• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 11, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಭಾರತೀಯ ಮುಸ್ಲಿಮರಿಗೂ ಜಿನ್ನಾಗೂ ಯಾವ ಸಂಬಂಧವೂ ಇಲ್ಲ, ನಾವು ದ್ವಿರಾಷ್ಟ್ರ ಸಿದ್ಧಾಂತ ವಿರೋಧಿಸಿ ಈ ದೇಶದಲ್ಲಿ ನಿಂತವರು – ಓವೈಸಿ

Any Mind by Any Mind
November 2, 2021
in ದೇಶ
0
ಭಾರತೀಯ ಮುಸ್ಲಿಮರಿಗೂ ಜಿನ್ನಾಗೂ ಯಾವ ಸಂಬಂಧವೂ ಇಲ್ಲ, ನಾವು ದ್ವಿರಾಷ್ಟ್ರ ಸಿದ್ಧಾಂತ ವಿರೋಧಿಸಿ ಈ ದೇಶದಲ್ಲಿ ನಿಂತವರು – ಓವೈಸಿ
Share on WhatsAppShare on FacebookShare on Telegram

ಪಾಕಿಸ್ತಾನ ರಾಷ್ಟ್ರಪಿತ ಮಹಮ್ಮದ್‌ ಅಲಿ ಜಿನ್ನಾರನ್ನು ಭಾರತದ ಸ್ವಾತಂತ್ರ್ಯ ಹೋರಾಟಗಾರ ಎಂದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್ ಅವರನ್ನು, ಎಐಎಂಐಎಂ ಸಂಸದ ‌ಅಸಾದುದ್ದೀನ್‌ ಓವೈಸಿ ತರಾಟೆಗೆ ಎಳೆದಿದ್ದಾರೆ.

ADVERTISEMENT

ಅಖಿಲೇಶ್‌ ಹೇಳಿಕೆಯನ್ನು ಬೇಜವಾಬ್ದಾರಿ ಹೇಳಿಕೆ ಎಂದು ಕರೆದಿರುವ ಓವೈಸಿ, ಇಂತಹ ಹೇಳಿಕೆಗಳ ಮೂಲಕ ಚುನಾವಣೆಯಲ್ಲಿ ಅಲ್ಪಸಂಖ್ಯಾತರ ಮತಗಳನ್ನು ಪಡೆಯಬಹುದು ಎಂದು ಭಾವಿಸಿದ್ದರೆ ಅದು ತಪ್ಪು ಕಲ್ಪನೆ. ಭಾರತೀಯ ಮುಸ್ಲಿಮರಿಗೂ ಮೊಹಮ್ಮದ್ ಅಲಿ ಜಿನ್ನಾಗೂ ಏನೂ ಸಂಬಂಧವಿಲ್ಲ, ಹಾಗಾಗಿ ಜಿನ್ನಾನ ಹೆಸರು ಉಲ್ಲೇಖಿಸುತ್ತಾ ಮುಸ್ಲಿಮರನ್ನು ಓಲೈಸಲು ಬರಬೇಡಿ ಎಂದು ಒವೈಸಿ ವಾಗ್ದಾಳಿ ನಡೆಸಿದ್ದಾರೆ.



ಭಾರತೀಯ ಮುಸ್ಲಿಮರು ಜಿನ್ನಾ ಅವರ ದ್ವಿರಾಷ್ಟ್ರ ಸಿದ್ಧಾಂತವನ್ನು ತಿರಸ್ಕರಿಸಿದವರು. ಪಾಕಿಸ್ತಾನಕ್ಕೆ ಹೋಗುವ ಆಯ್ಕೆಯನ್ನು ತಿರಸ್ಕರಿಸಿ ಭಾರತದಲ್ಲೇ ನೆಲೆಸಿದವರು. ಹೀಗಾಗಿ ಭಾರತೀಯ ಮುಸ್ಲಿಮರಿಗೂ ಜಿನ್ನಾ ಅವರಿಗೂ ಸಂಬಂಧ ಕಲ್ಪಿಸುವುದು ಅಸಂಬದ್ಧವೆಂದು ಸಮಾಜವಾದಿ ಪಕ್ಷದ ಮುಖ್ಯಸ್ಥನ ವಿರುದ್ಧ ಓವೈಸಿ ಹರಿಹಾಯ್ದಿದ್ದಾರೆ.


ಅಖಿಲೇಶ್ ಯಾದವ್ ಇತಿಹಾಸವನ್ನು ಸರಿಯಾಗಿ ಅರಿತಿಲ್ಲ ಎಂಬುದು ಈ ಸಂಗತಿಯಿಂದ ಗೊತ್ತಾಗುತ್ತದೆ. ಜಿನ್ನಾ ಅವರನ್ನು ಹೊಗಳಿ ಭಾರತೀಯ ಮುಸ್ಲಿಮರನ್ನು ಓಲೈಸಬಹುದು ಎಂದು ಭಾವಿಸಿದ್ದರೆ ಅದು ಅವರ ಮೂರ್ಖತನವಷ್ಟೇ. ಭಾರತದ ಸ್ವಾತಂತ್ರ್ಯ ಹೋರಾಟಗಾರರೊಂದಿಗೆ ಜಿನ್ನಾರನ್ನು ಸೇರಿಸುವುದು, ಅವರನ್ನು ಜಿನ್ನಾ ಅವರನ್ನು ಹೋಲಿಕೆ ಮಾಡುವುದು ಹಾಸ್ಯಾಸ್ಪದ ಎಂದು ಓವೈಸಿ ಹೇಳಿದ್ದಾರೆ.

ಇಂತಹ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಸಿ ಉತ್ತರ ಪ್ರದೇಶದ ಜನರ ನೈಜ ಸಮಸ್ಯೆಗಳ ಬಗ್ಗೆ ಅಖಿಲೇಶ್ ಚರ್ಚೆ ಮಾಡಬೇಕು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ತಮ್ಮನ್ನು ಯಾವ ಕಾರಣಕ್ಕಾಗಿ ಮತದಾರರು ತಿರಸ್ಕರಿಸಿದ್ದಾರೆ ಎಂಬುದನ್ನು ಅವರು ಮನವರಿಕೆ ಮಾಡಿಕೊಳ್ಳಬೇಕು ಎಂದು ಒವೈಸಿ ಸಲಹೆ ನೀಡಿದ್ದಾರೆ.

ಉತ್ತರ ಪ್ರದೇಶದ  ಹರ್ದೋಹಿಯಲ್ಲಿ ಮಾತನಾಡುತ್ತಾ ಮಹಾತ್ಮ ಗಾಂಧಿ, ಸರ್ದಾರ್ ಪಟೇಲ್, ಜವಾಹರಲಾಲ್ ನೆಹರೂ ಹಾಗೂ ಮೊಹಮ್ಮದ್ ಅಲಿ ಜಿನ್ನಾ ಒಂದೇ ಸಂಸ್ಥೆಯಿಂದ ಬ್ಯಾರಿಸ್ಟರ್ ಪದವಿ ಪಡೆದವರು. ಈ ಎಲ್ಲರೂ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು ಎಂದು ಅಖಿಲೇಶ್ ಯಾದವ್ ಹೇಳಿದ್ದರು.

ಜಿನ್ನಾರನ್ನು ಭಾರತದ ಸ್ವಾತಂತ್ರ್ಯ ಹೋರಾಟಗಾರರೊಂದಿಗೆ ಸೇರಿಸಿರುವ ಅಖಿಲೇಶ್‌ ಹೇಳಿಕೆಗೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಅಖಿಲೇಶ್‌ ವಿರುದ್ಧ ಬಿಜೆಪಿ ತೀವ್ರ ಹರಿಹಾಯ್ದಿದ್ದು, ಭಾರತವನ್ನು ಮತ್ತೊಮ್ಮೆ ಒಡೆಯುವವರೊಂದಿಗೆ ಅಖಿಲೇಶ್‌ ಕೈಜೋಡಿಸಿದ್ದಾರೆ ಎಂದು ಯೋಗಿ ಆದಿತ್ಯನಾಥ್‌ ಹೇಳಿದ್ದರು.

Tags: BJPಅಖಿಲೇಶ್ ಯಾದವ್‌ಅಸಾದುದ್ದೀನ್‌ ಓವೈಸಿಓವೈಸಿಜವಾಹರಲಾಲ್ ನೆಹರೂಬಿಜೆಪಿಮಹಾತ್ಮ ಗಾಂಧಿಮೊಹಮ್ಮದ್ ಅಲಿ ಜಿನ್ನಾಯೋಗಿ ಆದಿತ್ಯನಾಥ್ಸರ್ದಾರ್ ಪಟೇಲ್
Previous Post

ಪುನೀತ್ ರಾಜಕುಮಾರ್ ಮನೆಯಿಂದ CCTV ದೃಶ್ಯ

Next Post

ಹಾನಗಲ್‌ ಉಪಚುನಾವಣೆ ಗೆಲುವಿಗೆ, ಕ್ಷೇತ್ರದ ಮತದಾರರಿಗೆ ಸಲ್ಯೂಟ್‌ ಮಾಡಿದ : DK Shivakumar

Related Posts

ಮೋದಿಗೆ ಹತ್ಯೆ ಸಂಚು ಆರೋಪ: ಬಿಹಾರದಲ್ಲಿ ಮೂವರು ಬಂಧನ, ಸಿಐಎ ಇಮೇಲ್‌  ಬಹಿರಂಗ
ದೇಶ

ಮೋದಿಗೆ ಹತ್ಯೆ ಸಂಚು ಆರೋಪ: ಬಿಹಾರದಲ್ಲಿ ಮೂವರು ಬಂಧನ, ಸಿಐಎ ಇಮೇಲ್‌  ಬಹಿರಂಗ

by ಪ್ರತಿಧ್ವನಿ
April 10, 2026
0

ಪಟ್ನಾ, ಏ.10: ಪ್ರಧಾನಮಂತ್ರಿ  ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡುವ ಸಂಚು ರೂಪಿಸಿದ್ದ ಆರೋಪದಡಿ ಬಿಹಾರ ಪೊಲೀಸರು ಮೂವರು ಯುವಕರನ್ನು ಬಂಧಿಸಿದ್ದಾರೆ. ಈ ಘಟನೆ ದೇಶದಾದ್ಯಂತ ಆತಂಕ...

Read moreDetails
ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

April 9, 2026
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

April 9, 2026
ಇಂಧನ ಕೊರತೆ ಆರೋಪ: ಕೇಂದ್ರದ ವಿರುದ್ಧ ಕೆ.ಹೆಚ್. ಮುನಿಯಪ್ಪ ವಾಗ್ದಾಳಿ

ಇಂಧನ ಕೊರತೆ ಆರೋಪ: ಕೇಂದ್ರದ ವಿರುದ್ಧ ಕೆ.ಹೆಚ್. ಮುನಿಯಪ್ಪ ವಾಗ್ದಾಳಿ

April 6, 2026
ಟೆರಿಟೋರಿಯಲ್ ಆರ್ಮಿಯಲ್ಲಿ ಉದ್ಯೋಗ:ಯುವಕರಿಗೆ ಸುವರ್ಣಾವಕಾಶ

 ಮೊಹಮ್ಮದ್ ಇಕ್ಬಾಲ್ ‘ಪಲಾಯನಗೈದ ಆರ್ಥಿಕ ಅಪರಾಧಿ’ ಎಂದು ನ್ಯಾಯಾಲಯ ಘೋಷಣೆ

April 1, 2026
Next Post
ಹಾನಗಲ್‌ ಉಪಚುನಾವಣೆ  ಗೆಲುವಿಗೆ, ಕ್ಷೇತ್ರದ ಮತದಾರರಿಗೆ ಸಲ್ಯೂಟ್‌ ಮಾಡಿದ : DK Shivakumar

ಹಾನಗಲ್‌ ಉಪಚುನಾವಣೆ ಗೆಲುವಿಗೆ, ಕ್ಷೇತ್ರದ ಮತದಾರರಿಗೆ ಸಲ್ಯೂಟ್‌ ಮಾಡಿದ : DK Shivakumar

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada