• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, February 6, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ರಾಜ್ಯದಲ್ಲಿ ಭಾರೀ ಮಳೆ(Heavy Rain), ಹಲವು ಕಡೆ ಸಂಕಷ್ಟದ ಸರಮಾಲೆ..

ಪ್ರತಿಧ್ವನಿ by ಪ್ರತಿಧ್ವನಿ
May 21, 2024
in ಕರ್ನಾಟಕ
0
ರಾಜ್ಯದ ಈ ಜಿಲ್ಲೆಗಳಲ್ಲಿ ಇಂದು ಭಾರೀ ಮಳೆಯ ಮುನ್ಸೂಚನೆ
Share on WhatsAppShare on FacebookShare on Telegram

ರಾಜ್ಯದಲ್ಲಿ ಭಾರೀ ಮಳೆಯಾಗುತ್ತಿದ್ದು, ಮುಂಗಾರು(Monsoon) ಆರಂಭಕ್ಕೂ ಮುನ್ನವೇ ರಾಜ್ಯದ ಜಲಾಶಯಗಳು ಭರ್ತಿಯಾಗುವ ಲಕ್ಷಗಳು ಗೋಚರಿಸುತ್ತಿವೆ. ಕಾವೇರಿ(Kaveri) ನದಿ ಉಗಮ ಸ್ಥಾನ ಕೊಡಗಿನಲ್ಲಿ(Kodagu) ಮಳೆ ಪ್ರಮಾಣ ಹೆಚ್ಚಳವಾಗಿದ್ದು, ಮಳೆಯ ಆರ್ಭಟಕ್ಕೆ ರಸ್ತೆ ಕೊಚ್ಚಿಹೋದ ಘಟನೆ ಕೊಪ್ಪ ಸಮೀಪದ ಹಾರನಹಳ್ಳಿ ನಡೆದಿದೆ. ಹಳ್ಳದ ನೀರು ಹರಿಯುವ ಸೇತುವೆ(Bridge) ಪಕ್ಕದಲ್ಲಿ ಮಣ್ಣು ಕೊಚ್ಚಿ ಹೋಗಿತ್ತು. ಆ ಬಳಿಕ ಜನರು ನೋಡುತ್ತಿದಂತೆಯೇ ರಸ್ತೆ ಸಂಪೂರ್ಣ ಕೊಚ್ಚಿಕೊಂಡು ಹೋಗಿದೆ. ಹಲವು ಗ್ರಾಮಗಳಿಗೆ ತೆರಳುವ ಮಾರ್ಗ ಇದಾಗಿದ್ದು, ಹಾರನಹಳ್ಳಿ ಗ್ರಾಮದಿಂದ ಕುಶಾಲನಗರ(Kushalnagar) ಮತ್ತು ಪಿರಿಯಾಪಟ್ಟಣಕ್ಕೆ(Piriyapatanam) ತೆರಳುವ ರಸ್ತೆ ಸಂಪರ್ಕ ಸ್ಥಗಿತವಾಗಿದೆ.

ADVERTISEMENT

ಕಾಫಿನಾಡು ಚಿಕ್ಕಮಗಳೂರಿನಲ್ಲಿ(Chikamanagalore) ಮುಂಗಾರು ಪೂರ್ವ ಮಳೆ ಆರ್ಭಟ ಜೋರಾಗಿದ್ದು, ವರುಣಾರ್ಭಟಕ್ಕೆ ಸಾಲು ಸಾಲು ಅವಾಂತರಗಳು ಸೃಷ್ಟಿಯಾಗಿವೆ. ಬಿರುಗಾಳಿ ಸಹಿತ ಸುರಿದ ಧಾರಾಕಾರ ಮಳೆಗೆ ಬೃಹತ್ ಮರಗಳು ಧರೆಗುರುಳಿದ ಘಟನೆ ನಡೆದಿದೆ. ರಾಜ್ಯ ಹೆದ್ದಾರಿಗೆ ಅಡ್ಡಲಾಗಿ ಬೃಹತ್ ಮರ ಬಿದ್ದ ಪರಿಣಾಮ ನಾಲ್ಕು ವಿದ್ಯುತ್ ಕಂಬಗಳು(Light Poles) ಮುರಿದು ಬಿದ್ದಿವೆ. ತರೀಕೆರೆ ತಾಲೂಕಿನ ತಾವರೆಕೆರೆ(Tavarkere) ಗ್ರಾಮದ ಬಳಿ ಘಟನೆ ನಡೆದಿದ್ದು, ತರೀಕೆರೆ, ಅಜ್ಜಂಪುರ ರಾಜ್ಯ ಹೆದ್ದಾರಿಯಲ್ಲಿ ಸಂಚಾರ ವ್ಯವಸ್ಥೆ ಕೆಲಕಾಲ ಅಸ್ತವ್ಯಸ್ತ ಆಗಿತ್ತು. ರಾತ್ರಿಪೂರ್ತಿ ವಿಪತ್ತು ನಿರ್ವಹಣಾ ತಂಡ ಹಾಗು ಪೊಲೀಸ್​ ಸಿಬ್ಬಂದಿ ಮರ ಹಾಗು ವಿದ್ಯುತ್ ಕಂಬಗಳ ತೆರವು ಮಾಡಿದ್ದಾರೆ.

ಬಯಲು ಸೀಮೆಯಲ್ಲೂ ಮಳೆಯ ಅಬ್ಬರ ಜೋರಾಗಿದೆ. ಕಡೂರು, ತರೀಕೆರೆ ತಾಲೂಕಿನಾದ್ಯಂತ ವರುಣನ(Varuna) ಆರ್ಭಟ ಜೋರಾಗಿದ್ದು, ನಿನ್ನೆ ಸಂಜೆಯಿಂದ ಸುರಿದ ಭಾರೀ ಮಳೆ ಸಾಲು ಸಾಲು ಅವಾಂತರ ಸೃಷ್ಟಿಯಾಗಿದ್ದು, ಕಡೂರು ತಾಲೂಕಿನ ಕೆರೆಸಂತೆ, ಹೇಮರಿ ಭಾಗದಲ್ಲಿ ಭಾರೀ ಮಳೆಯಾಗಿದೆ. ಭಾರೀ ಮಳೆಯಿಂದಾಗಿ ಶುಂಠಿ(Ginger) ಬೆಳೆಗಾರರು ಕಂಗಾಲಾಗಿದ್ದಾರೆ. ಜಮೀನಿಗೆ ಭಾರೀ ಪ್ರಮಾಣದ ನೀರು ನುಗ್ಗಿದ್ದರಿಂದ ಬೆಳೆ ನಾಶವಾಗುವ ಭೀತಿ ಎದುರಾಗಿದೆ. ಬೆಂಗಳೂರು-ಹೊನ್ನಾವರ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್(Traffic Jam) ಸೃಷ್ಟಿಯಾಗಿದ್ದು, ರಾಷ್ಟ್ರೀಯ ಹೆದ್ದಾರಿಯಲ್ಲಿ 2-3 ಅಡಿ ನೀರು ಸಂಗ್ರಹವಾಗಿದೆ.

ದೊಡ್ಡಬಳ್ಳಾಪುರದಲ್ಲಿ(Dodballapur) ರಾತ್ರಿ ಸುರಿದ ಮಳೆಗೆ ಮನೆಗಳು ಹಾನಿಯಾಗಿವೆ. ಸುತ್ತಮುತ್ತಲಿನ ಗುಂಡಿಗಳಿಗೆ ಮಳೆ ನೀರು ತುಂಬಿಕೊಂಡ ಪರಿಣಾಮ ದೊಡ್ಡಬಳ್ಳಾಪುರ ತಾಲೂಕಿನ ಅಜ್ಜನಕಟ್ಟೆಯಲ್ಲಿ ದಲಿತ ಕುಟುಂಬಗಳು ವಾಸವಿರುವ ಕಾಲೋನಿಗೆ ನೀರು ನುಗ್ಗಿದೆ. 20ಕ್ಕೂ ಹೆಚ್ಚು ಕುಟುಂಬಗಳು ವಾಸವಿರುವ ಕಾಲೋನಿಗೆ ಜಲದಿಗ್ಬಂಧನ ಆಗಿದ್ದು, ಜನರ ಓಡಾಟಕ್ಕೂ ಅಡ್ಡಿಯಾಗಿದೆ. ಕೆಸರಲ್ಲಿ ಬೀಳುವ ಆತಂಕದಲ್ಲಿಯೇ ಜನರು ಓಡಾಡುವಂತಾಗಿದೆ. ಮಳೆ ನೀರು ನುಗ್ಗಿದ್ರಿಂದ ರಾತ್ರಿ ವೇಳೆ ಮನೆಗೆ ಹಾವು, ಚೇಳು(Scorpion) ಬರುತ್ತಿವೆ ಎಂದು ಕಾಲೋನಿಯ(Colony) ನಿವಾಸಿಗಳು ಆರೋಪಿಸಿದ್ದಾರೆ.

Tags: heavyrainKarnatakaRain
Previous Post

ಅಹಮದಾಬಾದ್(Ahmedabad) ನಲ್ಲಿ ಆರ್ ಸಿಬಿ(RCB) ಆಟಗಾರರಿಗೆ ಭರ್ಜರಿ ಸ್ವಾಗತ

Next Post

ಹುಣಸೂರಲ್ಲಿ ಭಾರಿ ಮಳೆ(Heavy Rain).. ಅನ್ನದಾತರ ಬೆಳೆಗಳು ಸರ್ವನಾಶ

Related Posts

ಸೈಬರ್ ದಂಧೆಗೆ ಸಿಐಡಿ ಬಿಗ್‌ ಶಾಕ್: 13 ಮಾಸ್ಟರ್ ಮೈಂಡ್‌ಗಳ ಬಂಧನ
Top Story

ಸೈಬರ್ ದಂಧೆಗೆ ಸಿಐಡಿ ಬಿಗ್‌ ಶಾಕ್: 13 ಮಾಸ್ಟರ್ ಮೈಂಡ್‌ಗಳ ಬಂಧನ

by ಪ್ರತಿಧ್ವನಿ
February 6, 2026
0

ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸೈಬರ್ ಅಪರಾಧಗಳ ವಿರುದ್ಧ ಸಿಐಡಿ(CID )ಸೈಬರ್ ಕ್ರೈಂ( Cyber Crime) ವಿಭಾಗ ಭಾರೀ ಕಾರ್ಯಾಚರಣೆ ನಡೆಸಿದೆ. ಮ್ಯೂಲ್ ಅಕೌಂಟ್‌ಗಳ ಮೂಲಕ...

Read moreDetails
Daily Horoscope February 6: ಇಂದು ಸಕಲ ಸಂಪತ್ತನ್ನು ಆಕರ್ಷಿಸುವ ರಾಶಿಗಳಿವು..!

Daily Horoscope February 6: ಇಂದು ಸಕಲ ಸಂಪತ್ತನ್ನು ಆಕರ್ಷಿಸುವ ರಾಶಿಗಳಿವು..!

February 6, 2026
BIG BREAKING: ಮಾಲೂರು ಶಾಸಕರಾಗಿ ನಂಜೇಗೌಡ ಮುಂದುವರಿಕೆಗೆ ಸುಪ್ರೀಂ ಅಸ್ತು

BIG BREAKING: ಮಾಲೂರು ಶಾಸಕರಾಗಿ ನಂಜೇಗೌಡ ಮುಂದುವರಿಕೆಗೆ ಸುಪ್ರೀಂ ಅಸ್ತು

February 5, 2026
Oracle Layoffs: ಒರಾಕಲ್‌ನಲ್ಲಿ ಭಾರೀ ಲೇ-ಆಫ್ ಪ್ಲ್ಯಾನ್: 20–30 ಸಾವಿರ ಉದ್ಯೋಗಿಗಳಿಗೆ ಬಿಗ್‌ ಶಾಕ್‌

Oracle Layoffs: ಒರಾಕಲ್‌ನಲ್ಲಿ ಭಾರೀ ಲೇ-ಆಫ್ ಪ್ಲ್ಯಾನ್: 20–30 ಸಾವಿರ ಉದ್ಯೋಗಿಗಳಿಗೆ ಬಿಗ್‌ ಶಾಕ್‌

February 5, 2026
ಜೈಲು ಅಕ್ರಮ ಕಡಿವಾಣಕ್ಕೆ ಮಾಸ್ಟರ್ ಪ್ಲಾನ್

ಜೈಲು ಅಕ್ರಮ ಕಡಿವಾಣಕ್ಕೆ ಮಾಸ್ಟರ್ ಪ್ಲಾನ್

February 5, 2026
Next Post
ಹುಣಸೂರಲ್ಲಿ ಭಾರಿ ಮಳೆ(Heavy Rain).. ಅನ್ನದಾತರ ಬೆಳೆಗಳು ಸರ್ವನಾಶ

ಹುಣಸೂರಲ್ಲಿ ಭಾರಿ ಮಳೆ(Heavy Rain).. ಅನ್ನದಾತರ ಬೆಳೆಗಳು ಸರ್ವನಾಶ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada