ವಿಜಯಪುರ ನಗರದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿ, ಪೊಲೀಸ್ ಇಲಾಖೆ ವರ್ಗಾವಣೆ ವಿಚಾರದಲ್ಲಿ ಸಮಸ್ಯೆಯಲ್ಲಿ ಸಿಲುಕಿದೆ ಡಿಸಿ ಎಸ್ಪಿ ಹಣ ಕೊಟ್ಟು ವರ್ಗಾವಣೆ ಆಗುವ ಪರಿಸ್ಥಿತಿ ಬಂದಿದೆ ಎಂದು ತಮ್ಮದೇ ಸರ್ಕಾರದ ಬಗ್ಗೆ ಅಸಮಾಧಾನ ಹೊರ ಹಾಕಿದ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂತ ವ್ಯವಸ್ಥೆಯನ್ನು ಯಾವನೋ ಒಬ್ಬ ಪುಣ್ಯಾತ್ಮ ಮಾಡಿಬಿಟ್ಟಾ. ಒಬ್ಬ ಮುಖ್ಯಮಂತ್ರಿಯ ಮಗಾ ಇದನ್ನು ಆರಂಭಿಸಿದಾ. ರಾಜ್ಯದಲ್ಲಿ ಯಾವನೋ ಒಬ್ಬನ ಮಗಾ ಇದನ್ನಾ ಸ್ಟಾರ್ಟ್ ಮಾಡಿ ಎಂದು ಆರೋಪಿಸಿದ ಯತ್ನಾಳ್.
ಎಸ್ಪಿ ಡಿಸಿಗೂ ಹಣ ತೆಗೆದುಕೊಂಡು ವರ್ಗಾವಣೆ ಮಾಡಿದರೆ ಅವರ ದಕ್ಷತೆ ಪ್ರಾಮಾಣಿಕತೆ ಹಾಳಾಗುತ್ತದೆ. ಅವರು ಪ್ರಾಮಾಣಿಕವಾಗಿ ಕೆಲಸ ಮಾಡದೇ ಭ್ರಷ್ಟಾಚಾರದಲ್ಲಿ ತೊಡಗುತ್ತಾರೆ. ಓರ್ವ ಡಿಸಿ ಎಸ್ಪಿಗೆ ಹತ್ತು ಕೋಟಿ ಕೊಡು ಎಂದರೆ ಎಲ್ಲಿಂದ ಕೊಡುತ್ತಾರೆ. ಹಣ ನೀಡಲು ಅವರು ಸಹ ಭ್ರಷ್ಟಾಚಾರ ಮಾಡಬೇಕಾಗುತ್ತದೆ ಎಂದ ಯತ್ನಾಳ ಆರೋಪಿಸಿದ್ದಾರೆ.

ಆರೋಪ ಎದುರಿಸುತ್ತಿರುವ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಮಾಜಿ ಸಿಎಂ ಪರಮಾಪ್ತೆ. ಹಿಂದಿನಿಂದಲೂ ಇದು ನಡೆದುಕೊಂಡು ಬಂದಿದೆ. ದಿವ್ಯಾ ಅವರ ಹಿಂದೆ ನಿಟಕಪೂರ್ವ ಮುಖ್ಯಮಂತ್ರಿಗಳಿದ್ದಾರೆ. ಪ್ರಕರಣದ ಸೂಕ್ತ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.
ಹುಬ್ಬಳ್ಳಿ ಗಲಾಟೆಗೆ ವಿದೇಶ ಶಕ್ತಿಗಳ ಕೈವಾಡವಿದೆ ಎಂದು ಬಾಂಬ್ ಸಿಡಿಸಿದ ಯತ್ನಾಳ. ಅವರಿಗೆ ವಿದೇಶದಿಂದ ಹಣ ಬರುತ್ತದೆ ಎಂದು ಯತ್ನಾಳ ಗಂಭೀರ ಆರೋಪ ಮಾಡಿದ್ದಾರೆ. ಭಟ್ಕಳಕ್ಕೆ ಹೋದರೆ ಹೊರ ಬರಲಾಗಲ್ಲ ಆ ರೀತಿಯ ವಾತಾವರಣವಿದೆ. ಕಲಬುರಗಿ, ವಿಜಯಪುರದಲ್ಲಿ ಒಂದೊಂದು ಏರಿಯಾದಲ್ಲಿ ಒಳ ಹೋಗಲಾಗಲ್ಲ ಎಂದಿದ್ದಾರೆ.











