78ನೇ ಸ್ವಾತಂತ್ರ್ಯ ದಿನಾಚರಣೆ (78th Independence day) ಸಂದರ್ಭದಲ್ಲೂ ಚನ್ನಪಟ್ಟಣದಲ್ಲಿ ರಾಜಕೀಯ ಜೋರಾಗಿದೆ. ಚನ್ನಪಟ್ಟಣದಲ್ಲಿ (Channapattana) ಧ್ವಜಾರೋಹಣ ಮಾಡಿ ಸ್ವಾತಂತ್ರ್ಯ ದಿನಾಚರಣೆ ಆಚರಿಸುವ ಮೂಲಕ ಡಿಸಿಎಂ ಡಿ.ಕೆ.ಶಿವಕುಮಾರ್ (Dcm Dk shivakumar), ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿಗೆ (HD kumaraswamy) ತಿರುಗೇಟು ನೀಡಿದ್ದಾರೆ.
78ನೇ ಸ್ವಾತಂತ್ರ್ಯ ದಿನಾಚರಣೆ ನನ್ನ ಬದುಕಿನ ಪವಿತ್ರ ದಿನ. ಈ ಹಿಂದಿನ ಶಾಸಕರು ಇಂತ ಕಾರ್ಯಕ್ಕೆ ಬಂದಿದ್ರೋ, ಇಲ್ಲೋ ನನಗೆ ಗೊತ್ತಿಲ್ಲ. ನಾನು ಸರ್ಕಾರದ ಪ್ರತಿನಿಧಿಯಾಗಿ ಬಂದು ಧ್ವಜಾರೋಹಣ ಮಾಡ್ತಿದ್ದೇನೆ. ನಿಮ್ಮನ್ನ ಬಿಟ್ಟುಹೋಗುವ ಪ್ರಶ್ನೆಯೇ ಇಲ್ಲ ಎಂದು ಹೆಚ್ಡಿಕೆಯನ್ನ ಕುಟುಕಿದ್ರು.
ಹೇಗೆ ರಾಷ್ಟ್ರ ಧ್ವಜವನ್ನ ಅರ್ಧಕ್ಕೆ ಹಾರಿಸಿದ್ರೆ ಅದು ಅಗೌರವವಾಗುತ್ತೋ, ಅದೇ ರೀತಿ ಕ್ಷೇತ್ರದ ಜನರನ್ನ ನಾಯಕರು ಅರ್ಧಕ್ಕೆ ಬಿಟ್ಟು ಹೋಗೋದು ಕೂಡ ಅಗೌರವ ಎಂದು ಹೇಳುವ ಮೂಲಕ ಪರೋಕ್ಷವಾಗಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.