• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, March 5, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

Chennai Super Kings defeat Gujarat Titans by 5 wickets : IPL ಫೈನಲ್‌ : ಗೆದ್ದು ಬೀಗಿದ ಚೆನ್ನೈ ಸೂಪರ್‌ ಕಿಂಗ್ಸ್‌, ತವರಲ್ಲಿ GTಗೆ ಮುಖಭಂಗ..!

ಕೃಷ್ಣ ಮಣಿ by ಕೃಷ್ಣ ಮಣಿ
May 30, 2023
in Top Story, ಇತರೆ / Others, ಇದೀಗ, ರಾಜಕೀಯ
0
Chennai Super Kings defeat Gujarat Titans by 5 wickets : IPL ಫೈನಲ್‌ : ಗೆದ್ದು ಬೀಗಿದ ಚೆನ್ನೈ ಸೂಪರ್‌ ಕಿಂಗ್ಸ್‌, ತವರಲ್ಲಿ GTಗೆ ಮುಖಭಂಗ..!
Share on WhatsAppShare on FacebookShare on Telegram

2023ನೇ ಸಾಲಿನ ಐಪಿಎಲ್‌ ಫೈನಲ್‌ ಪಂದ್ಯ ಗುಜರಾತ್‌ನ ಅಹಮದಾಬಾದ್‌‌ ಕ್ರೀಡಾಂಗಣದಲ್ಲಿ ನಡೀತು. ಇತ್ತೀಚಿಗಷ್ಟೇ ಪ್ರಧಾನಿ ನರೇಂದ್ರ ಮೋದಿ ಹೆಸರು ನಾಮಕರಣ ಮಾಡಿಕೊಂಡಿದ್ದ ಮೊಟೆರಾ ಸ್ಟೇಡಿಯಂನಲ್ಲಿ ಮಳೆಯ ಹೊಡೆತಕ್ಕೆ ತತ್ತರಿಸಿದ್ದ ಫೈನಲ್‌ ಪಂದ್ಯ, ಡಕ್ವರ್ಥ್ ಲೂಯಿಸ್‌ ನಿಯಮದ ಪ್ರಕಾರ 15 ಓವರ್‌ಗಳ ಆಟದಲ್ಲಿ ಚೆನ್ನೈ ಸೂಪರ್‌ ಕಿಂಗ್‌ ಗೆದ್ದು ಬೀಗಿದೆ. ಮೊದಲಿಗೆ ಟಾಸ್‌ ಸೋತು ಬ್ಯಾಟಿಂಗ್‌ಗೆ ಇಳಿದ ಗುಜರಾತ್‌ ಟೈಟಾನ್ಸ್‌‌ 20 ಓವರ್‌ಗಳಲ್ಲಿ ಕೇವಲ 2 ವಿಕೆಟ್‌ ಕಳೆದುಕೊಂಡು 214 ರನ್‌ ಬಾರಿಸಿತ್ತು. ಆದರೆ ಮಳೆ ಬಂದು ಡಕ್ವರ್ಥ್ ಲೂಯಿಸ್‌ ನಿಯಮದ ಪ್ರಕಾರ 15 ಓವರ್‌‌ಗೆ 171 ಗುರಿ ಬೆನ್ನತ್ತಿದ್ದ ಚೆನ್ನೈ ಮೊದಲಿನಿಂದಲೂ ಅಬ್ಬರದ ಆಟ ಆಡುವ ಮೂಲಕ 5 ವಿಕೆಟ್‌ಗಳ ಜಯಭೇರಿ ಬಾರಿಸಿದೆ.

ADVERTISEMENT

ಬೃಹತ್‌ ಮೊತ್ತ ಬೆನ್ನತ್ತಿದ್ದ ಚೆನ್ನೈಗೆ ಎದುರಾಯ್ತು ಮಳೆ..

ಭಾನುವಾರ ಭಾರೀ ಮಳೆ ಸುರಿದಿದ್ದ ಕಾರಣಕ್ಕೆ ಆಟ ಆರಂಭವೇ ಆಗಿರಲಿಲ್ಲ. ಹೀಗಾಗಿ ಫೈನಲ್‌ ಪಂದ್ಯವನ್ನು ಸೋಮವಾರಕ್ಕೆ ಮುಂದೂಡಲಾಗಿತ್ತು. ಟಾಸ್‌ ಗೆದ್ದು ಬೌಲಿಂಗ್‌ ಆಯ್ಕೆ ಮಾಡಿಕೊಂಡಿದ್ದ ಧೋನಿ ಬಳಗ, ಗುಜರಾತ್‌ ಟೈಟಾನ್ಸ್‌ ಕಟ್ಟಿಹಾಕಲು ಬೆವರು ಹರಿಸಬೇಕಾಯ್ತು. ಅಂತಿಮವಾಗಿ ಗುಜರಾತ್‌ ಟೈಟಾನ್ಸ್‌‌ ಕೇವಲ 2 ವಿಕೆಟ್‌‌ ಕಳೆದುಕೊಂಡು 20 ಓವರ್‌ಗಳಲ್ಲಿ 214ರನ್‌ಗಳನ್ನು ಬಾರಿಸಿ ಬೃಹತ್‌ ಮೊತ್ತವನ್ನು ಸವಾಲಾಗಿ ನೀಡಿತ್ತು. ಚೆನ್ನೈ ಸೂಪರ್‌ ಕಿಂಗ್ಸ್‌‌ ಕೂಡ ಆಟವನ್ನು ಶುರು ಮಾಡುತ್ತಿದ್ದ ಹಾಗೆ ಸುರಿದ ಮಳೆ ಆಟದ ಮೇಲೆ ದುಷ್ಪರಿಣಾಮ ಬೀರುವ ಆತಂಕ ಸೃಷ್ಟಿಸಿತ್ತು. ಇಡೀ ಮೈದಾನ ಮಳೆಯಿಂದ ಒದ್ದೆಯಾಗಿದ್ರಿಂದ ನಿಗದಿತ ಸಮಯದಲ್ಲಿ ಆಟ ನಡೆಸಲು ಸಾಧ್ಯವಾಗಲಿಲ್ಲ. ಕೊನೆಗೆ ರಾತ್ರಿ 11.30ರ ನಂತರ 15 ಓವರ್‌ಗಳ ಪಂದ್ಯ ಆಡಿಸುವ ನಿರ್ಧಾರಕ್ಕೆ ಅಂಪೈರ್‌ಗಳು ಬಂದಿದ್ದರು.

ಮಳೆ ಬಂದು ಮಾನ ಕಳೆದ ನಮೋ ಸ್ಟೇಡಿಯಂ..!

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಎಷ್ಟೇ ದೊಡ್ಡ ಮಳೆ ಬಂದರೂ ಕೇವಲ ಅರ್ಧ ಗಂಟೆಯಲ್ಲಿ ಇಡೀ ಮೈದಾನವನ್ನೇ ಒಣಗಿಸುವ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗಿದೆ. ಹೀಗಾಗಿ ಎಷ್ಟೆ ಪ್ರಮಾಣದಲ್ಲಿ ಮಳೆ ಬಂದರೂ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮಳೆ ಬಿಟ್ಟ ಬಳಿಕ ಪಂದ್ಯ ಮುಂದುವರಿಯುತ್ತದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಹೆಸರನ್ನೇ ಹೊಂದಿರುವ ಗುಜರಾತ್‌ನ ನರೇಂದ್ರ ಮೋದಿ ಮೈದಾನದಲ್ಲಿ ಮಳೆ ನೀರು ಸೇರಿಕೊಂಡಿದ್ದರಿಂದ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ ಹರಾಜು ಆಗುವಂತೆ ಮಾಡಿತ್ತು. ಮೈದಾನದಲ್ಲಿ ನಿಂತಿದ್ದ ನೀರನ್ನು ಹೊರ ಹಾಕಲು ಸಿಬ್ಬಂದಿ ಹರಸಾಹಸ ಪಡಬೇಕಾಯ್ತು. ದೊಡ್ಡ ದೊಡ್ಡ ಸ್ಪಾಂಜ್‌ಗಣನ್ನು ಬಳಸಿ ಮೈದಾನದಲ್ಲಿ ನಿಂತಿದ್ದ ನೀರನ್ನು ಹೊರ ಹಾಕಲಾಯ್ತು. ಆ ಬಳಿಕ ಮಧ್ಯರಾತ್ರಿ 12.10ಕ್ಕೆ ಡಕ್ಷರ್ಥ್ ಲೂಯಿಸ್‌ ನಿಯಮದ ಪ್ರಕಾರ ಪಂದ್ಯವನ್ನು 15 ಓವರ್‌ಗಳಿಗೆ ಸೀಮಿತಗೊಳಿಸಿ ರೋಚಕ ಪಂದ್ಯವನ್ನಾಗಿಸಲಾಯ್ತು.

ಕುಣಿದು ಕುಪ್ಪಳಿಸಿದ ರವೀಂದ್ರ ಜಡೆಜಾ, ರಾಯುಡು ಕಣ್ಣೀರು

75 ಸಾವಿರ ಜನರು ಅಂತಿಮ ಪಂದ್ಯ ವೀಕ್ಷಣೆಗೆ ಕಾದು ಕುಳಿತಿದ್ದರು. ಕೊನೆಯ ಓವರ್‌ನಲ್ಲಿ ಚೆನ್ನೈಗೆ ಬೇಕಿದ್ದಿದ್ದು 13 ರನ್‌ಗಳು. ಚೆನ್ನೈ ಭರ್ಜರಿ ಆಟದ ನಡುವೆ ಮೊದಲ ಬಾಲ್‌ ಹಿಟ್‌ ಮಾಡುವಲ್ಲಿ ದುಬೆ ಸೋತಿದ್ರು. 2ನೇ ಬಾಲ್‌ಗೆ 1 ರನ್ ಬಂತು. 3ನೇ ಬಾಲ್‌ಗೆ ರವೀಂದ್ರ ಜಡೇಜಾ 1 ರನ್‌ ಮಾತ್ರ ಗಳಿಸಿದ್ರು. ನಂತರ ದುಬೆ ಕೂಡ ಒಂದು ರನ್‌ ಗಳಿಸಿ ಜಡೆಜಾಗೆ ಸ್ಟ್ರೈಕ್‌ ಬಿಟ್ಟುಕೊಟ್ಟಿದ್ದರು. ಅಂತಿಮವಾಗಿ ಕೊನೆಯ 2 ಬಾಲ್‌ಗಳಿಗೆ 10 ರನ್‌ ಅವಶ್ಯಕತೆ ಇತ್ತು. ರವಿಂದ್ರ ಜಡೆಜಾ 5ನೇ ಬಾಲ್‌ಗೆ ಸಿಕ್ಸರ್‌‌ ಸಿಡಿಸಿದ್ರು. ಮೈದಾನದಲ್ಲಿ ಸಪ್ಪೆ ಮೋರೆ ಹಾಕಿದ್ದ ಚೆನ್ನೈ ಸೂಪರ್‌ ಕಿಂಗ್ಸ್‌ ಅಭಿಮಾನಿಗಳಲ್ಲಿ ಮಂದಹಾಸ ಮನೆ ಮಾಡಿತು. ಗೆದ್ದೇ ಗೆಲ್ಲುವ ಹುಮ್ಮಸ್ಸಿನಲ್ಲಿ ಪಂದ್ಯ ವೀಕ್ಷಣೆ ಮಾಡ್ತಿದ್ದ ಅಮಿತ್‌ ಷಾ ಪುತ್ರ ಜೈ ಷಾ ಮುಖ ಮಂಕಾಯ್ತು. ಕೊನೆಗೆ ಮೋಹಿತ್‌ ಶರ್ಮಾ ಹಾಗು ಹಾರ್ದಿಕ್‌ ಪಾಂಡ್ಯ ಇಬ್ಬರೂ ಮಾತನಾಡಿಕೊಂಡು ಕೊನೆ ಬಾಲ್‌ ಎಸೆದಾಗ ಸೀದಾ ಫೋರ್‌ ಲೈನ್‌ ದಾಟಿತ್ತು. ಚೆನ್ನೈ ಸೂಪರ್‌ ಕಿಂಗ್ಸ್‌ ಅಭಿಮಾನಿಗಳ ಸಂತಸಕ್ಕೆ ಪಾರವೇ ಇಲ್ಲದಂತಾಯ್ತು.

ಕೃಷ್ಣಮಣಿ

Tags: Ambati RayuduChennai Super KingsChennai win!CSK vs GTGujarat TitansIPL 2023IPL 2023 Finalms dhoniRavindra Jadeja
Previous Post

ಸಂವಿಧಾನದ ಉಲ್ಲಂಘನೆಗೆ ಬಹಿಷ್ಕಾರ ಉತ್ತರವಾಗಲಾರದು..!

Next Post

Viral : ಮೊಸರಿನೊಂದಿಗೆ ಗುಲಾಬ್ ಜಾಮೂನ್ ಬೆರೆಸಿ ಮಾರಾಟ..! ಬೆಚ್ಚಿಬಿದ್ದ ನೆಟ್ಟಿಗರು..

Related Posts

ಈ ತಿಂಗಳು ಲಾಂಚ್‌ ಆಗಲಿವೆ ಇಷ್ಟೆಲ್ಲಾ ಹೊಸ  ಫೋನ್‌ಗಳು! 
ಇತರೆ / Others

ಈ ತಿಂಗಳು ಲಾಂಚ್‌ ಆಗಲಿವೆ ಇಷ್ಟೆಲ್ಲಾ ಹೊಸ  ಫೋನ್‌ಗಳು! 

by ಪ್ರತಿಧ್ವನಿ
March 4, 2026
0

ಈ ತಿಂಗಳು ಯಾವೆಲ್ಲಾ ಫೋನ್‌ ಲಾಂಚ್‌ ಆಗಲಿವೆ, ಆಗಿವೆ ಅನ್ನೋದನ್ನು ನೋಡೋಣ.ಸ್ಯಾಮ್‌ಸಂಗ್ ಗ್ಯಾಲಕ್ಸಿ S26 ಸರಣಿಯಿಂದ ವಿವೋ V70 ಸರಣಿಯವರೆಗೆ, ಫೆಬ್ರವರಿ 2026 ರಲ್ಲಿ ಎಲ್ಲಾ ವಿಭಾಗಗಳಲ್ಲಿ...

Read moreDetails
ನೀವೆಲ್ಲಾ ಸೇರಿ ಹಸು ಕಟ್ಟಿ ನನಗೆ ಹಾಲು ಮಾರೋ ಕೆಲಸ ನೀಡಿದ್ದೀರಿ : ಬಮೂಲ್‌ ಅಧ್ಯಕ್ಷ ಡಿ. ಕೆ. ಸುರೇಶ್

ನೀವೆಲ್ಲಾ ಸೇರಿ ಹಸು ಕಟ್ಟಿ ನನಗೆ ಹಾಲು ಮಾರೋ ಕೆಲಸ ನೀಡಿದ್ದೀರಿ : ಬಮೂಲ್‌ ಅಧ್ಯಕ್ಷ ಡಿ. ಕೆ. ಸುರೇಶ್

March 4, 2026
“ಸಿಎಂ ಆಗಿ ದೊಡ್ಡ ಸ್ಥಾನಕ್ಕೆ ಹೋದವ್ರು ಇಲ್ಲಿ ಬುಡುಬುಡುಕೆ, ಬಣ್ಣ ಬಣ್ಣದ ಮಾತುಗಳನ್ನಾಡ್ತಾರೆ”

“ಸಿಎಂ ಆಗಿ ದೊಡ್ಡ ಸ್ಥಾನಕ್ಕೆ ಹೋದವ್ರು ಇಲ್ಲಿ ಬುಡುಬುಡುಕೆ, ಬಣ್ಣ ಬಣ್ಣದ ಮಾತುಗಳನ್ನಾಡ್ತಾರೆ”

March 4, 2026
ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನ ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ನಡೆ ಏನು..?

ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನ ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ನಡೆ ಏನು..?

March 4, 2026
ಬಜೆಟ್‌ ಸಿದ್ಧತೆ : ಸರಣಿ ಸಭೆ ನಡೆಸಿದ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌…

ಬಜೆಟ್‌ ಸಿದ್ಧತೆ : ಸರಣಿ ಸಭೆ ನಡೆಸಿದ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌…

March 4, 2026
Next Post
Viral : ಮೊಸರಿನೊಂದಿಗೆ ಗುಲಾಬ್ ಜಾಮೂನ್ ಬೆರೆಸಿ ಮಾರಾಟ..! ಬೆಚ್ಚಿಬಿದ್ದ ನೆಟ್ಟಿಗರು..

Viral : ಮೊಸರಿನೊಂದಿಗೆ ಗುಲಾಬ್ ಜಾಮೂನ್ ಬೆರೆಸಿ ಮಾರಾಟ..! ಬೆಚ್ಚಿಬಿದ್ದ ನೆಟ್ಟಿಗರು..

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada