• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, April 13, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಹಾಸನ ಜೆಡಿಎಸ್​ ಟಿಕೆಟ್​​ಗೆ ಮತ್ತೊಂದು ಟ್ವಿಸ್ಟ್​: ಸ್ವರೂಪ್​ಗೆ ಟಿಕೆಟ್​ ತಪ್ಪಿಸಲು ಹೆಚ್​.ಡಿ ರೇವಣ್ಣ ಹೊಸ ರಣತಂತ್ರ

ಪ್ರತಿಧ್ವನಿ by ಪ್ರತಿಧ್ವನಿ
March 31, 2023
in ಕರ್ನಾಟಕ, ರಾಜಕೀಯ
0
ಹಾಸನ ಜೆಡಿಎಸ್​ ಟಿಕೆಟ್​​ಗೆ ಮತ್ತೊಂದು ಟ್ವಿಸ್ಟ್​: ಸ್ವರೂಪ್​ಗೆ ಟಿಕೆಟ್​ ತಪ್ಪಿಸಲು ಹೆಚ್​.ಡಿ ರೇವಣ್ಣ ಹೊಸ ರಣತಂತ್ರ
Share on WhatsAppShare on FacebookShare on Telegram

ಹಾಸನ : ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂಕವೇನೋ ಫಿಕ್ಸ್​ ಆಗಿದೆ. ಆದರೆ ರಾಜಕೀಯ ಪಕ್ಷಗಳಿಗೆ ಇನ್ನು ಯಾವ ಕ್ಷೇತ್ರದಲ್ಲಿ ಯಾರನ್ನು ಕಣಕ್ಕಿಳಿಸೋದು ಎಂಬ ಗೊಂದಲ ಮಾತ್ರ ಬಗೆಹರಿಯುವಂತೆ ಕಾಣುತ್ತಿಲ್ಲ. ಜೆಡಿಎಸ್​ ಪಕ್ಷಕ್ಕೆ ಈ ಬಾರಿ ಹಾಸನ ವಿಧಾನಸಭಾ ಕ್ಷೇತ್ರ ಕಬ್ಬಿಣದ ಕಡಲೆಯಾಗಿ ಮಾರ್ಪಟ್ಟಿದೆ. ಈಗಿರುವ ಸವಾಲುಗಳು ಸಾಲದು ಎಂಬಂತೆ ಇದೀಗ ಹಾಸನ ಜೆಡಿಎಸ್​ ಟಿಕೆಟ್​ ಹಂಚಿಕೆ ವಿಚಾರದಲ್ಲಿ ಮತ್ತೊಂದು ಬಿಗ್​ ಟ್ವಿಸ್ಟ್​ ಎದುರಾಗಿದೆ.

ADVERTISEMENT


ಹಾಸನದಲ್ಲಿ ಭವಾನಿ ರೇವಣ್ಣರಿಗೆ ಟಿಕೆಟ್​ ಕೋಡೋದಿಲ್ಲ ಹಾಗೂ ಕೆ.ಎಂ ರಾಜೇಗೌಡರಿಗೂ ಚುನಾವಣೆಗೆ ಸ್ಪರ್ಧಿಸಲು ಈ ಬಾರಿ ಅವಕಾಶವಿಲ್ಲ ಅಂತಾ ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಕಡಾಖಂಡಿತವಾಗಿ ಹೇಳಿದ್ದಾರೆ. ಈ ಬೆನ್ನಲ್ಲೇ ಇದೀಗ ಸಹೋದರನಿಗೆ ಠಕ್ಕರ್​ ಕೊಡೋಕೆ ಹೆಚ್​ಡಿ ರೇವಣ್ಣ ಭರ್ಜರಿ ಪ್ಲಾನ್​ ಮಾಡಿದ್ದಾರೆ.


ಹಾಸನ ವಿಧಾನಸಭಾ ಕ್ಷೇತ್ರಕ್ಕೆ ಹೆಚ್​.ಡಿ ರೇವಣ್ಣ ಹೊಸ ಅಭ್ಯರ್ಥಿಯ ಹೆಸರನ್ನು ಮುಂದಿಟ್ಟಿದ್ದಾರೆ. ಕಾಂಗ್ರೆಸ್​ ನಾಯಕ, ಎರಡು ಬಾರಿ ಹಾಸನ ಕ್ಷೇತ್ರದಿಂದ ಸ್ಪರ್ಧೆ ಮಾಡಿರುವ ಹೆಚ್​.ಕೆ ಮಹೇಶ್​​ಗೆ ರೇವಣ್ಣ ಇದೀಗ ಗಾಳ ಹಾಕಿದ್ದಾರೆ ಎನ್ನಲಾಗಿದೆ. ಹೇಗಾದರೂ ಮಾಡಿ ಸ್ವರೂಪ್​ಗೆ ಜೆಡಿಎಸ್​ ಟಿಕೆಟ್​ ತಪ್ಪಿಸಬೇಕೆಂದು ರೇವಣ್ಣ ಈ ರಣತಂತ್ರ ಹೂಡಿದ್ದಾರೆ.


ಹೆಚ್​. ಕೆ ಮಹೇಶ್​ ಈ ಹಿಂದೆ ಕೇವಲ 5 ಸಾವಿರ ಮತಗಳ ಅಂತರದಲ್ಲಿ ಸೋತಿದ್ದರು. ಎರಡು ಬಾರಿ ಸೋತಿರುವ ಸಿಂಪತಿ ಕೂಡ ಈ ಬಾರಿ ವರ್ಕೌಟ್​ ಆಗಬಹುದು. ಅಲ್ಲದೇ ಹಾಲಿ ಶಾಸಕ ಪ್ರೀತಂ ಗೌಡ ವಿರುದ್ಧ ಯುವ ಅಭ್ಯರ್ಥಿಯನ್ನು ಕಣಕ್ಕಿಳಿಸಿದಂತೆ ಆಗುತ್ತದೆ . ಅಲ್ಲದೇ ತಮ್ಮನ್ನು ಎದುರು ಹಾಕಿಕೊಂಡು ಟಿಕೆಟ್​ಗೆ ಲಾಬಿ ನಡೆಸುತ್ತಿರುವ ಸ್ವರೂಪ್​ಗೆ ತಕ್ಕ ಪಾಠ ಕಲಿಸಿದಂತೆಯೂ ಆಗುತ್ತೆ ಅನ್ನೋದು ರೇವಣ್ಣ ಕುಟುಂಬದ ಲೆಕ್ಕಾಚಾರವಾಗಿದೆ .

Tags: HassanHassan's JDS ticketHD Revannaಎಚ್ ಡಿ ಕುಮಾರಸ್ವಾಮಿ
Previous Post

ಯಾರಾದರೂ ಒಳಗೆ ಬಂದರೆ ಅಟ್ಟಾಡಿಸಿ ಹೊಡಿರಿ, ಮಿಕ್ಕಿದ್ದು ನಾನು ನೋಡಿಕೊಳ್ಳುತ್ತೇನೆ’ : ಸಚಿವ ಮುನಿರತ್ನ ವಿವಾದಾತ್ಮಕ ಹೇಳಿಕೆ

Next Post

ವಿಧಾನಸಭಾ ಚುನಾವಣೆ ಹಿನ್ನೆಲೆ : ಮೂವರ ವಿರುದ್ಧ ಗೂಂಡಾ ಕಾಯ್ದೆ , 11 ಜನರ ಗಡಿಪಾರಿಗೆ ಶಿಫಾರಸ್ಸು

Related Posts

ಆಚರಣೆ ಸಂಭ್ರಮದ ನಡುವೆ ಅಂಬೇಡ್ಕರ್ ಎಲ್ಲಿದ್ದಾರೆ ?
ಅಂಕಣ

ಆಚರಣೆ ಸಂಭ್ರಮದ ನಡುವೆ ಅಂಬೇಡ್ಕರ್ ಎಲ್ಲಿದ್ದಾರೆ ?

by ಪ್ರತಿಧ್ವನಿ
April 13, 2026
0

ವಿಶೇಷ ಲೇಖನ : ನಾ ದಿವಾಕರ, ಹಿರಿಯ ಲೇಖಕರು.. ಡಾ. ಬಿ.ಆರ್. ಅಂಬೇಡ್ಕರ್ ಮತ್ತೊಮ್ಮೆ ವಾರ್ಷಿಕ ಆಚರಣೆಗಳ ಕೇಂದ್ರ ಬಿಂದುವಾಗಿ ಸಾರ್ವಜನಿಕರ ನಡುವೆ ಕಾಣಿಸಿಕೊಳ್ಳಲಿದ್ದಾರೆ. ತಾನು ದೇಶದ...

Read moreDetails
ಬೇಸಿಗೆಯಲ್ಲಿ ಸಂಚಾರ ಪೊಲೀಸರಿಗೆ ಸೌಲಭ್ಯ ಒದಗಿಸಲು ಡಿಜಿಪಿಗೆ ಮನವಿ

ಬೇಸಿಗೆಯಲ್ಲಿ ಸಂಚಾರ ಪೊಲೀಸರಿಗೆ ಸೌಲಭ್ಯ ಒದಗಿಸಲು ಡಿಜಿಪಿಗೆ ಮನವಿ

April 13, 2026
ನಿಯಮಬಾಹಿರ ವಾಹನ ತಪಾಸಣೆ ನಿಲ್ಲಿಸಲು ಡಿಜಿಪಿಗೆ ಮನವಿ

ನಿಯಮಬಾಹಿರ ವಾಹನ ತಪಾಸಣೆ ನಿಲ್ಲಿಸಲು ಡಿಜಿಪಿಗೆ ಮನವಿ

April 13, 2026
ಪ್ರಚೋದನಕಾರಿ ಭಾಷಣ ಆರೋಪ: ಚಕ್ರವರ್ತಿ ಸೂಲಿಬೆಲೆ ವಿರುದ್ಧ  ಸುಮೊಟೊ ಪ್ರಕರಣ

ಪ್ರಚೋದನಕಾರಿ ಭಾಷಣ ಆರೋಪ: ಚಕ್ರವರ್ತಿ ಸೂಲಿಬೆಲೆ ವಿರುದ್ಧ  ಸುಮೊಟೊ ಪ್ರಕರಣ

April 12, 2026
ಸಿದ್ದರಾಮಯ್ಯ ಬೆಂಕಿ ಇದ್ದಂತೆ, ಯಾರಿಂದಲೂ ಮುಟ್ಟೋಕಾಗೋಲ್ಲಾ ಮುಟ್ಟಿದ್ರೆ ಭಸ್ಮ ಆಗ್ತಾರೆ.

ದಾವಣಗೆರೆ ದಕ್ಷಿಣ ಉಪಚುನಾವಣೆ: ಕಾಂಗ್ರೆಸ್ ಒಳಜಗಳ ತೀವ್ರ, ಸಚಿವ ಜಮೀರ್ ವಿರುದ್ಧ ಗಂಭೀರ ಆರೋಪ

April 12, 2026
Next Post
ವಿಧಾನಸಭಾ ಚುನಾವಣೆ ಹಿನ್ನೆಲೆ : ಮೂವರ ವಿರುದ್ಧ ಗೂಂಡಾ ಕಾಯ್ದೆ , 11 ಜನರ ಗಡಿಪಾರಿಗೆ ಶಿಫಾರಸ್ಸು

ವಿಧಾನಸಭಾ ಚುನಾವಣೆ ಹಿನ್ನೆಲೆ : ಮೂವರ ವಿರುದ್ಧ ಗೂಂಡಾ ಕಾಯ್ದೆ , 11 ಜನರ ಗಡಿಪಾರಿಗೆ ಶಿಫಾರಸ್ಸು

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada