• Home
  • About Us
  • ಕರ್ನಾಟಕ
Friday, July 4, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ವಿದೇಶ

ʼದೂರ ಸರಿಯಿರಿ, ಕೊಳಕರು ನೀವುʼ: ಉಕ್ರೇನ್‌ ಗಡಿಯಲ್ಲಿ ವರ್ಣಬೇಧ ಎದುರಿಸಿದ ಭಾರತೀಯ ವಿದ್ಯಾರ್ಥಿಗಳು

ಫೈಝ್ by ಫೈಝ್
March 6, 2022
in ವಿದೇಶ
0
ʼದೂರ ಸರಿಯಿರಿ, ಕೊಳಕರು ನೀವುʼ: ಉಕ್ರೇನ್‌ ಗಡಿಯಲ್ಲಿ ವರ್ಣಬೇಧ ಎದುರಿಸಿದ ಭಾರತೀಯ ವಿದ್ಯಾರ್ಥಿಗಳು
Share on WhatsAppShare on FacebookShare on Telegram

ADVERTISEMENT

ಸಂಘರ್ಷಮಯ ಉಕ್ರೇನ್‌ ನೆಲದಲ್ಲಿ ಜೀವ ಕೈಯಲ್ಲಿಟ್ಟು ಬದುಕಿದ, ತಮ್ಮ ಸ್ವಂತ ರಿಸ್ಕ್‌ ಮೇಲೆ ರೊಮಾನಿಯಾ ಗಡಿ ತಲುಪಿದ ಭಾರತೀಯ ವಿದ್ಯಾರ್ಥಿಗಳು ಎದುರಿಸಿದ್ದು ಅಂತಿಂಥ ಕಷ್ಟವೇನಲ್ಲ. ವಿಧ್ಯಾಭ್ಯಾಸಕ್ಕಾಗಿ ತಾಯ್ನಾಡು ಬಿಟ್ಟು ತೆರಳಿದ್ದ ವಿದ್ಯಾರ್ಥಿಗಳು ಅಕ್ಷರಶಃ ಪ್ರಾಣವನ್ನು ಕೈಯಲಿಟ್ಟು ಬದುಕಿದ್ದಾರೆ. ಅಷ್ಟೇ ಆಗಿದ್ದರೆ, ಯುದ್ಧಭೂಮಿಯಲ್ಲಿ ಇದು ಸಹಜ ಎನ್ನಬಹುದಿತ್ತು. ಅಲ್ಲಿ ಸಿಲುಕಿದವರ ಸುರಕ್ಷಿತ ಬರವಿಗಾಗಿ ಆಶಿಸುತ್ತಾ, ಬಂದು ತಲುಪಿದವರನ್ನು ಆದರದಿಂದ ಸ್ವಾಗತಿಸಬಹುದಿತ್ತು.

ಆದರೆ, ಒಂದು ಕಡೆ ಪ್ರಾಣ ಭಯ ಇನ್ನೊಂದೆಡೆ ಆತ್ಮ ಘನತೆಯ ಪ್ರಶ್ನೆಯನ್ನು ಈ ವಿದ್ಯಾರ್ಥಿಗಳು ಎದುರಿಸಿದ್ದರು. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಇರುವ ಜನಾಂಗೀಯ ಧ್ವೇಷದ ಸಂತ್ರಸ್ತರೂ ಈ ವಿದ್ಯಾರ್ಥಿಗಳಾಗಿದ್ದರು ಎನ್ನುವುದು ನೋವಿನ ಸಂಗತಿ. ಯುದ್ಧದಿಂದ ಈಗಾಗಲೇ ಮಾನಸಿಕ ಆಘಾತಕ್ಕೊಳಗಾಗಿದ್ದ ಯುವ ಮನಸ್ಸು ಕಠೋರ ವರ್ಣಬೇಧ ನೀತಿಯನ್ನು ಎದುರಿಸಬೇಕಾಗಿ ಬಂದಿತು.

ಫೆಬ್ರವರಿ 26 ರಂದು ಕಠಿಣ ಹಾದಿ ಸವೆಸಿ ರೊಮೇನಿಯಾ ಗಡಿ ಸಮೀಪ ತಲುಪಿದ ವಿದ್ಯಾರ್ಥಿಗಳ ಗುಂಪು ಜನಾಂಗೀಯ ತಾರತಮ್ಯಕ್ಕೆ ಒಳಗಾದ ಅನುಭವವನ್ನು ಬಿಚ್ಚಿಟ್ಟಿದ್ದಾರೆ. ಸುಮಾರು 2000 ದಷ್ಟು ಇದ್ದ ವಿದ್ಯಾರ್ಥಿಗಳ ಗುಂಪಿನಲ್ಲಿ, 400 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾರತ ಮೂಲದವರಿದ್ದರು. ಆಫ್ರಿಕನ್‌ ಹಾಗೂ ಮಧ್ಯಪ್ರಾಚ್ಯದ ವಿದ್ಯಾರ್ಥಿಗಳೂ ಈ ಗುಂಪಿನ ಭಾಗವಾಗಿದ್ದರು.

ತಮಗಾದ ಘೋರ ಅಪಮಾನವನ್ನು ವಿವರಿಸಿದ ವಿನ್ನಿಟ್ಸಿಯಾ ನ್ಯಾಷನಲ್ ಮೆಡಿಕಲ್ ಯೂನಿವರ್ಸಿಟಿಯ ನಾಲ್ಕನೇ ವರ್ಷದ ವೈದ್ಯಕೀಯ ವಿದ್ಯಾರ್ಥಿ ಅನಿಮೇಶ್ ಕುಮಾರ್, ತಮ್ಮ ಸಂಕಟದ ಬಗ್ಗೆ ಮಾತನಾಡುತ್ತಾ, “ನಮ್ಮಲ್ಲಿ ಹೆಚ್ಚಿನವರು ಎರಡು ದಿನಗಳಿಂದ ಏನನ್ನೂ ತಿಂದಿರಲಿಲ್ಲ. ಆದರೆ, ನಾವು ಬಂದ ತಕ್ಷಣ ಸಿಬ್ಬಂದಿ ನಮ್ಮನ್ನು ಬಾಗಿಲಲ್ಲಿ ನಿಲ್ಲಿಸಿದರು. ಆ ವ್ಯಕ್ತಿ, ‘ಹೊರಗೆ ಹೋಗು, ನೀವೆಲ್ಲರೂ ಕೊಳಕು’ ಎಂದು ಹೇಳಿದರು. ಅದು ನಿಜವಾಗಿಯೂ ನನಗೆ ಆಶ್ಚರ್ಯವನ್ನುಂಟು ಮಾಡಿತು. ನಾನು ಅಂತಹ ಘೋರ ವರ್ಣಭೇದ ನೀತಿಯನ್ನು ಎಂದಿಗೂ ಎದುರಿಸಲಿಲ್ಲ” ಎಂದು ವಿವರಿಸಿದ್ದಾರೆ.

ರೆಸ್ಟಾರೆಂಟ್‌ ಬಾಗಿಲಲ್ಲೇ ತಮಗೆ ಆಹಾರಗಳನ್ನು ನೀಡುವಂತೆ ಸಿಬ್ಬಂದಿಯಲ್ಲಿ ಕೇಳಿಕೊಂಡರು ಯಾವುದೇ ಪ್ರಯೋಜನಾವಗಲಿಲ್ಲ. ಕೊನೆಗೆ ಅಲ್ಲೇ ಸಮೀಪದಲ್ಲಿದ್ದ ಟರ್ಕಿಷ್‌ ರೆಸ್ಟಾರೆಂಟ್‌ ಒಂದಕ್ಕೆ ಹೋದ ವಿದ್ಯಾರ್ಥಿಗಳು ಅಲ್ಲಿಯೂ ಇದೇ ಅನುಭವವನ್ನು ಎದುರಿಸಿದ್ದಾರೆ.

ಹುಡುಗಿಯರ ತಂಡಕ್ಕೆ ರೆಸ್ಟಾರೆಂಟ್‌ ಒಳಗಡೆ ಪ್ರವೇಶ ನೀಡಬಹುದು ಎಂಬ ನಂಬಿಕೆಯೊಂದಿಗೆ ಇನ್ನೊಂದು ರೆಸ್ಟಾರೆಂಟ್‌ಗೆ ವಿದ್ಯಾರ್ಥಿನಿಯರ ತಂಡ ಹೋಗಿದೆ. ಆದರೆ ಅಲ್ಲೂ ಇದೇ ಪರಿಸ್ಥಿತಿ ಎದುರಿಸಿದ್ದಾರೆ, ಕನಿಷ್ಟ ಹುಡುಗಿಯರಿಗೆ ವಾಶ್‌ರೂಮ್‌ ಬಳಸಲಾದರೂ ಅವಕಾಶ ಮಾಡುವಂತೆ ವಿನಂತಿಸಿಕೊಂಡರೆ ಅದಕ್ಕೂ ಅಲ್ಲಿನ ಸಿಬ್ಬಂದಿಗಳು ಬಿಡಲಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಮೂರನೇ ವರ್ಷದ ವೈದ್ಯಕೀಯ ವಿದ್ಯಾರ್ಥಿನಿ, ಹಿಮಾಮಿ ಅರೋರಾ ತನಗಾದ ಅನುಭವಗಳನ್ನು ಹಂಚುತ್ತಾ, ʼನಾನು ವಾಶ್‌ ರೂಮ್‌ ಬಳಸಲು ಅನುಮತಿ ಕೇಳಿದೆ. ಮೊದಲಿಗೆ ಅವಕಾಶ ನಿರಾಕರಿಸಲಾಯಿತು, ಕೊನೆಗೆ ಮೂರು ಗಂಟೆಗಳ ಕಾಲ ಅದರ ಬಾಗಿಲಲ್ಲೇ ನಿಂತ ಬಳಿಕ ವಾಶ್‌ರೂಮ್‌ ಬಳಸಲು ಅನುಮತಿಸಿದರು. ವಾಶ್‌ರೂಮ್‌ ಬಳಸುವ ನೆಪದಲ್ಲಿ ನನ್ನ ಗೆಳೆಯರಿಗೆ ಆಹಾರ, ನೀರಿನ ಪೊಟ್ಟಣಗಳನ್ನು ಖರೀದಿಸಿದೆ ಎಂದು ಹೇಳಿದ್ದಾರೆ.

ಅದಾಗ್ಯೂ, ಆ ಪ್ರದೇಶದಲ್ಲಿ ಸಾರ್ವಜನಿಕ ವಾಶ್‌ರೂಮ್‌ಗಳಿಗೆ ಬೀಗ ಹಾಕಿದ್ದರಿಂದ ಹಾಗೂ ರೆಸ್ಟಾರೆಂಟ್‌ಗಳು ಅನುಮತಿ ನೀಡದೆ ಇರುವುದರಿಂದ ಬಯಲಲ್ಲಿ ಬಹಿರ್ದೆಸೆಗೆ ಹೋಗಲು ಸಾಧ್ಯವಾಗದ ಕಾರಣ ವಿದ್ಯಾರ್ಥಿನಿಯರು ಆಹಾರ, ನೀರನ್ನು ತ್ಯಜಿಸಿ ಕೂತಿದ್ದಾರೆ ಎಂದು ಹಿಮಾನಿ ತಿಳಿಸಿದ್ದಾರೆ. ಹಸಿವು ಮತ್ತು ಬಳಲಿಕೆಯಿಂದ ನಾನು ಮೂರ್ಛೆ ತಪ್ಪಿ ಬಿದ್ದೆ, ಭಾರತೀಯ ವಿದ್ಯಾರ್ಥಿಗಳು ಮಾತ್ರ ಅಲ್ಲಿ ಪರಸ್ಪರ ಸಹಾಯಕ್ಕಿದ್ದರು ಎಂದು ಹಿಮಾನಿ ತಾವು ದಾಟಿ ಬಂದ ಕಠೋರ ಕ್ಷಣಗಳನ್ನು ದಿ. ಕ್ವಿಂಟ್‌ ಮಾಧ್ಯಮದೊಂದಿಗೆ ಹಂಚಿಕೊಂಡಿದ್ದಾರೆ.

ಅಷ್ಟು ಮಾತ್ರವಲ್ಲ. ಕೆಲವು ವಿದ್ಯಾರ್ಥಿಗಳು ಭದ್ರತಾ ಪಡೆ ಹಾಗೂ ಪೊಲೀಸ್‌ ಸಿಬ್ಬಂದಿಗಳ ದೌರ್ಜನ್ಯಕ್ಕೂ ತುತ್ತಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ವಿದ್ಯಾರ್ಥಿಗಳಿಗೆ ಭದ್ರತಾ ಸಿಬ್ಬಂದಿಗಳು ಒದೆಯುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

ಉಕ್ರೇನಿಯನ್‌ ಪೊಲೀಸರ ದುರುಳತನವನ್ನು ಇನ್ನೋರ್ವ ವೈದ್ಯಕೀಯ ವಿದ್ಯಾರ್ಥಿ ಪರಾಸ್‌ ಬಿಚ್ಚಿಟ್ಟಿದ್ದಾರೆ.

ನೂರಾರು ಯುರೋಪ್‌ ಮೂಲದ ವಿದ್ಯಾರ್ಥಿಗಳನ್ನು ಗಡಿ ದಾಟಿಸುವಾಗ ಭಾರತ ಮೂಲದ 5 ವಿದ್ಯಾರ್ಥಿಗಳನ್ನು ಮಾತ್ರ ಅವರು ಹೊರಗೆ ಬಿಡುತ್ತಿದ್ದಾರೆ, ಅಲ್ಲದೆ, ಭಾರತೀಯ ವಿದ್ಯಾರ್ಥಿಗಳನ್ನು ಕೈಯಿಂದ ದೂರ ತಳ್ಳಿ ಹಾಕುತ್ತಾರೆ ಎಂದು ಪರಾಸ್‌ ಆರೋಪಿಸಿದ್ದಾರೆ.

ಪರಾಸ್ ಮತ್ತು ಇತರರ ಮೇಲೆ ನಡೆದ ಹಿಂಸಾಚಾರವನ್ನು ಕಣ್ಣಾರೆ ಕಂಡ ವಿದ್ಯಾರ್ಥಿ ಶಿವಂ ಕುಮಾರ್ ಯಾದವ್, “ನಾವು ಗಾಬರಿಯಿಂದ ನೋಡುತ್ತಿದ್ದೆವು. ಅವರು ಹುಡುಗಿಯರನ್ನು ಸಹ ಬಿಡಲಿಲ್ಲ. ಅವರು ಒದೆಯುತ್ತಿದ್ದರು ಮತ್ತು ನಮ್ಮನ್ನು ಹಿಂದಕ್ಕೆ ತಳ್ಳಲು ಅವರು ನಮ್ಮ ಕುತ್ತಿಗೆಯನ್ನು ಹಿಡಿದರು. ನಾಲ್ಕು ದಿನಗಳಿಂದ ಗಡಿಯಲ್ಲಿ ನಿಂತಿದ್ದೆ. ಆದರೆ, ಮಧ್ಯಪ್ರಾಚ್ಯ, ಅಮೇರಿಕಾ, ನೈಜೀರಿಯಾದ ವಿದ್ಯಾರ್ಥಿಗಳನ್ನು ಅವರು ಹೊರಕ್ಕೆ ಕಳುಹಿಸುತ್ತಿದ್ದರು. ಗಡಿದಾಟಲು ಕಾಯುತ್ತಾ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಅಂತಹ ದೊಡ್ಡ ಗುಂಪನ್ನು ಗಡಿ ದಾಟಲು ನಿರಾಕರಿಸಿರುವುದಕ್ಕೆ ತರ್ಕಬದ್ಧ ಕಾರಣಗಳೇ ಇರಲಿಲ್ಲ” ಎಂದು ಅವರು ಹೇಳಿದ್ದಾರೆ.

ಆಹಾರ, ವಸತಿ, ನೀರು, ರೆಸ್ಟ್‌ ರೂಮ್‌ ಕೊನೆಗೆ ಗಡಿ ದಾಟಲು ಕೂಡಾ ನಮಗೆ ನಿಷೇಧಿಸಲಾಯಿತು. ಆಫ್ರಿಕನ್‌ ವಿದ್ಯಾರ್ಥಿಗಳು ಕೂಡಾ ಇಂತಹದ್ದೇ ಪರಿಸ್ಥಿತಿ ಎದುರಿಸಿದ್ದರೂ, ಅವರನ್ನು ಗಡಿ ದಾಟಲು ಅನುವು ಮಾಡಿಕೊಡಲಾಗಿತ್ತು, ಖಾರ್ಕೀವ್‌ ನಗರದಲ್ಲಿ ರೈಲು, ಬಸ್‌ ಸಾರಿಗೆ ಹತ್ತಲು ನಮ್ಮ ವಿದ್ಯಾರ್ಥಿಗಳಿಗೆ ಅವಕಾಶ ಕೊಟ್ಟಿರಲಿಲ್ಲ, ಯುರೋಪಿಯನ್‌ ವಿದ್ಯಾರ್ಥಿಗಳನ್ನು ಮಾತ್ರ ಏರಲು ಅವಕಾಶ ನೀಡಿದರು ಎಂದು ಶಿವಂ ಹೇಳಿದ್ದಾರೆ.

ಅನಿಮೇಶ್‌, ಹಿಮಾನಿ, ಪರಾಸ್‌ ಹಾಗೂ ಶಿವಂ ಕೊನೆಗೂ ಫೆ. 28 ರಂದು ಗಡಿ ದಾಟಿದ್ದಾರೆ. ಅಲ್ಲಿಂದ ಬುಕಾರೆಸ್ಟ್‌ ತಲುಪಿ ಮಾರ್ಚ್‌ 2 ರಂದು ದೆಹಲಿಗೆ ತಲುಪಿದ್ದಾರೆ.

ತಮ್ಮ ಮಾತನ್ನು ಕೊನೆಗೊಳಿಸುತ್ತಾ, ನಾನು ಹಸಿವೆಯಿಂದ ಬಳಲಿ, ಚಳಿಯಲ್ಲಿ ಮುದುಟಿ, ರಟ್ಟಿನ ಮೇಲೆ ಮಲಗಿ ದೇಹ ಬಳಲಿದೆ. ಆದರೆ, ದೇಹ ಚೇತರಿಸಬಹುದು, ಜನಾಂಗೀಯ ತಾರತಮ್ಯ ಎದುರಿಸಿದ ಯಾತನೆ ಮನಸ್ಸಿನಿಂದ ಮಾಯಲಾರದು ಎಂದು ಶಿವಂ ಹೇಳಿದ್ದಾರೆ.

Tags: Covid 19ಉಕ್ರೇನ್ಉಕ್ರೇನ್ ಬಿಕ್ಕಟ್ಟುಉಕ್ರೇನ್ ಮೇಲೆ ರಷ್ಯಾ ದಾಳಿಉಕ್ರೇನ್-ರಷ್ಯಾಕರೋನಾಕೊಳಕರುಕೋವಿಡ್-19ಗಡಿದೂರ ಸರಿಯಿರಿಭಾರತೀಯ ವಿದ್ಯಾರ್ಥಿಗಳು
Previous Post

ಆಪರೇಷನ್ ಗಂಗಾ ಒಂದು ದೊಡ್ಡ ಕಾರ್ಯಚರಣೆ, ಇದನ್ನು ಸಹಿಸಲಾಗದೇ ಕಾಂಗ್ರೆಸ್ ರಾಜಕೀಯ ಮಾಡ್ತಿದೆ : ಸಂಸದ ತೇಜಸ್ವಿ ಸೂರ್ಯ

Next Post

India vs Sri Lanka Test Cricket : ಶ್ರೀಲಂಕಾ ವಿರುದ್ಧ ಭಾರತ ಭರ್ಜರಿ ಜಯ

Related Posts

Top Story

Bangalore Airport: 10 ಜಾಗತಿಕ ಪ್ರಶಸ್ತಿ ಪಡೆದ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ..!!

by ಪ್ರತಿಧ್ವನಿ
July 3, 2025
0

ದೇವನಹಳ್ಳಿಯ ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ 080 ಲಾಂಜ್ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆತಿಥ್ಯ ಕ್ಷೇತ್ರದಲ್ಲಿ ಒಟ್ಟು ಹತ್ತು ಜಾಗತಿಕ ಪ್ರಶಸ್ತಿ ದೊರೆತಿವೆ. ಸ್ಪೇನ್‌ನ...

Read moreDetails

Khushi Mukherjee: ನಾನು ಬಂಗಾಳಿ ಬ್ರಾಹ್ಮಣ ಕುಟುಂಬದವಳು, ಸಂಸ್ಕೃತಿಯ ಅರಿವಿದೆ..!

July 2, 2025
ಸ್ಮಾರ್ಟ್‌ ಸಿಟಿ ಎಂಬ ಕನಸು ಮತ್ತು ವಾಸ್ತವ

ಸ್ಮಾರ್ಟ್‌ ಸಿಟಿ ಎಂಬ ಕನಸು ಮತ್ತು ವಾಸ್ತವ

July 1, 2025
ದುಬೈನಲ್ಲಿ ರಾಸ್ ಅಲ್ ಖೈಮಾಹ್‌ʼದ ಆಡಳಿತಗಾರರನ್ನು ಭೇಟಿಯಾದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ

ದುಬೈನಲ್ಲಿ ರಾಸ್ ಅಲ್ ಖೈಮಾಹ್‌ʼದ ಆಡಳಿತಗಾರರನ್ನು ಭೇಟಿಯಾದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ

July 1, 2025

Bangalore Stampede: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತದ ಪ್ರಕರಣ

July 1, 2025
Next Post
India vs Sri Lanka Test Cricket : ಶ್ರೀಲಂಕಾ ವಿರುದ್ಧ ಭಾರತ ಭರ್ಜರಿ ಜಯ

India vs Sri Lanka Test Cricket : ಶ್ರೀಲಂಕಾ ವಿರುದ್ಧ ಭಾರತ ಭರ್ಜರಿ ಜಯ

Please login to join discussion

Recent News

Top Story

CM Siddaramaiah: ಕಾನೂನು ತೊಡಕು ನಿವಾರಿಸಿ ರೈತರ ಸಭೆ-ಮುಖ್ಯಮಂತ್ರಿ ಸಿದ್ದರಾಮಯ್ಯ

by ಪ್ರತಿಧ್ವನಿ
July 4, 2025
Top Story

Lakshmi Hebbalkar: ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 4, 2025
Top Story

Prajwal Devaraj: ಪೋಸ್ಟರ್ ರಿಲೀಸ್ ಮಾಡಿ ಪ್ರಜ್ವಲ್ ದೇವರಾಜ್ ಅವರಿಗೆ ಹುಟ್ಟುಹಬ್ಬದ ಶುಭಾಷಯ ತಿಳಿಸಿದ “ಮಾಫಿಯಾ” ಚಿತ್ರತಂಡ

by ಪ್ರತಿಧ್ವನಿ
July 4, 2025
Top Story

Darshan: ಚಾಮುಂಡಿ ತಾಯಿಯ ದರ್ಶನ ಪಡೆದ ದರ್ಶನ್ ದಂಪತಿ – ಆಷಾಢ ಶುಕ್ರವಾರದ ವಿಶೇಷ ಪೂಜೆಯಲ್ಲಿ ದಚ್ಚು ಭಾಗಿ 

by Chetan
July 4, 2025
Siddaramaiah: ದೇವನಹಳ್ಳಿಯಲ್ಲಿ ಭೂಸ್ವಾದೀನಕ್ಕೆ ರೈತರ ತೀವ್ರವ ವಿರೋಧ – ಮನವೊಲಿಸಲು ಮುಂದಾದ ಸಿಎಂ ಸಿದ್ದು 
Top Story

Siddaramaiah: ದೇವನಹಳ್ಳಿಯಲ್ಲಿ ಭೂಸ್ವಾದೀನಕ್ಕೆ ರೈತರ ತೀವ್ರವ ವಿರೋಧ – ಮನವೊಲಿಸಲು ಮುಂದಾದ ಸಿಎಂ ಸಿದ್ದು 

by Chetan
July 4, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

CM Siddaramaiah: ಕಾನೂನು ತೊಡಕು ನಿವಾರಿಸಿ ರೈತರ ಸಭೆ-ಮುಖ್ಯಮಂತ್ರಿ ಸಿದ್ದರಾಮಯ್ಯ

July 4, 2025

Lakshmi Hebbalkar: ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 4, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada