ಬೆಂಗಳೂರು- ರಾತ್ರಿ 11 ಗಂಟೆ ನಂತರ ಮನೆ ಬಿಟ್ಟು ಹೊರಗೆ ಬಂದರೆ ಹುಷಾರ್ ಪೋಲಿಸರು ಫೈನ್ ಹಾಕ್ತಾರೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಂಪತಿಗೆ ಪೋಲಿಸರು ದಂಡ ವಿಧಿಸಿರುವ ಘಟನೆ ನಡೆದಿದೆ.
ಸ್ನೇಹಿತರ ಮನೆಯ ಹುಟ್ಟುಹಬ್ಬದಲ್ಲಿ ಪಾಲ್ಗೊಂಡ ಕಾರ್ತಿಕ್ ಎಂಬುವರು ಪತ್ನಿ ಜೊತೆ ರಾತ್ರಿ 11 ಗಂಟೆ ವೇಳೆಯಲ್ಲಿ ಮನೆಗೆ ಹೋಗುತ್ತಿದ್ದರು. ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ ಬಳಿ ತಡೆದ ಗಸ್ತು ಪೋಲಿಸರು ಇಷ್ಟೊಂತ್ತಲ್ಲಿ ಓಡಾಡುವಂತಿಲ್ಲ ಅಂತ ಐಡಿ ಕಾರ್ಡ್ ಕೇಳಿದ್ದಾರೆ. ಅವರು ಆಧಾರ್ ಕಾರ್ಡ್ ತೋರಿದ್ದಾರೆ. ಆದರೆ ಈ ರಾತ್ರಿಯಲ್ಲಿ ಹೊರಗೆ ಓಡಾಡುವಂತಿಲ್ಲ.
ಈ ಕಾರಣದಿಂದ 3,000 ಸಾವಿರ ದಂಡ ಕಟ್ಟುವಂತೆ ಸೂಚಿದ್ದಾರೆ. ತಮ್ಮ ಬಳಿ ಅಷ್ಟು ಹಣ ಇಲ್ಲ ಎಂದಾಗ 1,000 ರೂಪಾಯಿ ಪಡೆದು ಕಳುಹಿದ್ದಾರೆ. ತಮಗಾದ ಈ ಪರಿಸ್ಥಿತಿಯನ್ನು ಕಾರ್ತಿಕ್ ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ. ಪೋಲಿಸರ ಈ ವರ್ತನೆಯ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಈ ಸಂಬಂಧ ವಿಚಾರಣೆ ನಡೆಸಿರುವ ಬೆಂಗಳೂರಿನ ಈಶಾನ್ಯ ವಿಭಾಗದ ಡಿಸಿಪಿ ಅನೂಪ್ ಶೆಟ್ಟಿ ಅವರು, ಕಾರ್ತಿಕ್ ಅವರ ಬಳಿ ಹೊಯ್ಸಳ ಪೋಲಿಸರು ಕ್ಯೂ ಆರ್ ಕೋಡ್ ಮೋಲಕ ಒಂದು ಸಾವಿರ ಲಂಚ ಪಡೆದಿದ್ದಾರೆ. ಈ ಸಂಬಂಧ ರಾಜೇಶ್ ಹಾಗೂ ನಾಗೇಶ್ ಅವರನ್ನು ಅಮಾನತು ಮಾಡಲಾಗಿದೆ ಎಂದು ತಿಳಿಸಿದ್ದಾರೆ.