
ಧರ್ಮಸ್ಥಳದ ಕುರಿತ (Dharmasthala case) ಆರೋಪಗಳ ಬಗ್ಗೆ ಈಗಾಗಲೇ ಎಸ್ಐಟಿ (SIT) ತನಿಖೆ ಚುರುಕುಗೊಳಿಸಿದೆ, ಹೀಗಾಗಿ ಮಾಡಲಿ ಮುಗಿಯಲಿ. ಈ ಹಂತದಲ್ಲಿ ಆ ಬಗ್ಗೆ ನಾವು ಪ್ರತಿಕ್ರಿಯಿಸುವುದು ಸರಿಯಲ್ಲ. ಸಂಪೂರ್ಣ ತನಿಖೆ ಮುಗಿದ ಮೇಲೆ ನೋಡೋಣ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ (Parameshwar) ಹೇಳಿದ್ದಾರೆ.

ಈ ಪ್ರಕರಣದಲ್ಲಿ ಯಾರ್ಯಾರ ಪಾತ್ರವಿದೆ ಎಂಬುದರ ಕುರಿತು ತನಿಖೆ ನಡೆಯಲಿದ್ದು, ಅದೆಲ್ಲವೂ ಕೂಡ ತನಿಖೆ ಆಗ್ತಿದೆ. ಹೀಗಾಗಿ ಎಸ್.ಐ.ಟಿ ತನಿಖೆಯಲ್ಲಿ ಎಲ್ಲವೂ ಅಂತಿಮವಾಗಿ ಹೊರಗೆ ಬರುತ್ತೆ. ಆ ಎಲ್ಲಾ ಮಾಹಿತಿ ಲಭ್ಯವಾದ ಬಳಿಕ ಮಾತನಾಡೋಣ ಎಂದಿದ್ದಾರೆ.

ಇನ್ನು ಈ ಪ್ರಕರಣದ ಸಂಬಂಧ ಸೋನಿಯಾ ಗಾಂಧಿ ಅವರಿಗೆ ಕೆಲವರು ಪತ್ರ ಬರೆದಿರೋದು ನನಗೆ ಗೊತ್ತಿಲ್ಲ.ಎಸ್ಐಟಿ ತನಿಖೆ ನಡೆಯುವಾಗ ನಾನಾಗಲೀ, ಸಿಎಂ ಆಗಲೀ ಯಾರೂ ಹಸ್ತಕ್ಷೇಪ ಮಾಡೋದಿಲ್ಲ ಎಂದು ಗೃಹ ಸಚಿವ ಡಾ.ಪರಮೇಶ್ವರ್ ಹೇಳಿದ್ದಾರೆ.











