• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, May 21, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ರಾಜಕೀಯ

ಕರ್ನಾಟಕದ ಖರ್ಗೆ ಮೋದಿಗೆ ಎದುರಾಳಿ..? ಕಾಂಗ್ರೆಸ್‌‌ಗೆ ಆಗುವ ಲಾಭ ಏನು..?

ಕೃಷ್ಣ ಮಣಿ by ಕೃಷ್ಣ ಮಣಿ
December 20, 2023
in ರಾಜಕೀಯ
0
ಕರ್ನಾಟಕದ ಖರ್ಗೆ ಮೋದಿಗೆ ಎದುರಾಳಿ..? ಕಾಂಗ್ರೆಸ್‌‌ಗೆ ಆಗುವ ಲಾಭ ಏನು..?
Share on WhatsAppShare on FacebookShare on Telegram

ಕಾಂಗ್ರೆಸ್‌ ನೇತೃತ್ವದಲ್ಲಿ I.N.D.I.A ಒಕ್ಕೂಟದ ಸಭೆ ನಡೆದಿದ್ದು, 28 ರಾಜಕೀಯ ಪಕ್ಷಗಳು ಸಭೆಯಲ್ಲಿ ಭಾಗಿಯಾಗಿದ್ದವು. ಆ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹೋರಾಟ ಮಾಡಲು ಸಮರ್ಥ ನಾಯಕತ್ವ ಅವಶ್ಯಕತೆ ಇದೆ. ಕಾಂಗ್ರೆಸ್‌ನಿಂದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದರೆ ಅನುಕೂಲ ಅನ್ನೋದು ಬಹುತೇಕ ನಾಯಕರ ಪ್ರಸ್ತಾಪವಾಗಿತ್ತು. ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಬಹಿರಂಗವಾಗಿ ಘೋಷಣೆ ಮಾಡಿದ್ದು, ಮಲ್ಲಿಕಾರ್ಜುನ ಖರ್ಗೆ ಈ ಹಿಂದೆ ಲೋಕಸಭೆ ವಿರೋಧ ಪಕ್ಷದ ನಾಯಕರಾಗಿದ್ದಾಗ ಪ್ರಧಾನಿ ನರೇಂದ್ರ ಸರ್ಕಾರವನ್ನು ಸೂಕ್ತ ರೀತಿಯಲ್ಲಿ ಎದುರಿಸಿದ್ದಾರೆ ಎನ್ನುವುದು ಈ ಲೆಕ್ಕಾಚಾರದ ಹಿಂದಿನ ಗುಟ್ಟು.

ADVERTISEMENT

ಕರ್ನಾಟಕದ ಖರ್ಗೆ ಮುಂದಿನ ಬಾರಿ ಪ್ರಧಾನಿ ಆಗ್ತಾರಾ..?

I.N.D.I.A ಒಕ್ಕೂಟದ ಸಭೆಯಲ್ಲಿ ಸೋನಿಯಾಗಾಂಧಿ, ರಾಹುಲ್​ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್​, ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್​, ಶಿವಸೇನೆಯ ಉದ್ಧವ್​ ಠಾಕ್ರೆ, ಬಿಹಾರ ಸಿಎಂ ನಿತೀಶ್​ಕುಮಾರ್​​​, ದೆಹಲಿ ಸಿಎಂ ಕೇಜ್ರಿವಾಲ್​​​, ಜಮ್ಮು ಕಾಶ್ಮೀರದ ಮುಫ್ತಿ ಮಹಮ್ಮದ್ ಸೈಯ್ಯದ್‌​ ಸೇರಿ ಘಟಾನುಘಟಿ ನಾಯಕರು ಭಾಗಿಯಾಗಿದ್ದರು. ಒಕ್ಕೂಟದ ಸಭೆ ಆರಂಭದಲ್ಲೇ ಪ್ರಧಾನಿ ಅಭ್ಯರ್ಥಿಗೆ ಯಾರು ಸೂಕ್ತ ಅಂತ ಧನಿ ಎತ್ತಿದಾಗ, ಮಮತಾ ಬ್ಯಾನರ್ಜಿ ಮೊದಲು ಪ್ರಸ್ತಾಪಿಸಿದ ಹೆಸರು ಮಲ್ಲಿಕಾರ್ಜುನ ಖರ್ಗೆ. ಖರ್ಗೆ ಹೆಸರು ಪ್ರಸ್ತಾಪ ಆಗ್ತಿದ್ದ ಹಾಗೆ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಕೂಡ ಒಪ್ಪಿಗೆ ಸೂಚಿಸಿದ್ರು.

ಮೊದಲು ಚುನಾವಣಾ ಫಲಿತಾಂಶ ಬರಲಿ – ಮಲ್ಲಿಕಾರ್ಜುನ ಖರ್ಗೆ

ಪ್ರಧಾನಿ ಅಭ್ಯರ್ಥಿ ಆಗಲಿ ಎಂದು ಮಲ್ಲಿಕಾರ್ಜುನ ಖರ್ಗೆ ಹೆಸರು ಪ್ರಸ್ತಾಪ ಆಗುತ್ತಿದ್ದ ಹಾಗೆ ಮೊದಲು ಚುನಾವಣಾ ಫಲಿತಾಂಶಕ್ಕಾಗಿ ಕೆಲಸ ಮಾಡೋಣ. ಮೊದಲು 2024ರ ಲೋಕಸಭೆ ಚುನಾವಣೆ ಗೆಲ್ಲೋಣ. ಚುನಾವಣಾ ಫಲಿತಾಂಶಗಳನ್ನು ನೋಡೋಣ, ಆಮೇಲೆ ಪ್ರಧಾನಿ ಯಾರಾಗಬೇಕು ಎಂದು ನಿರ್ಧರಿಸೋಣ ಎಂದಿದ್ದಾರೆ. ಆದ್ರೆ INDIA ಒಕ್ಕೂಟದಿಂದ ಮಲ್ಲಿಕಾರ್ಜು ಖರ್ಗೆ ಪ್ರಧಾನಿ ಅಭ್ಯರ್ಥಿ ಆದರೆ ಕಾಂಗ್ರೆಸ್‌ ಪಕ್ಷ ಅಷ್ಟೇ ಅಲ್ಲದೆ ಇಡೀ I.N.D.I.A ರಾಜಕೀಯ ಒಕ್ಕೂಟಕ್ಕೆ ಲಾಭ ಆಗುತ್ತೆ ಅನ್ನೋ ಲೆಕ್ಕಾಚಾರ ಇದೆ ಎನ್ನಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಎನ್ನುವ ಕುದುರೆಯನ್ನು ಕಟ್ಟಿ ಹಾಕಲು ರಾಹುಲ್‌ ಗಾಂಧಿಯನ್ನು ಮುಂದೆ ಬಿಡುವ ಬದಲು ಮಲ್ಲಿಕಾರ್ಜುನ ಖರ್ಗೆಯನ್ನು ಮುಂದೆ ಬಿಟ್ಟರೆ ಅನುಕೂಲ ಆಗಲಿದೆ. ತೂಕದ ಮಾತುಗಳು, ಅಂಕಿ ಅಂಶಗಳನ್ನು ಹಿಡಿದು ಖರ್ಗೆ ಮಾತನಾಡುತ್ತಾರೆ ಎನ್ನುವುದು ಎಲ್ಲರ ಅಭಿಮತ.

ಖರ್ಗೆ ಆಯ್ಕೆ.. ಕಾಂಗ್ರೆಸ್‌ಗೆ ಇರುವ ಲಾಭಗಳು ಏನೇನು..?

ಗಾಂಧಿ ಕುಟುಂಬದ ರಾಜಕೀಯ ಅನ್ನೋ ಟೀಕೆಯಿಂದ ಕಾಂಗ್ರೆಸ್‌ ಹೊರಬರಲಿದೆ. ಎಸ್​ಸಿ-ಎಸ್​ಟಿ, ಓಬಿಸಿ ಮತಗಳನ್ನ ಸೆಳೆಯುವುದಕ್ಕೆ ಅನುಕೂಲ ಆಗಲಿದೆ. ರಾಹುಲ್‌ ಗಾಂಧಿಯನ್ನು ಮುಖ್ಯ ಫೇಸ್‌ ಆಗಿ ನಿಲ್ಲಿಸಿದರೂ ಕೆಲವೊಮ್ಮೆ ಬಹಳ ಶಿಸ್ತಿನಿಂದ ಮಾತನಾಡುತ್ತಾರೆ. ಮತ್ತೊಮ್ಮೆ ಶಿಸ್ತು ಮರೆತು ಮಾತನಾಡುತ್ತಾರೆ ಎನ್ನುವುದು ಒಕ್ಕೂಟದ ಇತರೆ ನಾಯಕರಿಗೆ ಇರುವ ಭಯ. ಕಾಂಗ್ರೆಸ್‌ ನೇತೃತ್ವದಲ್ಲಿ I.N.D.I.A ಒಕ್ಕೂಟ ರಚನೆ ಆಗಿದ್ದರೂ ದೇಶದಲ್ಲಿ ಮೋದಿಗೆ ಎದುರಾಳಿ ನಾಯಕ ಯಾರು..? ಅನ್ನೋ ಚರ್ಚೆ ಶುರುವಾಗಿದೆ. ರಾಹುಲ್‌ ಗಾಂಧಿ ಎಂದರೆ ಆಗುವ ಲಾಭಕ್ಕಿಂತ ಮಲ್ಲಿಕಾರ್ಜುನ ಖರ್ಗೆ ಆಯ್ಕೆ ಮಾಡಿದರೆ ಆಗುವ ಲಾಭವೇ ಹೆಚ್ಚು. ಜನವರಿ ಅಂತ್ಯದಿಂದ ದೇಶಾದ್ಯಂತ ಚುನಾವಣಾ ಪ್ರಚಾರಕ್ಕೆ ನಿರ್ಧಾರ ಮಾಡಿದ್ದು, ಅದಕ್ಕಿಂತಲೂ ಮೊದಲು ಪ್ರಧಾನಿಗೆ ನೇರ ಎದುರಾಳಿ ಯಾರು ಅನ್ನೋ ಸ್ಪಷ್ಟತೆ ಇದ್ದರೆ ಮತದಾರರನ್ನು ಓಲೈಸುವುದು ಸುಲಭ ಅನ್ನೋ ಕಾರಣಕ್ಕೆ ಮಲ್ಲಿಕಾರ್ಜುನ ಖರ್ಗೆ ಹೆಸರು ಮುನ್ನಲೆಗೆ ಬಂದಿದೆ. ಖರ್ಗೆ ಹೆಸರು ಅಂತಿಮವಾದರೆ ಕರ್ನಾಟಕದಲ್ಲೂ ಕಾಂಗ್ರೆಸ್‌ ಭರ್ಜರಿ ಜಯ ಕಾಣಲಿದ್ದು, ಖರ್ಗೆ ಪ್ರಧಾನಿ ಆಗಲಿ ಅನ್ನೋ ಕಾರಣಕ್ಕಾಗದರೂ ಕಾಂಗ್ರೆಸ್‌ ಕ್ಲೀನ್‌ ಸ್ವೀಪ್‌ ಮಾಡುವ ಸಾಧ್ಯತೆಯಿದೆ. ಈ ಮೂಲಕ ದಕ್ಷಿಣ ಭಾರತದಲ್ಲಿ ಕಾಂಗ್ರೆಸ್‌ ಸೋಲುವ ಕೆಲವು ಕ್ಷೇತ್ರಗಳಲ್ಲೂ ಗೆಲುವಿನ ನಗೆ ನೀರುವ ಸಾಧ್ಯತೆಯಿದೆ.

ಕೃಷ್ಣಮಣಿ

Tags: # election2023BJPCandidteCongress PartyElection2024IndialokasabhaMallikarjuna kargePrime Ministerನರೇಂದ್ರ ಮೋದಿಬಿಜೆಪಿಮಲ್ಲಿಕಾರ್ಜುನ ಖರ್ಗೆ
Previous Post

ಕೋಚಿಮುಲ್‌ನಲ್ಲಿ ನೇಮಕಾತಿ ಅಕ್ರಮ, ನೇಮಕಕ್ಕೆ ಮುನ್ನವೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ಡಾ.ಕೆ.ಸುಧಾಕರ್‌ ಆಕ್ರೋಶ

Next Post

ಕರೋನಾ ಪ್ರಕರಣ ಹೆಚ್ಚಳ : ಇಂದು ಕೇಂದ್ರ ಆರೋಗ್ಯ ಸಚಿವರಿಂದ ರಾಜ್ಯಗಳೊಂದಿಗೆ ಪರಿಶೀಲನಾ ಸಭೆ

Related Posts

“Cockroach Janata Party” : ರಾಜಕೀಯ ವ್ಯಂಗ್ಯವೇ? ಸಾಮಾಜಿಕ ಅಸಮಾಧಾನದ ಪ್ರತೀಕವೇ?
ರಾಜಕೀಯ

“Cockroach Janata Party” : ರಾಜಕೀಯ ವ್ಯಂಗ್ಯವೇ? ಸಾಮಾಜಿಕ ಅಸಮಾಧಾನದ ಪ್ರತೀಕವೇ?

by ಪ್ರತಿಧ್ವನಿ
May 21, 2026
0

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ “Cockroach Janata Party” ಎಂಬ ಪದ ಭಾರೀ ವೈರಲ್ ಆಗುತ್ತಿದೆ. ಮೊದಲ ನೋಟಕ್ಕೆ ಇದು ಹಾಸ್ಯ, ಮೀಮ್ ಅಥವಾ ಟ್ರೋಲ್ ರಾಜಕೀಯದ...

Read moreDetails
ಇದೇ ಲಾಸ್ಟ್‌ ಇನ್ಮುಂದೆ ಜಿಬಿಎ ಎಲೆಕ್ಷನ್ ಗಡುವು ವಿಸ್ತರಿಸಲ್ಲಾ : ಸರ್ಕಾರಕ್ಕೆ ಸುಪ್ರೀಂ ಖಡಕ್‌ ವಾರ್ನ್..!‌

ಇದೇ ಲಾಸ್ಟ್‌ ಇನ್ಮುಂದೆ ಜಿಬಿಎ ಎಲೆಕ್ಷನ್ ಗಡುವು ವಿಸ್ತರಿಸಲ್ಲಾ : ಸರ್ಕಾರಕ್ಕೆ ಸುಪ್ರೀಂ ಖಡಕ್‌ ವಾರ್ನ್..!‌

May 20, 2026
ಜೂ.ಎನ್‌ಟಿಆರ್‌ ಬರ್ತ್‌ಡೇಗೆ ಬಂತು ಡ್ರ್ಯಾಗನ್‌ ಗ್ಲಿಂಪ್ಸ್!‌ : ಚರ್ಚೆಗೆ ಕಾರಣವಾಯ್ತು ಪ್ರಶಾಂತ್‌ ನೀಲ್‌ ಸಿನಿಮಾ

ಜೂ.ಎನ್‌ಟಿಆರ್‌ ಬರ್ತ್‌ಡೇಗೆ ಬಂತು ಡ್ರ್ಯಾಗನ್‌ ಗ್ಲಿಂಪ್ಸ್!‌ : ಚರ್ಚೆಗೆ ಕಾರಣವಾಯ್ತು ಪ್ರಶಾಂತ್‌ ನೀಲ್‌ ಸಿನಿಮಾ

May 20, 2026
“Welcome to Rome, My Friend ಎಂದ ಮೆಲೋನಿ : ಮೋದಿಗೆ ಇಟಲಿ ಪ್ರಧಾನಿ ಮಾಡಿದ ಪಾಠವೇನು..?

“Welcome to Rome, My Friend ಎಂದ ಮೆಲೋನಿ : ಮೋದಿಗೆ ಇಟಲಿ ಪ್ರಧಾನಿ ಮಾಡಿದ ಪಾಠವೇನು..?

May 20, 2026
ನಾರ್ಡಿಕ್ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ “ಭಾರತ–ನಾರ್ಡಿಕ್” ಬಗ್ಗೆ ಹೇಳಿದ್ದೇನು ?

ನಾರ್ಡಿಕ್ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ “ಭಾರತ–ನಾರ್ಡಿಕ್” ಬಗ್ಗೆ ಹೇಳಿದ್ದೇನು ?

May 20, 2026
Next Post
ದೇಶದಲ್ಲಿ ಮತ್ತೆ ಕೊರೋನಾರ್ಭಟ- 24 ಗಂಟೆಗಳಲ್ಲಿ 180 ಕೋವಿಡ್​​ ಕೇಸ್..!

ಕರೋನಾ ಪ್ರಕರಣ ಹೆಚ್ಚಳ : ಇಂದು ಕೇಂದ್ರ ಆರೋಗ್ಯ ಸಚಿವರಿಂದ ರಾಜ್ಯಗಳೊಂದಿಗೆ ಪರಿಶೀಲನಾ ಸಭೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada