ್ಪರ ಸಂಬಂಧ ಹೊಂದಿದ್ದೇವು. ನಮ್ಮ ನಡುವೆ ಸೌಹಾರ್ದ ಸಂಬಂಧವಿತ್ತು. ನಾವು ಸುಮ್ಮನೆ ಅಡ್ಡಾಡಲು ಜಂತರ್ ಮಂತರ್‌ಗೆ ಹೋಗುತ್ತಿದ್ದೆವು. ಆ ದಿನಗಳಲ್ಲಿ ಅದೊಂದು ಒಳ್ಳೆಯ ಸ್ಥಳವಾಗಿತ್ತು. ಆಗಿನ ಕಾಲವು ತುಂಬಾ ವಿಭಿನ್ನವಾಗಿತ್ತು.”

ವೈಟ್‌ಹೆಡ್: “ಸ್ವಾತಂತ್ರ್ಯದ ಸಂದರ್ಭದಲ್ಲಿ ಜಂತರ್ ಮಂತರ್‌ನಲ್ಲಿ ಒಟ್ಟಿಗೆ ಇರುವುದು ತುಂಬಾ ರೋಮ್ಯಾಂಟಿಕ್ ಎಂದು ತೋರುತ್ತದೆ….”

ಆಯೇಶಾ: “ಹೌದು, ಆಗ ಒಳಗೆ ಹೆಚ್ಚು ಜನಸಂದಣಿ ಇರುತ್ತಿರಲಿಲ್ಲ, ಅಲ್ಲಿ ನಾವೆ ಹೆಚ್ಚಿನ ಸಮಯ ಕಳೆಯುತ್ತಿದ್ದೆವು. ಕಾವಲುಗಾರ ನಮ್ಮನ್ನು ನೋಡುತ್ತಿದ್ದ, ಆದರೆ ನಾವು ಅವನನ್ನು ಅಲಕ್ಷಿಸಿ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದೇವು. ಹೀಗಾಗಿ ನಾವು ಒಬ್ಬರಿಗೊಬ್ಬರು ತುಂಬಾ ಹತ್ತಿರವಾದೆವು.”

ಕರ್ತಾರ್: “ಆ ಸಂಜೆ, ನಾವು ಒಟ್ಟಿಗೆ ಸೇರಲು ನಿರ್ಧಾರಿಸಿದೆವು…”

ವೈಟ್‌ಹೆಡ್: “ನಿಮ್ಮ ಮದುವೆಯು ಸ್ವಾತಂತ್ರ್ಯದ ಸಂದರ್ಭದಲ್ಲಿ ನೆರವೇರಿತು…”

ಆಯೇಶಾ: “ಹೌದು, ಹೌದು ಅದು ಹಾಗೆ”

ವೈಟ್‌ಹೆಡ್ ಆಗ ಆಕೆಯನ್ನು ಕುರಿತು ಸಮಕಾಲೀನ ಭಾರತದಲ್ಲಿ ಪ್ರತಿಯೊಬ್ಬನ ಮನಸ್ಸಿನಲ್ಲಿರುವ ಪ್ರಶ್ನೆಯನ್ನು ಕೇಳುತ್ತಾರೆ.

ವೈಟ್‌ಹೆಡ್: “ಆ ಸಮಯದಲ್ಲಿ ದೆಹಲಿಯಲ್ಲಿ ಒಬ್ಬ ಮುಸಲ್ಮಾನಳಾಗಿದ್ದ ನಿಮಗೆ ಭಯವಾಗಲಿಲ್ಲವೆ?”

ಆಯೇಷಾ: “ಇಲ್ಲ, ಆ ಕಾಲದಲ್ಲಿ, ಈ ಭಾವನೆ ವಿಭಿನ್ನವಾಗಿತ್ತು. ಬೇರೆ ಧರ್ಮದವರೆಂದು ನನಗೆ ಎಂದಿಗೂ ಅನ್ನಿಸಲಿಲ್ಲ.” ಆಯೇಷಾ ಈ ವಿಷಯವನ್ನು ಒತ್ತಿ ಹೇಳಿದಳುˌ ತನ್ನ ಜೀವನದಲ್ಲಿ ಕೋಮು ಸೌಹಾರ್ದತೆಯ ಪ್ರಾಮುಖ್ಯತೆಯನ್ನು ಆಕೆ ಆ ಸಂದರ್ಶನದಲ್ಲಿ ಬಿಚ್ಚಿಟ್ಟಿದ್ದಳು.

ವಿಶೇಷವಾಗಿ ಅಂದು ದೇಶ ವಿಭಜನೆಯು ಎಬ್ಬಿಸಿದ ಕೋಮು ಗಲಭೆಯ ಸಂದರ್ಭದಲ್ಲಿ ಮುಸಲ್ಮಾನ ಹುಡುಗಿಯೊಂದಿಗಿನ ಪ್ರೇಮ ಸಂಬಂಧವು ತನ್ನ ಸಮುದಾಯದಲ್ಲಿ ಏನಾದರೂ ಸಮಸ್ಯೆ ಸೃಷ್ಠಿಸಿತ್ತೆ ಎಂದು ಕೇಳಿದಾಗ, ಕರ್ತಾರ್: “ಇಲ್ಲ, ಇಲ್ಲ , ನಾವು ಬೆಳೆದ ವಾತಾವರಣ ಹಾಗಿರಲಿಲ್ಲ. ನನ್ನ ಆಲೋಚನೆಯಲ್ಲಿ ಯಾವುದೇ ಕೋಮು ಛಾಯೆ ಇರಲಿಲ್ಲ. ನಾನು ಆಲ್ ಇಂಡಿಯಾ ರೇಡಿಯೊದಲ್ಲಿದ್ದಾಗ ಪೇಯಿಂಗ್ ಗೆಸ್ಟ್ ಆಗಿ ಮುಸ್ಲಿಂ ಕುಟುಂಬದೊಂದಿಗೆ ವಾಸಿಸುತ್ತಿದ್ದೆ. ರಾಜಕೀಯದ ಬಗ್ಗೆ ಬಿಸಿ ಬಿಸಿ ಚರ್ಚೆಗಳಾಗುತ್ತಿದ್ದವು. ಅವರು ಪಾಕಿಸ್ತಾನ ಬೇಕು ಎಂದರೆ ನಾನು ಖಾಲಿಸ್ತಾನ ಏಕೆ ಬೇಡ ಎನ್ನುತ್ತಿದೆ. ನೀವು ಹಿಂದೂಗಳನ್ನು ನಂಬದಿದ್ದರೆ, ನಾವು ಮುಸ್ಲಿಮರನ್ನು ನಂಬಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದೆ. ಆ ಚರ್ಚೆಗಳೆಲ್ಲವು ಪ್ರೌಢವಾಗಿರುತ್ತಿದ್ದವು ಎನ್ನುವ ಮಾತನ್ನು ಲೇಖಕರು ಉಲ್ಲೇಖಿರುವ ಬಗ್ಗೆ ಅಂಕಣ ಬರಹದಲ್ಲಿ ಹೇಳಲಾಗಿದೆ.

ಕರ್ತಾರ್ ಅವರು ಆನಂತರದ ದಿನಗಳಲ್ಲಿ ಅಂತಿಮವಾಗಿ ಪದ್ಮಭೂಷಣ ಪ್ರಶಸ್ತಿಯನ್ನು ಪಡೆದರು ಮತ್ತು ಇಂದ್ರಕುಮಾರ್ ಗುಜ್ರಾಲ್ ಅವರ ಆಡಳಿತದಲ್ಲಿ ರಾಜ್ಯಸಭೆಗೆ ನೇಮಕಗೊಳ್ಳುತ್ತಾರೆ. ಆಯೇಷಾ ೧೯೪೭ ರಲ್ಲಿ ದೆಹಲಿಯ ಲೇಡಿ ಹಾರ್ಡಿಂಜ್ ವೈದ್ಯಕೀಯ ಕಾಲೇಜಿನಲ್ಲಿ ತನ್ನ ವೈದ್ಯಕೀಯ ಪದವಿ ಪೂರೈಸಿದರು. ಕರ್ತಾರ್ ರಾವಲ್ಪಿಂಡಿ ಮೂಲದವರಾದರೆ ಆಯೇಷಾ ಅಲಿಗಢದವರು. ಆಕೆಯ ಕೆಲವು ಸಹೋದರಿಯರು ದೇಶ ವಿಭಜನೆಯ ಸಂದರ್ಭದಲ್ಲಿ ಪಾಕಿಸ್ತಾನಕ್ಕೆ ವಲಸೆ ಹೋದರು, ಏಕೆಂದರೆ ಅವರ ಗಂಡಂದಿರು ಆಗ ಅಲ್ಲಿ ಸರಕಾರಿ ಸೇವೆಯಲ್ಲಿದ್ದರು.

“ನಾನು ಲಾಹೋರ್‌ನಲ್ಲಿರುವ ಆಲ್ ಇಂಡಿಯಾ ರೇಡಿಯೊದಲ್ಲಿ ಕೆಲಸ ಮಾಡುತ್ತಿದ್ದಾಗ ಆಯೇಶಾಳ ಅಕ್ಕ ಸುಲ್ತಾನಾ ನನ್ನ ಸಹೋದ್ಯೋಗಿಯಾಗಿದ್ದಳು. ನನ್ನ ತಂಗಿಯನ್ನು ಏಕೆ ಮದುವೆಯಾಗಬಾರದು ಎಂದು ಅವಳು ನನ್ನನ್ನು ಕೇಳಿದ್ದಳು. ಸರಿ, ನಾನು ಆಗ ಈ ಕುರಿತು ಯೋಚಿಸಿರಲಿಲ್ಲ” ಎಂದು ಕರ್ತಾರ್ ವೈಟ್‌ಹೆಡ್‌ಗೆ ಹೇಳಿರುವ ಬಗ್ಗೆ ಅಂಕಣಕಾರರು ಉಲ್ಲೇಖಿಸಿದ್ದಾರೆ. ದೇಶ ವಿಭಜನೆ ಕರ್ತಾರನನ್ನು ದೆಹಲಿಗೆ ಕರೆತಂದಿತು. ಗಲಭೆಗಳ ಕಾರಣದಿಂದ ಆಯೇಷಾ ತನ್ನ ವಿದ್ಯಾಭ್ಯಾಸ ಮುಗಿಸಿ ಹಾಸ್ಟೆಲ್‌ನಲ್ಲಿ ಇರುತ್ತಿದ್ದಳಂತೆ. ಈ ಇಬ್ಬರು ಪ್ರೇಮಿಗಳು ಆಗಾಗ ಭೇಟಿಯಾಗಲು ಪ್ರಾರಂಭಿಸುತ್ತಾರೆ. ಆಗಸ್ಟ್ ೧೫ ರ ಮುನ್ನಾದಿನದಂದು ಇವರಿಬ್ಬರು ಕನ್ನಾಟ್ ಪ್ಲೇಸ್‌ನಲ್ಲಿ ಒಟ್ಟಿಗೆ ಇದ್ದರಂತೆ. ಮರುದಿನ ಬೆಳಿಗ್ಗೆ ಭಾರತ ಸ್ವತಂತ್ರವಾಗಲಿರುವ ಕಾರಣ ದೇಶಭಕ್ತಿಯ ಹಾಡುಗಳು ಗುನುಗುಡುತ್ತಿದ್ದವುˌ ಆಗ ಇವರಿಬ್ಬರು ಮದುವೆಯಾಗಲು ನಿರ್ಧರಿಸಿದರೆಂದು ಲೇಖಕರು ಹೇಳಿದ್ದಾರೆ.

ಕರ್ತಾರ್ ಕುಟುಂಬ ಇದನ್ನು ಹೆಚ್ಚು ವಿರೋಧಿಸಲಿಲ್ಲವಂತೆ, ಆಯೆಶಾಳ ಕುಟುಂದಲ್ಲಿ ತೀವ್ರ ವಿರೋಧದ ಕಾರಣ ಅವಳು ಓಡಿ ಬಂದಳಂತೆ. ಅವಳ ಮನೆಯಲ್ಲಿ ಮತ್ತು ಮನದಲ್ಲಿನ ಆತಂಕವನ್ನು ಶಾಂತಗೊಳಿಸಲು ಸ್ವಲ್ಪ ಸಮಯ ಹಿಡಿಯಿತಂತೆ. ಆಮೇಲೆˌ ಮೃದುಲಾ ಸಾರಾಭಾಯಿ ನೇತೃತ್ವದ ಸಂಘಟನೆಯಿಂದ ಮುಸ್ಲಿಮೇತರ ಕುಟುಂಬಗಳಿಂದ ರಕ್ಷಿಸಲ್ಪಟ್ಟ ಅಪಹರಣಕ್ಕೊಳಗಾದ ಮುಸ್ಲಿಂ ಮಹಿಳೆಯರಿಗಾಗಿ ಜಲಂಧರ್‌ನಲ್ಲಿ ಆಯೇಷಾ ಪರಿಹಾರ ಶಿಬಿರದಲ್ಲಿ ಕೆಲಸ ಮಾಡಲು ಆರಂಭಿಸಿದ ಕುರಿತು ಅಂಕಣದಲ್ಲಿ ಬರೆಯಲಾಗಿದೆ.

ಆಯೆಶಾ ತಾನು ನಂಬಿದ ಸಿದ್ದಾಂತಗಳಿಂದ ತಾರತಮ್ಯಕ್ಕೆ ಒಳಗಾಗಿರುವುದನ್ನು ನಿರಾಕರಿಸಿದಳಂತೆ, ಆದರೆ ೧೯೪೮ ರಿಂದ ೧೯೫೨ ರವರೆಗೆ ಕಮ್ಯುನಿಸ್ಟ್ ಪಕ್ಷದ ಮೇಲಿನ ನಿಷೇಧದ ಸಮಯದಲ್ಲಿ ಅವರಿಬ್ಬರ ಎಡ ಪಕ್ಷದ ಪರವಾದ ಒಲವಿನ ಕಾರಣದಿಂದ ಸಹಾನುಭೂತಿಯ ಶಾಖವನ್ನು ಎದುರಿಸಿದರಂತೆ. “ನಾನು ಮುಸ್ಲಿಂ ಹೀಡುಗಿಯಾಗಿದ್ದು, ಮತ್ತು ಸಿಖ್‌ ಯುವಕನನ್ನು ಮದುವೆಯಾಗಿದ್ದೇನೆ ಎಂದು ತಿಳಿದೇ ನನಗೆ ಕೆಲಸ ನೀಡಲಾಯಿತು. ಆಮೇಲೆ ಅದೇ ಕಾರಣದಿಂದ ಕೆಲಸ ಕಳೆದುಕೊಂಡೆ. ದೆಹಲಿಗೆ ಹೋದಾಗ ನನಗೆ ಮತ್ತೆ ಕೆಲಸ ಸಿಕ್ಕಿತು, ನನ್ನ ಹಿಂದಿನ ಕೆಲಸದ ವರದಿಯ ಬಗ್ಗೆ ತಿಳಿದುಕೊಂಡು ಒಂದು ವರ್ಷದ ನಂತರ ನಾನು ಮತ್ತೆ ಕೆಲಸ ಕಳೆದುಕೊಂಡೆ” ಎಂದು ಅಂತಿಮವಾಗಿ ಸರ್ಕಾರಿ ವೈದ್ಯೆಯಾಗಿ ನಿವೃತ್ತರಾದ ಆಯೇಶಾ ಹೇಳಿದ್ದು ಲೇಖಕರು ಉಲ್ಲೇಖಿಸಿದ್ದಾರೆ.

ಸಂದರ್ಶನದಲ್ಲಿ ಒಂದು ಹಂತದಲ್ಲಿ, ವೈಟ್‌ಹೆಡ್, ಆಯೇಷಾಳನ್ನು ಕುರಿತು “ಪಾಕಿಸ್ತಾನದಲ್ಲಿ ನೆಲೆಸುವ ಬಗ್ಗೆ ನೀವು ಎಂದಾದರೂ ಯೋಚಿಸಿದ್ದೀರಾ? ಭಾರತಕ್ಕಿಂತ ಹೆಚ್ಚಾಗಿ ಪಾಕಿಸ್ತಾನಕ್ಕೆ ನಿಮ್ಮ ನಿಷ್ಠೆಯೆ ಎಂದು ಪ್ರಶ್ನಿಸುತ್ತಾರಂತೆ. ಆಗ ಅವಳು ಅಳೆದು ತೂಗಿ ಮತ್ತು ಅಷ್ಟೆ ಕಾಳಜಿಯುಕ್ತ ಪದಗಳಲ್ಲಿ ಯಾವ ಹಿಂಜರಿಕೆಯಿಲ್ಲದೆ: “ಇಲ್ಲ. ಎಂದಿಗೂ. ಹಿಂದೆಂದೂ. ಯಾಕೆಂದರೆ ನಾನು ಪಾಕಿಸ್ತಾನಕ್ಕೆ ಸೇರಿದವಳಲ್ಲ. ನಮ್ಮ ಕುಟುಂಬ ಯುಪಿಯ ಅಲಿಗಢದ್ದು. ಹಾಗಾಗಿ ನಮಗೆ ಪಾಕಿಸ್ತಾನದೊಂದಿಗೆ ಯಾವುದೇ ಸಂಬಂಧವಿರಲಿಲ್ಲ ಎಂದು ಉತ್ತರಿಸಿದಳಂತೆ.

ಕರ್ತಾರ್ ೨೦೧೨ ರಲ್ಲಿ ಮತ್ತು ಆಯೇಷಾ ೨೦೨೦ ರಲ್ಲಿ ನಿಧನರಾದರು. ಸರಿಯಾಗಿ ದೇಶ ಸ್ವತಂತ್ರವಾಗುವ ಮತ್ತು ಧರ್ಮಾಧಾರದಲ್ಲಿ ದೇಶ ವಿಭಜನೆಗೊಂಡು ಕೋಮು ದಳ್ಳುರಿಯಲ್ಲಿ ಜನರು ಬೇಯುತ್ತಿದ್ದ ಸಂದರ್ಭದಲ್ಲಿ ಜಂತರ್ ಮಂತರ್‌ನಲ್ಲಿ ಅಮರ ಪ್ರೇಮಿಗಳಾದ ಕರ್ತಾರ್ ಮತ್ತು ಆಯೇಷಾ ಅವರ ಧರ್ಮ ನಿರಪೇಕ್ಷ ಸಂಕಲ್ಪದಂತೆ ಸೆಂಗೋಲ್ ಎಂಬ ರಾಜದಂಡವು ಭಾರತದ ಜಾತ್ಯಾತೀತ ಹಾಗು ಬಹುತ್ವದ ಕಲ್ಪನೆಯನ್ನು ಪ್ರತಿಧ್ವನಿಸುವುದಿಲ್ಲ ಎನ್ನುತ್ತಾರೆ ಫೆರೊಜ್ ವಿನ್ಸೆಂಟ್ ಅವರು.

~ಡಾ. ಜೆ ಎಸ್ ಪಾಟೀಲ.

Tags: BJPBJP GovernmentbrakingnewsCongress PartyKartar SinghKartar Singh Duggallatestnewstodaymodern IndiaNew Parliament HouseParliament HousePMModiPrime Minister Narendra ModiSengolSengolOfIndiayesha Minhaj
Previous Post

Vishnuvardhan cutout : ಏಷ್ಯಾ, ಇಂಟರ್​ನ್ಯಾಷನಲ್‌ ಬುಕ್‌ ಆಫ್‌ ರೆಕಾರ್ಡ್ ಸೇರಿದ‌ ‘ವಿಷ್ಣುವರ್ಧನ್‌ ಕಟೌಟ್ ಜಾತ್ರೆ’..!

Next Post

Will 150 medical colleges across the country lose NMC accreditation? | ದೇಶಾದ್ಯಂತ 150 ವೈದ್ಯಕೀಯ ಕಾಲೇಜುಗಳು ಕಳೆದುಕೊಳ್ಳಲಿವೆಯೇ ಎನ್‌ಎಂಸಿ ಮಾನ್ಯತೆ?

Related Posts

Top Story

HD Devegowda: ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಯಲ್ಲಿ ಬುಕ್ ಓದುತ್ತ ಕುಳಿತ ದೇವೇಗೌಡ್ರು..!!

by ಪ್ರತಿಧ್ವನಿ
October 13, 2025
0

ಜ್ವರ ಹಾಗೂ ಯೂರಿನ್ ಸೋಂಕಿನಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಪ್ರಧಾನಿ ಹೆಚ್​ ಡಿ ದೇವೇಗೌಡ್ರು ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಮುಂದಿನ ಕೆಲವು ದಿನಗಳ...

Read moreDetails

Priyank Kharge: ಉತ್ತಮ ಗುಣಮಟ್ಟದ ನೀರು ಬಳಕೆ ಹಾಗೂ ಸಂಶೋಧನಗೆ ಉತ್ಕೃಷ್ಟತಾ ಕೇಂದ್ರ ಸ್ಥಾಪನೆ..!!

October 13, 2025

Sunil Kumar: ಇಂದಿರಾ ಗಾಂಧಿಗೂ ಹೆದರಿಲ್ಲ, ನೆಹರೂ ಮುಂದೆನೂ ಮಂಡಿಯೂರಿಲ್ಲ, ಪ್ರಿಯಾಂಕ್ ಖರ್ಗೆ ಯಾರು?

October 13, 2025

Siddaramaiah: ತಮಿಳುನಾಡಿನಲ್ಲಿ ಕೈಗೊಂಡಂತೆ ಆರ್‌ಎಸ್‌ಎಸ್‌ ವಿರುದ್ಧ ರಾಜ್ಯದಲ್ಲಿ ಕ್ರಮ..!!

October 13, 2025

ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದ ಮಾಜಿ ಐಎಎಸ್‌ ಅಧಿಕಾರಿ ಕಣ್ಣನ್‌ ಗೋಪಿನಾಥನ್..

October 13, 2025
Next Post
Will 150 medical colleges across the country lose NMC accreditation? | ದೇಶಾದ್ಯಂತ 150 ವೈದ್ಯಕೀಯ ಕಾಲೇಜುಗಳು ಕಳೆದುಕೊಳ್ಳಲಿವೆಯೇ ಎನ್‌ಎಂಸಿ ಮಾನ್ಯತೆ?

Will 150 medical colleges across the country lose NMC accreditation? | ದೇಶಾದ್ಯಂತ 150 ವೈದ್ಯಕೀಯ ಕಾಲೇಜುಗಳು ಕಳೆದುಕೊಳ್ಳಲಿವೆಯೇ ಎನ್‌ಎಂಸಿ ಮಾನ್ಯತೆ?

Please login to join discussion

Recent News

Top Story

HD Devegowda: ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಯಲ್ಲಿ ಬುಕ್ ಓದುತ್ತ ಕುಳಿತ ದೇವೇಗೌಡ್ರು..!!

by ಪ್ರತಿಧ್ವನಿ
October 13, 2025
Top Story

Priyank Kharge: ಉತ್ತಮ ಗುಣಮಟ್ಟದ ನೀರು ಬಳಕೆ ಹಾಗೂ ಸಂಶೋಧನಗೆ ಉತ್ಕೃಷ್ಟತಾ ಕೇಂದ್ರ ಸ್ಥಾಪನೆ..!!

by ಪ್ರತಿಧ್ವನಿ
October 13, 2025
Top Story

Sunil Kumar: ಇಂದಿರಾ ಗಾಂಧಿಗೂ ಹೆದರಿಲ್ಲ, ನೆಹರೂ ಮುಂದೆನೂ ಮಂಡಿಯೂರಿಲ್ಲ, ಪ್ರಿಯಾಂಕ್ ಖರ್ಗೆ ಯಾರು?

by ಪ್ರತಿಧ್ವನಿ
October 13, 2025
Top Story

Siddaramaiah: ತಮಿಳುನಾಡಿನಲ್ಲಿ ಕೈಗೊಂಡಂತೆ ಆರ್‌ಎಸ್‌ಎಸ್‌ ವಿರುದ್ಧ ರಾಜ್ಯದಲ್ಲಿ ಕ್ರಮ..!!

by ಪ್ರತಿಧ್ವನಿ
October 13, 2025
Top Story

ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದ ಮಾಜಿ ಐಎಎಸ್‌ ಅಧಿಕಾರಿ ಕಣ್ಣನ್‌ ಗೋಪಿನಾಥನ್..

by ಪ್ರತಿಧ್ವನಿ
October 13, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

HD Devegowda: ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಯಲ್ಲಿ ಬುಕ್ ಓದುತ್ತ ಕುಳಿತ ದೇವೇಗೌಡ್ರು..!!

October 13, 2025

Priyank Kharge: ಉತ್ತಮ ಗುಣಮಟ್ಟದ ನೀರು ಬಳಕೆ ಹಾಗೂ ಸಂಶೋಧನಗೆ ಉತ್ಕೃಷ್ಟತಾ ಕೇಂದ್ರ ಸ್ಥಾಪನೆ..!!

October 13, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada