ಮಕ್ಕಳಿಂದ ದೊಡ್ಡವರವರೆಗೂ ಎಲ್ಲರೂ ಚಪ್ಪಲಿಗಳನ್ನು ಧರಿಸುವುದು ಸಾಮಾನ್ಯ. ಈಗೀಗ ಈ ಚಪ್ಪಲಿಗಳಲ್ಲೂ ಟ್ರೆಂಡ್ ಸೆಟ್ ಮಾಡುತ್ತಿದ್ದಾರೆ. ಈಗೀಗ ಎಲ್ಲರ ಕಾಲಲ್ಲೂ ಕ್ರಾಕ್ಸ್ ಚಪ್ಪಲಿಗಳು ಹೆಚ್ಚಾಗಿ ಕಾಣುತ್ತಿವೆ. ಹೊಸ ಹೊಸ ಕಲರ್, ಡಿಸೈನ್‌ನಲ್ಲಿ ಕ್ರಾಕ್ಸ್ ಭಾರೀ ಪ್ರಸಿದ್ದಿ ಪಡೆದುಕೊಂಡಿವೆ. ಆದರೆ ಇವುಗಳನ್ನು ಧರಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಹೇಳಲಾಗುತ್ತಿದೆ.

ಯುರೋಪಿಯನ್ ಯುತ್ಸ್ ಈ ಕ್ರಾಕ್ಸ್‌ಗಳನ್ನ ವಿಶ್ವದ್ಯಾಂತ ಪರಿಚಯಿಸಿದರು. ಸಮುದ್ರದಲ್ಲಿ ಮೀನು ಹಿಡಿಯಲು ಬೋಟ್‌ಗಳಲ್ಲಿ ಹೋಗುವವರಿಗಾಗಿ ಈ ಕ್ರಾಕ್ಸ್ ಸ್ಲಿಪರ್ಸ್ ಅನ್ನು ಮೊದಲು ಬಳಕೆ ಮಾಡಲಾಗುತ್ತಿತ್ತು. ದೊಡ್ಡವರು ಇವುಗಳನ್ನು ಧರಿಸಬಹುದು. ಆದರೆ ಮಕ್ಕಳಿಗೂ ಈ ಸ್ಲಿಪರ್‌ಗಳನ್ನು ಕೊಡಿಸುವುದು ಆರೋಗ್ಯ ತಜ್ಙರ ಹೇಳಿಕೆ ಆತಂಕ ತರಿಸಿದೆ.

ತಜ್ಞರು ಹೇಳುವ ಪ್ರಕಾರ, ಕ್ರಾಕ್ಸ್ ಮಕ್ಕಳಿಗೆ ಉತ್ತಮವಲ್ಲ. ಅಂದರೆ ಇವು ಪಾದದ ಉತ್ತಮ ಬೆಂಬಲ ನೀಡುವುದಿಲ್ಲ. ಏಕೆಂದರೆ ಚಿಕ್ಕ ಮಕ್ಕಳ ಪಾದಗಳು ಬೆಳೆಯುತ್ತಿವೆ. ಮತ್ತು ಅವರ ಪಾದಗಳು ಮತ್ತು ಕಣಕಾಲುಗಳು ಸರಿಯಾದ ದಿಕ್ಕಿನಲ್ಲಿ ಬೆಳೆಯಲು ಅವರಿಗೆ ಸರಿಯಾದ ಬೆಂಬಲ ಬೇಕು. ಬೆಂಬಲವಿಲ್ಲದ ಶೂಗಳು ಮಕ್ಕಳಲ್ಲಿ ಚಪ್ಪಟೆ ಪಾದಗಳು ಅಥವಾ ಪಾದ ನೋವಿನಂತಹ ಸಮಸ್ಯೆಗಳನ್ನು ಹೆಚ್ಚಿಸಬಹುದು.

ಕ್ರಾಕ್ಸ್ ಚಪ್ಪಲಿ ಧರಿಸುವುದರಿಂದ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ ಎಂದು ವೈದ್ಯಲೋಕ ಹೇಳುತ್ತದೆ. ಚಿಕ್ಕವರಿದ್ದಾಗ ಮಕ್ಕಳ ಕಾಲುಗಳ ಹಿಮ್ಮಡಿ ಕಳೆಗೆ ಕಾಮಾನಿನ ರೀತಿ ಬೆಳೆಯುತ್ತವೆ. ಇದು ನಮ್ಮ ತೂಕ ಬೆಂಬಲಿಸಲು ಹಾಗೂ ಪಾದಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ನೈಸರ್ಗಿಕ ಮಾರ್ಗವಾಗಿದೆ.ಈ ಕ್ರಾಕ್ಸ್ ಬಳಕೆಯಿಂದ ಕಾಲುಗಳಲ್ಲಿ ಈ ಕಮಾನಿನ ಆಕಾರ ಕಡಿಮೆ ಮಾಡುವ ಸಾಧ್ಯತೆ ಇರುತ್ತದೆ. ಮಗುವಿನ ಭವಿಷ್ಯದಲ್ಲಿ ಕಾಲು ಮತ್ತು ಮೊಣಕಾಲುಗಳ ನೋವಿಗೆ ಕಾರಣವಾಗಬಹುದು. ನಡಿಗೆ ಶೈಲಿನ ಚೇಂಜ್ ಮಾಡಿ ಹಿಮ್ಮಡಿ ನೋವಿಗೆ ಕಾರಣವಾಗುತ್ತದೆ. ಪ್ಲಾಂಟರ್ ಪ್ಯಾಸಿಟಿಸ್ ಎನ್ನುವ ಕಾಯಿಲೆ ಬರುವ ಸಾಧ್ಯತೆ ಇದೆ. ಸ್ಯಾಂಡಲ್ ಅಥವಾ ಶೂಗಳನ್ನು ಬಳಕೆ ಮಾಡುವುದು ಉತ್ತಮ ಎಂದು ಹೇಳಲಾಗಿದೆ.
ಇದನ್ನೂ ಓದಿ
ಹೋರ್ಮುಜ್ ಜಲಸಂಧಿ ಭದ್ರತೆಗೆ ಹಲವು ದೇಶಗಳ ಯುದ್ಧನೌಕೆಗೆ ಕರೆ: ಇಲ್ಲಿದೆ ಟ್ರಂಪ್ ಹೇಳಿಕೆ
ಹೋರ್ಮುಜ್ ಜಲಸಂಧಿ ಭದ್ರತೆಗೆ ಹಲವು ದೇಶಗಳ ಯುದ್ಧನೌಕೆಗೆ ಕರೆ: ಇಲ್ಲಿದೆ ಟ್ರಂಪ್ ಹೇಳಿಕೆ






