ದೇಶದ ಇತಿಹಾಸ ದಲ್ಲಿ ಅತ್ಯುತ್ತಮ ಬಜೆಟ್ ಮಂಡನೆ ಇದಾಗಿದೆ.ಎಲ್ಲ ವರ್ಗದವರಿಗೂ ಅನುಕೂಲ ಆಗುವಂತಹ ಬಜೆಟ್ ಇದಾಗಿದೆ ಎಂದು ಮಾಜಿ ಸಚಿವ ಈಶ್ವರಪ್ಪ ಹೇಳಿದ್ದಾರೆ, ಶ್ರೀಮಂತರಿಂದ ಟ್ಯಾಕ್ಸ್ ಪಡೆದು ಅದನ್ನು ಬಡವರಿಗೆ ನೀಡುವ ವ್ಯವಸ್ಥೆ ಬಜೆಟ್ ನಲ್ಲಿ ಆಗಿದೆಭದ್ರಾ ಮೇಲ್ದಂಡೆ ಯೋಜನೆಗೆ 5.300 ಕೋಟಿ ನೀಡಿದೆ ಇದರಿಂದ ಮಧ್ಯಕರ್ನಾಟಕ ಭಾಗದ ಒಂದು ಲಕ್ಷ ಎಕರೆ ಭೂಮಿ ನೀರಾವರಿಯಾಗಲಿದೆ. ರಾಜ್ಯದಿಂದ ನಿರ್ಮಲ ಸೀತಾರಾಮನ್ ರಾಜ್ಯ ಸಭೆಗೆ ಆಯ್ಕೆಯಾಗಿದ್ದಾರೆ ,

ಈ ಹಿನ್ನಲೆಯಲ್ಲಿ ಅವರಿಗೆ ರಾಜ್ಯದ ಬಗ್ಗೆ ಹೆಚ್ಚು ಕಾಳಜಿ ಇದೆ, ಅದನ್ನು ಈ ಬಜೆಟ್ ನಲ್ಲಿ ಅವರು ತೋರಿಸಿದ್ದಾರೆ.,ದೇಶದ ಇತಿಹಾಸದಲ್ಲಿ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ನಮ್ಮ ವಿರೋಧಿಗಳು ಸಂತೋಷಪಡುವಂತಿದೆ. ನಿರ್ಮಲಾ ಸೀತಾರಾಮನ್ ಅವರು ಕರ್ನಾಟಕದಿಂದಲೇ ರಾಜ್ಯಸಭೆಗೆ ಆಯ್ಕೆಯಾಗಿದ್ದು, ಕರ್ನಾಟಕದ ಮೇಲಿನ ಅಭಿಮಾನದಿಂದಾಗಿಯೇ ಈ ಯೋಜನೆ ರೂಪಿಸಿದ್ದಾರೆ.ಯುವಕರಿಗೆ, ಹೆಣ್ಣುಮಕ್ಕಳಿಗೆ, ರೈತರಿಗೆ ಅನುಕೂಲಕರ ಬಜೆಟ್ ನ್ನು ಮಂಡಿಸಿದ್ದಾರೆ.
