
ರಾಜ್ಯದ ಪ್ರಬಲ ಸಮುದಾಯಗಳ ಆಕ್ರೋಶ ಮತ್ತು ವಿರೋಧಕ್ಕೆ ಕಾಂಗ್ರೆಸ್ ಹೈಕಮ್ಯಾಂಡ್ (Congress highcommand) ಮಣಿದಂತೆ ಕಾಣುತ್ತಿದೆ. ಹೀಗಾಗಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಜಾತಿ ಜನಗಣತಿ (Caste census) ವರದಿಯ ವಿಚಾರವಾಗಿ ಈಗ ಹೈಕಮಾಂಡ್ ಒಂದು ಸ್ಪಷ್ಟ ನಿರ್ಧಾರಕ್ಕೆ ಬಂದಂತಿದೆ.

ಹೌದು ಕರ್ನಾಟಕದಲ್ಲಿ ಜಾತಿಗಣತಿಯನ್ನು ಮತ್ತೊಮ್ಮೆ ಹೊಸದಾಗಿ ನಡೆಸಲು ಕಾಂಗ್ರೆಸ್ ಹೈಕಮ್ಯಾಂಡ್ ಸಿಎಂ ಸಿದ್ದರಾಮಯ್ಯ (Cm siddaramaiah) ಅವರಿಗೆ ಸೂಚನೆ ನೀಡಿದೆ ಎನ್ನಲಾಗಿದೆ.ಹಳೆಯ ಜಾತಿ ಗಣತಿಯನ್ನೇ ಯಥಾವತ್ತಾಗಿ ಜಾರಿಗೊಳಿಸಲು ಸಿಎಂ ಮುಂದಾಗಿದ್ದರು.ಹಳೆಯ ಜಾತಿ ಜನಗಣತಿ ಸರ್ವೇಯಲ್ಲಿ ಪ್ರಬಲ ಸಮುದಾಯಗಳ ಜನಸಂಖ್ಯೆ ಕಡಿಮೆ ಇತ್ತು.

ಹೀಗಾಗ ರಾಜ್ಯದ ಪ್ರಬಲ ಸಮಾಜಗಳಾದ ಲಿಂಗಾಯತ, ಒಕ್ಕಲಿಗ ಸಮುದಾಯಗಳ ಆಕ್ರೋಶಕ್ಕೆ ಸರ್ಕಾರ ತುತಾಗಿತ್ತು. ಇದೀಗ ಈ ಎರಡು ಸಮುದಾಯಗಳ ಅಸಮಾಧಾನವನ್ನು ಸರಿಪಡಿಸಲು ಮ್ಯಾಟರ್ ಹೊಸ ಸರ್ವೇ ಮಾಡಲು ಹೈಕಮಾಂಡ್ ಸೂಚಿಸಿದೆ.

ಈ ಬೆಳವಣಿಗೆ ಡಿಸಿಎಂ ಡಿಕೆಶಿ, ಸಚಿವ ಎಂ.ಬಿ.ಪಾಟೀಲ್,ಕಾಂಗ್ರೆಸ್ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಸೇರಿದಂತೆ ಒಕ್ಕಲಿಗ, ಲಿಂಗಾಯತ ನಾಯಕರ ಒತ್ತಡಕ್ಕೆ ಜಯ ಸಿಕ್ಕಂತಾಗಿದೆ.



