ಬೆಂಗಳೂರು: ವೃದ್ದ ಪತ್ನಿಯನ್ನ ಕೊಂದು ಪತಿ ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ಸುಬ್ರಮಣ್ಯಪುರ ಠಾಣಾ ವ್ಯಾಪ್ತಿಯ ಚಿಕ್ಕೆಗೌಡನಪಾಳ್ಯದಲ್ಲಿ ಮಂಗಳವಾರ ನಡೆದಿದೆ.
65 ವರ್ಷದ ವೆಂಕಟೇಶನ್ ಮತ್ತು ಬೇಬಿ ಎಂಬ ದಂಪತಿ ಅನೇಕ ವರ್ಷಗಳಿಂದ ಚಿಕ್ಕೆಗೌಡನಪಾಳ್ಯದಲ್ಲಿ ಮಗ ಸೊಸೆ ಮೊಮ್ಮಕ್ಕಳ ಜೊತೆ ವಾಸವಿದ್ದರು. ವೆಂಕಟೇಶನ್ ಪತ್ನಿಗೆ ಸ್ಟ್ರೋಕ್ ಹೊಡೆದು ವೀಲ್ ಚೇರ್ ಆಶ್ರಯದಲ್ಲಿದ್ದರು. ಆದರೆ ವೃದ್ದ ಪತ್ನಿ ಜೊತೆ ಪತಿ ಆಗಾಗ ಜಗಳ ಮಾಡುತ್ತಿದ್ದ. ಮಂಗಳವಾರ ಮಧ್ಯಾಹ್ನ ಮನೆಯಲ್ಲಿ ಯಾರು ಇರದ ವೇಳೆ ವೃದ್ದ ದಂಪತಿ ಮಧ್ಯೆ ಜಗಳ ಶುರುವಾಗಿತ್ತು. ಈ ಜಗಳ ವಿಕೋಪಕ್ಕೆ ಹೋದಾಗ ವೆಂಕಟೇಶನ್ ಬಟ್ಟೆ ಒಣಗಲು ಬಳಸೋ ವೈರ್ ನಿಂದ ಪತ್ನಿ ಬೇಬಿ ಕತ್ತು ಬಿಗಿದು ಕೊಲೆ ಮಾಡಿದ್ದ. ಬಳಿಕ ತಾನು ಕೂಡ ಅದೇ ವೈರ್ ನಲ್ಲಿ ಸೂಸೈಡ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದ.
ಕೆಲವು ಹೊತ್ತಿನ ಬಳಿಕ ಮನೆಯಿಂದ ಹೊರಗೆ ಹೋಗಿದ್ದ ಸೊಸೆ & ಪುತ್ರ ಮನೆಗರ ಬಂದಾಗ ಇಬ್ಬರ ಶವಗಳನ್ನ ನೋಡಿ ಬೆಚ್ಚಿ ಬಿದ್ದು ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಸ್ಥಳಕ್ಕೆ ಬಂದ ಸುಬ್ರಮಣ್ಯ ಪುರ ಪೊಲೀಸರು ಪರಿಶೀಲನೆ ನಡೆಸಿದಾಗ ಬೇಬಿ ಕತ್ತಿನಲ್ಲಿ ವೈರ್ ಮಾರ್ಕ್ ಇರೋದು ಪತ್ತೆಯಾಗಿತ್ತು.
ಸದ್ಯ ಈ ಇಬ್ಬರ ಸಾವು ಕೊಲೆ & ಆತ್ಮಹತ್ಯೆ ಎಂದು ಗೊತ್ತಾಗಿದ್ದು, ಪ್ರಕರಣ ದಾಖಲಿಸಿ ಪೊಲೀಸರು ಕಾನೂನು ಪ್ರಕ್ರಿಯೆ ಮುಂದುವರಿಸಿದ್ದಾರೆ.




