• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, April 13, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಎನ್.ಐ.ಎಸ್.ಜಿ ಹಿರಿಯ ಅಧಿಕಾರಿಗಳೊಂದಿಗೆ ಮಹತ್ವದ ಸಭೆಇ-ಆಡಳಿತದ ಮೂಲಕ ನಾಗರಿಕ ಸೇವೆಗಳ ಹೆಚ್ಚಳ: ಪ್ರಿಯಾಂಕ್ ಖರ್ಗೆ

ಪ್ರತಿಧ್ವನಿ by ಪ್ರತಿಧ್ವನಿ
February 17, 2025
in Top Story, ಇದೀಗ, ಕರ್ನಾಟಕ, ರಾಜಕೀಯ, ವಾಣಿಜ್ಯ, ವಿಶೇಷ, ಶೋಧ
0
Share on WhatsAppShare on FacebookShare on Telegram

ಕರ್ನಾಟಕವು ಭಾರತದ ತಂತ್ರಜ್ಞಾನ ಮತ್ತು ಇನ್ನೋವೇಶನ್ ಹಬ್ ಎಂದು ಗುರುತಿಸಿಕೊಂಡಿದ್ದು, ಡಿಜಿಟಲ್ ಆಡಳಿತದಲ್ಲಿ ಮುಂಚೂಣಿಯಲ್ಲಿದೆ. ರಾಜ್ಯ ಸರ್ಕಾರಗಳು, ಸಾರ್ವಜನಿಕ ಮತ್ತು ಖಾಸಗಿ ಮಧ್ಯಸ್ಥಗಾರರ ಆಡಳಿತದಲ್ಲಿ ಜಾಗತಿಕ ಹಾಗೂ ನವೀನ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದರಿಂದ ಇ-ಆಡಳಿತದಲ್ಲಿ ಮಹತ್ವದ ಬದಲಾವಣೆಯನ್ನು ತರಬಹುದಾಗಿದೆ.

ADVERTISEMENT

ಹಾಗಾಗಿ ಕರ್ನಾಟಕ ಸರ್ಕಾರ ಎನ್ಐಎಸ್ಜಿ (ನ್ಯಾಷನಲ್ ಇನ್ಸ್ಟಿಟ್ಯೂಟ್ ಫಾರ್ ಸ್ಮಾರ್ಟ್ ಗೌರ್ನಮೆಂಟ್) ಜೊತೆ ಸಹಯೋಗಕ್ಕೆ ಮುಂದಾಗಿದ್ದು, ಇದರಿಂದ ಇ-ಆಡಳಿತದ ಮೂಲಕ ನಾಗರಿಕ ಕೇಂದ್ರಿತ ಸೇವೆಗಳನ್ನು ಹೆಚ್ಚಿಸುವ ನಮ್ಮ ಪ್ರಯತ್ನಗಳು ಮತ್ತಷ್ಟು ಬಲಪಡಿಸುವಂತಾಗುತ್ತದೆ. ಕರ್ನಾಟಕದ ಅಗತ್ಯಗಳಿಗೆ ಅನುಗುಣವಾಗಿ ಸುಧಾರಿತ ಇ-ಆಡಳಿತ ಪರಿಹಾರಗಳನ್ನು ಸುಗಮಗೊಳಿಸಲು ಎನ್ಐಎಸ್ಜಿ ಸಂಸ್ಥೆಯ ಡಿಜಿಟಲ್ ತಂತ್ರಜ್ಞಾನ ನೆರವಾಗಲಿದೆ ಹಾಗೂ ಸಾರ್ವಜನಿಕ ಮೂಲಸೌಕರ್ಯವನ್ನು ಹೆಚ್ಚಿಸಲು ಸಹಾಯಕವಾಗಲಿದೆ, ಸೇವಾ ವಿತರಣಾ ದಕ್ಷತೆಯನ್ನು ಸುಧಾರಿಸಿ, ನಾಗರಿಕರಿಗೆ ನೇರವಾಗಿ ಪ್ರಯೋಜನವನ್ನು ನೀಡುವ ಎಐ- ಚಾಲಿತ ಆಡಳಿತ ಮಾದರಿಗಳನ್ನು ಸಂಯೋಜಿಸುವಲ್ಲಿ ನೆರವಾಗಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ಉ ಪಂಚಾಯತ್ ರಾಜ್ ಹಾಗೂ ನಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಎನ್ಐಎಸ್ಜಿಯ ಡಿಜಿಟಲ್ ಪರಿಣತಿಯೊಂದಿಗೆ ರಾಜ್ಯದ ಇ-ಆಡಳಿತದಲ್ಲಿ ಮಹತ್ವದ ಬೆಳವಣಿಗೆ ರೂಪಿಸುವ ಸಲುವಾಗಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಎನ್ಐಎಸ್ಜಿಯ ಹಿರಿಯ ಅಧಿಕಾರಿಗಳ ನಡುವೆ ನಾಗರಿಕ-ಕೇಂದ್ರಿತ ಸೇವಾ ವಿತರಣೆಯನ್ನು ಹೆಚ್ಚಿಸಲು ಮತ್ತು ಕರ್ನಾಟಕದ ಡಿಜಿಟಲ್ ರೂಪಾಂತರವನ್ನು ವೇಗಗೊಳಿಸಲು ಬೆಂಗಳೂರಿನಲ್ಲಿ ಫೆ.16ರಂದು ಸಭೆಯನ್ನು ಆಯೋಜಿಸಲಾಗಿತ್ತು.

ಆಡಳಿತದಲ್ಲಿ ಹೊಸ ಮಾನದಂಡಗಳನ್ನು ರೂಪಿಸಿ ಭವಿಷ್ಯದಲ್ಲಿ ಡಿಜಿಟಲ್ ಮೂಲಸೌಕರ್ಯವನ್ನು ನಿರ್ಮಿಸಲು ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಇದರಿಂದ ಕರ್ನಾಟಕಕ್ಕೆ ಹೆಚ್ಚಿನ ಪ್ರಯೋಜನ ಆಗುವುದರೊಂದಿಗೆ ಇತರ ರಾಜ್ಯಗಳಿಗೆ ಮಾದರಿಯಾಗಬಲ್ಲದು ಎಂದು ಈ ಸಂದರ್ಭದಲ್ಲಿ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಎನ್ಐಎಸ್ಜಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜೀವ್ ಬನ್ಸಾಲ್ ಮಾತನಾಡಿ ನವೀನ ಡಿಜಿಟಲ್ ತಂತ್ರಜ್ಞಾನಗಳನ್ನು ರೂಪಿಸುವ ಮೂಲಕ ಕರ್ನಾಟಕದ ಇ-ಆಡಳಿತದಲ್ಲಿ ಹೊಸ ಕ್ರಾಂತಿ ಸೃಷ್ಟಿಸಲು ಎನ್ಐಎಸ್ಜಿ ಬದ್ಧವಾಗಿದೆ. ನಾಗರಿಕ-ಕೇಂದ್ರಿತ ಸೇವಾ ವಿತರಣೆಯನ್ನು ಹೆಚ್ಚಿಸುವುದು, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು ಬಲಪಡಿಸುವುದು ಮತ್ತು ವಾಯುಯಾನ ಕ್ಷೇತ್ರ ಸೇರಿದಂತೆ ಉದಯೋನ್ಮುಖ ತಂತ್ರಜ್ಞಾನಗಳನ್ನು ಅನ್ವೇಷಿಸುವುದು ಸಚಿವ ಪ್ರಿಯಾಂಕ್ ಖರ್ಗೆ ಅವರ ಉದ್ದೇಶವಾಗಿದೆ. ಆ ನಿಟ್ಟಿನಲ್ಲಿ ನಾವು ಕಾರ್ಯೋನ್ಮುಖಗೊಂಡು ಕರ್ನಾಟಕದ ಸುಧಾರಿತ ಇ-ಆಡಳಿತಕ್ಕೆ ಮಹತ್ವದ ಕೊಡುಗೆ ನೀಡುತ್ತೇವೆ ಎಂದು ತಿಳಿಸಿದರು. ಸಭೆಯಲ್ಲಿ ಸಿಎಫ್ಒ ವೀರಾಜು ನಾಯ್ಡು, ಎನ್ಐಎಸ್ಜಿಯ ಯೋಜನಾ ಅಧಿಕಾರಿ ಸ್ಟೀನ್ ಅನುರಾಗ್ ಪ್ರಾಥಿಪತಿ ಅವರು ಉಪಸ್ಥಿತರಿದ್ದರು.

Tags: Anurag PrathipatiCFO Veeraju NaiduDigitalNISGPriyank KhargePriyanka KhargeRajeev Bansal
Previous Post

ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷರನ್ನಾಗಿ ಬಿ.ಆರ್ ಪಾಟೀಲ್​ಗೆ ಹೊಸ ಹುದ್ದೆ

Next Post

“ಮಾರುತ” ನ ಹಾಡುಗಳಿಗೆ ಧ್ವನಿಯಾದ ಹೆಸರಾಂತ ಗಾಯಕ – ಗಾಯಕಿಯರು.

Related Posts

ಪ್ರಚೋದನಕಾರಿ ಭಾಷಣ ಆರೋಪ: ಚಕ್ರವರ್ತಿ ಸೂಲಿಬೆಲೆ ವಿರುದ್ಧ  ಸುಮೊಟೊ ಪ್ರಕರಣ
ಕರ್ನಾಟಕ

ಪ್ರಚೋದನಕಾರಿ ಭಾಷಣ ಆರೋಪ: ಚಕ್ರವರ್ತಿ ಸೂಲಿಬೆಲೆ ವಿರುದ್ಧ  ಸುಮೊಟೊ ಪ್ರಕರಣ

by ಪ್ರತಿಧ್ವನಿ
April 12, 2026
0

ಧಾರವಾಡ: ಮುಸ್ಲಿಂ ಸಮುದಾಯದ ಮಹಿಳೆಯರ ಕುರಿತು ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಧಾರವಾಡ ಶಹರ ಪೊಲೀಸ್ ಠಾಣೆಯಲ್ಲಿ ಸುಮೊಟೊ ಪ್ರಕರಣ ದಾಖಲಾಗಿದೆ.ಏಪ್ರಿಲ್...

Read moreDetails
“ಪೈಪೋಟಿಗಿಂತ ಮೀರಿದ ಸಹೋದರಿಯರ ಬಂಧ: ಆಶಾ–ಲತಾ ಸಂಬಂಧದ ಅಪರೂಪದ ಕಥೆ”

“ಪೈಪೋಟಿಗಿಂತ ಮೀರಿದ ಸಹೋದರಿಯರ ಬಂಧ: ಆಶಾ–ಲತಾ ಸಂಬಂಧದ ಅಪರೂಪದ ಕಥೆ”

April 12, 2026
ಟಿಸಿಎಸ್ ಘಟಕದ ವಿರುದ್ಧ ಗಂಭೀರ ಆರೋಪ: ಅಂಡರ್‌ಕವರ್ ಕಾರ್ಯಾಚರಣೆಯಲ್ಲಿ ಪ್ರಕರಣ ಬಯಲು

ಟಿಸಿಎಸ್ ಘಟಕದ ವಿರುದ್ಧ ಗಂಭೀರ ಆರೋಪ: ಅಂಡರ್‌ಕವರ್ ಕಾರ್ಯಾಚರಣೆಯಲ್ಲಿ ಪ್ರಕರಣ ಬಯಲು

April 12, 2026
ಸಿದ್ದರಾಮಯ್ಯ ಬೆಂಕಿ ಇದ್ದಂತೆ, ಯಾರಿಂದಲೂ ಮುಟ್ಟೋಕಾಗೋಲ್ಲಾ ಮುಟ್ಟಿದ್ರೆ ಭಸ್ಮ ಆಗ್ತಾರೆ.

ದಾವಣಗೆರೆ ದಕ್ಷಿಣ ಉಪಚುನಾವಣೆ: ಕಾಂಗ್ರೆಸ್ ಒಳಜಗಳ ತೀವ್ರ, ಸಚಿವ ಜಮೀರ್ ವಿರುದ್ಧ ಗಂಭೀರ ಆರೋಪ

April 12, 2026
ದೋಸೆ ಹಿಟ್ಟು ದುರಂತಕ್ಕೆ ಹೊಸ ತಿರುವು: ಮಕ್ಕಳ ಸಾವು ಪ್ರಕರಣದಲ್ಲಿ  ಕಾರಣ ಬೇರೆ ಇದೆ!

ದೋಸೆ ಹಿಟ್ಟು ದುರಂತಕ್ಕೆ ಹೊಸ ತಿರುವು: ಮಕ್ಕಳ ಸಾವು ಪ್ರಕರಣದಲ್ಲಿ  ಕಾರಣ ಬೇರೆ ಇದೆ!

April 11, 2026
Next Post

"ಮಾರುತ" ನ ಹಾಡುಗಳಿಗೆ ಧ್ವನಿಯಾದ ಹೆಸರಾಂತ ಗಾಯಕ - ಗಾಯಕಿಯರು.

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada