ಪೆಂಗ್ವಿನ್‌ಗಳ ಮೈಬಣ್ಣ ಕಪ್ಪು ಮತ್ತು ಬಿಳಿಯಿರುತ್ತದೆ. ಇದು ಕೇವಲ ಸ್ಟೈಲ್ ಒಂದೇ ಅಲ್ಲ, ಇದು ಅವುಗಳ ರಕ್ಷಾಕವಚ, ಕಪ್ಪು ಇರುವುದರಿಂದ, ಸಮುದ್ರದ ಮೇಲಿನಿಂದ ನೋಡುವ ಶತ್ರುಗಳಿಗೆ ಅವು ನೀರಿನ ಆಳದ ಕತ್ತಲೆಯಂತೆ ಕಾಣುತ್ತವೆ. ಕೆಳಗೆ ಬಿಳಿ ಇರುವುದರಿಂದ, ನೀರಿನ ಒಳಗಿನಿಂದ ನೋಡುವ ಶತ್ರುಗಳಿಗೆ ಅವು ಮೇಲಿನ ಆಕಾಶದ ಬೆಳಕಿನಂತೆ ಕಾಣುತ್ತವೆ.

ಪೆಂಗ್ವಿನ್‌ಗಳಿಗೆ ಹಲ್ಲುಗಳಿರುವುದಿಲ್ಲ. ಆದರೆ ಇವುಗಳ ಬಾಯಿ ಮತ್ತು ನಾಲಿಗೆಯ ಮೇಲೆ ಮುಳ್ಳಿನಂತಹ ರಚನೆಗಳಿರುತ್ತವೆ. ಇವು ಜಾರುವ ಮೀನುಗಳನ್ನು ಗಟ್ಟಿಯಾಗಿ ಹಿಡಿದು ನೇರವಾಗಿ ನುಂಗಲು ಸಹಾಯ ಮಾಡುತ್ತವೆ. ಪೆಂಗ್ವಿನ್‌ಗಳ ಹಿಂಡುಗಳು ಒಮ್ಮೆಗೆ ವಾರಗಳವರೆಗೆ ಸಮುದ್ರದಲ್ಲಿ ಉಳಿಯಬಹುದು.

ಪೆಂಗ್ವಿನ್‌ಗಳು ರೆಕ್ಕೆಗಳ ಬದಲಿಗೆ ಈಜುರೆಕ್ಕೆಗಳನ್ನಜ ಹೊಂದಿರುತ್ತವೆ. ಅವು ಹಾರಲು ಸಾಧ್ಯವಿಲ್ಲ, ಮತ್ತು ನೆಲದ ಮೇಲೆ ಅವು ತೂಗಾಡುತ್ತಾ ನಡೆಯುತ್ತವೆ. ಪೆಂಗ್ವಿನ್‌ಗಳು ಅಂಟಾರ್ಕ್ಟಿಕ್ ಪ್ರದೇಶಗಳಲ್ಲಿ ಅಥವಾ ಅದರ ಸಮೀಪ ಯುಗಗಳಿಂದ ವಾಸಿಸುತ್ತಿವೆ, ಅಲ್ಲಿ ಅವುಗಳಿಗೆ ಮಾನವ ಅಥವಾ ಪ್ರಾಣಿ ಶತ್ರುಗಳು ಕಡಿಮೆ. ಹೀಗಾಗಿ ಅವು ತಮ್ಮ ಎಲ್ಲಾ ಸಮಯವನ್ನು ಭೂಮಿಯಲ್ಲಿ ಅಥವಾ ನೀರಿನಲ್ಲಿ ಕಳೆಯಲು ಪ್ರಾರಂಭಿಸಿದವು.

ದೊಡ್ಡ ಗುಂಪುಗಳಲ್ಲಿ ವಾಸಿಸುತ್ತವೆ. ಪೆಂಗ್ವಿನ್‌ಗಳು ಆಶ್ಚರ್ಯಕರ ವೇಗದಲ್ಲಿ ಓಡಬಲ್ಲವು. ಬಂಡೆಗಳ ನಡುವೆ ಚುರುಕಾಗಿ ಚಲಿಸುತ್ತವೆ.ಹೆಚ್ಚಿನ ಪೆಂಗ್ವಿನ್ ಪ್ರಭೇದಗಳು ವರ್ಷಕ್ಕೊಮ್ಮೆ ಮಾತ್ರ ಸಂತಾನೋತ್ಪತ್ತಿ ಮಾಡುತ್ತವೆ. ಸಂತಾನೋತ್ಪತ್ತಿ ಅವಧಿಯಲ್ಲಿ, ಪ್ರತಿ ಪೆಂಗ್ವಿನ್ ಸಾಮಾನ್ಯವಾಗಿ ಹಿಂದಿನ ವರ್ಷದ ತನ್ನ ಸಂಗಾತಿಯನ್ನು ಮತ್ತೆ ಸೇರುತ್ತದೆ. ಜೋಡಿಯಲ್ಲಿ ಒಂದು ಪೆಂಗ್ವಿನ್ ಸತ್ತಿದ್ದರೆ, ಉಳಿದ ಪೆಂಗ್ವಿನ್ ಮತ್ತೊಂದು ಸಂಗಾತಿಯನ್ನು ಆರಿಸಿಕೊಳ್ಳುತ್ತದೆ.

ಒಂದೇ ಮೊಟ್ಟೆಯನ್ನು ಇಟ್ಟ ನಂತರ, ಹೆಣ್ಣು ಪೆಂಗ್ವಿನ್ ಆಹಾರಕ್ಕಾಗಿ ಹೊರಡುತ್ತದೆ. ಗಂಡು ಪೆಂಗ್ವಿನ್ ಸ್ವತಃ ಮೊಟ್ಟೆಗೆ ಕಾವು ಕೊಡುತ್ತದೆ, ಪೆಂಗ್ವಿನ್ ಮರಿ ಚಿಪ್ಪಿನಿಂದ ಹೊರಬರಲು 24–48 ಗಂಟೆಗಳು ಬೇಕಾಗುತ್ತದೆ.ಪೆಂಗ್ವಿನ್‌ಗಳು ಸಾಮಾನ್ಯವಾಗಿ ಕಾಡಿನಲ್ಲಿ 15–20 ವರ್ಷಗಳ ಕಾಲ ಬದುಕುತ್ತವೆ.





