ತೆರೆಗೆ ಬರಲು ಸಿದ್ದವಾದ ತಿಲಕ್ ಶೇಖರ್ (Tilak Shekar) ಅಭಿನಯದ, ಗಿರೀಶ್ ಕುಮಾರ್ (Girish Kumar) ನಿರ್ದೇಶನದ “ಗ್ಯಾಂಗ್ ಸ್ಟರ್ ಅಲ್ಲ ಫ್ರಾಂಕ್ ಸ್ಟರ್”.

ವುಡ್ ಕ್ರೀಪರ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ತಿಲಕ್ ಶೇಖರ್ (Tilak Shekhar) (Ugram Actor) ನಾಯಕರಾಗಿ ನಟಿಸಿರುವ ಹಾಗೂ ಗಿರೀಶ್ ಕುಮಾರ್ ನಿರ್ದೇಶನದೊಂದಿಗೆ ಪ್ರಮುಖಪಾತ್ರದಲ್ಲೂ ನಟಿಸಿರುವ “ಗ್ಯಾಂಗ್ ಸ್ಟರ್ ಅಲ್ಲ ಫ್ರಾಂಕ್ ಸ್ಟರ್” ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು/ಎ ಪ್ರಮಾಣಪತ್ರ ನೀಡಿದೆ. ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ.

ಈ ಹಿಂದೆ ನಾನು “ಭಾವಚಿತ್ರ” ಎಂಬ ಚಿತ್ರವನ್ನು ನಿರ್ದೇಶಿಸಿದ್ದೆ. ಇದು ನನ್ನ ಮೂರನೇ ನಿರ್ದೇಶನದ ಚಿತ್ರ. ಈ ಚಿತ್ರದಲ್ಲಿ ನಿರ್ದೇಶನದ ಜೊತೆಗೆ ಪ್ರಮುಖಪಾತ್ರದಲ್ಲಿ ನಟನೆಯನ್ನು ಮಾಡಿದ್ದೇನೆ. ತಿಲಕ್ ಶೇಖರ್ ಅವರು “ಗ್ಯಾಂಗ್ ಸ್ಟರ್” ಆಗಿ, ನಾನು “ಫ್ರಾಂಕ್ ಸ್ಟರ್” ಆಗಿ ನಟಿಸಿದ್ದೇವೆ. ಇದು ಯೂಟ್ಯೂಬರ್ ಒಬ್ಬನ ಸುತ್ತ ನಡೆಯುವ ಕಥೆಯಾಗಿದೆ. ತಿಲಕ್ ಅವರು ಬಹಳ ದಿನಗಳ ನಂತರ ಗ್ಯಾಂಗ್ ಸ್ಟರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟ್ರೇಲರ್ ಸಹ ಎಲ್ಲರ ಮೆಚ್ಚುಗೆ ಪಡೆದುಕೊಂಡಿದೆ. ಅತೀ ಶೀಘ್ರದಲ್ಲೇ ಚಿತ್ರ ತೆರೆಗೆ ಬರಲಿದೆ ಎಂದು ನಟ, ನಿರ್ದೇಶಕ ಗಿರೀಶ್ ಕುಮಾರ್ ತಿಳಿಸಿದ್ದಾರೆ.

ತಿಲಕ್ ಶೇಖರ್(Tilak Shekar) , ಗಿರೀಶ್ ಕುಮಾರ್(Girish Kumar), ವಿರಾನಿಕ ಶೆಟ್ಟಿ(Viranika Shetty), ಬಾಲ ರಾಜವಾಡಿ(Bala Rajawadi), ಗಿರೀಶ್ ಬಿಜ್ಜಳ್(Girish Bijjal), ಹೊನವಳ್ಳಿ ಕೃಷ್ಣ(Honnavalli Krishna), ಸಂಗೀತ ಅನಿಲ್(Musiq Director Anil), ಸುಂದರ್(Sundar), ರತೀಶ್ ಕುಮಾರ್(Ratish Kumar) , ಮಜಾಟಾಕೀಸ್ ಪವನ್(Maja Talkies Pavan), ಹನುಮಂತೇಗೌಡ(Hanumantegowda), ಭವಾನಿ ಪ್ರಕಾಶ್(Bhavani Prakash) ಮುಂತಾದವರು “ಗ್ಯಾಂಗ್ ಸ್ಟರ್ ಅಲ್ಲ ಫ್ರಾಂಕ್ ಸ್ಟರ್” ತಾರಾಬಳಗದಲ್ಲಿದ್ದಾರೆ.

ಜಾನ್ ಕೆನಡಿ ಸಂಗೀತ ಸಂಯೋಜಿಸಿರುವ ನಾಲ್ಕು ಹಾಡುಗಳು ಈ ಚಿತ್ರದಲ್ಲಿದೆ. ಅಜಯ್ ಕುಮಾರ್ ಛಾಯಾಗ್ರಹಣ ಹಾಗೂ ರತೀಶ್ ಕುಮಾರ್ ಸಂಕಲನ ಈ ಚಿತ್ರಕ್ಕಿದೆ.