ಮೂಡ ಅಕ್ರಮದ (MUDA scam) ಆರೋಪ ಎದುರಿಸುತ್ತಿರುವ ಸಿಎಂ ಸಿದ್ದರಾಮಯ್ಯ (Cm siddaramiah) ವಿರುದ್ಧ ಪ್ರಾಸಿಕ್ಯೂಷನ್ ಗೆ (Prosecution) ರಾಜ್ಯಪಾಲರು ಅನುಮತಿ ನೀಡಿದ್ದಾರೆ. ಈ ಬೆಳವಣಿಗೆ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿ ಮಾಡಿದೆ. ಜಮೀನು ಒತ್ತುರಿ ಮಾಡಿಕೊಂಡು ಬದಲಿಯಾಗಿ ಸಿಎಂ ಪತ್ನಿಗೆ 14 ಸೈಟ್ ಕೊಟ್ಟ ಪ್ರಕರಣದಲ್ಲಿ ಇದೀಗ ಸಿಎಂ ಗೆ ಕಾನೂನಿನ ಸಂಕಷ್ಟ ಎದುರಾಗಿದೆ.
ಒಂದಡೆ ಇದೀಗ ಕಾನೂನಾತ್ಮಕಾಗಿ ಸಿಎಂ ಈ ಪ್ರಕರಣವನ್ನ ಎದುರಿಸಬೇಕಿದ್ದು, ಮತ್ತೊಂದೆಡೆ ರಾಜಕೀಯವಾಗಿಯೂ ವಿರೋಧ ಪಕ್ಷಗಳಿಗೆ ದೊಡ್ಡ ಅಸ್ತ್ರ ಸಿಕ್ಕಂತಾಗಿದೆ. ಈಗಾಗಲೇ ಸಿಎಂ (cm) ರಾಜಿನಾಮೆಗೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ (Bjp-jds) ಮೈಸೂರು ಚಲೀ ಪಾದಯಾತ್ರೆ ನಡೆಸಿತ್ತು. ಇದೀಗ ಪ್ರಾಸಿಕ್ಯೂಷನ್‌ಗೆ ಅನುಮತಿ ಸಿಕ್ಕಿರುವುದು ವಿಪಕ್ಷಗಳಿಗೆ ಪ್ರಬಲ ಅಸ್ತ್ರ ಸಿಕ್ಕಂತಾಗಿದೆ.
ರಾಜಭವನದಿಂದ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ಸಂಬಂಧ ನೋಟಿಸ್ ನೀಡಲಾಗಿದ್ದು, ಇದೀಗ ಇದನ್ನ ಪ್ರಶ್ನಿಸಿ ಮುಖ್ಯಮಂತ್ರಿಗಳ ಲೀಗಲ್ ಟೀಂ ಕೋರ್ಟ್ ಮೆಟ್ಟಿಲೇರಲು ಸಿದ್ಧತೆ ನಡೆಸಿದೆ.