ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ(Congress Government) ಅಸ್ತಿತ್ವಕ್ಕೆ ಬಂದು ಬರೋಬ್ಬರಿ ಒಂದು ವರ್ಷ ಆಗಿದೆ. 2023ರ ಮೇ 14ರಂದು ಚುನಾವಣೆ(Election) ಘೋಷಣೆ ಆದರೂ ಸಿಎಂ ಸ್ಥಾನಕ್ಕಾಗಿ ಸಿದ್ದರಾಮಯ್ಯ(Siddaramaiah) ಹಾಗು ಡಿ.ಕೆ ಶಿವಕುಮಾರ್(Shiva Kumar) ನಡುವೆ ಪೈಪೋಟಿ ಏರ್ಪಟ್ಟಿತ್ತು. ಒಂದು ವಾರ ಕಾಲ ದೆಹಲಿಯಲ್ಲಿ ಹೈಕಮಾಂಡ್(Delhi High Command) ನಾಯಕರು ಅಳೆದೂ ತೂಗಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ಕಾರ ರಚಿಸುವಂತೆ ಸೂಚಿಸಿದರು. ಆ ಬಳಿಕ ಡಿ.ಕೆ ಶಿವಕುಮಾರ್ಗೆ (DK Shivakumar) ಉಪಮುಖ್ಯಮಂತ್ರಿ ಸ್ಥಾನವನ್ನು ನೀಡಿ ಸಮಾಧಾನ ಮಾಡಲಾಗಿತ್ತು. ಇದೇ ದಿನ ಇಡೀ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು. ಮಂತ್ರಿಗಳ ಸಹಿತ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕಾರ ಮಾಡಿದ್ದರು.

ಸರ್ಕಾರ ಅಸ್ತಿತ್ವಕ್ಕೆ ಬಂದ ಕೂಡಲೇ ರಾಜ್ಯದ ಜನರಿಗೆ ನೀಡಿದ್ದ ಭರವಸೆ ಈಡೇರಿಸುವ ಕೆಲಸ ಮಾಡಿದ್ದರು. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಮುನ್ನ ರಾಜ್ಯದ ಜನತೆಗೆ ನೀಡಿದ್ದ ಐದು ಗ್ಯಾರಂಟಿಗಳನ್ನು ಜಾರಿ ಮಾಡುವ ಭರವಸೆ ನೀಡಿದ್ದ ಎಲ್ಲಾ ಐದು ಯೋಜನೆಗಳನ್ನು(Schemes) ಜಾರಿ ಮಾಡಲಾಗುವುದು ಎಂದು ಘೋಷಣೆ ಮಾಡಿದ್ದರು. ಚುನಾವಣೆ ವೇಳೆ ಘೋಷಣೆ ಮಾಡಿದ್ದ ಅಷ್ಟೂ ಗ್ಯಾರಂಟಿಗಳನ್ನು ಜಾರಿ ಮಾಡುತ್ತೇವೆ ಎನ್ನುವ ಮೂಲಕ ಕಾಂಗ್ರೆಸ್(Congress) ಪಕ್ಷ ಕೊಟ್ಟ ಭರವಸೆಯನ್ನು ಈಡೇರಿಸುವ ವಾಗ್ದಾನ ಮಾಡಿತ್ತು. ಸರ್ಕಾರ ರಚನೆಯಲ್ಲಿ ಸಣ್ಣ ಗೊಂದಲವಿದ್ದರೂ ಕಳೆದೊಂದು ವರ್ಷದಲ್ಲಿ ಯಾವುದೇ ಗೊಂದಲ ಆಗದಂತೆ ಸರ್ಕಾರ ನಡೆಯುತ್ತಿದೆ.

ಕಾಂಗ್ರೆಸ್ ಪಕ್ಷ(Congress Party) ಕೊಟ್ಟಿದ್ದ ಐದೂ ಗ್ಯಾರಂಟಿಗಳನ್ನು ರಾಜ್ಯದಲ್ಲಿ ಜಾರಿ ಮಾಡಲಾಗಿದೆ. ಅದರಲ್ಲೂ ಗೃಹಜ್ಯೋತಿ ಯೋಜನೆ(Gruha Jyothi Scheme) ಮೂಲಕ ಎಲ್ಲರೂ ವಿದ್ಯುತ್ ಫ್ರೀ(Electricity Free) ಪಡೆಯುತ್ತಿದ್ದಾರೆ. ಅದೇ ರೀತಿ ಶಕ್ತಿ ಯೋಜನೆ ಮೂಲಕ ರಾಜ್ಯದ ಮಹಿಳಾ ಮಣಿಗಳು ಉಚಿತವಾಗಿ ಬಸ್ನಲ್ಲಿ(Free Bus) ಸಂಚರಿಸಲು ಅನುವು ಮಾಡಿಕೊಡಲಾಗಿದೆ. ಅಷ್ಟು ಮಾತ್ರವಲ್ಲದೆ ಮನೆಯ ಯಜಮಾನಿ ಅಕೌಂಟ್ಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ಹಣ ಕೊಡಲಾಗ್ತಿದೆ. ಇನ್ನು ಬಿಪಿಎಲ್ (BPL) ಕಾರ್ಡ್ದಾರರಿಗೆ ಪ್ರತಿ ತಿಂಗಳು ಐದು ಕೆಜಿ ಅಕ್ಕಿ(5KG Rice) ಜೊತೆಗೆ ಕಾಂಗ್ರೆಸ್ ಪಕ್ಷ ಘೋಷಣೆ ಮಾಡಿದ್ದ ಹೆಚ್ಚುವರಿ 5 ಕೆಜಿ ಅಕ್ಕಿಯ ಹಣವನ್ನು ಬ್ಯಾಂಕ್ ಖಾತೆಗೆ ಹಾಕಲಾಗ್ತಿದೆ(Bank Transfer). ಇನ್ನು ಕೊನೆಯದಾಗಿ ನಿರುದ್ಯೋಗಿಗಳ(Unemployed) ಖಾತೆಗೂ ಹಣ ಜಮೆ ಆಗ್ತಿದೆ. ಒಂದು ರೀತಿಯಲ್ಲಿ ಜನತೆ ಖುಷ್ ಆಗಿದ್ದಾರೆ.

ರಾಜ್ಯದ ಜನತೆಯ(People) ಸಂತಸ ಇಡೀ ದೇಶಕ್ಕೆ ಹಂಚುವ ಉದ್ದೇಶ ಕಾಂಗ್ರೆಸ್ ಪಕ್ಷದ್ದು. ಮೊದಲಿಗೆ ತೆಲಂಗಾಣದಲ್ಲಿ(Telangana) ಕರ್ನಾಟಕದಂತೆಯೇ(Karnataka) ಗ್ಯಾರಂಟಿ ಯೋಜನೆ ಘೋಷಣೆ ಮಾಡಿದ್ದ ಕಾಂಗ್ರೆಸ್ ಪಕ್ಷ, ಅಧಿಕಾರಕ್ಕೇರಿತ್ತು. ಕೊಟ್ಟ ಮಾತಿನಂತೆ ತೆಲಂಗಾಣದಲ್ಲೂ ಗ್ಯಾರಂಟಿ ಯೋಜನೆಗಳು ಜಾರಿಯಾಗಿವೆ. ಇದೀಗ ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷ ಗ್ಯಾರಂಟಿ ಯೋಜನೆಯನ್ನು ಘೋಷಣೆ ಮಾಡಿದೆ. ಅದರಲ್ಲೂ ಕರ್ನಾಟಕ ಹಾಗು ತೆಲಂಗಾಣದಲ್ಲಿ ಈಗಾಗಲೇ ಯಶಸ್ವಿಯಾಗಿ ಯೋಜನೆ ಜಾರಿ ಮಾಡಿದ್ದೇವೆ ಎಂದು ಎದೆಯುಬ್ಬಿಸಿ ಮಾತನಾಡುತ್ತಿದ್ದಾರೆ. ಒಂದು ವರ್ಷದಲ್ಲಿ ಮಹಿಳೆಯರಿಗೆ ಹರುಷ ತಂದುಕೊಟ್ಟ ಸರ್ಕಾರ, ಕಾಂಗ್ರೆಸ್ ಪಕ್ಷ ದೇಶಾದ್ಯಂತ ಶಕ್ತಿ ಪ್ರದರ್ಶನಕ್ಕೆ ಸಾಥ್ ಕೊಟ್ಟಿದೆ.