ಹೆಚ್ಚು ಜನ ಮನೆಯ ಅಕ್ಕ-ಪಕ್ಕ ಅಥವಾ ಸುತ್ತಮುತ್ತ ಗಿಡಮರಗಳನ್ನು ಬೆಳೆಸುತ್ತಾರೆ. ಆದರೆ ಸಿಟಿಗಳಲ್ಲಿ ಮನೆಯಿಂದ ಹೊರಗಡೆ ಹೆಚ್ಚು ಜಾಗವಿರುವುದಿಲ್ಲ ಎನ್ನುವ ಕಾರಣಕ್ಕೆ ಪಾಟ್ ಗಳಲ್ಲಿ ಗಿಡವನ್ನು ಬೆಳೆಸುತ್ತಾರೆ. ಅದೇ ರೀತಿ ಕೆಲವೊಂದಿಷ್ಟು ಜನ ಮನೆಯೊಳಗೂ ಕೂಡ ಪಾಟ್ ಗಳನ್ನ ಇಟ್ಟು ಸಸ್ಯಗಳನ್ನ ಬೆಳೆಸುತ್ತಾರೆ. ಆದರೆ ಹೆಚ್ಚು ಜನಕ್ಕೆ ಯಾವ ಗಿಡವನ್ನ ಬೆಳೆಸುವುದರಿಂದ ಏನು ಪ್ರಯೋಜನ ಎನ್ನುವುದು ತಿಳಿದಿರುವುದಿಲ್ಲ.. ಹಾಗಾಗಿ ಮನೆಯಲ್ಲಿ ಯಾವ ಯಾವ ಗಿಡಗಳನ್ನ ಬೆಳೆಸುವುದರಿಂದ ಏನು ಪ್ರಯೋಜನ ಅನ್ನೋದರ ಮಾಹಿತಿ ಹೀಗಿದೆ.
ಸ್ಪೈಡರ್ ಪ್ಲಾಂಟ್
ತುಂಬಾನೇ ಚಿಕ್ಕದಾಗಿದ್ದು ಇದರ ಬೆಳವಣಿಗೆಗೆ ನಾವು ಹೆಚ್ಚು ಶ್ರಮಪಡಬೇಕಿಲ್ಲ.ಈ ಗಿಡದ ಬೆಳವಣಿಗೆ ತುಂಬಾನೇ ಸುಲಭ ಜೊತೆಗೆ ಇದರಿಂದ ಸಿಗುವ ಲಾಭವೇನೆಂದರೆ ನಮ್ಮ ಸುತ್ತಮುತ್ತಲಿನ ಗಾಳಿಯನ್ನ ಪ್ರೂರಿಫೈ ಮಾಡುತ್ತದೆ .ಒಳ್ಳೆಯ ಆಕ್ಸಿಜನನ್ನು ನೀಡುತ್ತದೆ. ಒಂದು ಸ್ಟಡಿಯ ಪ್ರಕಾರ ಸ್ಪೈಡರ್ ಪ್ಲಾಂಟ್ .95% ಅಷ್ಟು ಗಾಳಿಯನ್ನ ಫಿಲ್ಟರ್ ಮಾಡಿ ಶುದ್ಧ ಗಾಳಿಯನ್ನು ನೀಡುತ್ತದೆ.
ಪೀಸ್ ಲಿಲ್ಲಿ
ಇದರ ಹೆಸರಿನಲ್ಲೇ ಇರುವಂತೆ ಇದು ತುಂಬಾನೇ ಪೀಸ್ ನೀಡುತ್ತದೆ . ಇದರ ಜೊತೆಗೆ ಈ ಗಿಡದಲ್ಲಿ ಆಗಾಗ ಬಿಳಿಯ ಹೂಗಳು ಬೆಳೆಯುತ್ತವೆ ಹಾಗೂ ಇದರ ಬೆಳವಣಿಗೆಯು ತುಂಬಾನೇ ಸುಲಭ.ಇದಕ್ಕೆ ಹೆಚ್ಚು ಬಿಸಿಲಿನ ಅವಶ್ಯಕತೆ ಇಲ್ಲ ,ಇದು ನೆರಳಿನಲ್ಲಿ ಬೆಳೆಯುವಂತ ಗಿಡವಾಗಿದೆ ಆದರೆ ಮನೆಯಲ್ಲಿ ಪೆಟ್ಸ್ ಅಥವಾ ಮಕ್ಕಳಿದ್ದರೆ ಈ ಗಿಡವನ್ನು ಸ್ವಲ್ಪ ದೂರ. ಮಕ್ಕಳು ಈ ಗಿಡವನ್ನು ಮುಟ್ಟಿ ಆ ಕೈಯನ್ನ ಬಾಯಿಗೆ ಹಾಕಿದ್ರೆ ವಾಮಿಟ್ ಆಗುವ ಚಾನ್ಸಸ್ ಇರುತ್ತೆ ಜೊತೆಗೆ ಪೆಟ್ಸ್ ಗಳಿಗೆ ನಾಲಿಗೆ ಸ್ವೆಲ್ ಆಗುವಂತೆ ಚಾನ್ಸಸ್ ತುಂಬಾನೇ ಇರುತ್ತೆ.
ರಬ್ಬರ್ ಪ್ಲಾಂಟ್
ಇದು ಕೂಡ ಗಾಳಿಯನ್ನು ಪುರಿಫೈ ಮಾಡುವುದಕ್ಕೆ ಸಹಾಯಕಾರಿ ಇದನ್ನ ಬೆಳೆಸಲು ಯಾವುದೇ ರೀತಿಯ ಶ್ರಮ ಬೇಕಾಗಿಲ್ಲ ವಾರಕ್ಕೆ ಒಮ್ಮೆ ನೀರನ್ನು ಹಾಕಿದರೆ ಸಾಕು ಹಾಗೂ ಮುಖ್ಯವಾಗಿ ಮಕ್ಕಳು ಮತ್ತು ಪೆಟ್ಸ್ ಇಂದ ಈ ಗಿಡಗಳನ್ನು ದೂರವಿರಿಸಿ.
ಇಷ್ಟು ಮಾತ್ರವಲ್ಲದೆ ಸಾಕಷ್ಟು ಗಿಡಗಳನ್ನ ಮನೆ ಒಳಗೆ ಬೆಳೆಸಬಹುದು ಅದರಲ್ಲಿ ಸ್ನೇಕ್ ಪ್ಲಾಂಟ್ ಎಲಿಫೆಂಟ್ ಇಯರ್ ಪ್ಲಾಂಟ್ ಫ್ರೇನ್ಸ್ ಹೀಗೆ ಸಾಕಷ್ಟು ಗಿಡಗಳಿವೆ ಇವುಗಳನ್ನೆಲ್ಲ ಮನೆಯಲ್ಲಿ ಬೆಳೆಸುವುದರಿಂದ ನಿಮಗೆ ಶುದ್ಧವಾದ ಗಾಳಿ ಅಥವಾ ಆಕ್ಸಿಜನ್ ದೊರಕುತ್ತದೆ.ಮನೆಯೊಳಗೆ ಒಂದು ರೀತಿಯ ಫ್ರೆಶ್ನೆಸ್ ಸಿಗುತ್ತದೆ.