ಮಂಗಳೂರು ಬಂಟ್ವಾಳದಲ್ಲಿ ಅಬ್ದುಲ್ ರಹೀಮಾನ್ (Abdul rahiman) ಕೊಲೆಯ ನಂತರ ಪರಿಸ್ಥಿತಿ ಬಿಗಡಾಯಿಸಿದ್ದು, ಈ ಕುರಿತು ಬೆಂಗಳೂರಿನಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha karandlaje) ಪ್ರತಿಕ್ರಿಯಿಸಿದ್ದಾರೆ.ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ ದಕ್ಷಿಣ ಕನ್ನಡದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ದಕ್ಷಿಣ ಕನ್ನಡದ ಜಿಲ್ಲಾ ಉಸ್ತುವಾರಿ ನಾಯಕರ ನಡೆ ಹಾಗೂ ಪಕ್ಷದ ನಡೆ ತುಷ್ಟೀಕರಣದ ರಾಜಕಾರಣ ಅಷ್ಟೇ ಕಾಣ್ತಿದೆ.ವೋಟು ಹಾಕಿದವರಿಗೆ ಮಾತ್ರ ನಿಮ್ಮ ಗ್ಯಾರಂಟಿಯಾ? ರಾಜ್ಯದ ಜನಕ್ಕೆ ಗ್ಯಾರಂಟಿ ಇಲ್ವಾ? ನಿಮ್ಮ ಸರ್ಕಾರ ಬಂದಾಗಲೆಲ್ಲ ಜಾತಿ ಜಾತಿಗಳ ನಡುವೆ ವಿಷ ಬೀಜ ಬಿತ್ತುತ್ತೀರ ಎಂದು ವಾಗ್ದಾಳಿ ನಡೆಸಿದ್ದಾರೆ.
ಇನ್ನು ಡಿಸಿಎಂ ಡಿಕೆ ಶಿವಕುಮಾರ್ ಅವರ ಮಾತಿನಂತೆ ಗ್ಯಾರಂಟಿ ಕೇವಲ ಕಾಂಗ್ರೆಸ್ಸಿಗೆ ಮಾತ್ರ ಎನ್ನುವಂತಿದೆ. ಈ ಹಿಂದೆ ಜಾತಿ ರಾಜಕಾರಣ ಮಾಡಿದ್ರಿ,ಇಂದು ಜಿಲ್ಲೆ ಒಡೆದು ರಾಜಕಾರಣ ಮಾಡಲು ಹೊರಟಿದ್ದೀರಾ?ನಾವು ಗ್ಯಾರಂಟಿಯನ್ನ ನಂಬಿದವರಲ್ಲ. ಆದರೆ ಕೇಂದ್ರ ಹಾಗೂ ರಾಜ್ಯದ ಯೋಜನೆಗಳು ಬಡವರಿಗೆ ತಲುಪಲಿ ಅಂತ ಹೋರಾಡ್ತಿದ್ದೇವೆ ಎಂದಿದ್ದಾರೆ.
ಈ ಗ್ಯಾರಂಟಿಗಳ ಅನುಷ್ಟಾನ ಸಮಿತಿಗೆ ದುಡ್ಡು ಕೊಡೋಕೆ ನಿಮ್ಮ ಬಳಿ ಹಣವಿದೆ. ಆದರೆ ಜನರಿಗೆ ಮೂರು ತಿಂಗಳಿಂದ ಗ್ಯಾರಂಟಿ ಹಣ ಕೊಟ್ಟಿಲ್ಲ.ಸಿಎಂ ಸಾಹೇಬ್ರೇ ನಿಮ್ಮ ಈ ನಿರ್ಧಾರ ನೋಡಿದ್ರೆ, ಈ ಗ್ಯಾರೆಂಟಿಗಳು ನಿಮ್ಮ ಕಾರ್ಯಕರ್ತರಿಗೆ ಕಾಸು ಹೊಡೆಯೋಕಾ..? ಎಂದು ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವೆ ಶೋಭಾಕರಂದ್ಲಾಜೆ ವಾಗ್ದಾಳಿ ನಡೆಸಿದ್ದಾರೆ.











