• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, March 5, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಸಿನಿಮಾ

ಜಿಯೋ ಹಾಟ್‌ಸ್ಟಾರ್‌ನಲ್ಲಿ ಭಾವನೆಗಳಿಂದ ತುಂಬಿರುವ ಮೆಡಿಕಲ್ ಡ್ರಾಮಾ ʼಹಾರ್ಟ್‌ಬೀಟ್ʼ

ಪ್ರತಿಧ್ವನಿ by ಪ್ರತಿಧ್ವನಿ
December 1, 2025
in ಸಿನಿಮಾ
0
ಜಿಯೋ ಹಾಟ್‌ಸ್ಟಾರ್‌ನಲ್ಲಿ ಭಾವನೆಗಳಿಂದ ತುಂಬಿರುವ ಮೆಡಿಕಲ್ ಡ್ರಾಮಾ ʼಹಾರ್ಟ್‌ಬೀಟ್ʼ
Share on WhatsAppShare on FacebookShare on Telegram

ಬೆಂಗಳೂರು: JHS ತನ್ನ ಬಹುನಿರೀಕ್ಷಿತ ಮೆಡಿಕಲ್ ಡ್ರಾಮಾ ಸರಣಿ “ಹಾರ್ಟ್‌ಬೀಟ್” ಅನ್ನು ಕನ್ನಡದಲ್ಲಿ 28 ನವೆಂಬರ್ 2025ರಿಂದ ಪ್ರಾರಂಭಿಸುತ್ತಿದೆ. 100 ಎಪಿಸೋಡ್‌ಗಳನ್ನು ಒಳಗೊಂಡಿರುವ ಈ ಭವ್ಯ ಸೀಸನ್, ವೈದ್ಯಕೀಯ ಲೋಕದ ಸವಾಲುಗಳು, ಸಂಬಂಧಗಳ ಸಂಘರ್ಷಗಳು ಮತ್ತು ಮಾನವೀಯ ಭಾವನೆಗಳ ರೋಚಕ ಸಂಯೋಜನೆಯನ್ನು ಪ್ರೇಕ್ಷಕರಿಗೆ ಆವರಿಸುವಂತೆ ತರುತ್ತದೆ.

ADVERTISEMENT

ಈ ಶೋಗೆ ಪ್ರೇಕ್ಷಕರಿಂದ ಅತ್ಯಂತ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, IMDB ರೇಟಿಂಗ್ 8.6 ಅನ್ನು ಪಡೆದುಕೊಂಡಿದೆ — ಇದು ಸರಣಿಯ ಗುಣಮಟ್ಟ ಮತ್ತು ಭಾವುಕ ಕಥನಕ್ಕೆ ಸಾಕ್ಷಿಯಾಗುತ್ತದೆ.

HD Kumarswamy : ಪಾಪ ಡಿಕೆ ಏನಾದ್ರೂ ಹೇಳ್ಕೊಳ್ಳಿ #pratidhvani #hdkumaraswamy #bjp #jds #congress

ಮುಖ್ಯ ಪಾತ್ರದಲ್ಲಿ ದೀಪಾ ಬಾಲು, ಜೊತೆಗೂಡಿ ಅನುಮೋಲ್, ಚಾರುಕೇಶ್, ಕಾರ್ತಿಕ್ ಕುಮಾರ್ ಮತ್ತು ಹಲವಾರು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಸರಣಿಯನ್ನು ದೀಪಕ್ ಸುಂದರರಾಜನ್ ಬರೆದು, ದೀಪಕ್ ಸುಂದರರಾಜನ್, ಅಬ್ದುಲ್ ಕಬೀಝ್ ಮತ್ತು ಚಿದಂಬರಂ ಮಣಿವಣ್ಣನ್ ನಿರ್ದೇಶಿಸಿದ್ದಾರೆ.

ಅಮೇರಿಕದ ಖ್ಯಾತ ಮೆಡಿಕಲ್ ಡ್ರಾಮಾಗಳಾದ ನ್ಯೂ ಆಮ್ಸ್‌ಟರ್ಡ್ಯಾಮ್ ಮತ್ತು ಗ್ರೇ’ಸ್ ಅನಾಟಮಿ ಯ ಶೈಲಿಯನ್ನು ಹೋಲುವ ಈ ಸರಣಿ, ಗಾಲ್ಪಿಕ RK ಮಲ್ಟಿ-ಸ್ಪೆಷಾಲಿಟಿ ಹಾಸ್ಪಿಟಲ್ ಅನ್ನು ಹಿನ್ನಲೆಯಲ್ಲಿ ಇಟ್ಟುಕೊಂಡಿದೆ. ಇಲ್ಲಿ ಸರ್ಜಿಕಲ್ ಇಂಟರ್ನ್‌ಗಳು, ರೆಸಿಡೆಂಟ್‌ಗಳು ಮತ್ತು ಅಟೆಂಡಿಂಗ್ ವೈದ್ಯರ ದಿನನಿತ್ಯದ ವೃತ್ತಿಜೀವನದ ಒತ್ತಡಗಳು ಹಾಗೂ ಅವರ ವೈಯಕ್ತಿಕ ಬದುಕಿನ ಸಂಘರ್ಷಗಳು ನೈಜವಾಗಿ ಮೂಡಿ ಬರುತ್ತವೆ.

CM Siddaramaiah: ಕೊಡವ ಸಂಸ್ಕೃತಿ ಹಾಡಿ ಹೊಗಳಿದ ಸಿಎಂ ಸಿದ್ದರಾಮಯ್ಯ..! #tulu #congress

ಸೀಸನ್ 1 ಕಥಾಸಾರಾಂಶ:
ಹಾರ್ಟ್‌ಬೀಟ್ -ರಿನಾ ಎಂಬ ಪ್ರತಿಭಾವಂತ ಯುವ ವೈದ್ಯೆಯ ಕಥೆಯನ್ನು ಅನುಸರಿಸುತ್ತದೆ. ಜನಪ್ರಿಯ ಜನರಲ್ ಸರ್ಜನ್ ಡಾ. ರಧಿ ಅವರ ದೂರವಾದ ಮಗಳು ಎಂಬುದು ಬಹಿರಂಗವಾದಾಗ, ರಿನಾ ಮತ್ತು ರಧಿಯ ಜೀವನಗಳು ಹೊಸ ತಿರುವನ್ನು ಪಡೆಯುತ್ತವೆ. RK ಹಾಸ್ಪಿಟಲ್‌ನ ಸರ್ಜಿಕಲ್ ರೆಸಿಡೆನ್ಸಿ ಪ್ರೋಗ್ರಾಂಗೆ ಸೇರಿರುವ ರಿನಾ, ತನ್ನ ಸಹ-ಇಂಟರ್ನ್‌ಗಳಾದ ತೇಜು, ನವೀನ್ , ರಾಕಿ, ಗುಣ ಹಾಗೂ ಹಿರಿಯ ರೆಸಿಡೆಂಟ್‌ಗಳಾದ ಅನಿತಾ ಮತ್ತು ರವಿ ಅವರೊಂದಿಗೆ ವೈಯಕ್ತಿಕ-ವೃತ್ತಿಜೀವನದ ಒತ್ತಡಗಳನ್ನು ನಿಭಾಯಿಸುವ ಪ್ರಯತ್ನ ಮಾಡುತ್ತಾಳೆ.

ಹಾಸ್ಪಿಟಲ್ ಸ್ಥಾಪಕ RK ಅವರ ಮಗ ಅರ್ಜುನ್, ರಿನಾ ಜೀವನದಲ್ಲಿ ಪ್ರೇಮದ ಹೊಸ ಅಧ್ಯಾಯವನ್ನು ತೆರೆಯುವಲ್ಲಿ ಪ್ರಮುಖ ಪಾತ್ರವಹಿಸ್ತಾನೆ. ಆದರೆ ಭೂತಕಾಲದ ರಹಸ್ಯಗಳು ಬೆಳಕಿಗೆ ಬರುತ್ತಿದ್ದಂತೆ, ಸಂಬಂಧಗಳು, ಕರ್ತವ್ಯಗಳು ಮತ್ತು ಭಾವನೆಗಳು ಪರಸ್ಪರ ಮುಖಾಮುಖಿಯಾಗುತ್ತವೆ.

ಹಾರ್ಟ್‌ಬೀಟ್ ವೈದ್ಯಕೀಯ ಜಗತ್ತಿನ ಮಾನವೀಯ ಮುಖವನ್ನು ಹಿಡಿದಿಡುವ, ಹೃದಯಕ್ಕೆ ಹತ್ತಿರದ ಕಥೆಗಳೊಂದಿಗೆ ಪ್ರೇಕ್ಷಕರನ್ನು ಆಕರ್ಷಿಸಲು ಸಜ್ಜಾಗಿದೆ.

DK Shivakumar:ಸ್ವಾಮೀಜಿಗಳು ಇಲ್ಲದಿದ್ರೆ‌ ಸಿಎಂ ಆಗ್ತಿದ್ರಾ ದೇವೇಗೌಡ್ರು? HDKಗೆ ಡಿಕೆಶಿ ಟಾಂಗ್.! #hdkumaraswamy

 

Tags: JioJio Hot StarKannadaMovie
Previous Post

ಬಿಗ್‌ ಬಾಸ್‌ ಗಿಲ್ಲಿಗೆ ರಜನಿಕಾಂತ್‌ ಶಹಭಾಷ್‌ಗಿರಿ..! ಸತ್ಯವೋ..? ಸುಳ್ಳೋ..?

Next Post

ಈಶಾ ಯೋಗ ಕೇಂದ್ರದಲ್ಲಿ ನೆರವೇರಿದ ನಟಿ ಸಮಂತಾ-ರಾಜ್ ನಿಡಿಮೋರು ವಿವಾಹ

Related Posts

ಅಸಭ್ಯವಾಗಿ ವೀಡಿಯೋ-ಫೋಟೋ ಚಿತ್ರೀಕರಿಸುವವರ ವಿರುದ್ಧ ನಟಿ ಸಪ್ತಮಿ ಗೌಡ ಆಕ್ರೋಶ..!
Top Story

ಅಸಭ್ಯವಾಗಿ ವೀಡಿಯೋ-ಫೋಟೋ ಚಿತ್ರೀಕರಿಸುವವರ ವಿರುದ್ಧ ನಟಿ ಸಪ್ತಮಿ ಗೌಡ ಆಕ್ರೋಶ..!

by ಪ್ರತಿಧ್ವನಿ
March 4, 2026
0

ಬೆಂಗಳೂರು : ನಟಿಯರ ವೀಡಿಯೊ ಹಾಗೂ ಫೋಟೋಗಳನ್ನು ಅಸಭ್ಯವಾಗಿ ಚಿತ್ರೀಕರಿಸಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿರುವುದು ಇತ್ತೀಚೆಗೆ ಹೆಚ್ಚಾಗಿದೆ.ಅಂತಹವರ ವಿರುದ್ಧ ʼಕಾಂತಾರʼ ಸಿನಿಮಾದ ನಟಿ ಸಪ್ತಮಿ ಗೌಡ...

Read moreDetails
ನಟಿ ಅಮೂಲ್ಯ ಪತಿಗೆ ಬಿಜೆಪಿಯಲ್ಲಿ ಮಹತ್ವದ ಹುದ್ದೆ

ನಟಿ ಅಮೂಲ್ಯ ಪತಿಗೆ ಬಿಜೆಪಿಯಲ್ಲಿ ಮಹತ್ವದ ಹುದ್ದೆ

March 3, 2026
ಸೆಲೆಬ್ರಿಟಿ’ ಸಿನಿಮಾಗೆ ಕಿಚ್ಚ ಸುದೀಪ್ ಸಾಥ್…ಇಂಡಸ್ಟ್ರೀಗೆ ಯುವ ಪ್ರತಿಭೆ ಅಶ್ವಿನ್ ಎಂಟ್ರಿ

ಸೆಲೆಬ್ರಿಟಿ’ ಸಿನಿಮಾಗೆ ಕಿಚ್ಚ ಸುದೀಪ್ ಸಾಥ್…ಇಂಡಸ್ಟ್ರೀಗೆ ಯುವ ಪ್ರತಿಭೆ ಅಶ್ವಿನ್ ಎಂಟ್ರಿ

March 1, 2026
ವಿಜಯ್ –ರಶ್ಮಿಕಾ ಮದುವೆ ಸಂಭ್ರಮ: ಇಂದು ದೇಶಾದ್ಯಂತ ಸಿಹಿ ವಿತರಣೆ, ಅನ್ನದಾನ

ವಿಜಯ್ –ರಶ್ಮಿಕಾ ಮದುವೆ ಸಂಭ್ರಮ: ಇಂದು ದೇಶಾದ್ಯಂತ ಸಿಹಿ ವಿತರಣೆ, ಅನ್ನದಾನ

March 1, 2026
ದರ್ಶನ್ ವಿರುದ್ದ ಸುಳ್ಳು ದಾಖಲೆ ಸೃಷ್ಟಿ ಆರೋಪ: ಮಾ.11ರಂದು ಬೃಹತ್‌ ಪ್ರತಿಭಟನೆಗೆ ಕರೆ

ದರ್ಶನ್ ವಿರುದ್ದ ಸುಳ್ಳು ದಾಖಲೆ ಸೃಷ್ಟಿ ಆರೋಪ: ಮಾ.11ರಂದು ಬೃಹತ್‌ ಪ್ರತಿಭಟನೆಗೆ ಕರೆ

February 28, 2026
Next Post
ಈಶಾ ಯೋಗ ಕೇಂದ್ರದಲ್ಲಿ ನೆರವೇರಿದ ನಟಿ ಸಮಂತಾ-ರಾಜ್ ನಿಡಿಮೋರು ವಿವಾಹ

ಈಶಾ ಯೋಗ ಕೇಂದ್ರದಲ್ಲಿ ನೆರವೇರಿದ ನಟಿ ಸಮಂತಾ-ರಾಜ್ ನಿಡಿಮೋರು ವಿವಾಹ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada