
ಆಟೋಮೊಬೈಲ್ (Automobile) ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಬದಲಾವಣೆ ಕ್ರಾಂತಿಯೇ ಆಗುತ್ತಿದೆ. ಅದರಲ್ಲೂ ಅತೀ ಕಡಿಮೆ ಬೆಲೆ ಹಾಗೂ ಅತೀ ಹೆಚ್ಚು ಮೈಲೇಜ್ ನೀಡುವ ಬೈಕ್‌ಗಳಲ್ಲಿ ಹಿರೋ (Hero) ಕೂಡ ಒಂದಾಗಿದ್ದು, ಇದರ ಮಾರಾಟದಲ್ಲೂ ಭಾರೀ ಪೈಪೋಟಿ ಏರ್ಪಟ್ಟಿದೆ. ಮೊದಲಿಗೆ ಹಿರೋ ಹೊಂಡಾ ಎರಡು ಒಂದೇ ಕಂಪನಿ ಆಗಿದ್ದವು. ಇದೀಗ ಇವೆರಡು ಬೇರೆ ಬೇರೆ ಆಗಿದ್ದು, ಹಿರೋ ಕಂಪನಿ ಇದೀಹ ಗುಡ್‌ನ್ಯೂಸ್‌ವೊಂದನ್ನು (Good News) ನೀಡಿದೆ.
ಮೊದಲಿನಿಂದಲೂ ಬಜಾಜ್ ಪ್ಲಾಟೀನ (Bajaj Platina) ಬಿಟ್ಟರೆ, ಭಾರತದ ಮಧ್ಯಮ ವರ್ಗದ ಹಾಗೂ ಬಡವರ್ಗದ ಜನರಿಗೆ ಒಂದು ಕಡೆಯಿಂದ ಮತ್ತೊಂದು ಕಡೆಗೆ ಕಡಿಮೆ ಖರ್ಚಿನಲ್ಲಿ ಕರೆದುಕೊಂಡು ಹೋಗುವುದಕ್ಕೆ ಸ್ಪ್ಲೆಂಡರ್ ಬೈಕ್‌ಗಿಂತ ಬೇರೆ ಯಾವುದೇ ಬೈಕ್ ಕೂಡ ಅಷ್ಟೊಂದು ಜನಪ್ರಿಯವಾಗಿ ಮುಂಚೂಣಿಯಲ್ಲಿರಲಿಲ್ಲ. ಇನ್ನು ಅತೀ ಹೆಚ್ಚು ಮಾರಾಟ ಆಗಿರುವಂತಹ ದ್ವಿಚಕ್ರ ವಾಹನಗಳಲ್ಲಿ ಸ್ಪ್ಲೆಂಡರ್ ಬೈಕ್ ಮೊದಲನೇ ಸ್ಥಾನದಲ್ಲಿತ್ತು.
ಈ ಕಾರಣದಿಂದಲೇ ಇದೀಗ ಆರ್‌ಟಿಓ (RTO) ಇಲಾಖೆ ಸ್ಪ್ಲೆಂಡರ್ ಬಳಕೆದಾರರಿಗೆ ಗುಡ್ ನ್ಯೂಸ್‌ವೊಂದನ್ನು ನೀಡಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ತುಂಬಾ ಕಡೆಗಳಲ್ಲಿ ಸಿಎನ್‌ಜಿ ಟೂಲ್ ಕಿಟ್‌ಗಳನ್ನ(CNG Tool Kit) ಬೈಕ್‌ಗಳಿಗೆ ಅಳವಡಿಸಿಕೊಂಡು ಅದರಿಂದ ಹೆಚ್ಚು ಮೈಲೇಜ್ (More Milage) ಪಡೆದುಕೊಳ್ಳುವಂತಹ ಹಾಗೂ ಕಡಿಮೆ ಖರ್ಚಿನಲ್ಲಿ(Low Budjet) ವಾಹನ ಓಡಿಸುವಂತಹ ಕೆಲಸ ಮಾಡಲಾಗುತ್ತಿದೆ. ಆದರೆ, ಇಷ್ಟು ದಿನದವರೆಗೆ ಇದು ಕಾನೂನು ಪ್ರಕಾರವಾದ ಕೆಲಸವಾಗಿರಲಿಲ್ಲ.

ಆದರೆ ಈಗ ಆರ್‌ಟಿಓ ಇದನ್ನು ಅಧಿಕೃತಗೊಳಿಸಿದೆ ಎಂಬ ಮಾಹಿತಿ ತಿಳಿದುಬಂದಿದೆ. ಹಳೆಯ ಸ್ಪ್ಲೆಂಡರ್ ಬೈಕ್‌ಗಳಿಗೆ ಆರ್‌ಟಿಓ ಅಧಿಕೃತವಾಗಿ ಪ್ರಮಾಣಿಕರಿಸಲಾಗಿರುವಂತಹ ಸಂಸ್ಥೆಗಳಲ್ಲಿ ಸಿಎನ್‌ಜಿ ಟೂಲ್ ಕಿಟ್‌ಗಳನ್ನು ಅಳವಡಿಸಿಕೊಂಡು ಓಡಿಸಬಹುದಾಗಿದೆ ಎಂಬ ಆದೇಶವನ್ನು ಜಾರಿಗೊಳಿಸಿದೆ ಎಂದು ತಿಳಿದುಬಂದಿದೆ.
ಪೆಟ್ರೋಲ್‌ಗೆ ಇಂಜಿನ್‌ಗೆ (Petrol Engine) ಹೋಲಿಕೆ ಮಾಡಿದರೆ, ಸಿಎನ್‌ಜಿ ಗ್ಯಾಸ್(CNG Gas) ಅತೀ ಕಡಿಮೆ ಬೆಲೆಯಲ್ಲಿ ಲಭ್ಯವಾಗುತ್ತದೆ. ಇನ್ನು 60ರಿಂದ 65 ಕಿಲೋ ಮೀಟರ್‌ವರೆಗೆ ಪೆಟ್ರೋಲ್‌ನಲ್ಲಿ ಸ್ಪ್ಲೆಂಡರ್ ಮೈಲೇಜ್ ಪಡೆದುಕೊಂಡರೆ, ಮತ್ತೊಂದೆಡೆ ಯಾವುದೇ ಅನುಮಾನವಿಲ್ಲದೆ 90 ಕಿಲೋ ಮೀಟರ್‌ಗಳವರೆಗೂ ಒಂದು ಕೆಜಿ ಸಿಎನ್‌ಜಿನಲ್ಲಿ(1KG CNG) ಮೈಲೇಜ್ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಹಿಂದಿನ ಕಾಲದಲ್ಲಿ ಅಷ್ಟೇ ಅಲ್ಲದೆ, ಈಗಲೂ ಕೂಡ ಹಳೆಯ ಹಿರೋ ಹೊಂಡಾ ಸ್ಪ್ಲೆಂಡರ್ ಪ್ಲಸ್ ಮಾರುಕಟ್ಟಗೆ ಬಿಟ್ಟರೂ ಕೂಡ ಹೆಚ್ಚಿನ ಜನರು ಮುಗಿಬಿದ್ದು ತೆಗೆದುಕೊಳ್ಳುತ್ತಾರೆ. ಆದ್ದರಿಂದ ಆರ್‌ಟಿಓ ಈ ಹಳೆಯ ಬೈಕ್‌ಗಳಿಗೆ ಸಿಎನ್‌ಜಿ ಇಂಜಿನ್ ಅಳವಡಿಕೆ ಮಾಡಲು ನಿರ್ಧರಿಸಿದೆ. ಇದು ಅಳವಡಿಕೆಯಾದರೆ, ಮೊದಲಿಗಿಂತಲೂ ಹೆಚ್ಚಿನ ಮೈಲೇಜ್ ನೀಡಲಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.