ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್ ನಲ್ಲಿ (Ranya rao gold smuggling case) ಸಚಿವರ ಪಾತ್ರವಿರೋ ಬಗ್ಗೆ ನಿನ್ನೆ ವಿಜಯಪುರದಲ್ಲಿ ಮಾತನಾಡಿದ್ದ ಶಾಸಕ ಯತ್ನಾಳ್ (Basanagoeda patil yatnal) ಹೊಸ ಟ್ವಿಸ್ಟ್ ಕೊಟ್ಟಿದ್ದರು. ಯಾವ ಸಚಿವರು ಇದರಲ್ಲಿ ಭಾಗಿಯಾಗಿದ್ದಾರೆ ಎಂಬ ಮಾಹಿತಿ ತಮ್ಮ ಬಳಿಯಿದ್ದು ಸದನದಲ್ಲೇ ಈ ಬಗ್ಗೆ ಪ್ರಸ್ತಾಪಿಸೋದಾಗಿ ಮಾತನಾಡಿದ್ದರು.

ಇಂದು ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಸಚಿವ ಎಂ.ಬಿ ಪಾಟೀಲ್ (MB Patil), ಯತ್ನಾಳ್ ಅವರಿಗೆ ತಾಕತ್ತಿದ್ದರೆ ಯಾವ ಸಚಿವರು ಎಂದು ಹೆಸರು ಬಹಿರಂಗ ಪಡಿಸಲಿ ಎಂದು ಸವಾಲು ಹಾಕಿದ್ದಾರೆ.
ಬಿಜೆಪಿ ನಾಯಕ ಯತ್ನಾಳ್ ಅವರು ಈ ಬಗ್ಗೆ ಹೊರಗಡೆ ಮಾತಾಡೋದು ಬೇಡ, ಬದಲಿಗೆ ಅಧಿವೇಶನದಲ್ಲಿ ಸಚಿವರ ಹೆಸರು ಬಹಿರಂಗ ಪಡಿಸಲಿ. ಅವರ ಆರೋಪ ಸತ್ಯವಾಗಿದ್ದರೆ, ಅವರಿಗೆ ತಾಕತ್ತಿದ್ದರೆ ಸದನದಲ್ಲಿ ಹೆಸರು ಬಹಿರಂಗ ಪಡಿಸಲಿ ಎಂದು ಸವಾಲು ಹಾಕಿದ್ದಾರೆ.

ಈ ಕೇಸ್ ನಲ್ಲಿ ಯಾರನ್ನು ಸಮರ್ಥಿಸಿಕೊಳ್ಳುವ ಇರಾದೆಯಿಲ್ಲ. ಇಲ್ಲಿ ಯಾರು ಯಾರು ಕೇಂದ್ರ ಸಚಿವರು ಇದ್ದಾರೆ, ಅವರ ಪಾರ್ಟಿಯವರು ಯಾರಿದ್ದಾರೆ, ನಮ್ಮ ಪಾರ್ಟಿಯವರು ಯಾರಿದ್ದಾರೆ ಹೇಳಲಿ. ಸುಮ್ಮನೆ ಗಾಳಿಯಲ್ಲಿ ಗುಂಡು ಹಾರಿಸೋದು ಬೇಡ ಎಂದು ಯತ್ನಾಳ್ ವಿರುದ್ಧ ಎಂ.ಬಿ ಪಾಟೀಲ್ ಕಿಡಿಕಾರಿದ್ದಾರೆ.






