• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, March 5, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕ್ರೀಡೆ

ಜೈಸ್ವಾಲ್‌-ದುಬೆ ಬ್ಯಾಟಿಂಗ್‌ ಅಬ್ಬರ: ಅಫ್ಘಾನಿಸ್ತಾನ್‌ ವಿರುದ್ಧ 2-0 ಅಂತರದಲ್ಲಿ ಟಿ20 ಸರಣಿ ಗೆದ್ದ ಭಾರತ

Any Mind by Any Mind
January 14, 2024
in ಕ್ರೀಡೆ
0
ಜೈಸ್ವಾಲ್‌-ದುಬೆ ಬ್ಯಾಟಿಂಗ್‌ ಅಬ್ಬರ: ಅಫ್ಘಾನಿಸ್ತಾನ್‌ ವಿರುದ್ಧ 2-0 ಅಂತರದಲ್ಲಿ ಟಿ20 ಸರಣಿ ಗೆದ್ದ ಭಾರತ
Share on WhatsAppShare on FacebookShare on Telegram

ಇಂಧೋರ್‌: ಆರಂಭಿಕ ಬ್ಯಾಟರ್‌ ಯಶಸ್ವಿ ಜೈಸ್ವಾಲ್‌(Yashaswi Jaiswal) 68 ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟರ್‌ ಶಿವಂ ದುಬೆ(Shivam Dube) 63* ಅವರುಗಳ ಸ್ಪೋಟಕ ಅರ್ಧಶತಕದ ನೆರವಿನಿಂದ ಅಫ್ಘಾನಿಸ್ತಾನ(Afghanistan) ವಿರುದ್ಧದ 2ನೇ ಟಿ20ಯಲ್ಲಿ ಭಾರತ(Team India) 6 ವಿಕೆಟ್‌ಗಳಿಂದ ಗೆಲ್ಲುವ ಮೂಲಕ 2-0 ಅಂತರದಲ್ಲಿ ಸರಣಿ ತನ್ನದಾಗಿಸಿಕೊಂಡಿದೆ.

ADVERTISEMENT

ಇಂಧೋರ್‌ನಲ್ಲಿ ಭಾನುವಾರ ನಡೆದ ಟಾಸ್‌ ಗೆದ್ದ ಭಾರತ ಬೌಲಿಂಗ್‌ ಆಯ್ಕೆ ಮಾಡಿಕೊಂಡಿತು. ಹೀಗಾಗಿ ಮೊದಲು ಬ್ಯಾಟಿಂಗ್‌ ಅವಕಾಶ ಪಡೆದ ಅಫ್ಘಾನ್‌ ಪಡೆ 20 ಓವರ್‌ಗಳಲ್ಲಿ 172 ರನ್‌ಗಳಿಸಿ ಆಲೌಟ್‌ ಆಯಿತು. ಮೊದಲ ಕ್ರಮಾಂಕದ ಬ್ಯಾಟರ್‌ ಗುಲ್ಬದಿನ್‌ ನೈಬ್‌(57 ರನ್‌, 35 ಬಾಲ್‌, 5 ಬೌಂಡರಿ, 4 ಸಿಕ್ಸ್‌) ಭರ್ಜರಿ ಬ್ಯಾಟಿಂಗ್‌ನಿಂದ ತಂಡಕ್ಕೆ ಆಸರೆಯಾದರು. ಇವರಿಗೆ ಸಾಥ್‌ ನೀಡಿದ ನಜೀಬುಲ್ಲಾ(23), ಕರೀಮ್‌ ಜನತ್‌(20) ಹಾಗೂ ಮುಜೀಬ್‌(21) ಕೆಳ ಕ್ರಮಾಂಕದಲ್ಲಿ ಉಪಯುಕ್ತ ರನ್‌ಗಳಿಸಿ ತಂಡದ ಮೊತ್ತವನ್ನು 170ರ ಗಡಿದಾಟಿಸಿದರು. ಭಾರತದ ಪರ ಅರ್ಶದೀಪ್‌ ಸಿಂಗ್‌ 3 ವಿಕೆಟ್‌ ಪಡೆದು ಮಿಂಚಿದರೆ. ಬಿಷ್ಣೋಯಿ, ಅಕ್ಸರ್‌ ತಲಾ 2 ಹಾಗೂ ಶಿವಂ ದುಬೆ 1 ವಿಕೆಟ್‌ ಪಡೆದರು.

ಜೈಸ್ವಾಲ್‌-ದುಬೆ ದರ್ಬಾರ್‌:
ಪ್ರವಾಸಿ ತಂಡ ನೀಡಿದ 173 ರನ್‌ಗಳ ಟಾರ್ಗೆಟ್‌ ಬೆನ್ನತ್ತಿದ ಭಾರತ, ಇನ್ನಿಂಗ್ಸ್‌ನ ಮೊದಲ ಓವರ್‌ನಲ್ಲೇ ನಾಯಕ ರೋಹಿತ್‌ ಶರ್ಮ(0) ವಿಕೆಟ್‌ ಕಳೆದುಕೊಂಡು ಆಘಾತ ಕಂಡಿತು. ಆದರೆ ನಂತರದಲ್ಲಿ ಜೊತೆಯಾದ ಯಶಸ್ವಿ ಜೈಸ್ವಾಲ್‌(68 ರನ್‌, 34 ಬಾಲ್‌, 5 ಬೌಂಡರಿ, 6 ಸಿಕ್ಸ್‌) ಹಾಗೂ ವಿರಾಟ್‌ ಕೊಹ್ಲಿ(29) ಅರ್ಧಶತಕದ ಜೊತೆಯಾಟದಿಂದ ತಂಡಕ್ಕೆ ಚೇತರಿಕೆ ನೀಡಿದರು. ಬಳಿಕ ಬಂದ ಶಿವಂ ದುಬೆ(63* ರನ್‌, 32 ಬಾಲ್‌, 5 ಬೌಂಡರಿ, 4 ಸಿಕ್ಸ್‌) ಅಫ್ಘಾನ್‌ ಬೌಲಿಂಗ್‌ ದಾಳಿಯನ್ನು ಧೂಳಿಪಟ ಮಾಡಿದರು. 3ನೇ ವಿಕೆಟ್‌ಗೆ 92 ರನ್‌ಗಳ ಜೊತೆಯಾಟವಾಡಿದ ಜೈಸ್ವಾಲ್‌ ಹಾಗೂ ದುಬೆ, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಅಂತಿಮವಾಗಿ ಭಾರತ 15.4 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 173 ರನ್‌ಗಳಿಸಿ 6 ವಿಕೆಟ್‌ಗಳಿಂದ ಗೆದ್ದುಬೀಗಿತು. ಅಫ್ಘಾನಿಸ್ತಾನದ ಪರ ಜನತ್‌ 2, ಫಜ಼ಲ್‌ ಹಾಗೂ ನವೀನ್‌ ತಲಾ 1 ವಿಕೆಟ್‌ ಪಡೆದರು.

ಈ ಗೆಲುವಿನ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ ಭಾರತ 2-0 ಮುನ್ನಡೆ ಸಾಧಿಸುವ ಮೂಲಕ ಸರಣಿ ತನ್ನದಾಗಿಸಿಕೊಂಡಿತು. ಭಾರತದ ಪರ ಬೌಲಿಂಗ್‌ನಲ್ಲಿ ಮಿಂಚಿದ ಆಲ್ರೌಂಡರ್‌ ಅಕ್ಸರ್‌ ಪಟೇಲ್‌ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಉಭಯ ತಂಡಗಳ ಮೂರನೇ ಹಾಗೂ ಕೊನೆಯ ಪಂದ್ಯ ಜ.17ರಂದು ಮಧ್ಯಾಹ್ನ 1.30ಕ್ಕೆ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.

Previous Post

ಮನೋಚರಿತ್ರ : ಜಾತಿ ಮತ್ತು ಮಾನಸಿಕ ಆರೋಗ್ಯ

Next Post

150ನೇ ಟಿ20 ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ವಿಶ್ವದಾಖಲೆ ಬರೆದ ಟೀಮ್‌ ರೋಹಿತ್‌ ಶರ್ಮಾ

Related Posts

Ranji Trophy 2026: ರಣಜಿ ಟ್ರೋಫಿ ಗೆದ್ದ ಜಮ್ಮುಕಾಶ್ಮಿರ ತಂಡಕ್ಕೆ ಬಹುಮಾನಗಳ ಸುರಿಮಳೆ
Top Story

Ranji Trophy 2026: ರಣಜಿ ಟ್ರೋಫಿ ಗೆದ್ದ ಜಮ್ಮುಕಾಶ್ಮಿರ ತಂಡಕ್ಕೆ ಬಹುಮಾನಗಳ ಸುರಿಮಳೆ

by ಪ್ರತಿಧ್ವನಿ
March 1, 2026
0

ಹುಬ್ಬಳ್ಳಿಯ ಕೆಎಸ್‌ಸಿಎ ಕ್ರಿಕೆಟ್ ಮೈದಾನದಲ್ಲಿ ನಡೆದ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಮೊದಲ ಬಾರಿಗೆ ಫೈನಲ್ ತಲುಪಿದ್ದ ಜಮ್ಮು ಮತ್ತು ಕಾಶ್ಮೀರ ತಂಡ ಬಲಿಷ್ಠ ಕರ್ನಾಟಕವನ್ನು ಮಣಿಸಿ...

Read moreDetails
ಚೊಚ್ಚಲ ರಣಜಿ ಟ್ರೋಫಿಗೆ ಮುತ್ತಿಕ್ಕಿದ ಜಮ್ಮುಕಾಶ್ಮೀರ: 67 ವರ್ಷಗಳಲ್ಲಿ ಮೊದಲ ಗೆಲುವು

ಚೊಚ್ಚಲ ರಣಜಿ ಟ್ರೋಫಿಗೆ ಮುತ್ತಿಕ್ಕಿದ ಜಮ್ಮುಕಾಶ್ಮೀರ: 67 ವರ್ಷಗಳಲ್ಲಿ ಮೊದಲ ಗೆಲುವು

February 28, 2026
IPL2026: ಐಪಿಎಲ್‌ 2026 ಹೊಸ ವೇಳಾಪಟ್ಟಿ ಪ್ರಕಟ

IPL2026: ಐಪಿಎಲ್‌ 2026 ಹೊಸ ವೇಳಾಪಟ್ಟಿ ಪ್ರಕಟ

February 28, 2026
ಸೆಮಿಫೈನಲ್ ಗೆ ಎಂಟ್ರಿ ಕೊಡುವ ಮೊದಲೇ ಮತ್ತೊಂದು ದಾಖಲೆ ಮಾಡಿದ ಟೀಮ್ ಇಂಡಿಯಾ

ಸೆಮಿಫೈನಲ್ ಗೆ ಎಂಟ್ರಿ ಕೊಡುವ ಮೊದಲೇ ಮತ್ತೊಂದು ದಾಖಲೆ ಮಾಡಿದ ಟೀಮ್ ಇಂಡಿಯಾ

February 27, 2026
ವಿಶ್ವಕಪ್‌ನಲ್ಲಿ ಭಾರತ – ಪಾಕ್‌ ಸೆಣಸಾಟ ಡೌಟ್.. : ಕಾರಣವೇನು ಗೊತ್ತಾ..?

ವಿಶ್ವಕಪ್‌ನಲ್ಲಿ ಭಾರತ – ಪಾಕ್‌ ಸೆಣಸಾಟ ಡೌಟ್.. : ಕಾರಣವೇನು ಗೊತ್ತಾ..?

February 25, 2026
Next Post
150ನೇ ಟಿ20 ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ವಿಶ್ವದಾಖಲೆ ಬರೆದ ಟೀಮ್‌ ರೋಹಿತ್‌ ಶರ್ಮಾ

150ನೇ ಟಿ20 ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ವಿಶ್ವದಾಖಲೆ ಬರೆದ ಟೀಮ್‌ ರೋಹಿತ್‌ ಶರ್ಮಾ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada