
ಕೇಂದ್ರ ಸಚಿವ ಕುಮಾರಸ್ವಾಮಿ ಸರ್ಕಾರಿ ಭೂಮಿ ಕಬಳಿಕೆ ಮಾಡಿದ್ದಾರೆ ಎಂದು ಸರ್ಕಾರ ಒತ್ತುವತಿ ತೆರವು ಮಾಡಲು ಮುಂದಾಗಿದೆ. ಕಂದಾಯ ಇಲಾಖೆ ಮೂಲಕ ಸರ್ವೇ ಮಾಡಿ ಮಾರ್ಕಿಂಗ್ ಮಾಡಲಾಗಿದೆ. ಈ ಬಗ್ಗೆ ವಿಧಾನಸೌಧದಲ್ಲಿ ವಿಧಾನ ಪರಿಷತ್ ಜೆಡಿಎಸ್ ಸದಸ್ಯ ಟಿ.ಎ ಶರವಣ ಮಾತನಾಡಿ, ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಕುಮಾರಸ್ವಾಮಿ ಮೇಲೆ ಒಂದಲ್ಲ ಒಂದು ರೀತಿ ದ್ವೇಷದ ರಾಜಕಾರಣ ಮಾಡ್ತಿದ್ದಾರೆ.
ಲೋಕಸಭಾ ಚುನಾವಣೆಯ ನಂತರ ಇನ್ನೂ ದ್ವೇಷದ ರಾಜಕಾರಣ ಹೆಚ್ಚಾಗಿದೆ. ಕುಮಾರಸ್ವಾಮಿ ಕೇಂದ್ರ ಸಚಿವರಾಗಿರೋದನ್ನ ಕಾಂಗ್ರೆಸ್ ನವರು ಸಹಿಸಲು ಆಗ್ತಿಲ್ಲ. 40 ವರ್ಷಗಳ ಹಿಂದೆ ಖರೀದಿ ಮಾಡಿದ ಜಮೀನು, ಕುಮಾರಸ್ವಾಮಿ ಹೆಸರಿಗೆ ಕಳಂಕ ತರಲು ಈ ರೀತಿ ಮಾಡ್ತಿದ್ದಾರೆ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಆಕ್ರಮ-ಸಕ್ರಮ ಮಾಡಬಹುದಿತ್ತು. ಈ ಪ್ರಕರಣದಲ್ಲಿ ಸುಪ್ರಿಂ ಕೋರ್ಟ್‌ಗೆ ಹೋಗ್ತೇವೆ. ಸದನದಲ್ಲಿ ಕೇಳುವ ಪ್ರಶ್ನೆಗಳಿಗೆ ಸರ್ಕಾರ ಸಮರ್ಪಕ ಉತ್ತರ ನೀಡಿಲ್ಲ. ಸರ್ಕಾರ ಪಲಾಯನ ಮಾಡ್ತಿದೆ ಎಂದು ಟೀಕಿಸಿದ್ದಾರೆ.

ಕುಮಾರಸ್ವಾಮಿ ಭೂಮಿ ಒತ್ತುವರಿ ತೆರವು ವಿಚಾರಕ್ಕೆ ದ್ವೇಷದ ರಾಜಕಾರಣ ಅನ್ನೋ ಆರೋಪಕ್ಕೆ ಡಿಸಿಎಂ ಡಿಕೆಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ನೋಡ್ರಿ ಇಡಿ ದೇಶಕ್ಕೆ ಗೊತ್ತು, ನಾವ್ಯಾರಾದರೂ ಕೇಸ್ ಹಾಕಿದ್ದೇವಾ..? ಹದಿನೈರು ಇಪತ್ತು ವರ್ಷದಿಂದ ಆ ಹೀರೇಮಠ್ ನನ್ಮೇಲೂ ಕೇಸ್ ಹಾಕಿದ್ದಾರೆ. ಅವರ ಮೇಲೆಯೂ ಕೇಸ್ ಹಾಕಿದ್ದಾರೆ. ಕುಮಾರಸ್ವಾಮಿ ಯಾಕೆ ಗಾಬರಿ ಮಾಡ್ಕೋ ಬೇಕು. ಏನ್ ದ್ವೇಷದ ರಾಜಕಾರಣ ಮಾಡ್ತಾರೆ..? ಕೋರ್ಟ್ ಆಫೀಸರ್‌ಗೆ ಡೈರೆಕ್ಷನ್ ಕೊಟ್ಟಿದೆ. ಈ ಹಿಂದೆಯೂ ಲೋಕಾಯುಕ್ತದಲ್ಲಿ ಎಲ್ಲಾ ಕೇಸ್ ನಡೆದಿರೋದು ನೆನಪಿದೆ ಎಂದಿದ್ದಾರೆ.

ನನಗೆ ಡೀಟೆಲ್ಸ್ ಗೊತ್ತಿಲ್ಲ, ಸಿದ್ದರಾಮಯ್ಯ ಏನ್ ದ್ವೇಷ ಮಾಡ್ತಾರೆ ನಾವೇನ್ ಮಾಡ್ತೀವಿ. ದ್ವೇಷ ರಾಜಕಾರಣ ಅವರ ಇರೋದು ಅವರ DNA ಅಲ್ಲಿ. ಮೈಸೂರಲ್ಲಿ ಏನ್ ಏನ್ ಮಾತಾಡಿದ್ರು..? ಬೇರೆ ಕಡೆ ಏನ್ ಏನ್ ಮಾತಾಡಿದ್ರು..? ಅವರ ತಂದೆ ಏನ್ ಏನ್ ಮಾತಾಡಿದ್ರು..? ನನ್ಮೇಲೆ ಏನ್ ಏನ್ ಕೇಸ್ ಹಾಕಿಸಿದ್ರು..? ನನ್ನ ತಂಗಿ, ನನ್ ಹೆಂಡ್ತಿ, ನನ್ ತಮ್ಮನ ಮೇಲೆಲ್ಲಾ ಅದಿರು ಕಳ್ಳತನ ಮಾಡಿದ್ವಿ ಎಂದು ಕೇಸ್ ಹಾಕಿದ್ರು. ನಮಗೂ ಬಳ್ಳಾರಿಗೂ ಸಂಭಂದ ಇಲ್ಲ. ಕೇಸ್ ಹಾಕಿಸಿರಲಿಲ್ಲಾ ಅವರದ್ದಲ್ವಾ ದ್ವೇಷ..? ಸುಮ್ಮನೆ ಆಯ್ತು ಎಂದು ಜೊತೆಗೆ ಸರ್ಕಾರ ಮಾಡಿದ್ದೆವು. ಮರ್ಯಾದೆ ಇಂದ ಇದ್ರೆ ಒಳ್ಳೇದು, ಅವರಿಗೂ ಕ್ಷೇಮ ಎಂದಿದ್ದಾರೆ.