• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, April 12, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಅಂಕಣ

ಒಂದು ಕಾಲದಲ್ಲಿ ಬೇಡವಾದ ನಾಯಕ ಈಗ ಬೇಕಾಗಿದ್ದು ಹೇಗೆ..? ಕಾಲಾಯ ತಸ್ಮೈ ನಮಃ

ಕೃಷ್ಣ ಮಣಿ by ಕೃಷ್ಣ ಮಣಿ
July 5, 2023
in ಅಂಕಣ, ಅಭಿಮತ
0
ಹೊಸ ಶತ್ರುಗಳನ್ನು ಸೋಲಿಸಲು ಒಂದಾದ ಹಳೇ ಶತ್ರುಗಳು..!
Share on WhatsAppShare on FacebookShare on Telegram

ಕರ್ನಾಟಕದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರವಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರ ಪಾತ್ರವನ್ನು ಅಲ್ಲಗಳೆಯುವಂತಿಲ್ಲ. ಸೈಕಲ್‌ ಸವಾರಿಯಿಂದ ಶುರು ಮಾಡಿದ ಯಡಿಯೂರಪ್ಪ, ಇಬ್ಬರು ಶಾಸಕರಾಗಿ ಆಯ್ಕೆಯಾಗಿ ಭಾರತೀಯ ಜನತಾ ಪಾರ್ಟಿ ಮೊದಲ ಬಾರಿಗೆ ದಕ್ಷಿಣ ಭಾರತದಲ್ಲಿ ಅಧಿಕಾರ ಹಿಡಿಯುವ ಹಂತಕ್ಕೆ ಪಕ್ಷವನ್ನು ಬೆಳೆಸಿದ್ದು ಮಾಜಿ ಸಿಎಂ ಯಡಿಯೂರಪ್ಪ ಎನ್ನುವುದನ್ನು ಮರೆಯುವಂತಿಲ್ಲ. ಇದೇ ಕಾರಣಕ್ಕೆ ಕರ್ನಾಟಕದಲ್ಲಿ ಬಿಜೆಪಿಯಲ್ಲಿ ಯಡಿಯೂರಪ್ಪ ಅವರನ್ನು ಪ್ರಶ್ನಾತೀತ ನಾಯಕ ಎನ್ನುತ್ತಾರೆ. ಯಡಿಯೂರಪ್ಪ ಹೇಳಿದ ಮಾತನ್ನು ಯಾರೂ ಅಲ್ಲಗಳೆಯುವಂತಿಲ್ಲ. ಆದರೆ ಇತ್ತೀಚಿಗೆ ಯಡಿಯೂರಪ್ಪ ಅವರನ್ನು ಭಾರತೀಯ ಜನತಾ ಪಾರ್ಟಿಯಲ್ಲಿ ಯಡಿಯೂರಪ್ಪ ಅವರನ್ನು ತುಳಿಯುವ ಕೆಲಸ ಮಾಡಲಾಯ್ತು. ಇಡೀ ರಾಜ್ಯಕ್ಕೆ ಬಹಿರಂಗವಾಗಿ ಗೊತ್ತಾದರೂ ಯಡಿಯೂರಪ್ಪ ಮೂಲಕ ಯಾವುದೇ ಸಮಸ್ಯೆಯಿಲ್ಲ. ನಾನೇ ಸ್ವಯಂ ರಾಜೀನಾಮೆ ನೀಡಿದ್ದೇನೆ ಎಂದು ಬಹಿರಂಗವಾಗಿ ಹೇಳಿಸಿದ್ದರು.

ADVERTISEMENT

ವಯಸ್ಸಾಯ್ತು ಅನ್ನೋ ಕಾರಣಕ್ಕೆ ಒತ್ತಡ ಹೇರಿ ರಾಜೀನಾಮೆ..!

ಯಡಿಯೂರಪ್ಪ ಸಾಕಷ್ಟು ಸರ್ಕಸ್‌ ಮಾಡಿ ಮುಖ್ಯಮಂತ್ರಿ ಆದವರು. ಅಧಿಕಾರ ಸಿಕ್ಕಾಗ ಕೆಲವೊಂದು ತಪ್ಪುಗಳನ್ನು ಮಾಡಿರುವುದು ಸತ್ಯ. ಆದರೆ ಯಡಿಯೂರಪ್ಪ ಕೊನೆಯ ಬಾರಿಗೆ ಆಪರೇಷನ್‌‌ ಕಮಲ ಮಾಡಿ ಅಧಿಕಾರ ಹಿಡಿದಿದ್ದರು. ಮುಖ್ಯಮಂತ್ರಿ ಆಗುವಾಗಲೇ ವಿರೋಧ ವ್ಯಕ್ತಪಡಿಸಿದ್ದ ಬಿಜೆಪಿ ಹೈಕಮಾಂಡ್‌ ವರ್ಷ ಮುಗಿಯುವ ಹೊತ್ತಿಗೆ ಭಾರೀ ಒತ್ತಡ ಹೇರಿ ರಾಜೀನಾಮೆ ಕೊಡುವಂತೆ ಮಾಡಿದ್ದರು. ರಾಜೀನಾಮೆ ನೀಡುವ ಮುನ್ನ ಬಹಿರಂಗ ಸಭೆಯಲ್ಲಿ ಗಳಗಳನೆ ಕಣ್ಣೀರು ಹಾಕಿದ್ದರು. ಆ ಬಳಿಕ ನಾನೇ ಖುದ್ದು ರಾಜೀನಾಮೆ ನೀಡಿದ್ದೇನೆ. ಭಾರತೀಯ ಜನತಾ ಪಾರ್ಟಿ ನನಗೆ ಎಲ್ಲವನ್ನೂ ಕೊಟ್ಟಿದೆ. ನಾನು ಸಂತೋಷವಾಗಿದ್ದೇನೆ ಎಂದು ಯಡಿಯೂರಪ್ಪ ಮೂಲಕ ಹೇಳಿಕೆ ಕೊಡಿಸಿದ್ದರು. ಬಿಜೆಪಿ ನಾಯಕರೂ ಕೂಡ ಹೈಕಮಾಂಡ್‌ ಮಾತಿಗೆ ತಕ್ಕಂತೆ ಕುಣಿಯುವ ಕೆಲಸ ಮಾಡಿದ್ದರು. ಆದರೆ ಚುನಾವಣೆಯಲ್ಲಿ ಸೋತ ಬಳಿಕ ಯಡಿಯೂರಪ್ಪ ಅವರನ್ನು ನಡೆಸಿಕೊಂಡ ಬಗ್ಗೆ ಮಾಹಿತಿಗಳು ಬಹಿರಂಗ ಆಗುತ್ತಿವೆ.

ಯಡಿಯೂರಪ್ಪನನ್ನು ಬಳಸಿಕೊಳ್ಳುತ್ತಿರುವ ಉದ್ದೇಶ ಏನು..?

ಯಡಿಯೂರಪ್ಪ ಅವರನ್ನು ಭಾರತೀಯ ಜನತಾ ಪಾರ್ಟಿ ಚುನಾವಣೆ ತನಕ ಬಳಸಿಕೊಂಡು ಸುಮ್ಮನಾಗುವ ಉದ್ದೇಶ ಹೊಂದಿತ್ತು. ಆದರೆ ರಾಜ್ಯದಲ್ಲಿ ಸದ್ಯಕ್ಕೆ ನಡೆಯುತ್ತಿರುವ ಬೆಳವಣಿಗೆ ಯಡಿಯೂರಪ್ಪ ಅವರನ್ನು ಬಳಸಿಕೊಳ್ಳುವಂತೆ ಮಾಡಿದೆ. ಕಾಂಗ್ರೆಸ್‌‌ ಗ್ಯಾರಂಟಿ ಯೋಜನೆಗಳನ್ನು ಕಾಂಗ್ರೆಸ್‌ ಜಾರಿ ಮಾಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಜನಪ್ರಿಯತೆ ಕುಗ್ಗುತ್ತಿದೆ. ಕಾಂಗ್ರೆಸ್‌ ಪಕ್ಷಕ್ಕೆ ಅಬ್ಬರದ ಪ್ರಚಾರ ಸಿಗುತ್ತಿದೆ. ಕಾಂಗ್ರೆಸ್‌ ಎದುರಿಸುವ ಶಕ್ತಿ ರಾಜ್ಯ ಬಿಜೆಪಿಯಲ್ಲಿ ಯಾವ ನಾಯಕರಿಗೂ ಇಲ್ಲದ ಕಾರಣಕ್ಕೆ ಮತ್ತೆ ಹಳೇ ಗಂಡನ ಪಾದವೇ ಗತಿ ಎನ್ನುವಂತೆ ಬಿಜೆಪಿ ಹೈಕಮಾಂಡ್‌ ಮತ್ತೆ ಯಡಿಯೂರಪ್ಪನನ್ನು ಎಳೆದು ತಂದಿದೆ. ಕಾಂಗ್ರೆಸ್‌ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುವಂತೆ ಫ್ರೀಡಂ ಪಾರ್ಕ್‌ಗೆ ಕರೆತಂದಿದೆ. ಕಾಂಗ್ರೆಸ್‌ ಗ್ಯಾರಂಟಿಗಳ ವಿರುದ್ಧ ಲೋಕಸಭಾ ಚುನಾವಣೆಗೆ ಪಕ್ಷವನ್ನು ಸಜ್ಜು ಮಾಡುವ ಹೊಣೆಯು ಬಿಜೆಪಿ ಹೈಕಮಾಂಡ್‌ ಮೇಲಿದೆ.

ಯಡಿಯೂರಪ್ಪ ಆಗ ಬೇಕಿರಲಿಲ್ಲ.. ಈಗ ಬೇಕೋ..? ಕಾಂಗ್ರೆಸ್‌ ಪ್ರಶ್ನೆ..

ಯಡಿಯೂರಪ್ಪರನ್ನು ಕಣ್ಣೀರು ಹಾಕಿಸಿ ಮುಖ್ಯಮಂತ್ರಿ ಹುದ್ದೆಯಿಂದ ಪದಚ್ಯುತಿಗೊಳಿಸಿದ್ದು ವಯಸ್ಸಿನ ಕಾರಣಕ್ಕೆ. ಇದೀಗ ಬಿಜೆಪಿ ಹೈಕಮಾಂಡ್‌ ರಾಜಕೀಯ ಕಾರಣಕ್ಕಾಗಿ ಅವರನ್ನು ಫ್ರೀಡಂ ಪಾರ್ಕಿನಲ್ಲಿ, ಬಿಸಿಲು, ಮಳೆಯಲ್ಲಿ ಯಡಿಯೂರಪ್ಪ ಅವರನ್ನು ಪ್ರತಿಭಟನೆಗೆ ಕೂರಿಸುತ್ತಿರುವುದು ನಾಚಿಕೆಗೇಡು ಎಂದು ಕಾಂಗ್ರೆಸ್‌ ಟೀಕೆ ಮಾಡಿದೆ. ಅಧಿಕಾರ ನಡೆಸಲು ಮಾತ್ರ ಯಡಿಯೂರಪ್ಪಗೆ ವಯಸ್ಸಾಗಿತ್ತೇ..? ಈಗ ಯಡಿಯೂರಪ್ಪಗೆ ಹದಿನೆಂಟನೇ ವಯಸ್ಸಿನ ಹರೆಯವೇ..? ಎಂದು ಬಿಜೆಪಿ ಕರ್ನಾಟಕಕ್ಕೆ ಪ್ರಶ್ನೆ ಹಾಕಿದೆ. ಬೇಕಾದಾಗ ಬಳಸಿ, ಬೇಡವಾದಾಗ ಬಿಸಾಡುವುದಕ್ಕೆ B. S ಯಡಿಯೂರಪ್ಪ ಅವರನ್ನು ಟಿಶ್ಯು ಪೇಪರ್ ಎಂದುಕೊಂಡಿದೆಯೇ ಬಿಜೆಪಿ..? ಎಂದು ಕಾಂಗ್ರೆಸ್‌ ಕಾಲೆಳೆದಿದೆ. ಇನ್ನು ಒಬ್ಬ ವಿಪಕ್ಷ ನಾಯಕನನ್ನು ಆಯ್ಕೆ ಮಾಡಲಾಗದ ಕರ್ನಾಟಕ ಬಿಜೆಪಿ, ರಾಜಕೀಯದಿಂದ ದೂರ ತಳ್ಳಿದ್ದ B.S ಯಡಿಯೂರರನನ್ನೇ ಮತ್ತೆ ಆಶ್ರಯಿಸಿದ್ದು ಬಿಜೆಪಿಯ ಶೋಚನೀಯ ಸ್ಥಿತಿಗೆ ಹಿಡಿದ ಕನ್ನಡಿ. ಅಗತ್ಯವಿದ್ದಾಗ ಕಾಲು ಹಿಡಿಯುವುದು, ಅಗತ್ಯವಿಲ್ಲದಾಗ ಕಾಲು ಎಳೆಯುವುದು ಬಿಜೆಪಿ ಸಂಸ್ಕೃತಿ ಎಂದು ಕುಟುಕಿದೆ. ಆದರೂ ಯಡಿಯೂರಪ್ಪ ವಿಶ್ರಾಂತಿ ಜೀವನ ಘೋಷಣೆ ಮಾಡಿದ ಬಳಿಕವೂ ರಾಜಕೀಯಕ್ಕೆ ಎಳೆಯುತ್ತಿರುವುದು ಮಾತ್ರ ಶೋಚನೀಯವೇ ಸರಿ.

ಕೃಷ್ಣಮಣಿ

Tags: Basavaraja BommaiBJPBSYbsyediyurappabyvijayendraJP NaddaNalin Kumar KateelShobha Karandlaje
Previous Post

IAS ಅಧಿಕಾರಿ ನೇಮಿಸುವ ಹುದ್ದೆಗೆ KAS ಅಧಿಕಾರಿಗಳ ನೇಮಕ..! ಇದು ಹೇಗೆ ಸಾಧ್ಯ..?

Next Post

ಗ್ಯಾರೆಂಟಿ ಜಾರಿಗೊಳಿಸದೇ ಸರ್ಕಾರ ದೋಖಾ ಮಾಡಿದೆ: ಬಸವರಾಜ ಬೊಮ್ಮಾಯಿ

Related Posts

ಶಿಕ್ಷಣೋದ್ಯಮಕ್ಕೆ ಶಿಕ್ಷಣಾರ್ಥಿಗಳೇ ಸರಕುಗಳು- ನಾ ದಿವಾಕರ ಲೇಖನ
ಅಂಕಣ

ಶಿಕ್ಷಣೋದ್ಯಮಕ್ಕೆ ಶಿಕ್ಷಣಾರ್ಥಿಗಳೇ ಸರಕುಗಳು- ನಾ ದಿವಾಕರ ಲೇಖನ

by ಪ್ರತಿಧ್ವನಿ
April 12, 2026
0

-ನಾ ದಿವಾಕರ ( PUC ರಿಸಲ್ಟ್ ಬಂದಿದೆ. ಹೆಚ್ಚಿನ ಮಾರ್ಕ್ಸ್ ತೆಗೆದುಕೊಂಡು ಪಾಸ್ ಆದ ವಿದ್ಯಾರ್ಥಿಗಳನ್ನ ಹೊಗಳಿ ಹೊಗಳಿ ಹೊನ್ನ ಶೂಲಕ್ಕೇರಿಸಿ, ಆ ಮೂಲಕ ಫೇಲಾದವರ, ಕಡಿಮೆ...

Read moreDetails
ಹೆಣ್ಣು ದನಿಗೆ ದನಿಯಾಗುವ ಸಾಹಿತ್ಯ ಹೂರಣ-ನಾ ದಿವಾಕರ ಲೇಖನ

ಹೆಣ್ಣು ದನಿಗೆ ದನಿಯಾಗುವ ಸಾಹಿತ್ಯ ಹೂರಣ-ನಾ ದಿವಾಕರ ಲೇಖನ

April 10, 2026
ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

April 9, 2026
ಮಹತ್ಮಾ ಗಾಂಧಿ ನರೇಗಾ ಅಸ್ತಮಯ, ವಿಬಿಜಿ-ರಾಮ್ ಜಿ ಉದಯ: ಕರ್ನಾಟಕದ ಗ್ರಾಮೀಣ ಬದುಕಿನಲ್ಲಿ ಉದ್ಯೋಗದ ಬಿಕ್ಕಟ್ಟು

ಮಹತ್ಮಾ ಗಾಂಧಿ ನರೇಗಾ ಅಸ್ತಮಯ, ವಿಬಿಜಿ-ರಾಮ್ ಜಿ ಉದಯ: ಕರ್ನಾಟಕದ ಗ್ರಾಮೀಣ ಬದುಕಿನಲ್ಲಿ ಉದ್ಯೋಗದ ಬಿಕ್ಕಟ್ಟು

April 7, 2026
ಐಕ್ಯತೆಯ ಹೊತ್ತಿನಲ್ಲಿ ವಿಘಟನೆಯ ಸದ್ದು- ಭಾಗ 4

ಐಕ್ಯತೆಯ ಹೊತ್ತಿನಲ್ಲಿ ವಿಘಟನೆಯ ಸದ್ದು- ಭಾಗ 4

April 6, 2026
Next Post
Basavaraja Bommai : ಸಂಪುಟ ತೀರ್ಮಾನಕ್ಕೆ ಕಾದು ನೋಡೋಣ ; ಬಸವರಾಜ ಬೊಮ್ಮಾಯಿ

ಗ್ಯಾರೆಂಟಿ ಜಾರಿಗೊಳಿಸದೇ ಸರ್ಕಾರ ದೋಖಾ ಮಾಡಿದೆ: ಬಸವರಾಜ ಬೊಮ್ಮಾಯಿ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada