
ತುಮಕೂರಿನಲ್ಲಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ವಿರೋಧಿಸಿ ನಿನ್ನೆ ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ಕುಣಿಗಲ್ ಶಾಸಕ ಡಾ.ರಂಗನಾಥ್ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಲಿಂಕ್ ಕೆನಾಲ್ ವಿಚಾರದಲ್ಲಿ ಕೆಲವು ರಾಜಕೀಯ ಹಿತಾಸಕ್ತಿಗಳು ರೈತರ ದಾರಿ ತಪ್ಪಿಸಿದ್ದಾರೆ. ಲಿಂಕ್ ಕೆನಾಲ್ ಕಮಾಗಾರಿಯನ್ನ ವಿರೋಧಿಸಿ ನಿನ್ನೆ ಪ್ರತಿಭಟನೆ ಡಿದ್ದಾರೆ,, ಇದು ಕುಣಿಗಲ್ ತಾಲೂಕಿಗೆ ಮಾಡುತ್ತಿರುವ ಅನ್ಯಾಯ.. ವೈ.ಕೆ ರಾಮಯ್ಯ ಮತ್ತು ಹುಚ್ಚಮಾಸ್ತಿಗೌಡರು ಹೋರಾಟ ನಡೆಸಿದ್ದಕ್ಕೆ ತುಮಕೂರು ಜಿಲ್ಲೆಗೆ ಹೇಮಾವತಿ ತಂದಿರುವಂತದ್ದು.. ಇಪ್ಪತ್ತು ವರ್ಷಗಳಿಂದಲೂ ಅನ್ಯಾಯ ಆಗುತ್ತಿದೆ ಎಂದಿದ್ದಾರೆ.

ಕುಣಿಗಲ್ ತಾಲೂಕಿಗೆ ಅಲಾಟ್ ಆಗಿರುವ ಮೂರು ಸಾವಿರ ಎಂಸಿಎಫ್ಟಿ ನೀರನ್ನ ಕೊಡೋಕೆ ಆಗಿಲ್ಲ. ಕೇವಲ ಮುನ್ನೂರು ನಾಲ್ಕುನೂರು ಎಂಸಿಎಫ್ಟಿ ನೀರು ಬಂದಿದೆ. ಇದಕ್ಕೆ ನಾನು ದಾಖಲೆ ಕೊಡ್ತೇನೆ. ಬಹಳಷ್ಟು ಜನ ಈ ರನ್ನ ಮಾಗಡಿ ಮತ್ತು ರಾಮನಗರಕ್ಕೆ ಕೊಂಡೊಯ್ತಾರೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ.. ನಾನು ಮತ್ತೊಮ್ಮೆ ಸ್ಪಷ್ಟಪಡಿಸುತ್ತೇನೆ ಯಾವುದೇ ಕಾರಣಕ್ಕೂ ಈ ನೀರನ್ನ ಮಾಗಡಿ ಅಥವಾ ರಾಮನಗರಕ್ಕೆ ಹೋಗಲ್ಲ.. ಈ ನೀರು ಖಂಡಿತ ಕುಣಿಗಲ್ಗೆ ಮಾತ್ರ ಸೀಮಿತ ಎಂದಿದ್ದಾರೆ.

ಮಾಗಡಿ ಶಾಸಕ ಬಾಲಕೃಷ್ಣ ಮಾತನಾಡಿ, ಹೇಮಾವತಿ ನೀರಿನ ಗಲಾಟೆ ವಿಚಾರಕ್ಕೆ ಶಾಸಕ ಹೆಚ್.ಸಿ.ಬಾಲಕೃಷ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಣ್ಣ ತಮ್ಮಂದಿರಂತೆ ನಾವು ಬಾಳಬೇಕಿದೆ. ಆದರೆ ಎಲ್ಲದಕ್ಕೂ ಕಿತ್ತಾಟ ಸರಿಯಲ್ಲ. ಅಲ್ಲಿನ ರೈತರು ನಮ್ಮ ಮಾಗಡಿಯಲ್ಲಿ ಹಾಲು ಹಾಕುತ್ತಾರೆ. ನಾವು ಅವರನ್ನ ಮುಂದೆ ತಡೆಯುತ್ತೇವೆ. ತುಮಕೂರು ಡೇರಿಯಿಂದ ಕುದೂರಿಗೆ ಹಾಲು ಬರುತ್ತೆ, ನಮಗೆ ಬೇಡ ಅದು. ಅವರು ಬೆಂಗಳೂರಿನಲ್ಲಿ ತರಕಾರಿ ಮಾರಾಟ ಮಾಡ್ತಾರೆ. ಅವರು ಬೆಂಗಳೂರಿಗೆ ಬರುವುದು ಬೇಡ. ಸುರೇಶ್ ಗೌಡ, ತುರುವೇಕೆರೆ ಕೃಷ್ಣಪ್ಪನಿಗೆ ಏನು ಮಾಡಬೇಕೋ ಮಾಡ್ತೇವೆ ಎಂದು ಎಚ್ಚರಿಸಿದ್ದಾರೆ.
ನಾವು ಕಾಯುತ್ತಿದ್ದೇವೆ, ಬೆಂಗಳೂರಿಗೆ ಬರಲಿ ಮಾಡ್ತೇವೆ ಎಂದಿರುವ ಶಾಸಕ ಬಾಲಕೃಷ್ಣ, ನಮ್ಮ ಹಕ್ಕನ್ನ ನಾವು ಕೇಳ್ತಿದ್ದೇವೆ. ದೇಶದಲ್ಲಿ ಇವರೊಬ್ಬರೇ ಬದುಕಬೇಕಾ ? ಎಂದಿದ್ದಾರೆ. ನಮಗೆ ಹೇಮಾವತಿ ನೀರು ಕೊಡಲಿಲ್ಲ ಅಂದ್ರೆ ಮುಂದೆ ಏನು ಮಾಡಬೇಕೋ ಮಾಡ್ತೇವೆ ಎಂದು ಮಾಗಡಿಯಲ್ಲಿ ಶಾಸಕ ಬಾಲಕೃಷ್ಣ ವಾಗ್ದಾಳಿ ಮಾಡಿದ್ದಾರೆ. ಹೇಮಾವತಿ ಪ್ರತಿಭಟನೆ ವೇಳೆ ನಿಷೇಧಾಜ್ಞೆ ಉಲ್ಲಂಘಿಸಿದವರ ವಿರುದ್ಧ ಎಫ್ಐಆರ್ ವಿಚಾರ, ಇಬ್ಬರು ಸ್ವಾಮೀಜಿಗಳ ವಿರುದ್ಧ ಸಹ ಎಫ್ಐಆರ್ ದಾಖಲು ಮಾಡಲಾಗಿದೆ. ಯಾವ ಸ್ವಾಮಿಗಳು ಎಂದು FIR ನಲ್ಲಿ ಉಲ್ಲೇಖಿಸದ ಪೊಲೀಸರು.

ನಿಯಮ ಉಲ್ಲಂಘಟನೆ ಮಾಡಿ ಪ್ರತಿಭಟನೆ ಮಾಡಿದ ಹಿನ್ನೆಲೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವ ಬಗ್ಗೆ ಪೊಲೀಸ್ ಉನ್ನತ ಮೂಲಗಳಿಂದ ಮಾಹಿತಿ ಸಿಕ್ಕಿದೆ. ಹೋರಾಟಗಾರರ ಮೇಲೆ ಎಫ್ಐಆರ್ ದಾಖಲು ವಿಚಾರದ ಬಗ್ಗೆ ಮಾತನಾಡಿರುವ ಬಿಜೆಪಿ ಮುಖಂಡ ದಿಲೀಪ್ ಕುಮಾರ್, ಹೋರಾಟ ಮಾಡಿದವರ ಮೇಲೆ ಎಫ್ಐಆರ್ ಹಾಕೋದು ಸಹಜ. ಆದರೆ ಸ್ವಾಮೀಜಿಗಳ ಮೇಲೂ ಎಫ್ಐಆರ್ ದಾಖಲು ಮಾಡಲು ಹುನ್ನಾರ ನಡಿತಾ ಇದೆ. ಇದರಲ್ಲಿ ಏನಾದರು ಹೆಚ್ಚು ಕಮ್ಮಿ ಆದರೆ ಅದಕ್ಕೆ ನೇರವಾಗಿ ಸರ್ಕಾರವೇ ಹೊಣೆ. ಸರ್ಕಾರಕ್ಕೆ ಉಡಾಫೆ ಉತ್ತರ ಕೊಡ್ತಿದೆ. ಮಾಧ್ಯಮಗಳ ಮೂಲಕ ನೋಡಿದ್ದೇನೆ ಎಂದಿದ್ದಾರೆ.
ರೈತರ ಕಿಚ್ಚು ಹೊರಹೊಮ್ಮಿದೆ. ಯಾವುದೇ ಕಾರಣಕ್ಕೂ ನಾವು ಈ ಕೆಲಸ ನಡೆಯೋಕೆ ಬಿಡಲ್ಲ. ಕಾನೂನು ಪ್ರಕಾರ ಮಾಡಬೇಕು ಗ್ರಾವಿಟಿ ಎಕ್ಸ್‌ಪ್ರೆಸ್ ಕೆನಾಲ್ ಮಾಡೋದು ನಿಲ್ಸಿ. ವೈಲ್ಡಿಂಗ್ ಮೂಲಕ ನೀರು ತಗೊಂಡು ಹೋಗಿ ನಮ್ಮ ಹೋರಾಟ. ವಿರೋಧದ ನಡುವೆಯೂ ಕಾಮಗಾರಿ ಮಾಡಲು ಹೊರಟರೇ, ತುಮಕೂರು ಜಿಲ್ಲೆಯ ರೈತರು ಯಾವುದೇ ಕಾರಣಕ್ಕೂ ಕೆಲಸ ಮಾಡಲು ಬಿಡಲ್ಲ. ಮಠಾಧೀಪಿಗಳು, ರೈತರ ಮುಖಂಡರೆಲ್ಲರು ಸೇರಿ ಪಕ್ಷಾತೀತವಾಗಿ ಹೋರಾಟ ಮಾಡ್ತಿರೋದು. ದು ರೈತರ ಪರ ಹೋರಾಟ. ಟೆಕ್ನಿಕಲ್ ಕಮಿಟಿಯ ವರದಿಯನ್ನು ಪಬ್ಲಿಕ್ನಲ್ಲಿ ಚರ್ಚೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಡಿ.ಕೆ ಶಿವಕುಮಾರ್ ಅವರ ಅನುಕೂಲಕ್ಕೆ ತಕ್ಕಂತೆ ಟೆಕ್ನಿಕಲ್ ರಿಪೊರ್ಟ್ ಬರೆಸಿದ್ದಾರೆ. ತುಮಕೂರು ಜಿಲ್ಲೆಯ ಜನರಿಗೆ ಮೋಸ ಮಾಡಿ, ಅವರ ಕನಸಿನ ಕೂಗು ರಾಮನಗರ ಮಾಡಲು ಮುಂದಾಗಿದ್ದಾರೆ. ಹಿಂದೆ ಟೆಕ್ನಿಕಲ್ ಕಮಿಟಿ ರಿಪೊರ್ಟ್ ಕೊಟ್ಟಿದೆ. ಇದು ಅವೈಜ್ಞಾನಿಕ ಅಂತ. ಡಿಕೆ ಶಿವಕುಮಾರ್ ನಿಜವಾಗಲು ರೈತರ ಮಗನೇ ಆಗಿದ್ದರೇ, ರೈತರ ಮೇಲೆ ಕಾಳಜಿ ಇದ್ರೆ, ವೈಲ್ಡಿಂಗ್ ಮೂಲಕ ನೀರು ತಗೊಂಡು ಹೋಗಲಿ. ಎಕ್ಸಪ್ರೇಸ್ ಕೆನಾಲ್ ಕಾಮಗಾರಿ ಕೈ ಬಿಡಬೇಕು. ಇದು ಮುಖ್ಯಮಂತ್ರಿಗಳಲ್ಲಿ ಮನವಿ. ಹಿಂದುಳಿದ ವರ್ಗಗಳ ಬಗ್ಗೆ ಕಾಳಜಿ ಇರೋರು. ಯಾರೋ ಒಬ್ಬರ ಗೊಂಬೆಯಾಗಬೇಡಿ. ಸಿದ್ದರಾಮಯ್ಯನವರೇ ನಿವೃತ್ತಿಯಾಗುವ ಕಾಲದಲ್ಲಿ ಒಳ್ಳೆಯ ಹೆಸ್ರು ತಗೊಂಡು ನಿವೃತ್ತಿ ಆಗಿ. ಇವರ ಒತ್ತಡಕ್ಕೆ ಮಣಿಯದೇ ತುಮಕೂರು ಜಿಲ್ಲೆಯ ರೈತರಿಗೆ ಅನುಕೂಲ ಮಾಡಿಕೊಡಿ ಎಂದು ಆಗ್ರಹ ಮಾಡಿದ್ದಾರೆ.
ಗೃ ಸಚಿವರು ಯಾವುದೋ ಒತ್ತಡಕ್ಕೆ ಹೇಳಿರಬಹುದು ಎಂದಿರುವ ದಿಲೀಪ್ ಕುಮಾರ್, ಪರೋಕ್ಷವಾಗಿ ಗೃಹ ಸಚಿವ ಪರಮೇಶ್ವರ್ ನಮಗೆ ಬೆಂಬಲ ಸೂಚಿಸಿದ್ದಾರೆ ಎಂದಿದ್ದಾರೆ. ಸಚಿವ ರಾಜಣ್ಣ ಅವರು ಸಹ ನಮ್ಮ ಪರ ಇದ್ದಾರೆ. ಜಿಲ್ಲೆಯ ರೈತರನ್ನು ಉಳಿಸೋಕೆ ಅವರು ಸಹ ಪ್ರಯತ್ನ ಮಾಡ್ತಿದ್ದಾರೆ ಎಂದಿದ್ದಾರೆ. ಒಟ್ಟಾರೆ ಬಿಜೆಪಿ ರೈತರನ್ನು ಒಟ್ಟುಗೂಡಿಸಿ ಹೋರಾಟ ನಡೆಸುತ್ತಿದ್ದು ಸರ್ಕಾರ ಕೂಡ ತಾತ್ಕಾಲಿಕವಾಗಿ ಮಣಿದಿದೆ. ಕಾಮಗಾರಿ ಸ್ಥಗಿತವಾಗಿದೆ.