ಕೋರ್ಟ್ ನಲ್ಲಿರುವ ವಿಷಯದ ಬಗ್ಗೆ ನಾವು ಯಾರು ಮಾತಾಡಬಾರದು ಕಾನೂನಿಗಿಂತ ನಾವು ಯಾರು ದೊಡ್ಡವರಲ್ಲ ಕಾನೂನಿಗೆ ಎಲ್ಲರೂ ತಲೆಬೇಕಾಗುತ್ತದೆ. ಆದರೆ ನಾನು ನೋಡಿರುವ ದರ್ಶನ್ ಬಗ್ಗೆ ಹೇಳಿದ್ದೇನೆ, ದರ್ಶನ್ ಮಾಡಿರುವ ಸಹಾಯದ ಬಗ್ಗೆ ನಾನು ನೋಡಿದ್ದೇನೆ ಆದರೆ ಬೇರೆ ರೀತಿಯ ಬಗ್ಗೆ ನನಗೆ ಗೊತ್ತಿಲ್ಲಾ. ದರ್ಶನ್ ಮಗನಾಗಿ ನಾನು ತಾಯಿಯಾಗಿ ನೋಡಿದ್ದೇನೆ, ಸತ್ಯ ಹೊರಗೆ ಬರುವವರೆಗೆ ಕಾಯಬೇಕು ಆರೋಪಿಯಾಗಿ ಅಪರಾಧಿಯಾಗಿ ನೋಡಬಾರದು.
ಏನ್ ಮಾಡಿದ್ದಾರೆ ಏನ್ ಮಾಡಿಲ್ಲ ಎಂದು ಅಧಿಕೃತವಾಗಿ ಬರಲಿ, ಕಾನೂನಿನ ವಿರುದ್ಧವಾಗಿ ಮಾಡಲಿ ಎಂದು ನಾನು ಎಲ್ಲಿಯೂ ಹೇಳಿಲ್ಲ, ಮುಂದೆ ಕಾನೂನು ಏನು ಹೇಳುತ್ತೋ ಅದರಂತೆ ನಾವು ನಡೆಯಬೇಕು.
ಒಬ್ಬ ತಾಯಿಯಾಗಿ ರೇಣುಕಾಸ್ವಾಮಿ ಪತ್ನಿ, ತಾಯಿ ಪರಿಸ್ಥಿತಿ ಕಂಡು ನನಗೂ ನೋವು ಆಗಿದೆ, ಆದರೆ ಇದರಲ್ಲಿ ಯಾರು ಏನೇನು ಮಾಡಿದ್ದಾರೆ ಎಂದು ಮುಂದೆ ಗೊತ್ತಾಗಬೇಕು, ಪೊಲೀಸ್ ಹಾಗೂ ಕಾನೂನಿನ ಮೇಲೆ ನನಗೆ ನಂಬಿಕೆ ಇದೆ.
ನನ್ನ ಫೋಸ್ಟ್ ನಲ್ಲೂ ಅಭಿಮಾನಿ ಗಳಿಗೆ ಮನವಿ ಮಾಡಿದ್ದೇನೆ, ಯಾರಿಗೂ ಯಾರು ನೋಯಿಸುವ ರೀತಿ ಮಾತಾಡಬಾರದು, ನಮ್ಮಲ್ಲಿ ನಾವೇ ಧೈರ್ಯ ತುಂಬಿಕೊಂಡು ನಾನು ಬರಲೇಬೇಕಾಗಿತ್ತು. ನನಗೆ ಹತ್ತಿರವಾದ ವ್ಯಕ್ತಿ ಬಗ್ಗೆ ನಾನು ಮಾತಾಡಲೇಬೇಕಾಗಿತ್ತು.
ಇದು ಆಗಬಾರದಿತ್ತು, ಘಟನೆ ನಡೆದು ಹೋಗಿದೆ
ಕಾನೂನು ವ್ಯವಸ್ಥೆ ಯಲ್ಲಿ ಏನೇನು ಕ್ರಮ ಆಗಬೇಕೋ ಆದು ಆಗಲಿ, ನಾನು ನನ್ನ ಫೋಸ್ಟ ನಲ್ಲಿ ಕ್ಲಾರಿಟಿ ಕೊಟ್ಟಿದ್ದೇನೆ. ನಾನು ಏನೇ ಮಾತಾಡಿದ್ರು ಪರ್ಸನಲ್ ಆಗಿ ಹಂಚಿಕೊಂಡ ವಿಷಯ ಅದು ನಾನು ಪಾರ್ಟಿ ಪರವಾಗಿ ಮಾತಾಡಿದ್ದಲ್ಲ, ದರ್ಶನ್ ತಾಯಿ, ತಮ್ಮ, ಪತ್ನಿಯಾಗಲಿ, ಅವರು ಯಾವ ರೀತಿ ಕುಗ್ಗಿದ್ದಾರೆ ಎಂದು ಗೊತ್ತಿದೆ. ಅವರ ಜೊತೆಗೆ ನಾನು ಮಾತಾಡಿದ್ದೇನೆ ಇದೆಲ್ಲವನ್ನು ಪಬ್ಲಿಕ್ ನಲ್ಲಿ ಮಾತಾಡಬಾರದು ಆದರೆ ನನ್ನ ಮೌನವನ್ನು ಕೆಲವರೇ ಗೊಂದಲ ಮೂಡಿಸ್ತಿದ್ರು.
ಅದಕ್ಕಾಗಿ ನನ್ನ ನಿಲುವು ಏನೆಂದು ಇಂದು ಹಂಚಿಕೊಂಡಿದ್ದೇನೆ
ದರ್ಶನ್ ನನ್ನ ಮಗನಾಗಿ ನೋಡಿಕೊಂಡು ಬಂದಿದ್ದೇನೆ, ಸೋಶಿಯಲ್ ಮೀಡಿಯಾಗಳಲ್ಲಿ ಮಾದ್ಯಮಗಳಲ್ಲಿ ತುಂಬಾ ಸುದ್ದಿ ಬರ್ತಿದೆ, ಸತ್ಯ ಹೊರಬರೋದಕ್ಕೆ ಸಮಯಕೊಡಿ ಆರೊಪಿಯನ್ನ ಆರೋಪಿಯನ್ನಾಗಿ ಮಾಡೋದು ಬೇಡ ಅನ್ನೊದು ನಮ್ಮ ಅಭಿಪ್ರಾಯ, ಸತ್ಯವನ್ನ ಮುಚ್ಚಿಡೋದಕ್ಕೆ ಕಾನೂನನ್ನ ಮೀರೊದಕ್ಕೆ ಆಗೊಲ್ಲಾ ಅನ್ಯಾಯವಾಗಿದೆ, ನಾನು ಕೂಡ ತಾಯಿನೆ, ಸತ್ಯ ಹೊರಬರೋವರೆಗೂ ಕಾಯಬೇಕಿದೆ.