ಬೆಂಗಳೂರು: ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಶಾಸಕ ಬೈರತಿ ಬಸವರಾಜ್‌ಗೆ(Byrati Basavaraj)
ಬಂಧನದ ಭೀತಿ ಎದುರಾಗಿದೆ. ಹೀಗಾಗಿ ಶಾಸಕರು ತಲೆಮರೆಸಿಕೊಂಡಿದ್ದು , ಸಿಐಡಿ ಅಧಿಕಾರಿಗಳು ಹುಡುಕಾಟ ನಡೆಸುತ್ತಿದ್ದಾರೆ.

ನಿನ್ನೆಯಷ್ಟೇ ಹೈಕೋರ್ಟ್‌ನಲ್ಲಿ ಬೈರತಿ ಬಸವರಾಜ್ ನಿರೀಕ್ಷಣಾ ಜಾಮೀನು ವಜಾ ಆಗಿತ್ತು.ಇದರ ಬೆನ್ನಲ್ಲೇ ಬಸವರಾಜ್ ಬಂಧನ ಭೀತಿಯಿಂದ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ. ಸದ್ಯ ತಮ್ಮ ಬೈರತಿಯ ನಿವಾಸದಲ್ಲೂ ಬಸವರಾಜ್ ಇಲ್ಲ ಎಂದು ಗೊತ್ತಾಗಿದೆ.

ಬೆಳಗಾವಿಯಲ್ಲಿ ನಡೆದ ವಿಧಾನಸೌಧ ಅಧಿವೇಶನದಲ್ಲಿ ಮೊದಲ ವಾರ ಬೈರತಿ ಬಸವರಾಜ್ ಹಾಜರಾಗಿದ್ದರು. ಆದರೆ ಈ ವಾರ ಅಧಿವೇಶಕ್ಕೆ ಬರದ ಬೈರತಿ ಬಸವರಾಜ್ ಅಜ್ಞಾತ ಸ್ಥಳ ಸೇರಿದ್ದಾರೆ.

ಬಿಕ್ಲು ಶಿವ ಕೊಲೆ ಕೇಸ್ ನಲ್ಲಿ ಬಿಜೆಪಿ ಶಾಸಕ ಬಸವರಾಜ್ ಸಂಚು ರೂಪಿಸಿರೋದಕ್ಕೆ ಸಾಕ್ಷ್ಯಗಳಿವೆ. ಹಾಗೂ ತನಿಖೆಯ ಮೊದಲ ಹಂತದ ವಿಚಾರಣೆ ವೇಳೆ ಬಿಕ್ಲು ಶಿವ ಮತ್ತು ಪ್ರಮುಖ ಆರೋಪಿ ಜಗದೀಶ್ ಗೊತ್ತಿಲ್ಲ ಎಂದು ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಹೈಕೋರ್ಟ್‌ನಲ್ಲಿ ಎಸ್‌ಪಿಪಿ ಜಗದೀಶ್ ವಾದ ಮಂಡಿಸಿದ್ದರು.ವಾದ ಪ್ರತಿವಾದ ಆಲಿಸಿದ್ದ ಹೈಕೋರ್ಟ್ ಪ್ರಕರಣದಲ್ಲಿ ಬೈರತಿ ಬಸವರಾಜ್‌ಗೆ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿತ್ತು.



