ಪಂಜಾಬ್‌ನ ಮಾಜಿ ಉಪ ಮುಖ್ಯ ಮಂತ್ರಿ ಅಕಾಲಿದಳ ನಾಯಕ ಸುಖ್ಬೀರ್ ಸಿಂಗ್ ಬಾದಲ್ ಮೇಲೆ ಗುಂಡಿನ ದಾಳಿ ನಡೆದಿದೆ. ಪಂಜಾಬ್ ನ ಅಮೃತಸರ ದಲ್ಲಿ ಇರುವ ಗೋಲ್ಡನ್ ಟೆಂಪಲ್ ಮುಂಭಾಗ ಈ ದಾಳಿ ನಡೆದಿದ್ದು, ಸ್ವಲ್ಪದರಲ್ಲೇ ಬಾದಲ್ ಬಚಾವ್ ಆಗಿದ್ದಾರೆ.
ಮೊನ್ನೆಯಷ್ಟೇ ಸಿಖ್ ಸಮುದಾಯ ಬಾದಲ್ ರನ್ನು ಧಾರ್ಮಿಕ ಅಪರಾಧಿ ಎಂದು ಪರಿಗಣಿಸಿ, ಅಮೃತಸರದಲ್ಲಿರುವ ಗೋಲ್ಡನ್ ಟೆಂಪಲ್ ನ ವಾಶ್ ರೂಮ್ ಸ್ವಚ್ಛಗೊಳಿಸುವಂತೆ ಶಿಕ್ಷೆ ನೀಡಲಾಗಿತ್ತು. ಇದಕ್ಕಾಗಿ ಅವರು ಗೋಲ್ಡೆನ್ಟೆಂಪಲ್ ಗೆ ಬಂದಿದ್ದರು. ಆದ್ರೆ ಇದೇ ವೇಳೆ ಈ ಗುಂಡಿನ ದಾಳಿ ನಡೆದಿದೆ.
ಈ ರೀತಿ ಗುಂಡಿನ ದಾಳಿಗೆ ಯತ್ನಿಸಿದ ವ್ಯಕ್ತಿಯನ್ನು ಸ್ಥಳದಲ್ಲೇ ಸೆರೆ ಹಿಡಿಯಲಾಗಿದ್ದು,ಈ ಆರೋಪಿಯನ್ನು ನಾರಾಯಣ್ ಸಿಂಗ್ ಚೌರಾ ಎಂದು ಗುರುತಿಸಲಾಗಿದೆ. ಈತನ ವಿರುದ್ಧ ಈಗಾಗಲೇ ಭಯೋತ್ಪಾದಕ ಚಟುವಟಿಕೆ ನಡೆಸಿರುವ ಆರೋಪಗಳಿದ್ದು, 1984 ರಲ್ಲಿ ಪಾಕಿಸ್ತಾನಕ್ಕೆ ಹೋಗಿ ಅಲ್ಲಿಂದ ಪಂಜಾಬ್ ಗೆ ದೊಡ್ಡಪ್ರಮಾಣದ ಶಸ್ತ್ರಾಸ್ತ್ರ ಹಾಗೂ ಸ್ಪೋಟಕ ಕಳ್ಳಸಾಗಣೆ ಮಾಡುತ್ತಿದ್ದ ಎನ್ನಲಾಗಿದೆ
ಅಷ್ಟೇ ಅಲ್ಲ ಖಲಿಸ್ತಾನಿ ಪ್ರತ್ಯೇಕತಾವಾದಿ ಉಗ್ರರ ಲಿಸ್ಟ್ ಗೆ ಇವನ ಹೆಸರು ಸೇರಿಸಲಾಗಿತ್ತು. ಅಮೃತಸರದ ಕೇಂದ್ರ ಕಾರಾಗೃಹದಲ್ಲಿ ಹಲವು ವರ್ಷಗಳಕಾಲ ಇದ್ದು, 2018 ರಲ್ಲಿ ಜಾಮಿನಿನ ಮೇಲೆ ಬಿಡುಗಡೆಯಾಗಿ ಮತ್ತೆ ಜೈಲು ಪಾಲಾಗಿದ್ದ ಎನ್ನಲಾಗಿದೆ.