ಮೇಷ ರಾಶಿಯ ಈ ದಿನದ ಭವಿಷ್ಯ

ಮೇಷ ರಾಶಿಯವರಿಗೆ ಇಂದು ಹೆಚ್ಚು ಕೆಲಸದ ಒತ್ತಡ ಉಂಟಾಗುತ್ತದೆ. ಸಮಾಧಾನದಿಂದ ಇರಿ. ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಿ. ಮಕ್ಕಳ ವಿಚಾರದಲ್ಲಿ ಸಂತೋಷದ ಸುದ್ದಿ ಕೇಳುವಿರಿ.
ವೃಷಭ ರಾಶಿಯ ಈ ದಿನದ ಭವಿಷ್ಯ

ವೃಷಭ ರಾಶಿಯವರು ಮನರಂಜನೆಗಾಗಿ ಯೋಚಿಸುವ ಸಮಯ ಇದು. ಮಾನಸಿಕ ಕಿರಿ ಕಿರಿಯಿಂದ ದೂರ ಇರಲು ಪ್ರಯತ್ನಿಸಿ. ಹಣ ಹೂಡಿಕೆದಾರರಿಗೆ ಹೆಚ್ಚು ಲಾಭವಾಗಲಿದೆ. ಹೊಸಬರ ಸ್ನೇಹ ಅನಗತ್ಯ.
ಮಿಥುನ ರಾಶಿಯ ಈ ದಿನದ ಭವಿಷ್ಯ

ಮಿಥುನ ರಾಶಿಯವರಿಗೆ ಮಿತ್ರರ ಸಹಾಯದಿಂದ ಮಹತ್ವದ ಕೆಲಸವೊಂದು ಕೂಡ ಪೂರ್ಣಗೊಳ್ಳಲಿದೆ. ಸಾಂಸ್ಕ್ರತಿಕ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ. ಈ ದಿನ ಮಾನಸಿಕವಾಗಿ ನೆಮ್ಮದಿ ಹೆಚ್ಚುತ್ತದೆ. ದೂರ ಪ್ರಯಾಣದ ಬಗ್ಗೆ ಎಚ್ಚರಿಕೆ ಇರಲಿ.
ಕಟಕ ರಾಶಿಯ ಈ ದಿನದ ಭವಿಷ್ಯ

ಕಟಕ ರಾಶಿಯವರು ಕಳೆದ ಕೆಲ ಕಾಲಗಳಿಂದ ಭಾಧಿಸುತ್ತಿರುವ ಸಮಸ್ಯೆಗಳು ನಿವಾರಣೆಯಾಗುತ್ತದೆ. ಹೂಡಿಕೆಯಲ್ಲಿ ದಿಢೀರ್ ಧನ ಲಾಭವಾಗಲಿದೆ. ಉದ್ಯೋಗ ಬದಲಾವಣೆ ಸಾಧ್ಯತೆ ಹೆಚ್ಚಿದೆ. ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವ ಸಮಯ.
ಸಿಂಹ ರಾಶಿಯ ಈ ದಿನದ ಭವಿಷ್ಯ

ಸಿಂಹ ರಾಶಿಯವರಿಗೆ ಇಂದು ಪಿತ್ರಾರ್ಜಿತ ಆಸ್ತಿ ವ್ಯವಹಾರದಲ್ಲಿ ವಿವಾದಗಳು ಹೆಚ್ಚಾಗಲಿದೆ. ಎಚ್ಚರಿಕೆಯಿಂದ ನಿರ್ವಹಿಸಿ. ಆರೋಗ್ಯದಲ್ಲಿ ಚೇತರಿಕೆ ಕಾಣಲಿದೆ, ವ್ಯಾಪಾರಿಗಳಿಗೆ ಉತ್ತಮ ಲಾಭ ಸಿಗಲಿದೆ. ಗೆಳೆಯರೊಂದಿಗೆ ಉತ್ತಮ ಸಮಯ ಕಳೆಯುವಿರಿ.
ಕನ್ಯಾ ರಾಶಿಯ ಈ ದಿನದ ಭವಿಷ್ಯ

ಕನ್ಯಾ ರಾಶಿಯವರಿಗೆ ದೂರದ ಪ್ರಯಾಣದಲ್ಲಿ ಧನ ಲಾಭವಾಗಿದೆ. ಅಪರಿಚಿತ ವ್ಯಕ್ತಿಗಳೊಂದಿಗೆ ವ್ಯವಹಾರ ಸೂಕ್ತವಲ್ಲ. ಎಚ್ಚರಿಕೆಯಿಂದ ಹೆಜ್ಜೆ ಇಡಿ. ಬಹು ದಿನಗಳಿಂದ ಕಾದಿದ್ದ ಸಿಹಿ ಸುದ್ದಿಯೊಂದು ಸಿಗಲಿದೆ. ಕೌಟುಂಬಿಕವಾಗಿ ಉತ್ತಮ ಸಮಯ ಕಳೆಯುವಿರಿ.
ತುಲಾ ರಾಶಿಯ ಈ ದಿನದ ಭವಿಷ್ಯ

ತುಲಾ ರಾಶಿಯವರಿಗೆ ಇಂದು ನಿಮ್ಮ ವ್ಯಾಪಾರ-ವ್ಯವಹಾರಗಳು ಸುಲಲಿತವಾಗಿ ಸಾಗುತ್ತವೆ. ಇಂದು ನೀವು ಒಳ್ಳೆಯ ದಿನವನ್ನು ಕಳೆಯುವಿರಿ. ಕೌಟುಂಬಿಕವಾಗಿ ನೆಮ್ಮದಿ ಇರಲಿದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿಸಿದ ಫಲಿತಾಂಶ ಸಿಗಲಿದೆ.
ವೃಶ್ಚಿಕ ರಾಶಿಯ ಈ ದಿನದ ಭವಿಷ್ಯ

ವೃಶ್ಚಿಕ ರಾಶಿಯವರಿಗೆ ಕೃಷಿ ಕ್ಷೇತ್ರದಲ್ಲಿ ಉತ್ತಮ ಲಾಭ ನಿರೀಕ್ಷಿಸಬಹುದು. ಮನೆಯಲ್ಲಿ ಶುಭ ಕಾರ್ಯಗಳಿಗೆ ಸಿದ್ಧತೆಗಳು ಹೆಚ್ಚು ಇರುತ್ತದೆ. ಏನೇ ವಿಚಾರಗಳಿದ್ದರೂ ಕುಟುಂಬಸ್ಥರೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಿ.
ಧನಸ್ಸು ರಾಶಿಯ ಈ ದಿನದ ಭವಿಷ್ಯ

ಧನಸ್ಸು ರಾಶಿಯವರಿಗೆ ಇಂದು ವೃತ್ತಿ ಜೀವನದಲ್ಲಿ ಏರುಪೇರಾಗುವ ಸಾಧ್ಯತೆ ಇದೆ. ಮಾತಿನಲ್ಲಿ ಹಿಡಿತ ಇರಲಿ. ವಿದ್ಯಾರ್ಥಿಗಳಿಗೆ ಮೆಚ್ಚಿನ ವಿಷಯ ಆಯ್ದುಕೊಳ್ಳಲು ಉತ್ತಮವಾದ ಸಮಯ. ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ.
ಮಕರ ರಾಶಿಯ ಈ ದಿನದ ಭವಿಷ್ಯ

ಮಕರ ರಾಶಿಯವರಿಗೆ ಹೊಸ ಕೆಲಸ ಅಥವಾ ಯೋಜನೆ ಆರಂಭಿಸಲು ಶುಭದಿನವಾಗಿದೆ. ಉದ್ಯೋಗಸ್ಥರಿಗೆ ಕೆಲಸದ ಒತ್ತಡ ಹೆಚ್ಚುತ್ತದೆ. ಹಣ ಹೂಡಿಕೆ ಮಾಡುವವರಗೆ ಲಾಭದ ನಿರೀಕ್ಷೆ. ಆರೋಗ್ಯದಲ್ಲಿ ಸುಧಾರಣೆಯಾಗಲಿದೆ.
ಕುಂಭ ರಾಶಿಯ ಈ ದಿನದ ಭವಿಷ್ಯ

ಕುಂಭ ರಾಶಿಯವರಿಗೆ ಇಂದು ವ್ಯವಹಾರದಲ್ಲಿ ಉತ್ತಮ ಅಭಿವೃದ್ಧಿಯಾಗಲಿದೆ . ಇಂದು ನೀವು ಹೆಚ್ಚು ಶ್ರಮವಹಿಸಿ ಕೆಲಸ ಮಾಡಬೇಕಾಗಿದೆ. ಅನಿರೀಕ್ಷಿತ ಧನಲಾಭದ ಸಾಧ್ಯತೆ ಹೆಚ್ಚಿದೆ.
ಮೀನ ರಾಶಿಯ ಈ ದಿನದ ಭವಿಷ್ಯ

ಮೀನ ರಾಶಿಯವರಿಗೆ ಇಂದು ಕೌಟುಂಬಿಕವಾಗಿ ಏರುಪೇರುಗಳಾಗುವ ಸಾಧ್ಯತೆ ಇದೆ. ಮಾತು ನಡೆ ನುಡಿಯಲ್ಲಿ ಎಚ್ಚರಿಕೆ ಇರಲಿ. ಟ್ರಾವೆಲ್ಸ್ ವ್ಯವಹಾರದಲ್ಲಿ ಒತ್ತಡ ಹೆಚ್ಚಾಗುತ್ತದೆ. ಕೋರ್ಟ್ ಕಚೇರಿ ಕೆಲಸಗಳಲ್ಲಿ ಜಯವಾಗಲಿದೆ.











