ಬಿಗ್ ಬಾಸ್ (Bigboss) ಸೀಸನ್ 10 & 11 ನ ಸ್ಪರ್ಧಿಗಳಾದ ವಿನಯ್ (Vinay) ಹಾಗೂ ರಜತ್ (Rajath) ಮಚ್ಚು ಹಿಡಿದು ರೀಲ್ಸ್ ಮಾಡಿ ಸಂಕಷ್ಟಕ್ಕೆ ಸಿಲುಕಿದ್ದು ಬಸವೇಶ್ವರ ನಗರ ಪೊಲೀಸರು ರಜತ್ ಹಾಗೂ ವಿನಯ್ ಇಬ್ಬರನ್ನೂ ಬಂಧಿಸಿದ್ದಾರೆ.

ಈ ವೈರಲ್ ಆಗಿದ್ದ ರೀಲ್ಸ್ ನಲ್ಲಿ ಬಳಸಿದ್ದ ಮಚ್ಚನ್ನು ಪೊಲೀಸರಿಗೆ ಒಪ್ಪಿಸಿದ ವೇಳೆ ನಕಲಿ ಮಚ್ಚು ನೀಡಿರೋದು ಪ್ರಾಥಮಿಕ ತನಿಖೆ ವೇಳೆ ಬಯಲಾಗಿದೆ.ಈ ಬಗ್ಗೆ ವಿಚಾರಿಸಿದಾಗ ಅಸಲಿ ಮಚ್ಚು ಅಕ್ಷಯ್ ಸ್ಟುಡಿಯೋಸ್ ನಲ್ಲಿ (Akshay studios) ಇದೆ ಎಂದು ಆರೋಪಿಗಳು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಹೀಗಾಗಿ ಸ್ಥಳಕ್ಕೆ ಕರೆದೊಯ್ದ ಪೊಲೀಸರು ಮಹಜರು ನಡೆಸಿದ್ದಾರೆ.ಆ ಬಳಿಕ ಇಬ್ಬರನ್ನೂ ಬಂಧಿಸಲಾಗಿದ್ದು ರಾತ್ರಿಯೇ ಕೋರ್ಟ್ ಮುಂದೆ ಹಾಜರು ಪಡಿಸಿದ್ದು, ಕೋರ್ಟ್ 1 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.

ಈ ಬೆಳವಣಿಗೆಯ ಬೆನ್ನಲ್ಲೇ ಆರೋಪಿಗಳಾದ ರಜತ್ ಮತ್ತು ವಿನಯ್ ಇಬ್ಬರನ್ನೂ ಪರಪ್ಪನ ಅಗ್ರಹಾರಕ್ಕೆ ಶಿಫ್ಟ್ ಮಾಡಲಾಗಿದ್ದು, ಮತ್ತೊಂದೆಡೆ ಆರೋಪಿಗಳು ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಇಂದು ಜಮೀನಿನ ಭವಿಷ್ಯ ನಿರ್ಧಾರವಾಗುವ ಸಾಧ್ಯತೆಯಿದೆ.