ಮೂಡ ಹಗರಣದ (MUDA scam) ವಿರುದ್ಧ ಬಿಜೆಪಿ-ಜೆಡಿಎಸ್ (BJP-jds) ವ್ಯಾಪಕ ಹೋರಾಟ ನಡೆಸಿದ ಬೆನ್ನಲ್ಲೇ, ಬಿಜೆಪಿ ಕಾಲದ ಹಗರಣಗಳನ್ನು ಬಯಲು ಮಾಡುತ್ತೇವೆ ಎಂದಿದ್ದ ಕಾಂಗ್ರೆಸ್ ನಾಯಕರು (Congress) ಇದೀಗ ತಮ್ಮ ಮೊದಲ ಅಸ್ತ್ರ ಪ್ರಯೋಗ ಮಾಡಿದಂತಿದೆ. ಬಿಎಸ್ ಯಡಿಯೂರಪ್ಪ (BS yediyurappa) ಸಿಎಂ ಆಗಿದ್ದ ಸಂಧರ್ಬದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ದೂರು ದಾಖಲಾಗಿದೆ.

ಮಾಜಿ ಸಿಎಂ ಬಿಎಸ್ ಯಡಿಯೂರಪ್ಪಗೆ ಭೂಹಗರಣದ ಸಂಕಷ್ಟ ಎದುರಾಗಿದೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂಧರ್ಬದಲ್ಲಿ ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂಧಪಟ್ಟಂತೆ ಪ್ರೊಸೆಕ್ಯುಷನ್ ಗೆ ಅನುಮತಿ ನೀಡಬೇಕೆಂದು ಕೋರಿ ವಕೀಲರ ತಂಡ ರಾಜ್ಯಪಾಲರ ಮನವಿ ಮಾಡಿದೆ.
ಬಿ ಎಸ್ ಯಡಿಯೂರಪ್ಪ ಸಿಎಂ ಆಗಿದ್ದ ಸಂದರ್ಬದಲ್ಲಿ ಚೆಸ್ ಎಂಬ ಕಂಪನಿ ಗೆ 160 ಎಕರೆ ಭೂಮಿಯನ್ನು ಮಂಜೂರು ಮಾಡಿದ್ದು, ಇದು ನಿಯಮ ಬಾಹಿರವಾಗಿದೆ ಎಂಬ ಆರೋಪ ಈಗ ಕೇಳಿಬಂದಿದೆ. ರೈತರಿಂದ ಕೆಐಎಡಿಬಿ (KIADB) ವಶ ಪಡಿಸಿಕೊಂಡ ಜಾಗವನ್ನು ಕೇವಲ ಇಂಡಸ್ಟ್ರಿ ಗಳ ಸ್ಥಾಪನೆಗೆ ಮಾತ್ರ ನೀಡಬೇಕು. ಆದ್ರೆ ಇಲ್ಲಿ ಆ ನಿಯಮವನ್ನ ಗಾಳಿಗೆ ತೂರಲಾಗಿದೆ.
ಆರ್ ಎಸ್ ಎಸ್ (RSS) ಮೂಲದ ಚೆಸ್ (Chess) ಎಂಬ ಕಂಪನಿ ಗೆ ಅತಿ ಕಡಿಮೆ ಬೆಲೆಯಲ್ಲಿ ಈ ಭೂಮಿ ನೀಡಿರುವುದು ಅಕ್ರಮವಾಗಿದೆ ಮತ್ತು ಅಂದಿಗೆ 150 ಕೋಟಿಗೂ ಅಧಿಕ ಬೆಲೆ ಬಾಳುವ ಭೂಮಿಯನ್ನು ಕೇವಲ 50 ಕೋಟಿಗೆ ಮಂಜೂರು ಮಾಡಿರುವುದು ದೊಡ್ಡ ಅಕ್ರಮವಾಗಿದೆ ಎಂದು ಆರೋಪ ಮಾಡಲಾಗಿದೆ.
ಸದ್ಯ ರಾಜ್ಯಪಾಲರು ಕೂಲಂಕಷವಾಗಿ ಎಲ್ಲಾ ಮಾಹಿತಿಯನ್ನು ಪಡೆದುಕೊಂಡಿದ್ದು, ಪ್ರಾಸಿಕ್ಯೂಷನ್ ಗೆ ಅನುಮತಿ ನೀಡುವ ವಿಶ್ವಾಸವಿದೆ ಎಂದು ವಕೀಲರು ಹೇಳಿದ್ದಾರೆ. ಆ ಮೂಲಕ ಬಿಜೆಪಿಯವರ ಹಗರಣಗಳನ್ನು ಹೊರಗೆಳೆಯುತ್ತೇವೆ, ಜೈಲಿಗೆ ಕಳುಹಿಸುತ್ತೇವೆ ಎಂದಿದ್ದ ಕಾಂಗ್ರೆಸ್, ಆ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಟ್ಟಂತಿದೆ.





