ಯುವ ಬ್ಯಾಟರ್ಗಳಾದ ಶುಭ್ಮನ್ ಗಿಲ್ ಹಾಗೂ ಧ್ರುವ್ ಜುರೆಲ್ ಅವರುಗಳ ಜವಾಬ್ದಾರಿಯ ಬ್ಯಾಟಿಂಗ್ನಿಂದ ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ನಲ್ಲಿ ಟೀಮ್ ಇಂಡಿಯಾ 5 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 3-1ರ ಅಂತರದಿಂದ ಸರಣಿ ವಶಪಡಿಸಿಕೊಂಡಿದೆ.
ರಾಂಚಿಯಲ್ಲಿ ನಡೆದ 4ನೇ ಟೆಸ್ಟ್ನ 4ನೇ ದಿನದಾಟದಲ್ಲಿ ಭಾರತ 192 ರನ್ಗಳ ಟಾರ್ಗೆಟ್ ಚೇಸ್ ಮಾಡುವುದರೊಂದಿಗೆ ದಿನದಾಟ ಆರಂಭಿಸಿತು. ಭಾರತದ ಪರ ನಾಯಕ ರೋಹಿತ್ ಶರ್ಮ(55) ಹಾಗೂ ಯಶಸ್ವಿ ಜೈಸ್ವಾಲ್(37) ರನ್ಗಳಿಸಿ ಮೊದಲ ವಿಕೆಟ್ಗೆ 84 ರನ್ಗಳ ಉತ್ತಮ ಜೊತೆಯಾಟದಿಂದ ತಂಡಕ್ಕೆ ಉತ್ತಮ ಆರಂಭ ನೀಡಿದರು.

ಆದರೆ ಒಂದು ಹಂತದಲ್ಲಿ ಸುಲಭವಾಗಿ ಗೆಲ್ಲುವ ನಿರೀಕ್ಷೆಯಲ್ಲಿದ್ದ ಭಾರತ ನಿರ್ಣಾಯಕ ಹಂತದಲ್ಲಿ ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಉತ್ತಮ ಆರಂಭ ಸಿಕ್ಕರೂ ಭೋಜನ ವಿರಾಮದ ಬಳಿಕ ನಿರ್ಣಾಹಕ ಹಂತಗಳಲ್ಲಿ ವಿಕೆಟ್ಗಳನ್ನು ಕಳೆದುಕೊಂಡ ಟೀಮ್ ಇಂಡಿಯಾ ಆಘಾತಕ್ಕೆ ಸಿಲುಕಿತು. ಪರಿಣಾಮ 120 ರನ್ಗಳಿಗೆ ಪ್ರಮುಖ 5 ವಿಕೆಟ್ಗಳನ್ನು ಕಳೆದುಕೊಂಡ ಭಾರತದ ಗೆಲುವಿನ ಹಾದಿ ಕಠಿಣವೆನಿಸಿತು.
ಈ ಹಂತದಲ್ಲಿ ಜೊತೆಯಾದ ಶುಭ್ಮನ್ ಗಿಲ್(52*) ಹಾಗೂ ಧ್ರುವ್ ಜುರೆಲ್(39*) ಅತ್ಯುತ್ತಮ ಆಟದ ಮೂಲಕ ತಮ್ಮೆ ಜವಾಬ್ದಾರಿ ಮೆರೆದರು. 6ನೇ ವಿಕೆಟ್ಗೆ ಜೊತೆಯಾದ ಈ ಇಬ್ಬರು ಎಚ್ಚರಿಕೆಯ ಆಟದ ಮೂಲಕ 72* ರನ್ಗಳ ಅಜೇಯ ಜೊತೆಯಾಟದಿಂದ ತಂಡವನ್ನು ಗೆಲುವಿನ ದಡ ಮುಟ್ಟಿಸುವಲ್ಲಿ ಯಶಸ್ವಿಯಾದರು. ಈ ಗೆಲುವಿನೊಂದಿಗೆ ಸರಣಿಯಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದ ಭಾರತ, ಇನ್ನೂ ಒಂದು ಪಂದ್ಯ ಬಾಕಿ ಇರುವಂತೆ 3-1ರ ಅಂತರದಿಂದ ಸರಣಿ ವಶಪಡಿಸಿಕೊಂಡಿದೆ.
#TeamIndia #RohitSharma #TestSeries #England #Ranchi #WTC25






