ಬಿಗ್ ಬಾಸ್ ಕನ್ನಡ(Bigg Boss Kannada) ಸೀಸನ್ 12 ರೋಚಕ ಹಂತಕ್ಕೆ ತಲುಪುತ್ತಿದ್ದು, ಫಿನಾಲೆಗೆ ಬರಬಹುದು ಎಂದು ಊಹಿಸಿದ ಸ್ಪರ್ಧಿಗಳೇ ಮನೆಯಿಂದ ಹೊರಗೆ ಹೋಗುತ್ತಿದ್ದಾರೆ. ಈ ವಾರ ಬಿಗ್ ಬಾಸ್ ಮನೆಯಲ್ಲಿ ಒಟ್ಟು 9 ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ. ಈ ಪೈಕಿ ಬಿಗ್ ಬಾಸ್ ಆಟ ನನಗಲ್ಲ, ಬಿಗ್ ಬಾಸ್ ಮನೆಯಲ್ಲಿ ನಾನು ಇರುವುದಿಲ್ಲ ಎನ್ನುತ್ತಿದ್ದ ಧ್ರುವಂತ್(Dhruvanth) ನಿನ್ನೆಯ ವಾರದ ಕಥೆ ಕಿಚ್ಚನ ಜೊತೆ ಸಂಚಿಕೆಯಲ್ಲಿ ಸೇಫ್ ಆಗಿದ್ದಾರೆ.

ಉಳಿದ ಸೂರಜ್ ಸಿಂಗ್, ರಾಶಿಕಾ, ಅಭಿಷೇಕ್, ಗಿಲ್ಲಿ ನಟ, ಸ್ಪಂದನಾ, ರಕ್ಷಿತಾ, ಕಾವ್ಯ ಹಾಗೂ ಮಾಳು ನಾಮಿನೇಷನ್‌ನಲ್ಲಿ ಮುಂದುವರಿದಿದ್ದು, ಈ ಪೈಕಿ ಅಭಿಷೇಕ್ ಎಲಿಮಿನೇಟ್ ಆಗಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಈ ಬಗ್ಗೆ ಇಂದಿನ ಸಂಚಿಕೆಯಲ್ಲೇ ಸ್ಪಷ್ಟನೆ ಸಿಗಬೇಕಿದೆ. ಒಂದು ವೇಳೆ ಅಭಿಷೇಕ್ ಎಲಿಮಿನೇಟ್ ಆದರೆ ಮುಂದಿನ ವಾರ ಮನೆಯ ಕ್ಯಾಪ್ಟನ್ ಯಾರು ಎನ್ನುವ ಪ್ರಶ್ನೆ ಉದ್ಭವವಾಗಿದೆ.

ಅಭಿಷೇಕ್ ಹಾಗೂ ಸ್ಪಂದನಾ ಈ ವಾರ ಜೋಡಿ ಕ್ಯಾಪ್ಟನ್ ಆಗಿದ್ದು, ಅಭಿಷೇಕ್ ಎಲಿಮಿನೇಟ್ ಆದರೆ ಸ್ಪಂದನಾ ಒಬ್ಬರೇ ಮನೆಯ ಕ್ಯಾಪ್ಟನ್ ಆಗುತ್ತಾರಾ..? ಅಥವಾ ಅಭಿಷೇಕ್ ತಮ್ಮ ಕ್ಯಾಪ್ಟನ್ಸಿಯನ್ನು ಯಾರಿಗಾದರೂ ಬಿಟ್ಟುಕೊಟ್ಟು ಹೋಗುತ್ತಾರಾ ಎನ್ನುವ ಕುತೂಹಲ ಇದೆ. ಬಿಗ್ ಬಾಸ್ ಆದೇಶದಿಂದ ಅಭಿಷೇಕ್ ತಮ್ಮ ಕ್ಯಾಪ್ಟನ್ಸಿಯನ್ನು ಹಸ್ತಾಂತರಿಸಬೇಕಾದ ಸನ್ನಿವೇಶ ಬಂದರೆ ಧನುಷ್ ಅಥವಾ ರಘು ಅವರಿಗೆ ಕ್ಯಾಪ್ಟನ್ಸಿ ಸಿಗಬಹುದು ಎನ್ನುವ ಪ್ರೇಕ್ಷಕರ ಲೆಕ್ಕಾಚಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ












