ಅದು ಭಾರತದ ಟಾಪ್ 10 ಪುರಾತನ ಮರಗಳಲ್ಲಿ ಒಂದು. ಬೆಂಗಳೂರಿನ ಹಿರಿಮೆ ಪ್ರತೀಕ ನಮ್ಮ ದೊಡ್ಡ ಆಲದ ಮರಕ್ಕೆ ಇದೀಗ ಆತಂಕ ಎದುರಾಗಿದೆ.
ಕಳೆದೊಂದು ವಾರದ ಮಳೆಗೆ ಮರದ ಒಂದು ಭಾಗ ಧರೆಗುರುಳಿದೆ. ಪಾರ್ಕ್ ಅಂಗಾತ ಮಲಗಿರುವ ದೊಡ್ಡ ಆಲದ ಮರ ಇದೀಗ ಅಪಾಯದಂಚಿನ್ನಲ್ಲಿದೆ. ಹೌದು, ಭಾರತದ ಪುರಾತನ ಆಲದ ಮರಗಳಲ್ಲೇ ಆರನೆಯ ಸ್ಥಾನ ಹೊಂದಿರುವ ಆಲದ ಮರ ಇದಾಗಿದ್ದು. 400 ವರ್ಷಗಳಷ್ಟು ವಯಸ್ಸಾಗಿರುವ ಈ ವಿರಳ, ಅಪರೂಪದ ಮರದ ಒಂದು ಭಾಗ ಮಳೆ, ಬಿರುಗಾಳಿಗೆ ನೆಲಕ್ಕುರುಳಿದೆ.
ದೇಶದಲ್ಲಿ ಅತಿ ದೊಡ್ಡ ಆಲದ ಮರದಲ್ಲಿ ಇದೂ ಒಂದು. ದೇಶದ ಟಾಪ್ 10 ಬೃಹತ್ ಮರಗಳಲ್ಲಿ ಈ ದೊಡ್ಡ ಆಲದ ಮರ ಕೂಡ ಇದೆ. ಕೇತೋಹಳ್ಳಿ ಪಂಚಾಯತಿ ವ್ಯಾಪ್ತಿಯ ಈ ಮರ ಕಳೆದೊಂದು ವಾರದಿಂದ ಸುರಿದ ಮಳೆಗೆ ಬೇರು ಸಹಿತ ಧರೆಗೆ ಉರುಳಿದೆ. ಕಳೆದೊಂದು ತಿಂಗಳ ಹಿಂದೆ ಆಲದ ಮರದ ಮತ್ತೊಂದು ಭಾಗ ನೆಲಕ್ಕುರುಳಿತ್ತು.
ಒಂದೊಂದಾಗಿ ಬೃಹತ್ ಆಲದ ಮರದ ಭಾಗ ಧರೆಗುರುಳುತ್ತಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ತೋಟಗಾರಿಕೆ ವ್ಯಾಪ್ತಿಯಲ್ಲಿ ಬರುವ ಈ ಬೃಹತ್ ಆಲದ ಮರ ಕೊಂಬೆಯ ಬಳ್ಳಿ (ಬಳಲು) ಮತ್ತೊಂದು ಮರವಾಗಿ ಬೆಳೆಯುವ ವೇಳೆ ಬೇರು ಉತ್ತಮಗೊಳಿಸದೇ ತೋಟಗಾರಿಕೆ ನಿರ್ಲಕ್ಷ್ಯ ಮಾಡಿದೆ ಎಂದು ಸ್ಥಳೀಯ ಗ್ರಾಮಸ್ಥರು ಆರೋಪಿಸುತ್ತಾರೆ.
ಈ ಬೃಹತ್ ದೊಡ್ಡ ಆಲದ ಮರದ ಕೊಂಬೆಯ ಬಳ್ಳಿ (ಬಳಲು) ಯಿಂದಲೇ ಮತ್ತೊಂದು ಗಿಡ ಮರವಾಗಿ ಬೆಳೆಯುತ್ತೆ. ಇದೀಗ ದೊಡ್ಡ ಆಲದ ಮರ ಒಂದು ಭಾಗ ಧರೆಗೆ ಉರುಳಿದ ಹಿನ್ನೆಲೆ ಸ್ಥಳಕ್ಕೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು, ತಜ್ಞ ವಿಜ್ಞಾನಿಗಳು ಭೇಟಿ ನೀಡಿದ್ದಾರೆ. ಧರೆಗುರುಳಿದ ದೊಡ್ಡ ಆಲದ ಮರ, ವಾಲಿದ ಜಾಗವನ್ನು ತಜ್ಞ ಸಸ್ಯಶಾಸ್ತ್ರ ವಿಜ್ಞಾನಿಗಳು ಪರಿಶೀಲಿಸಿದರು. ಡಾ ಯಲ್ಲಪ್ಪ ನೇತೃತ್ವದ ಮೂವರು ಸಮಿತಿ ಸದಸ್ಯರು ಭೇಟಿ ನೀಡಿ ವಾಲಿದ, ಹಾನಿಯಾದ ದೊಡ್ಡ ಆಲದ ಮರ ಹಾನಿಯಾಗದಂತೆ ಕೆಲ ಸಲಹೆ ನೀಡಿದರು.
ಇಷ್ಟುಮಾತ್ರವಲ್ಲ ಕಳೆದೊಂದು ವಾರದ ಮಳೆ ಪರಿಣಾಮ ಬೆಂಗಳೂರು ಹೊರವಲಯದಲ್ಲಿ ನೂರಕ್ಕೂ ಹೆಚ್ಚು ಮರ ನೆಲಕ್ಕುರುಳಿವೆ. ದೊಡ್ಡ ಆಲದ ಮರದ ಸುತ್ತಲೂ ರಸ್ತೆ ಅಕ್ಕಪಕ್ಕದಲ್ಲಿದ್ದ ಮರ ನೆಲಕ್ಕುರುಳಿವೆ. ಒಟ್ಟಿನಲ್ಲಿ ಬೆಂಗಳೂರಿನ ಹೆಮ್ಮೆಯ ಪುರಾತನ ದೊಡ್ಡ ಆಲದ ಮರ ಸಂರಕ್ಷಿಸಣೆಯಾಗ ಬೇಕಿರುವ ಅಗತ್ಯತೆ ಇದೆ.